ಐಪಿಎಲ್ 2025 ಆರಂಭಕ್ಕೆ ದಿನಾಂಕ ಘೋಷಣೆ; ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೂ ನೇಮಕ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ದಿನ ತಂಡ ಪ್ರಕಟ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಆರಂಭಕ್ಕೆ ದಿನಾಂಕ ಘೋಷಣೆ; ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೂ ನೇಮಕ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ದಿನ ತಂಡ ಪ್ರಕಟ

ಐಪಿಎಲ್ 2025 ಆರಂಭಕ್ಕೆ ದಿನಾಂಕ ಘೋಷಣೆ; ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೂ ನೇಮಕ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ದಿನ ತಂಡ ಪ್ರಕಟ

IPL 2025: ಮಾರ್ಚ್​ 25ರಿಂದ 18ನೇ ಆವೃತ್ತಿಯ ಐಪಿಎಲ್​ ಆರಂಭವಾಗಲಿದೆ ಎಂದು ಘೋಷಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ಭಾರತದ ಚಾಂಪಿಯನ್ಸ್ ಟ್ರೋಫಿ ತಂಡದ ಪ್ರಕಟಿಸುವ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ.

ಐಪಿಎಲ್ 2025 ಆರಂಭಕ್ಕೆ ದಿನಾಂಕ ಘೋಷಣೆ; ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೂ ನೇಮಕ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ದಿನ ತಂಡ ಪ್ರಕಟ
ಐಪಿಎಲ್ 2025 ಆರಂಭಕ್ಕೆ ದಿನಾಂಕ ಘೋಷಣೆ; ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೂ ನೇಮಕ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ದಿನ ತಂಡ ಪ್ರಕಟ

ನವದೆಹಲಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL) ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. 18ನೇ ಆವೃತ್ತಿಯ ಮಿಲಿಯನ್ ಡಾಲರ್​ ಟೂರ್ನಿಯು ಮಾರ್ಚ್ 23 ರಂದು ಪ್ರಾರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತಪಡಿಸಿದ್ದಾರೆ. ಬಿಸಿಸಿಐ ಸಾಮಾನ್ಯ ಸಭೆಯ ನಂತರ ಭಾನುವಾರ (ಜನವರಿ 12) ಮಾತನಾಡಿದ ಶುಕ್ಲಾ ಅವರು ಐಪಿಎಲ್​ ಟೂರ್ನಿ ಆರಂಭವಾಗುವ ದಿನಾಂಕವನ್ನು ಬಹಿರಂಗಡಿಸಿದರು.

ಜನವರಿ 12ರಂದು ನಡೆದ ಬಿಸಿಸಿಐ ಸಭೆಯಲ್ಲಿ ಐಪಿಎಲ್ ಪ್ರಾರಂಭದ ದಿನಾಂಕದ ಘೋಷಣೆಯ ಜೊತೆಗೆ ಭಾರತೀಯ ಕ್ರಿಕೆಟ್​ನ ಆಡಳಿತಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನೂ ತಿಳಿಸಿದ್ದಾರೆ. ಜಯ್ ಶಾ ಬದಲಿಗೆ ದೇವಜಿತ್ ಸೈಕಿಯಾ ಅವರನ್ನು ಬಿಸಿಸಿಐ ಕಾರ್ಯದರ್ಶಿಯಾಗಿ ಮತ್ತು ಪ್ರಭ್​ತೇಜ್​ ಸಿಂಗ್ ಭಾಟಿಯಾ ಅವರನ್ನು ಬಿಸಿಸಿಐ ಖಜಾಂಚಿಯಾಗಿ ನೇಮಿಸಲಾಗಿದೆ ಎಂದು ಶುಕ್ಲಾ ಬಹಿರಂಗಪಡಿಸಿದರು.

ಜನವರಿ 18-19ರಂದು ತಂಡ ಪ್ರಕಟ

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಆಯ್ಕೆ ಕುರಿತು ಜನವರಿ 18-19ರ ನಡುವೆ ನಡೆಯಲಿದೆ. 2025ರ ಮಹಿಳಾ ಪ್ರೀಮಿಯರ್ ಲೀಗ್​ನ (WPL 2025) ವೇಳಾಪಟ್ಟಿ ಮತ್ತು ಸ್ಥಳಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಕಳಪೆ ಪ್ರದರ್ಶನದ ನಂತರ ಶನಿವಾರ (ಜನವರಿ 11) ನಡೆದ ಪರಿಶೀಲನಾ ಸಭೆಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ಭಾಗವಹಿಸಿದ್ದರು.

ಬಿಜಿಟಿ ಸರಣಿಗೂ ಮುನ್ನ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಕ್ಲೀನ್ ಸ್ವೀಪ್ ಸೋಲಿಗೆ ಗುರಿಯಾಗಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ಮತ್ತು ತಂಡದಿಂದ ಏನೆಲ್ಲಾ ತಪ್ಪಾಯಿತು ಎಂಬುದರ ಕುರಿತು ಚರ್ಚೆ ನಡೆಯಿತು. ತಂಡದಲ್ಲಿ ಏನೆಲ್ಲಾ ಬದಲಾವಣೆ ಬೇಕು, ಯಾವ ವಿಭಾಗದಲ್ಲಿ ಹೆಚ್ಚು ಪ್ರಮಾದಗಳು ನಡೆದವು, ಯಾವ ವಿಭಾಗದಲ್ಲಿ ಬೆಳವಣಿಗೆ ಕಾಣಬೇಕು ಎನ್ನುವುದರ ಕುರಿತು ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ವರದಿಯಾಗಿದೆ.

