ಕನ್ನಡ ಸುದ್ದಿ  /  Cricket  /  Ipl Records Highest Team Totals In The Ipl Most Sixes Fastest Fifties For Srh Abhishek Sharma Klaasen Travis Head Prs

ಆರ್​​ಸಿಬಿ ದಾಖಲೆ, ವೇಗದ ಅರ್ಧಶತಕ, ಜೊತೆಯಾಟ; ವಿಸ್ಫೋಟಕ ಬ್ಯಾಟಿಂಗ್​ನಿಂದ ಹಲವು ದಾಖಲೆ ಧ್ವಂಸಗೊಳಿಸಿದ ಎಸ್​ಆರ್​ಹೆಚ್

IPL Records : ಅಭಿಷೇಕ್ ಶರ್ಮಾ (63), ಟ್ರಾವಿಸ್ ಹೆಡ್ (62), ಹೆನ್ರಿಚ್ ಕ್ಲಾಸೆನ್ (80*) ಮತ್ತು ಏಡನ್ ಮಾರ್ಕ್ರಮ್ (42*) ಅವರ ವಿಧ್ವಂಸಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಸುನಾಮಿ ಬ್ಯಾಟಿಂಗ್
ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಸುನಾಮಿ ಬ್ಯಾಟಿಂಗ್

17ನೇ ಆವೃತ್ತಿಯ ಐಪಿಎಲ್​ನ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ (Mumbai Indians vs Sunrisers Hyderabad) ಸುನಾಮಿ ಬ್ಯಾಟಿಂಗ್ ನಡೆಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2024)​​ ದಾಖಲೆಗಳು ಧೂಳೀಪಟಗೊಂಡಿದೆ. ಒಂದಲ್ಲ, ಎರಡಲ್ಲ, ಹಲವು ರೆಕಾರ್ಡ್​ಗಳು ಉಡೀಸ್​ ಆಗಿವೆ. ಅಭಿಷೇಕ್ ಶರ್ಮಾ (63), ಟ್ರಾವಿಸ್ ಹೆಡ್ (62), ಹೆನ್ರಿಚ್ ಕ್ಲಾಸೆನ್ (80*) ಮತ್ತು ಏಡನ್ ಮಾರ್ಕ್ರಮ್ (42*) ಅವರ ವಿಧ್ವಂಸಕ ಬ್ಯಾಟಿಂಗ್ ನೆರವಿನಿಂದ ನಿರ್ಮಾಣವಾದ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.

ಆರ್​​ಸಿಬಿ ಸಾರ್ವಕಾಲಿಕ ದಾಖಲೆ ಬ್ರೇಕ್

ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಚಚ್ಚಿದ ಸನ್​ರೈಸರ್ಸ್​ ಹೈದರಾಬಾದ್ ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದಿದೆ. ಶ್ರೀಮಂತ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕೂ ಮುನ್ನ ಈ ದಾಖಲೆ ಆರ್​ಸಿಬಿ ಹೆಸರಿನಲ್ಲಿತ್ತು. ಬೆಂಗಳೂರು 263 ರನ್ ಗಳಿಸಿತ್ತು. ಇದೀಗ ಈ ದಾಖಲೆ ಎಸ್​ಆರ್​ಹೆಚ್​ ಪಾಲಾಗಿದೆ.

ಐಪಿಎಲ್‌ನಲ್ಲಿ ತಂಡದ ಗರಿಷ್ಠ ಮೊತ್ತ

277/3 - ಎಸ್​ಆರ್​ಹೆಚ್ vs ಮುಂಬೈ, ಹೈದರಾಬಾದ್ (2024)

263/5 - ಆರ್​​ಸಿಬಿ vs ಪಿಡಬ್ಲ್ಯುಪಿ (ಪುಣೆ), ಬೆಂಗಳೂರು (2013)

257/5 - ಎಲ್​ಎಸ್​ಜಿ vs ಪಿಬಿಕೆಎಸ್, ಮೊಹಾಲಿ (2023)

248/3 - ಆರ್​​ಸಿಬಿ vs ಜಿಎಲ್ (ಗುಜರಾತ್ ಲಯನ್ಸ್), ಬೆಂಗಳೂರು (2016)

