IPL Auction 2024: ಆರ್​ಸಿಬಿ ಕೈಬಿಟ್ಟ ಆಟಗಾರನಿಗೆ ಸಿಕ್ತು ಬರೋಬ್ಬರಿ 11.75 ಕೋಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl Auction 2024: ಆರ್​ಸಿಬಿ ಕೈಬಿಟ್ಟ ಆಟಗಾರನಿಗೆ ಸಿಕ್ತು ಬರೋಬ್ಬರಿ 11.75 ಕೋಟಿ

IPL Auction 2024: ಆರ್​ಸಿಬಿ ಕೈಬಿಟ್ಟ ಆಟಗಾರನಿಗೆ ಸಿಕ್ತು ಬರೋಬ್ಬರಿ 11.75 ಕೋಟಿ

Harshal Patel: ಭಾರತೀಯ ವೇಗದ ಬೌಲರ್ ಹರ್ಷಲ್ ಪಟೇಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ. ಆರ್​ಸಿಬಿ ಕೈ ಬಿಟ್ಟ ಈ ವೇಗಿಗೆ ಬರೋಬ್ಬರಿ 11.75 ಕೋಟಿ ನೀಡಿ ಖರೀದಿಸಲಾಗಿದೆ.

ಆರ್​ಸಿಬಿ ಕೈಬಿಟ್ಟ ಆಟಗಾರನಿಗೆ ಸಿಕ್ತು ಬರೋಬ್ಬರಿ 11.75 ಕೋಟಿ.
ಆರ್​ಸಿಬಿ ಕೈಬಿಟ್ಟ ಆಟಗಾರನಿಗೆ ಸಿಕ್ತು ಬರೋಬ್ಬರಿ 11.75 ಕೋಟಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಕೈಬಿಟ್ಟಿರುವ ಆಟಗಾರರು ಜಾಕ್​ಪಾಟ್ ಹೊಡೆಯುತ್ತಿದ್ದಾರೆ. ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024 ಐಪಿಎಲ್ ಹರಾಜಿನಲ್ಲಿ 11.75 ಕೋಟಿ ರೂಪಾಯಿಗೆ ಭಾರತೀಯ ವೇಗದ ಬೌಲರ್ ಹರ್ಷಲ್ ಪಟೇಲ್ (Harshal Patel), ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ. ಆ ಮೂಲಕ ಜಾಕ್​ ಪಾಟ್ ಹೊಡೆದಿದ್ದಾರೆ.

2021ರ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಹರ್ಷಲ್, ಕಳೆದ 3 ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. 2023ರ ಆವೃತ್ತಿಯಲ್ಲಿ ಹರ್ಷಲ್​ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. ಡೆತ್​ ಓವರ್​​​ಗಳಲ್ಲಿ ಸ್ಪೆಷಲಿಸ್ಟ್​ ಎನಿಸಿಕೊಂಡಿದ್ದ ಹರ್ಷಲ್, ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಡುವಲ್ಲಿ ವಿಫಲವಾಗಿದ್ದರು.

9.66ರ ಎಕಾನಮಿಯಲ್ಲಿ ಅತ್ಯಂತ ದುಬಾರಿ ಬೌಲಿಂಗ್ ನಡೆಸಿದ ಬಲಗೈ ಬೌಲರ್, ಕೇವಲ 14 ವಿಕೆಟ್ ಪಡಿದಿದ್ದರು. 2021ರಲ್ಲಿ ಆರ್​​ಸಿಬಿ ಪರ ಪರ್ಪಲ್ ಕ್ಯಾಪ್ ಗೆದ್ದಿದ್ದ ವೇಗಿ, ಉಳಿದೆರಡು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹಾಗಾಗಿ, ಅವರನ್ನು ಹರಾಜಿಗೆ ಮುಂಚಿತವಾಗಿ ಆರ್​ಸಿಬಿ ಬಿಡುಗಡೆ ಮಾಡಲು ಕಾರಣವಾಯಿತು.

