ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವ ವಹಿಸಲು ತಾಕತ್ತಿರುವ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ ಇರ್ಫಾನ್ ಪಠಾಣ್-irfan pathan names 4 players who can become india cricket team captain after rohit sharma cricket news prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವ ವಹಿಸಲು ತಾಕತ್ತಿರುವ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ ಇರ್ಫಾನ್ ಪಠಾಣ್

ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವ ವಹಿಸಲು ತಾಕತ್ತಿರುವ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ ಇರ್ಫಾನ್ ಪಠಾಣ್

Irfan Pathan : ರೋಹಿತ್​ ಶರ್ಮಾ ಅವರ ನಂತರ ಭಾರತ ತಂಡವನ್ನು ಮುನ್ನಡೆಸುವ ತಾಕತ್ತು ಹೊಂದಿರುವ ಆಟಗಾರರು ಯಾರೆಂಬುದನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಬಹರಂಗಪಡಿಸಿದ್ದಾರೆ.

ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವ ವಹಿಸಲು ತಾಕತ್ತಿರುವ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ ಇರ್ಫಾನ್ ಪಠಾಣ್
ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವ ವಹಿಸಲು ತಾಕತ್ತಿರುವ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ ಇರ್ಫಾನ್ ಪಠಾಣ್

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma) ಅವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಟಿ20 ವಿಶ್ವಕಪ್ 2024ರ (T20 World Cup 2024) ನಂತರ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ವಿದಾಯ ಹೇಳುವುದು ಬಹುತೇಕ ಖಚಿತ. ಬಳಿಕ ಏಕದಿನ ಮತ್ತು ಟೆಸ್ಟ್​​ ಕ್ರಿಕೆಟ್​ನಲ್ಲಿ ಮುಂದುವರೆಯಲಿರುವ ಹಿಟ್​ಮ್ಯಾನ್,​ 2 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವ ಸಾಧ್ಯತೆ ಇದೆ. ಆದರೆ, ರೋಹಿತ್​ ನಂತರ ಭಾರತದ ನಾಯಕ ಯಾರು? ಹೀಗೊಂದು ಪ್ರಶ್ನೆ ಐಪಿಎಲ್ ಮಧ್ಯದಲ್ಲೇ ಎದ್ದಿದೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ (Irfan Pathan) ಭಾರತದ ನಾಯಕರಾಗಬಹುದಾದ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ್ದಾರೆ.

ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದ 2007ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ 39 ವರ್ಷದ ಪಠಾಣ್ ಅವರ ಪ್ರಕಾರ, ಉಪನಾಯಕ ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಸ್ಟಾರ್ ವಿಕೆಟ್​ಕೀಪರ್-ಬ್ಯಾಟರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ರೋಹಿತ್ ನಂತರ ಭಾರತದ ನಾಯಕರಾಗಲು ರೇಸ್​​​ನಲ್ಲಿದ್ದಾರೆ. ಈ ನಾಲ್ವರು ಸಹ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆದರೆ, ಬುಮ್ರಾ ಹೊರತುಪಡಿಸಿ ಉಳಿದ ಮೂವರು ಐಪಿಎಲ್‌ನಲ್ಲೂ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಇರ್ಫಾನ್ ಪಠಾಣ್ ಹೇಳಿದ್ದೇನು?

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಸಂವಾದದಲ್ಲಿ ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಬಲ್ಲ ಆಟಗಾರರು ಯಾರು ಎಂದು ಇರ್ಫಾನ್ ಅವರನ್ನು ಕೇಳಲಾಯಿತು. ಅದಕ್ಕೆ ಅವರು ಪಂತ್, ಪಾಂಡ್ಯ, ಬುಮ್ರಾ ಮತ್ತು ಸೂರ್ಯಕುಮಾರ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ ನಾಯಕತ್ವದ ವಿಚಾರದಲ್ಲಿ ಅವರು ಯಾರೂ ಸಹ ರೋಹಿತ್ ಅವರನ್ನು ಮೀರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾಯಕತ್ವಕ್ಕೆ ಸಂಬಂಧಿಸಿದಂತೆ ರೋಹಿತ್ ಶರ್ಮಾ ಅತ್ಯುತ್ತಮ ನಾಯಕ. ನಾವು ಯಾವಾಗಲೂ ಆಟಗಾರರ ಬಗ್ಗೆಯೇ ಮಾತನಾಡುತ್ತೇವೆ, ಆದರೆ ನಾಯಕತ್ವವು ಸಂಪೂರ್ಣವಾಗಿ ವಿಭಿನ್ನ ವಿಷಯವಾಗಿದೆ ಎಂದು ಪಠಾಣ್ ಹೇಳಿದ್ದಾರೆ.

ಭವಿಷ್ಯದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮೇಲೂ ಬಿಸಿಸಿಐ ಕಣ್ಣಿಡುತ್ತದೆ. ಈಗ ಹಾರ್ದಿಕ್ ಅವರನ್ನು ಉಪನಾಯಕರನ್ನಾಗಿ ಹೊಂದಿದ್ದೇವೆ. ಬಿಸಿಸಿಐ ಕಣ್ಣಿಟ್ಟಿರುವ ಆಟಗಾರರ ಪೈಕಿ ರಿಷಭ್ ಪಂತ್ ಕೂಡ ಒಬ್ಬರು. ಪ್ರಸ್ತುತ ಮೂವರಿಂದ ನಾಲ್ವರು ಆಟಗಾರರು ಸಿದ್ಧರಾಗಿದ್ದಾರೆ. ಆದರೆ, ರೋಹಿತ್ ನಂಬರ್ ಒನ್ ಎಂದು ಇರ್ಫಾನ್​ ಹೇಳಿಕೆ ನೀಡಿದ್ದಾರೆ.

ಇನ್ನೆರಡು ವರ್ಷ ಆಡುವುದಷ್ಟೇ ರೋಹಿತ್?

ರೋಹಿತ್​ ವಯಸ್ಸೀಗ 37 ವರ್ಷ. ಟಿ20 ವಿಶ್ವಕಪ್ ನಂತರ ಟಿ20 ಕ್ರಿಕೆಟ್​​ನಿಂದ ಬಹುತೇಕ ದೂರ ಉಳಿಯಲಿದ್ದಾರೆ. ಆ ಬಳಿಕ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯಲಿದ್ದಾರೆ. 2025ರಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ ಫೈನಲ್​​ (ಒಂದು ವೇಳೆ ಭಾರತ ಅರ್ಹತೆ ಪಡೆದರೆ) ಆಡಲಿದ್ದಾರೆ. ಇದರ ನಂತರ ಕ್ರಿಕೆಟ್​ಗೆ ವಿದಾಯ ಹೇಳಿದರೂ ಅಚ್ಚರಿ ಇಲ್ಲ. ವಯಸ್ಸು ಮತ್ತು ಫಿಟ್ನೆಸ್​ ಕೂಡ ಅವರಿಗೆ ಕ್ರಿಕೆಟ್​ ಆಡಲು ನೆರವಾಗುವುದಿಲ್ಲ. ಹೀಗಾಗಿ ನಾಯಕತ್ವದ ಕುರ್ಚಿಗೆ ಈಗಿನಿಂದಲೇ ಪೈಪೋಟಿ ಏರ್ಪಟ್ಟಿದೆ.

ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್, ಗಾಯದ ಕಾರಣದಿಂದ ಹೊರಗುಳಿಯುವ ಮೊದಲು ಕಳೆದ ವರ್ಷ ಏಕದಿನ ವಿಶ್ವಕಪ್‌ಗೆ ಭಾರತದ ಉಪನಾಯಕನಾಗಿ ಹೆಸರಿಸಲ್ಪಟ್ಟರು. ಏಪ್ರಿಲ್ 30ರಂದು ಟಿ20 ವಿಶ್ವಕಪ್​ಗೆ​ 15 ಸದಸ್ಯರ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಮತ್ತೊಮ್ಮೆ ಹಾರ್ದಿಕ್ ಉಪನಾಯನಾಗಿ ನೇಮಕವಾಗಿದ್ದಾರೆ. ರೋಹಿತ್​ ಶರ್ಮಾ ಮತ್ತೊಮ್ಮೆ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.

mysore-dasara_Entry_Point