ಐಪಿಎಲ್ ಹರಾಜು ಇತಿಹಾಸದಲ್ಲಿ ಟಾಪ್-10 ದುಬಾರಿ ಆಟಗಾರರ ಪಟ್ಟಿ; ಸ್ಟಾರ್ಕ್ ನಂ.1, ಭಾರತದ ಇಬ್ಬರಿಗಷ್ಟೇ ಸ್ಥಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಹರಾಜು ಇತಿಹಾಸದಲ್ಲಿ ಟಾಪ್-10 ದುಬಾರಿ ಆಟಗಾರರ ಪಟ್ಟಿ; ಸ್ಟಾರ್ಕ್ ನಂ.1, ಭಾರತದ ಇಬ್ಬರಿಗಷ್ಟೇ ಸ್ಥಾನ

ಐಪಿಎಲ್ ಹರಾಜು ಇತಿಹಾಸದಲ್ಲಿ ಟಾಪ್-10 ದುಬಾರಿ ಆಟಗಾರರ ಪಟ್ಟಿ; ಸ್ಟಾರ್ಕ್ ನಂ.1, ಭಾರತದ ಇಬ್ಬರಿಗಷ್ಟೇ ಸ್ಥಾನ

Most Expensive player in IPL history: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್​ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಹಾಗಾದರೆ ಟಾಪ್-10 ದುಬಾರಿ ಆಟಗಾರರು ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ಐಪಿಎಲ್ ಹರಾಜಿನಲ್ಲಿ ಟಾಪ್-10 ದುಬಾರಿ ಆಟಗಾರರ ಪಟ್ಟಿ.
ಐಪಿಎಲ್ ಹರಾಜಿನಲ್ಲಿ ಟಾಪ್-10 ದುಬಾರಿ ಆಟಗಾರರ ಪಟ್ಟಿ.

ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌-2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಅಲ್ಲದೆ, ಹಲವು ದಾಖಲೆಗಳನ್ನೂ ಮುರಿದಿದೆ. ನಿರೀಕ್ಷೆಯಂತೆ ಕೆಲವು ಆಟಗಾರರಿಗೆ ಜಾಕ್​ ಪಾಟ್ ಹೊಡೆದಿದ್ದರೆ, ಇನ್ನೂ ಕೆಲವರಿಗೆ ನಿರಾಸೆಯಾಗಿದೆ.

ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಡೇರಿಲ್ ಮಿಚೆಲ್ ಸೇರಿದಂತೆ ಅನೇಕ ವಿದೇಶಿ ಆಟಗಾರರಿಗೆ ಫ್ರಾಂಚೈಸಿಗಳಿಂದ ಕೋಟಿ ಕೋಟಿ ದುಡ್ಡನ್ನು ಸುರಿದಿವೆ. ಅದರಲ್ಲೂ ಆಸ್ಟ್ರೇಲಿಯಾದ ಸ್ಟಾರ್ಕ್ ಮತ್ತು ಕಮಿನ್ಸ್ ಇಬ್ಬರೇ 45.25 ಕೋಟಿ ದಕ್ಕಿರುವುದು ಅಚ್ಚರಿ ಮೂಡಿಸಿದೆ. ಈ ಇಬ್ಬರೂ ಸಹ ಐಪಿಎಲ್​ ಇತಿಹಾಸದಲ್ಲಿ ದುಬಾರಿ ಆಟಗಾರರು.

