ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

Irfan Pathan : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆರಂಭಿಕರಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರು ಕಣಕ್ಕಿಳಿಯಬೇಕು ಎಂದು ಇರ್ಫಾನ್ ಪಠಾಣ್ ಹೇಳಿಕೆ ನೀಡಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!
ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ಟಿ20 ವಿಶ್ವಕಪ್ 2024 ಟೂರ್ನಿಗೆ ಆಯ್ಕೆಯಾಗಿರುವ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ 4 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ವೈಫಲ್ಯವಾಗುತ್ತಿರುವುದು ಬಿಸಿಸಿಐ (BCCI) ಜೊತೆಗೆ ಪ್ಲೇಆಫ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಚಿಂತೆ ಹೆಚ್ಚಿಸಿದ್ದಾರೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ (Irfan Pathan), ವಿಶ್ವಕಪ್‌ಗೆ ಮುನ್ನ ಜೈಸ್ವಾಲ್ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿದ್ದು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಎಡಗೈ ಆಟಗಾರ, 13 ಪಂದ್ಯಗಳಲ್ಲಿ 1 ಅರ್ಧಶತಕ, 1 ಶತಕ ಸಹಿತ 348 ರನ್ ಗಳಿಸಿದ್ದಾರೆ. 152.63 ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಜೈಸ್ವಾಲ್ ಆಟವನ್ನು ಟೀಕಿಸಿದ ಇರ್ಫಾನ್, ಟಿ20 ವಿಶ್ವಕಪ್​ನಲ್ಲಿ ಆತನನ್ನು ಅಡುವ 11ರ ಬಳಗದಲ್ಲಿ ಕಣಕ್ಕಿಳಿಸುವುದು ಬೇಡ ಎಂದು ಹೇಳಿದ್ದಾರೆ. ಹಾಗೆಯೇ ಯಾರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಬೇಕು ಎಂದು ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡಿದ್ದಾರೆ.

ರೋಹಿತ್​-ಕೊಹ್ಲಿ ಆರಂಭಿಕರಾಗಬೇಕು ಎಂದ ಇರ್ಫಾನ್

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಯುಎಸ್​ಎ ಮತ್ತು ವೆಸ್ಟ್ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ನಡೆಯುವ ಮೆಗಾ ಈವೆಂಟ್‌ನಲ್ಲಿ ಓಪನಿಂಗ್ ಮಾಡಬೇಕು ಎಂದು ಸೂಚಿಸಿದ್ದಾರೆ. ಜೈಸ್ವಾಲ್ ವಿಶ್ವಕಪ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂಬುದು ಎಲ್ಲರ ಆಶಯ. ಎಡಗೈ ಬ್ಯಾಟರ್​ ಆಗಿರುವ ಕಾರಣ ಎಡಗೈ ಸ್ಪಿನ್ನರ್​​ಗಳಿಗೆ ಹೊಸ ಚೆಂಡು ನೀಡಲು ಸಾಧ್ಯವಿಲ್ಲ. ಯಾವುದೇ ತಂಡವು ಎಡಗೈ ಸ್ಪಿನ್ನರ್​​ಗಳಿಗೆ ಮೊದಲ ಓವರ್​​ ನೀಡಲು ಹಿಂಜರಿಯುತ್ತವೆ.

ಜೈಸ್ವಾಲ್ ಅವರ ಪ್ರಸ್ತುತ ಫಾರ್ಮ್​ ಪರಿಶೀಲಿಸುವಂತೆ ಬಿಸಿಸಿಐಗೆ ಒತ್ತಾಯಿಸಿರುವ ಇರ್ಫಾನ್, ರೋಹಿತ್ ಶರ್ಮಾ ಜೊತೆಗೆ ಇನ್ ಫಾರ್ಮ್ ವಿರಾಟ್ ಕೊಹ್ಲಿಯೊಂದಿಗೆ ಓಪನಿಂಗ್ ಮಾಡಬೇಕೇ ಅಥವಾ ಯುವ ಮತ್ತು ಅನನುಭವಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಹೋಗಬೇಕೇ ಎಂದು ತಂಡವು ಯೋಚಿಸಬೇಕಿದೆ. ಹೀಗಾಗಿ ಯಶಸ್ವಿ ಫಾರ್ಮ್‌ಗೆ ಬರುವುದು ಅತ್ಯಂತ ಅವಶ್ಯಕವಾಗಿದೆ. ಮತ್ತೆ ಅದೇ ಫಾರ್ಮ್​ ಮುಂದುವರೆಸಿದರೆ ರೋಹಿತ್​-ಕೊಹ್ಲಿ ಆರಂಭಿಕರಾಗಬೇಕು. ಜೈಸ್ವಾಲ್ ಅಸ್ಥಿರ ಪ್ರದರ್ಶನ ರಾಜಸ್ಥಾನ್​ಗೂ ಚಿಂತೆ ಹುಟ್ಟಿಸಿದೆ ಎಂದು ಹೇಳಿದ್ದಾರೆ.

ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದ ಆಲ್​ರೌಂಡರ್​

ಜೈಸ್ವಾಲ್​ಗೆ ಖುಷಿಯ ಸಂಗತಿ ಏನೆಂದರೆ ತಮ್ಮ ತಂಡವು ಪ್ಲೇಆಫ್​ಗೆ ಅರ್ಹತೆ ಪಡೆದ ಕಾರಣ ಆತನಿಗೆ ಇನ್ನಷ್ಟು ಅವಕಾಶ ಸಿಗುತ್ತವೆ. ಆದರೆ ಕಳಪೆ ಫಾರ್ಮ್​ ರಾಜಸ್ಥಾನ್​​​ಗೂ ಸಾಕಷ್ಟು ತೊಂದರೆ ನೀಡುತ್ತಿದೆ. ಜೋಸ್ ಬಟ್ಲರ್ ಅಲಭ್ಯತೆ ಸಂದರ್ಭದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಬೇಕು. ಜೈಸ್ವಾಲ್, ಗಾಳಿಯಲ್ಲಿ ಗುಂಡು ಹೊಡೆದಂತೆ ಆಡಬಾರದು. ತನ್ನ ಪಾತ್ರ ಏನೆಂಬುದನ್ನು ಅರಿತು ಆಡಬೇಕು. ಮುಂದಿನ ಪಂದ್ಯಗಳಲ್ಲಾದರೂ ಫಾರ್ಮ್​ಗೆ ಬರಬೇಕು ಎಂದು ಇರ್ಫಾನ್ ಎಚ್ಚರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್​ನ ಮೊದಲಾರ್ಧದಲ್ಲಿ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿತ್ತು. ಆದರೆ ದ್ವಿತಿಯಾರ್ಧದಲ್ಲಿ ಅತ್ಯಂತ ಕಳಪೆಯಾಟವಾಡುತ್ತಿದೆ. ಆರಂಭಿಕ 7 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿದ್ದ ಆರ್​ಆರ್​, ಸೆಕೆಂಡ್ ಹಾಫ್​ನಲ್ಲಿ ಕಣಕ್ಕಿಳಿದ 6 ಪಂದ್ಯಗಳಲ್ಲಿ 4 ಸೋತಿದೆ. ಅದು ಕೂಡ ಸತತ ಸೋಲು ಕಂಡಿದೆ. ಇದೇ ಫಾರ್ಮ್​ ಮುಂದುವರೆದರೆ ಪ್ಲೇಆಫ್​​ನಲ್ಲೂ ಸೋತು ಹೊರ ಬಿದ್ದರೂ ಅಚ್ಚರಿ ಇಲ್ಲ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

IPL_Entry_Point