ಐಪಿಎಲ್ ಹರಾಜಿನಲ್ಲಿ 182 ಆಟಗಾರರು ಸೇಲ್

ಕಳೆದ ವರ್ಷ ನವೆಂಬರ್​ 24 ಮತ್ತು 25ರಂದು ಐಪಿಎಲ್ ಹರಾಜು ನಡೆದಿತ್ತು. ಒಟ್ಟು 182 ಆಟಗಾರರು 639.15 ಕೋಟಿ ರೂ.ಗೆ 10 ತಂಡಗಳ ಪಾಲಾದರು. ರಿಷಭ್ ಪಂತ್ 27 ಕೋಟಿ ಪಡೆಯುವ ಮೂಲಕ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. ಶ್ರೇಯಸ್ ಅಯ್ಯರ್ (26.75 ಕೋಟಿ ರೂ) ಮತ್ತು ವೆಂಕಟೇಶ್ ಅಯ್ಯರ್ (23.75 ಕೋಟಿ ರೂ) ಅವರು ಪಂತ್ ನಂತರ ಅತಿ ಹೆಚ್ಚು ಮೊತ್ತ ಪಡೆದ ಆಟಗಾರರಾದರು.

ವರ್ಷಐಪಿಎಲ್ ವಿಜೇತರ ಪಟ್ಟಿರನ್ನರ್ ಅಪ್
2008ರಾಜಸ್ಥಾನ್ ರಾಯಲ್ಸ್ಚೆನ್ನೈ ಸೂಪರ್ ಕಿಂಗ್ಸ್
2009ಡೆಕ್ಕನ್ ಚಾರ್ಜರ್ಸ್ರಾಯಲ್ ಚಾಲೆಂಜರ್ಸ್ ಬೆಂಗಳೂರು
2010ಚೆನ್ನೈ ಸೂಪರ್ ಕಿಂಗ್ಸ್ಮುಂಬೈ ಇಂಡಿಯನ್ಸ್
2011ಚೆನ್ನೈ ಸೂಪರ್ ಕಿಂಗ್ಸ್ರಾಯಲ್ ಚಾಲೆಂಜರ್ಸ್ ಬೆಂಗಳೂರು
2012ಕೋಲ್ಕತ್ತಾ ನೈಟ್ ರೈಡರ್ಸ್ಚೆನ್ನೈ ಸೂಪರ್ ಕಿಂಗ್ಸ್
2013ಮುಂಬೈ ಇಂಡಿಯನ್ಸ್ಚೆನ್ನೈ ಸೂಪರ್ ಕಿಂಗ್ಸ್
2014ಕೋಲ್ಕತ್ತಾ ನೈಟ್ ರೈಡರ್ಸ್ಕಿಂಗ್ಸ್ XI ಪಂಜಾಬ್
2015ಮುಂಬೈ ಇಂಡಿಯನ್ಸ್ಚೆನ್ನೈ ಸೂಪರ್ ಕಿಂಗ್ಸ್
2016ಸನ್ ರೈಸರ್ಸ್ ಹೈದರಾಬಾದ್ರಾಯಲ್ ಚಾಲೆಂಜರ್ಸ್ ಬೆಂಗಳೂರು
2017ಮುಂಬೈ ಇಂಡಿಯನ್ಸ್ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2018ಚೆನ್ನೈ ಸೂಪರ್ ಕಿಂಗ್ಸ್ಸನ್ ರೈಸರ್ಸ್ ಹೈದರಾಬಾದ್
2019ಮುಂಬೈ ಇಂಡಿಯನ್ಸ್ಚೆನ್ನೈ ಸೂಪರ್ ಕಿಂಗ್ಸ್
2020ಮುಂಬೈ ಇಂಡಿಯನ್ಸ್ದೆಹಲಿ ರಾಜಧಾನಿಗಳು
2021ಚೆನ್ನೈ ಸೂಪರ್ ಕಿಂಗ್ಸ್ಕೋಲ್ಕತ್ತಾ ನೈಟ್ ರೈಡರ್ಸ್
2022ಗುಜರಾತ್ ಟೈಟಾನ್ಸ್ರಾಜಸ್ಥಾನ್ ರಾಯಲ್ಸ್
2023ಚೆನ್ನೈ ಸೂಪರ್ ಕಿಂಗ್ಸ್ಗುಜರಾತ್ ಟೈಟಾನ್ಸ್
2024ಕೋಲ್ಕತ್ತಾ ನೈಟ್ ರೈಡರ್ಸ್ಸನ್ ರೈಸರ್ಸ್ ಹೈದರಾಬಾದ್
Whats_app_banner