ಐಪಿಎಲ್ ಇತಿಹಾಸದಲ್ಲಿ ಟಾಪ್-10 ದುಬಾರಿ ಆಟಗಾರರು

  1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): 24.75 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ (2024)
  2. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ): 20.50 ಕೋಟಿ, ಸನ್​ರೈಸರ್ಸ್ ಹೈದರಾಬಾದ್ (2024)
  3. ಸ್ಯಾಮ್ ಕರನ್ (ಇಂಗ್ಲೆಂಡ್): 18.50 ಕೋಟಿ, ಪಂಜಾಬ್ ಕಿಂಗ್ಸ್ (2023)
  4. ಕ್ಯಾಮರೂನ್ ಗ್ರೀನ್ (ಆಸ್ಟ್ರೇಲಿಯಾ): 17.50 ಕೋಟಿ, ಮುಂಬೈ ಇಂಡಿಯನ್ಸ್, (2023)
  5. ಬೆನ್ ಸ್ಟೋಕ್ಸ್ (ಇಂಗ್ಲೆಂಡ್​): 16.25 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್, (2023)
  6. ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ): 16.25 ಕೋಟಿ, ರಾಜಸ್ಥಾನ್ ರಾಯಲ್ಸ್ (2021)
  7. ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್): 16 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ (2023)
  8. ಯುವರಾಜ್ ಸಿಂಗ್ (ಭಾರತ): 16 ಕೋಟಿ, ಡೆಲ್ಲಿ ಡೇರ್ ಡೆವಿಲ್ಸ್ (2015)
  9. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ): 15.50 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ (2020)
  10. ಇಶಾನ್ ಕಿಶನ್, (ಭಾರತ): 15.25 ಕೋಟಿ, ಮುಂಬೈ ಇಂಡಿಯನ್ಸ್, (2022)


ಐಪಿಎಲ್‌ನಲ್ಲಿ ಆಯಾ ವರ್ಷವಾರು ದುಬಾರಿ ಆಟಗಾರರ ಪಟ್ಟಿ

  • ಮಿಚೆಲ್ ಸ್ಟಾರ್ಕ್ (KKR), 24.75 ಕೋಟಿ (2024)
  • ಸ್ಯಾಮ್ ಕರನ್ (PBKS), 18.50 ಕೋಟಿ (2023)
  • ಇಶಾನ್ ಕಿಶನ್ (MI), 15.25 ಕೋಟಿ (2022)
  • ಕ್ರಿಸ್ ಮೋರಿಸ್ (RR), 16.25 ಕೋಟಿ (2021)
  • ಪ್ಯಾಟ್ ಕಮ್ಮಿನ್ಸ್ (KKR), 15.5 ಕೋಟಿ (2020)
  • ಜಯದೇವ್ ಉನದ್ಕತ್ (RR​), 8.4 ಕೋಟಿ (2019)
  • ಬೆನ್ ಸ್ಟೋಕ್ಸ್ (RR), 12.5 ಕೋಟಿ (2018)
  • ಬೆನ್ ಸ್ಟೋಕ್ಸ್ (RPS), 14.5 ಕೋಟಿ (2017)
  • ಶೇನ್ ವ್ಯಾಟ್ಸನ್ (RCB), 9.5 ಕೋಟಿ (2016)
  • ಯುವರಾಜ್ ಸಿಂಗ್ (DD), 16 ಕೋಟಿ (2015)
  • ಯುವರಾಜ್ ಸಿಂಗ್ (RCB), 14 ಕೋಟಿ (2014)
  • ಗ್ಲೆನ್ ಮ್ಯಾಕ್ಸ್‌ವೆಲ್ (MI), 6.3 ಕೋಟಿ (2013)
  • ರವೀಂದ್ರ ಜಡೇಜಾ (CSK), 12.8 ಕೋಟಿ (2012)
  • ಗೌತಮ್ ಗಂಭೀರ್ (KKR), 14.9 ಕೋಟಿ (2011)
  • ಶೇನ್ ಬಾಂಡ್ (KKR), 4.8 ಕೋಟಿ (2010)
  • ಕೆವಿನ್ ಪೀಟರ್ಸನ್ (RCB), 9.8 ಕೋಟಿ (2009)
  • ಎಂಎಸ್ ಧೋನಿ (CSK), 9.5 ಕೋಟಿ (2008)

Whats_app_banner