246/5 - ಸಿಎಸ್​ಕೆ vs ಆರ್​​ಆರ್​, ಚೆನ್ನೈ (2010)

ಐಪಿಎಲ್‌ನಲ್ಲಿ ಎಸ್‌ಆರ್‌ಎಚ್‌ ಪರ 4ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಅತ್ಯಧಿಕ ಜೊತೆಯಾಟ

116* - ಹೆನ್ರಿಚ್ ಕ್ಲಾಸೆನ್ ಮತ್ತು ಐಡೆನ್ ಮಾರ್ಕ್ರಾಮ್ vs ಮುಂಬೈ ಇಂಡಿಯನ್ಸ್, ಹೈದರಾಬಾದ್ (2024)

93* - ಹೆನ್ರಿಕ್ಸ್ ಮತ್ತು ಯುವರಾಜ್ ಸಿಂಗ್ vs ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ (2017)

80 - ಕ್ಯಾಮರೂನ್ ವೈಟ್ ಮತ್ತು ತಿಸಾರಾ ಪೆರೆರಾ vs ಆರ್​​ಸಿಬಿ, ಬೆಂಗಳೂರು (2013)

79 - ಕೇನ್ ವಿಲಿಯಮ್ಸನ್ ಮತ್ತು ಯೂಸುಫ್ ಪಠಾಣ್ vs ಸಿಎಸ್​ಕೆ, ಹೈದರಾಬಾದ್ (2018)

77 - ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗಾರ್ಗ್ vs ಸಿಎಸ್​ಕೆ, ದುಬೈ (2020)

10 ಓವರ್​ಗಳಲ್ಲಿ ಗರಿಷ್ಠ ಸ್ಕೋರ್​

ಎಸ್​ಆರ್​ಹೆಚ್​ 10 ಓವರ್​ಗಳಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ. 2 ವಿಕೆಟ್ ನಷ್ಟಕ್ಕೆ 148 ರನ್​ ಗಳಿಸಿದ್ದು, ಐಪಿಎಲ್​ ಇತಿಹಾಸದಲ್ಲೇ 10 ಓವರ್​​ಗಳಲ್ಲಿ​ ಅಧಿಕ ಮೊತ್ತ ಕಲೆಹಾಕಿದ ಪ್ರಥಮ ತಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಸಾಧನೆ ಮುಂಬೈ ಇಂಡಿಯನ್ಸ್ ಹೆಸರಿನಲ್ಲಿತ್ತು. 2021ರಲ್ಲಿ ಹೈದರಾಬಾದ್​ ಎದುರು 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸತ್ತು. ಇದೀಗ ಎಸ್​ಆರ್​ಹೆಚ್​ ಈ ದಾಖಲೆ ಎಂಐ ವಿರುದ್ಧವೇ ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿ ಸೇಡು ತೀರಿಸಿಕೊಂಡಿದೆ.

ಮೊದಲ 10 ಓವರ್‌ಗಳಲ್ಲಿ ಗರಿಷ್ಠ ಸ್ಕೋರ್

148/2 - ಎಸ್​ಆರ್​ಹೆಚ್ vs ಎಂಐ, ಹೈದರಾಬಾದ್ (2024) - ಹೊಸ ಸೇರ್ಪಡೆ

131/3 - ಎಂಐ vs ಎಸ್​ಆರ್​ಹೆಚ್, ಅಬುಧಾಬಿ (2021)

131/3 - ಪಿಬಿಕೆಎಸ್ vs ಎಸ್​ಆರ್​ಹೆಚ್, ಹೈದರಾಬಾದ್ (2014)

130/0 - ಡೆಕ್ಕನ್ ಚಾರ್ಜರ್ಸ್ vs ಮುಂಬೈ ಇಂಡಿಯನ್ಸ್, (ಮುಂಬೈ ಡಿವೈ ಪಾಟೀಲ್) 2008

129/0 - ಆರ್​​ಸಿಬಿ vs ಪಿಬಿಕೆಎಸ್​, ಬೆಂಗಳೂರು (2016)

ಹೈದರಾಬಾದ್ ಪರ ವೇಗದ ಐಪಿಎಲ್​ ಅರ್ಧಶತಕ ಸಿಡಿಸಿದವರು (ಎಸೆತಗಳಲ್ಲಿ)

