ಜ್ಯೋತಿಷಿಗಳ ಪ್ರಕಾರ ಐಪಿಎಲ್ ಫೈನಲ್‌ನಲ್ಲಿ ಈ ಬಾರಿ ಗೆಲುವು ಪಡೆಯುವ ತಂಡ ಯಾವುದು? ಇಲ್ಲಿದೆ ವಿವರ
Astrologer Pandit Thakur Prasad : 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಚಾಂಪಿಯನ್ ಆಗುವ ತಂಡ ಯಾವುದೆಂದು ಜ್ಯೋತಿಷಿ ಪಂಡಿತ್ ಠಾಕೂರ್ ಪ್ರಸಾದ್ ಭವಿಷ್ಯ ನುಡಿದಿದ್ದಾರೆ.

Astrologer Pandit Thakur Prasad: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ಗೂ (Indian Premier League 2024) ಮೂರು ದಿನಗಳ ಮೊದಲೇ ಜ್ಯೋತಿಷಿ ಪಂಡಿತ್ ಠಾಕೂರ್ ಪ್ರಸಾದ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (KKR vs SRH) ನಡುವೆ ಯಾವ ತಂಡ ವಿಜೇತರಾಗುತ್ತಾರೆ ಎಂದು ದಿಟ್ಟ ಭವಿಷ್ಯ ನುಡಿದಿದ್ದಾರೆ. ಐಪಿಎಲ್ ಸೀಸನ್‌ನ ಅಂತಿಮ ಪಂದ್ಯವು ಇಂದು (ಮೇ 26ರ ಭಾನುವಾರ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅಂತಿಮ ಹಣಾಹಣಿಯಲ್ಲಿ ಪ್ಯಾಟ್ ಕಮಿನ್ಸ್ ಪಡೆಯ ಎಸ್ಆರ್ಹೆಚ್ ವಿರುದ್ಧ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ರಶಸ್ತಿ ಗೆಲ್ಲಲಿದೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ರನ್ನರ್ಅಪ್ ಸ್ಥಾನ ಪಡೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಕ್ವಾಲಿಫೈಯರ್-1ರ ಪಂದ್ಯದಲ್ಲಿ ಗೆದ್ದು ಕೆಕೆಆರ್ ಫೈನಲ್ ಪ್ರವೇಶಿಸಿದರೆ, ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯಿಸಿದ ಎಸ್ಆರ್ಹೆಚ್ ಎರಡನೇ ತಂಡವಾಗಿ ಫೈನಲ್ಗೇರಿತ್ತು.
ಜ್ಯೋತಿಷಿ ಪಂಡಿತ್ ಠಾಕೂರ್ ಪ್ರಸಾದ್ ತಮ್ಮ ಒಳನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ 2024 ಟ್ರೋಫಿ ಗೆಲ್ಲುವ ತಂಡವನ್ನು ಹೈಲೈಟ್ ಮಾಡಿದ್ದಾರೆ. ಅವರ ಪ್ರಕಾರ, ಕೆಕೆಆರ್ ಟ್ರೋಫಿಗೆ ಮುತ್ತಿಕ್ಕುವ ಅವಕಾಶವಿದೆ. ಉಭಯ ತಂಡಗಳ ನಡುವೆಯೂ ಸಮನಾದ ಪೈಪೋಟಿ ಇರಲಿದೆ. ಇತ್ತಂಡಗಳ ನಡುವೆ ತೀವ್ರ ಪೈಪೋಟಿ ಇರುತ್ತದೆ. ಆದರೆ, ಕೆಕೆಆರ್ ಪ್ರಶಸ್ತಿ ಹಣಾಹಣಿಯಲ್ಲಿ ಗೆಲ್ಲುತ್ತದೆ. ಕ್ರಿಕೆಟ್ ಉತ್ಸಾಹಿಗಳಿಗೆ ರೋಚಕತೆ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಠಾಕೂರ್ ನುಡಿದ್ದಾರೆ.
ಕೆಕೆಆರ್ ಆಟಗಾರರು ಮತ್ತು ಮಾಲೀಕರ ರಾಶಿ, ನಕ್ಷತ್ರ, ಗ್ರಹಗತಿ ಆಧಾರದ ಮೇಲೆ ಫಲಿತಾಂಶ ಬರಲಿದೆ. ಎಲ್ಲವೂ ಸಹ ಉತ್ತಮವಾಗಿದ್ದು, ಕೋಲ್ಕತ್ತಾ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ. ಆದರೆ, ಪಂದ್ಯದ ಫಲಿತಾಂಶವನ್ನು ರೂಪಿಸುವಲ್ಲಿ ಆಟಗಾರರ ಕೌಶಲ್ಯ ಮತ್ತು ನಿರ್ಣಯದ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತಾರೆ. ಮೈದಾನದಲ್ಲಿ ಆಟಗಾರರು ಪರಿಣಾಮಕಾರಿ ಪ್ರದರ್ಶನವನ್ನು ತೋರಬೇಕು ಎಂದು ಜ್ಯೋತಿಷಿ ತಿಳಿಸಿದ್ದಾರೆ.
ನಕ್ಷತ್ರ, ರಾತ್ರಿ, ಗ್ರಹ ಗತಿಯು ಆಟಗಾರರಲ್ಲಿ ಪ್ರಾಮಾಣಿಕತೆ, ಉತ್ಸಾಹ, ಶಕ್ತಿ ಮತ್ತು ಸಮರ್ಪಣೆ ಸೂಚಿಸುತ್ತದೆ. ಇದು ಕೆಕೆಆರ್ ಗೆಲ್ಲುವ ಅವಕಾಶಗಳನ್ನು ಸೂಚಿಸುತ್ತಿದೆ. ಟೂರ್ನಿಯುದ್ದಕ್ಕೂ ಸ್ಥಿರತೆಯನ್ನು ಪ್ರದರ್ಶಿಸಿದ ಕೆಕೆಆರ್ ಗೆಲುವಿಗೆ ಸಿದ್ಧವಾಗಿದೆ. ಅಲ್ಲದೆ, ಸನ್‌ರೈಸರ್ಸ್ ವಿರುದ್ಧದ ದಾಖಲೆಯೂ ಕೆಕೆಆರ್ಗೆ ವರದಾನವಾಗಿದೆ. ಲೀಗ್ನಲ್ಲಿ ಮತ್ತು ಕ್ವಾಲಿಫೈಯರ್-1ರಲ್ಲಿ ಹೈದರಾಬಾದ್ ತಂಡವನ್ನು ಕೆಕೆಆರ್ ಮಣಿಸಿ ಆತ್ಮವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಏಡನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್, ಶಹಬಾಜ್ ಅಹ್ಮದ್ (ಇಂಪ್ಯಾಕ್ಟ್ ಆಟಗಾರ).
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
