IPL 2025: ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸೋದು ಹೇಗೆ; ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಚ್ ಟಿಕೆಟ್ ಬೆಲೆ, ಬುಕಿಂಗ್ ವಿಧಾನ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2025: ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸೋದು ಹೇಗೆ; ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಚ್ ಟಿಕೆಟ್ ಬೆಲೆ, ಬುಕಿಂಗ್ ವಿಧಾನ ಹೀಗಿದೆ

IPL 2025: ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸೋದು ಹೇಗೆ; ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಚ್ ಟಿಕೆಟ್ ಬೆಲೆ, ಬುಕಿಂಗ್ ವಿಧಾನ ಹೀಗಿದೆ

ಐಪಿಎಲ್ ಸೀಸನ್‌ 18ರ ಆರಂಭಕ್ಕೆ ಎರಡು ದಿನಗಳು ಮಾತ್ರವೇ ಬಾಕಿ ಉಳಿದಿವೆ. ಆರ್‌ಸಿಬಿ ತಂಡವು ಏಪ್ರಿಲ್‌ 2ರಂದು ತವರು ಮೈದಾನ ಬೆಂಗಳೂರಿನಲ್ಲಿ ಮೊದಲ ಪಂದ್ಯ ಆಡಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ ಬುಕಿಂಗ್‌ ವಿವರ ಇಲ್ಲಿದೆ.

 ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸೋದು ಹೇಗೆ; ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಚ್ ಟಿಕೆಟ್ ಬೆಲೆ, ಬುಕಿಂಗ್ ವಿಧಾನ ಹೀಗಿದೆ
ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸೋದು ಹೇಗೆ; ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಚ್ ಟಿಕೆಟ್ ಬೆಲೆ, ಬುಕಿಂಗ್ ವಿಧಾನ ಹೀಗಿದೆ (PTI)

ಐಪಿಎಲ್ 2025ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೇನು ಟೂರ್ನಿ ಆರಂಭಕ್ಕೆ ಎರಡು ದಿನಗಳು ಮಾತ್ರವೇ ಬಾಕಿ ಉಳಿದಿವೆ. ಮಾರ್ಚ್ 22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ತಂಡಗಳು ಮುಖಾಮುಖಿಯಾಗಲಿವೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 18ನೇ ಆವೃತ್ತಿಯ ಟೂರ್ನಿಗೆ ಅದ್ದೂರಿ ಚಾಲನೆ ಸಿಗಲಿದೆ. ಟೂರ್ನಿ ಆರಂಭಕ್ಕಿಂತ ಹಲವು ದಿನ ಮುಂಚಿತವಾಗಿ ಐಪಿಎಲ್ ಪಂದ್ಯಗಳ ಟಿಕೆಟ್‌ಗೆ ಭಾರಿ ಬೇಡಿಕೆ ಶುರುವಾಗಿದೆ. ಅಭಿಮಾನಿಗಳು ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ವರ್ಷ, ಆಯಾ ತಂಡಗಳ ಫ್ರಾಂಚೈಸಿಗಳು ತಮ್ಮ ತವರು ಆತಿಥ್ಯ ಸ್ಥಳಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳಿಗಾಗಿ ವಿವಿಧ ಅಧಿಕೃತ ಟಿಕೆಟಿಂಗ್ ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಟಿಕೆಟ್ district.inನಲ್ಲಿ ಲಭ್ಯವಿದೆ. ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ ತಂಡಗಳ ತವರು ಪಂದ್ಯಗಳ ಟಿಕೆಟ್‌ಗಳನ್ನು bookmyshow.comನಲ್ಲಿ ಬುಕ್‌ ಮಾಡಬಹುದು.

ಆರ್‌ಸಿಬಿ ತಂಡವು ತವರು ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತದೆ. ಈ ಪಂದ್ಯಗಳ ಟಿಕೆಟ್‌ಗಳು ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದೇ ವೇಳೆ ನವೀ ಯುಪಿಐ ಅಪ್ಲಿಕೇಶನ್ ಬಳಕೆದಾರರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್‌ ಮಾಡಬಹುದು.