16 - ಅಭಿಷೇಕ್ ಶರ್ಮಾ vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2024 (ಹೊಸ ಸೇರ್ಪಡೆ)

18 - ಟ್ರಾವಿಸ್ ಹೆಡ್ vs ಮುಂಬೈ ಇಂಡಿಯನ್ಸ್, ಹೈದರಾಬಾದ್, 2024 (ಹೊಸ ಸೇರ್ಪಡೆ)

20 - ಡೇವಿಡ್ ವಾರ್ನರ್ vs ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್, 2015

20 - ಡೇವಿಡ್ ವಾರ್ನರ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಹೈದರಾಬಾದ್, 2017

20 - ಮೋಸೆಸ್ ಹೆನ್ರಿಕ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್, 2015

21 - ಡೇವಿಡ್ ವಾರ್ನರ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು, 2016

ಮುಂಬೈ ವಿರುದ್ಧ ವೇಗದ ಅರ್ಧಶತಕ ಸಿಡಿಸಿದವರು (ಎಸೆತಗಳು)

14 - ಪ್ಯಾಟ್ ಕಮಿನ್ಸ್ (ಕೆಕೆಆರ್​) - ಪುಣೆ, 2022

16 - ಅಭಿಷೇಕ್ ಶರ್ಮಾ (ಎಸ್​ಆರ್​ಹೆಚ್​) - ಹೈದರಾಬಾದ್, 2024 (ಹೊಸ ಸೇರ್ಪಡೆ)

18 - ರಿಷಭ್ ಪಂತ್ (ಡೆಲ್ಲಿ) - ಮುಂಬೈ WS, 2018

18 - ಟ್ರಾವಿಸ್ ಹೆಡ್ (ಎಸ್​ಆರ್​ಹೆಚ್) - ಹೈದರಾಬಾದ್, 2024 (ಹೊಸ ಸೇರ್ಪಡೆ)

19 - ಅಜಿಂಕ್ಯ ರಹಾನೆ (ಸಿಎಸ್​ಕೆ) - ಮುಂಬೈ WS, 2023

ಅತಿ ವೇಗದ ಶತಕ (ತಂಡದ ಪರ)

6 ಓವರ್‌ಗಳಲ್ಲಿ 100+ ರನ್ : ಸಿಎಸ್​ಕೆ vs ಪಿಬಿಕೆಎಸ್, ವಾಂಖಡೆ, 2014

6 ಓವರ್‌ಗಳು 100+ ರನ್ : ಕೆಕೆಆರ್​​ vs ಆರ್​ಸಿಬಿ, ಬೆಂಗಳೂರು, 2017

6.5 ಓವರ್‌ಗಳು 100+ ರನ್ - ಸಿಎಸ್​ಕೆ vs ಮುಂಬೈ, ವಾಂಖೆಡೆ, 2015

7 ಓವರ್‌ಗಳು 100+ ರನ್ - ಎಸ್​ಆರ್​ಹೆಚ್ vs ಮುಂಬೈ, ಹೈದರಾಬಾದ್, 2024 (ಹೊಸ ಸೇರ್ಪಡೆ)

ಪವರ್​​ಪ್ಲೇನಲ್ಲಿ ಅತ್ಯಧಿಕ ಸ್ಕೋರ್​ (ಸನ್​ರೈಸರ್ಸ್ ಹೈದರಾಬಾದ್ ತಂಡ)

81/1 vs ಮುಂಬೈ, ಹೈದರಾಬಾದ್ (2024) ಹೊಸ ಸೇರ್ಪಡೆ

79/0 vs ಕೋಲ್ಕತ್ತಾ ನೈಟ್ ರೈಡರ್ಸ್, ಹೈದರಾಬಾದ್ (2017)

77/0 vs ಪಂಜಾಬ್ ಕಿಂಗ್ಸ್, ಹೈದರಾಬಾದ್ (2019)

77/0 vs ಡೆಲ್ಲಿ ಕ್ಯಾಪಿಟಲ್ಸ್, ದುಬೈ (2020)

ಪವರ್​​ಪ್ಲೇನಲ್ಲಿ ಗರಿಷ್ಠ ಸ್ಕೋರ್‌ (ಎಸ್​ಆರ್​ಹೆಚ್ ಪರ)

62*(25) - ಡೇವಿಡ್ ವಾರ್ನರ್ vs ಕೆಕೆಆರ್​, ಹೈದರಾಬಾದ್ (2019)

59*(20) - ಟ್ರಾವಿಸ್ ಹೆಡ್ vs ಮುಂಬೈ, ಹೈದರಾಬಾದ್ (2024) - ಹೊಸ ಸೇರ್ಪಡೆ

59*(23) - ಡೇವಿಡ್ ವಾರ್ನರ್ vs ಸಿಎಸ್​ಕೆ, ಹೈದರಾಬಾದ್ (2015)

56*(26) - ಡೇವಿಡ್ ವಾರ್ನರ್ vs ಸಿಎಸ್​ಕೆ, ರಾಂಚಿ (2014)

ಐಪಿಎಲ್​ನಲ್ಲಿ ತಂಡವೊಂದರ ಪರ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರರು

239 - ವಿರಾಟ್ ಕೊಹ್ಲಿ (ಆರ್​​ಸಿಬಿ)

222 - ಎಂಎಸ್ ಧೋನಿ (ಸಿಎಸ್​ಕೆ)

200 - ರೋಹಿತ್ ಶರ್ಮಾ (ಮುಂಬೈ) ಹೊಸ ಸೇರ್ಪಡೆ

ಐಪಿಎಲ್​ನ ತಂಡದ ಇನ್ನಿಂಗ್ಸ್​ವೊಂದರಲ್ಲಿ ಗರಿಷ್ಠ ಸಿಕ್ಸರ್​ಗಳು

21 - ಆರ್​ಸಿಬಿ vs ಪಿಡಬ್ಲ್ಯುಐ, ಬೆಂಗಳೂರು (2013)

20 - ಆರ್​ಸಿಬಿ vs ಗುಜರಾತ್ ಲಯನ್ಸ್, ಬೆಂಗಳೂರು (2016)

20 - ಡೆಲ್ಲಿ vs ಗುಜರಾತ್ ಲಯನ್ಸ್, ದೆಹಲಿ (2017)

18 - ಆರ್​​ಸಿಬಿ vs ಪಿಬಿಕೆಎಸ್, ಬೆಂಗಳೂರು (2015)

18 - ಆರ್​ಆರ್​ vs ಪಿಬಿಕೆಎಸ್, ಶಾರ್ಜಾ (2020)

18 - ಸಿಎಸ್​ಕೆ vs ಕೆಕೆಆರ್​​, ಕೋಲ್ಕತ್ತಾ (2023)

18 - ಎಸ್​ಆರ್​​ಹೆಚ್ vs ಮುಂಬೈ, ಹೈದರಾಬಾದ್ (2024) ಹೊಸ ಸೇರ್ಪಡೆ

ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ಸ್

0/70 (4) - ಬೆಸಿಲ್ ಥಂಪಿ (SRH) vs ಆರ್​ಸಿಬಿ, ಬೆಂಗಳೂರು (2018)

0/69 (4) - ಯಶ್ ದಯಾಲ್ (GT) vs ಕೆಕೆಆರ್​, ಅಹಮದಾಬಾದ್ (2023)

0/66 (4) - ಇಶಾಂತ್ ಶರ್ಮಾ (SRH) vs ಸಿಎಸ್​ಕೆ, ಹೈದರಾಬಾದ್ (2013)

0/66 (4) - ಮುಜೀಬ್ ಉರ್ ರಹಮಾನ್ (PBKS) vs ಎಸ್​ಆರ್​ಹೆಚ್, ಹೈದರಾಬಾದ್ (2019)

1/66 (3.5) - ಅರ್ಶ್​ದೀಪ್ ಸಿಂಗ್ (PBKS) vs ಮುಂಬೈ, ಮೊಹಾಲಿ, 2023

0/ 66 (4) - ಕ್ವೆನಾ ಮಫಕಾ (MI) vs ಎಸ್​ಆರ್​ಹೆಚ್, ಹೈದರಾಬಾದ್, (2024) - ಹೊಸ ಸೇರ್ಪಡೆ

IPL_Entry_Point