ಪೈಪೋಟಿ ನೀಡಿದ ಲಕ್ನೋ

ಗುಜರಾತ್ ಟೈಟಾನ್ಸ್ 33 ವರ್ಷದ ಹರ್ಷಲ್‌ ಪಟೇಲ್​​ ಖರೀದಿಗೆ ಬಿಡ್ಡಿಂಗ್ ವಾರ್ ಪ್ರಾರಂಭಿಸಿತು. ಆದರೆ, ಈ ನಡುವೆ ಮಧ್ಯ ಪ್ರವೇಶಿಸಿದ ಪಂಜಾಬ್ ಕಿಂಗ್ಸ್‌ ತೀವ್ರ ಪೈಪೋಟಿ ನಡೆಸಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಲಕ್ನೋ ಸೂಪರ್​ ಜೈಂಟ್ಸ್​ ಸುಮಾರು10 ಕೋಟಿ ಮಾರ್ಕ್​ವರೆಗೂ ಬಿಡ್ ನಡೆಸಿ ಬಳಿಕ ರೇಸ್​ನಿಂದ ಹಿಂದೆ ಸರಿಯಿತು.

ಐಪಿಎಲ್​ನಲ್ಲಿ ಹರ್ಷಲ್ ಪ್ರದರ್ಶನ

ಹರ್ಷಲ್ ಆರ್​ಸಿಬಿಗೆ ಬರುವುದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗೆ ತನ್ನ ಐಪಿಎಲ್ ಪ್ರಯಾಣವನ್ನು ಆರಂಭಿಸಿತು. 2012ರಲ್ಲಿ ಡೆಲ್ಲಿ ಪರ ಆಡುವ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ನಂತರ 2021 ರಲ್ಲಿ ಬೆಂಗಳೂರು ತಂಡಕ್ಕೆ ಮರಳಿ ಗಮನ ಸೆಳೆದಿದ್ದರು. 2023ರ ಮೆಗಾ ಹರಾಜಿಗೂ ಮುನ್ನ ಹರ್ಷಲ್​ರನ್ನು ಆರ್​ಸಿಬಿ ಕೈಬಿಟ್ಟಿತ್ತು. ಬಳಿಕ ಹರಾಜಿನಲ್ಲಿ 10.75 ಕೋಟಿ ಖರೀದಿಸಿತ್ತು ಆರ್​ಸಿಬಿ.

ಸದ್ಯ ಈವರೆಗೂ 92 ಐಪಿಎಲ್ ಪಂದ್ಯಗಳನ್ನಾಡಿರುವ ಹರ್ಷಲ್, 111 ವಿಕೆಟ್ ಪಡೆದಿದ್ದಾರೆ. 8.59 ಎಕಾನಮಿ ಮತ್ತು 24.07ರ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಅಲ್ಲದೆ, ಆರ್​ಸಿಬಿ ಪರ ಪರ್ಪಲ್ ಕ್ಯಾಪ್ ಗೆಲ್ಲುವ ಮೂಲಕ ಟೀಮ್ ಇಂಡಿಯಾದಲ್ಲಿ ಮತ್ತೆ ಆಡುವ ಅವಕಾಶ ಪಡೆದರು. ಇದೀಗ ಭಾರತ ತಂಡದಿಂದಲೂ ಹೊರಬಿದ್ದಿದ್ದಾರೆ.

ಹಸರಂಗಗೆ 1.50 ಕೋಟಿ

ಕಳೆದ ಹರಾಜಿನಲ್ಲಿ 10+ ಕೋಟಿ ಪಡೆದಿದ್ದ ಆರ್​ಸಿಬಿ ಸ್ಪಿನ್ ಆಲ್​ರೌಂಡರ್​ ವನಿಂದು ಹಸರಂಗ ಇದೀಗ ಕೇವಲ 1.50 ಕೋಟಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಈಗಾಗಲೇ ಪಂಜಾಬ್ ಕಿಂಗ್ಸ್​ ಇಂಗ್ಲೆಂಡ್ ಆಲ್​ರೌಂಡರ್ ಕ್ರಿಸ್​ ವೋಕ್ಸ್​​ಗೆ 4.50 ಕೋಟಿ ನೀಡಿ ಖರೀದಿಸಿದೆ.

Whats_app_banner