ಬೆಂಗಳೂರಿನ ಚಿನ್ನಸ್ವೇಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ‌

  • ಆರ್‌ಸಿಬಿ vs ಜಿಟಿ: ಏಪ್ರಿಲ್ 2, 2025
  • ಆರ್‌ಸಿಬಿ vs ಡಿಸಿ: ಏಪ್ರಿಲ್ 10, 2025
  • ಆರ್‌ಸಿಬಿ vs ಪಿಬಿಕೆಎಸ್: ಏಪ್ರಿಲ್ 18, 2025
  • ಆರ್‌ಸಿಬಿ vs ಆರ್‌ಆರ್‌: ಏಪ್ರಿಲ್ 24, 2025
  • ಆರ್‌ಸಿಬಿ vs ಸಿಎಸ್‌ಕೆ: ಮೇ 3, 2025
  • ಆರ್‌ಸಿಬಿ vs ಎಸ್‌ಆರ್‌ಎಚ್‌: ಮೇ 13, 2025
  • ಆರ್‌ಸಿಬಿ vs ಕೆಕೆಆರ್: ಮೇ 17, 2025

ಪ್ರತಿ ತಂಡಗಳ ಮೊದಲ ತವರು ಪಂದ್ಯಗಳ ಟಿಕೆಟ್‌ಗಳು ಈಗಾಗಲೇ ಅಧಿಕೃತವಾಗಿ ಲೈವ್ ಆಗಿವೆ. ಟಿಕೆಟ್ ಬೆಲೆಗಳು ಎಲ್ಲಾ ಮೈದಾನಗಳಲ್ಲೂ ಒಂದೇ ಆಗಿರುವುದಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಟಿಕೆಟ್‌ ಬೆಲೆಯಲ್ಲಿ ಬದಲಾಗುತ್ತವೆ.

ಆರ್‌ಸಿಬಿ ತಂಡವು ತಂಡವು ಮಾರ್ಚ್ 22ರಂದು ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ 2025ರ ಸೀಸನ್‌ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಆದರೆ, ತಂಡದ ಮೊದಲ ತವರು ಪಂದ್ಯ ಇರುವುದು ಏಪ್ರಿಲ್ 2ರಂದು. ಗುಜರಾತ್ ಟೈಟಾನ್ಸ್ ವಿರುದ್ಧ ತವರಿನಲ್ಲಿ ಮೊದಲು ಕಣಕ್ಕಿಳಿಯಲಿದೆ. ಈ ಟಿಕೆಟ್‌ಗಳು ಮಾರ್ಚ್ 19ರಿಂದ ಆರ್‌ಸಿಬಿ ವೆಬ್‌ಸೈಟ್ ಮತ್ತು ಇತರ ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಲಭ್ಯವಿದೆ. ಟಿಕೆಟ್‌ ಬೆಲೆಯು 2,300ರಿಂದ ಆರಂಭವಾಗಿ 42,000ವರೆಗೂ ಏರುತ್ತದೆ.

ಚಿನ್ನಸ್ವಾಮಿ ಸ್ಟ್ಯಾಂಡ್‌ಗಳು ಮತ್ತು ಟಿಕೆಟ್ ಬೆಲೆ

  • ಎ ಸ್ಟ್ಯಾಂಡ್: ರೂ 2,300
  • ಬೋಟ್ ಸಿ ಸ್ಟ್ಯಾಂಡ್ ಮತ್ತು ಬಿ ಸ್ಟ್ಯಾಂಡ್: ರೂ 3,300
  • ಟಿಕೆಟಿ ಜಿಟಿ ಅನೆಕ್ಸ್ : ರೂ 4,000
  • ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ ಪಿ 1 ಅನೆಕ್ಸ್: ರೂ 10,000
  • ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ ಪಿ ಟೆರೇಸ್: ರೂ 15,000

ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್‌ ಖರೀದಿಸುವುದು ಹೇಗೆ?

ಮಾರ್ಚ್ 19ರಿಂದ ಆರ್‌ಸಿಬಿ ವೆಬ್‌ಸೈಟ್ ಮತ್ತು ಇತರ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್‌ಗಳು ಖರೀದಿಗೆ ಲಭ್ಯವಿರುತ್ತವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗಾಗಿ ಆರ್‌ಸಿಬಿ ವೆಬ್‌ಸೈಟ್ ಅಭಿಮಾನಿಗಳಿಗೆ ಸೀಟ್ ಕಾಯ್ದಿರಿಸಲು ಅವಕಾಶ ನೀಡುತ್ತದೆ.

ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಔಟ್‌ ಆಗಿವೆ. ಎರಡನೇ ಪಂದ್ಯಗಳ ಟಿಕೆಟ್‌ಗಳು ಕೂಡಾ ಬಹುತೇಕ ಬುಕ್‌ ಆಗಿವೆ. ಆರಂಭಿಕ ಬೆಲೆಯ ಟಿಕೆಟ್‌ಗಳು ಸದ್ಯ ಸಿಗುವುದು ಕಷ್ಟ. ನಂತರದ ಪಂದ್ಯಗಳ ಟಿಕೆಟ್‌ಗಳನ್ನು, ರಿಲೀಸ್‌ ಮಾಡಿದ ತಕ್ಷಣ ಬುಕ್‌ ಮಾಡುವುದು ಒಳ್ಳೆಯದು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner