ಕನ್ನಡ ಸುದ್ದಿ  /  Cricket  /  Irfan Pathans Cryptic Tweet Amidst Rumours Of Hardik Pandyas Transfer To Mumbai Indians Goes Viral Gujarat Titans Prs

ಯೂಸ್ ಅಂಡ್ ಥ್ರೋ ಹೊಸದೇನಲ್ಲ; ಮುಂಬೈಗೆ ಹಾರ್ದಿಕ್ ವರ್ಗಾವಣೆ ವದಂತಿ ನಡುವೆ ಇರ್ಫಾನ್ ಅಚ್ಚರಿ ಪೋಸ್ಟ್

Irfan Pathan: ಹಾರ್ದಿಕ್ ಪಾಂಡ್ಯ, ಮುಂಬೈಗೆ ಮರಳುತ್ತಾರೆ ಎಂಬ ವದಂತಿಗಳ ನಡುವೆ, ಇರ್ಫಾನ್ ಪಠಾಣ್ ಅವರ ಅಚ್ಚರಿಯ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮುಂಬೈಗೆ ಹಾರ್ದಿಕ್ ವರ್ಗಾವಣೆ ವದಂತಿ ನಡುವೆ ಇರ್ಫಾನ್ ಅಚ್ಚರಿ ಪೋಸ್ಟ್.
ಮುಂಬೈಗೆ ಹಾರ್ದಿಕ್ ವರ್ಗಾವಣೆ ವದಂತಿ ನಡುವೆ ಇರ್ಫಾನ್ ಅಚ್ಚರಿ ಪೋಸ್ಟ್.

ಇಂಡಿಯನ್ ಪ್ರೀಮಿಯರ್ ಲೀಗ್​ ಮಿನಿ ಹರಾಜಿಗೆ (IPL Mini Auction 2024) ದಿನಗಣನೆ ಆರಂಭಗೊಂಡಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು 10 ಫ್ರಾಂಚೈಸಿಗಳು ನವೆಂಬರ್ 26ರಂದು ಸಲ್ಲಿಸಬೇಕಿದೆ. ಇದರ ನಡುವೆ ಆಟಗಾರರ ಟ್ರೇಡಿಂಗ್​ ಕೂಡ ನಡೆಯುತ್ತಿದೆ.

ಅದರಂತೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಮುಂಬರುವ ಐಪಿಎಲ್​ಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ (Mumbai Indians) ಮರಳಲು ಸಿದ್ಧರಾಗಿದ್ದಾರೆ. ಅಧಿಕೃತ ಪ್ರಕಟಣೆ ಘೋಷಣೆಯೊಂದೇ ಬಾಕಿಯಿದ್ದರೂ ಸಹ, ಹಾರ್ದಿಕ್ ಮುಂಬೈ ಸೇರುವುದನ್ನು ಮಾಧ್ಯಮ ಮೂಲಗಳು ಖಚಿತಪಡಿಸಿವೆ. ರಾಜಸ್ಥಾನ ರಾಯಲ್ಸ್​ ದೇವದತ್ ಪಡಿಕ್ಕಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ತಂಡ ಆವೇಶ್​ ಖಾನ್​ರನ್ನು ಅದಲು ಬದಲು ಮಾಡಿಕೊಂಡಿವೆ.

ಹಾರ್ದಿಕ್​ಗೆ ವೇತನ 15 ಕೋಟಿ ಮತ್ತು ಅವರ ಬಿಡುಗಡೆಗಾಗಿ ಗುಜರಾತ್​​ ಫ್ರಾಂಚೈಸಿಗೆ ವರ್ಗಾವಣೆ ಶುಲ್ಕವಾಗಿ ಬಹಿರಂಗಪಡಿಸದ ಮೊತ್ತವನ್ನು ಮುಂಬೈ ಪಾವತಿಸಲಿದೆ. 2015ರಿಂದ 2021ರವರೆಗೂ ಮುಂಬೈ ಪರ ಆಡಿದ್ದ ಹಾರ್ದಿಕ್, 2022ರಲ್ಲಿ ಜಿಟಿ ಸೇರಿಕೊಂಡರು. ನಾಯಕನಾದ ಚೊಚ್ಚಲ ಐಪಿಎಲ್​ನಲ್ಲೇ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟರು. 2023 ರಲ್ಲೂ ಗುಜರಾತ್​ ತಂಡವನ್ನು ಫೈನಲ್​ಗೇರಿಸಿದ್ದರು.

ಇರ್ಫಾನ್ ಅಚ್ಚರಿ ಪೋಸ್ಟ್​

ಹಾರ್ದಿಕ್ ಪಾಂಡ್ಯ, ಮುಂಬೈಗೆ ಮರಳುತ್ತಾರೆ ಎಂಬ ವದಂತಿಗಳ ನಡುವೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಅಚ್ಚರಿಯ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇರ್ಫಾನ್ ಅವರ ಟ್ವೀಟ್​ ಹಾರ್ದಿಕ್​ರನ್ನೇ ಗುರಿಯಾಗಿಸಿಕೊಂಡಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಪಠಾಣ್​ ಟ್ವೀಟ್​ಗೆ ಬಹುತೇಕ ಮಂದಿ ಹಾರ್ದಿಕ್​ಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ.

ಇರ್ಫಾನ್ ಪಠಾಣ್ ಪೋಸ್ಟ್​​ನಲ್ಲಿ ಏನಿದೆ?

ಯೂಸ್​ ಅಂಡ್ ಥ್ರೋ ಎಂದು ಪೋಸ್ಟ್​ನಲ್ಲಿ ಬಳಸಿದ್ದಾರೆ. ಬಳಸಿಕೊಂಡು ಮತ್ತು ಮತ್ತೆ ಎಸೆಯುವುದು ಪ್ರಾರಂಭದಿಂದಲೂ ಇದೆ. ಆಟಗಾರರನ್ನು ಬಳಸಿಕೊಳ್ಳುವುದು ಮತ್ತು ಬಿಸಾಡುವುದನ್ನು ಈ ಹಿಂದಿನಿಂದಲೂ ಮಾಡಲಾಗುತ್ತಿದೆ ಎಂಬ ಅರ್ಥದಲ್ಲಿ ಹೇಳಲಾಗಿದೆ.

ಒಂದು ವೇಳೆ ಈ ಒಪ್ಪಂದ ನಡೆದಿದ್ದೇ ಆದರೆ ಐಪಿಎಲ್ ಇತಿಹಾಸದಲ್ಲಿ ಅತಿದೊಡ್ಡ ವ್ಯಾಪಾರವಾಗಲಿದೆ. ಆದಾಗ್ಯೂ, ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ಪಡೆಯಲು ಎಂಐ ಕೆಲವು ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. 2023 ಹರಾಜಿನ ನಂತರ ತಮ್ಮ ಪರ್ಸ್​ನಲ್ಲಿ 50 ಲಕ್ಷ ಮಾತ್ರ ಹೊಂದಿರುವ ಮುಂಬೈ, ಈ ಬಾರಿ ಹರಾಜಿನಲ್ಲಿ 5 ಕೋಟಿ ಹೆಚ್ಚುವರಿ ಮೊತ್ತ ಪಡೆಯಲಿದೆ (ಎಲ್ಲಾ ತಂಡಗಳಿಗೂ 5 ಕೋಟಿ ಹೆಚ್ಚುವರಿ ಮೊತ್ತ ಸಿಗಲಿದೆ). ಆದರೆ ಹಾರ್ದಿಕ್ ವರ್ಗಾವಣೆಗೆ ಬೇಕಾಗಿರುವ ಬಾಕಿ 9.5 ಕೋಟಿಯನ್ನು ಸರಿದೂಗಿಸಲು ಮುಂಬೈ ಆಟಗಾರರನ್ನು ಬಿಡುಗಡೆ ಮಾಡಲೇಬೇಕು.

ಹಾರ್ದಿಕ್ 2023ರ ವಿಶ್ವಕಪ್‌ನಲ್ಲಿ ಪಾದದ ಗಾಯದ ಸಮಸ್ಯೆಗೆ ಒಳಗಾದರು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಏಕದಿನ ವಿಶ್ವಕಪ್​ ಟೂರ್ನಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯನ್ನೂ ತಪ್ಪಿಸಿಕೊಂಡರು. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸವನ್ನೂ ಹಾರ್ದಿಕ್ ಕಳೆದುಕೊಳ್ಳುವ ಸಾಧ್ಯತೆ ಇದೆ. ಏಸ್ ಆಲ್ ರೌಂಡರ್ ಐಪಿಎಲ್​ಗೆ ಮರಳುವ ನಿರೀಕ್ಷೆಯಿದೆ.