ಕನ್ನಡ ಸುದ್ದಿ  /  Cricket  /  Is Sachin Tendulkar The Reason For Removing Rohit Sharma From Mumbai Indians Ipl 2024 Arjun Tendulkar Hardik Pandya Prs

ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದು ಹಾಕಲು ಸಚಿನ್ ತೆಂಡೂಲ್ಕರ್ ಕಾರಣ; ಸ್ಫೋಟಕ ವಿಷಯ ಬಹಿರಂಗ

Sachin Tendulkar : ರೋಹಿತ್​ ಶರ್ಮಾ ಅವರನ್ನು ನಾಯಕತ್ವದಿಂದ ವಜಾಗೊಳಿಸಲು ಒಬ್ಬರ ಕೈವಾಡ ಇದೆ ಎಂದು ವರದಿಯಾಗಿದೆ. ಅದು ಬೇರೆ ಯಾರೂ ಅಲ್ಲ, ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಎಂದು ಹಿಟ್​ಮ್ಯಾನ್ ಫ್ಯಾನ್ಸ್ ಆರೋಪಿಸುತ್ತಿದ್ದಾರೆ.

ನಾಯಕತ್ವದಿಂದ ರೋಹಿತ್ ಶರ್ಮಾ ವಜಾಗೊಳಿಸಲು ಸಚಿನ್ ತೆಂಡೂಲ್ಕರ್ ಕೈವಾಡ
ನಾಯಕತ್ವದಿಂದ ರೋಹಿತ್ ಶರ್ಮಾ ವಜಾಗೊಳಿಸಲು ಸಚಿನ್ ತೆಂಡೂಲ್ಕರ್ ಕೈವಾಡ

2024ರ ಐಪಿಎಲ್​ ಆರಂಭಕ್ಕೂ ಮುನ್ನ ಯಶಸ್ವಿ ನಾಯಕ ರೋಹಿತ್​ ಶರ್ಮಾ (Rohit Sharma) ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲು ಕಾರಣವೇನು? ಆದರೆ ಘಟನೆ ನಡೆದು 3 ತಿಂಗಳಾದರೂ ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪತ್ರಿಕಾಗೋಷ್ಠಿಯಲ್ಲಿ ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಹೆಡ್​ಕೋಚ್ ಮಾರ್ಕ್ ಬೌಚರ್ ಪ್ರಶ್ನೆಗೆ ಉತ್ತರಿಸದೆ ಮೌನ ವಹಿಸಿದ್ದರು. ಈ ಹಿಂದೆ ಹಿಟ್​ಮ್ಯಾನ್ ಪತ್ನಿ ರಿತಿಕಾ ಸಜ್ದೇಹ್, ಅಸಮಾಧಾನ ಹೊರ ಹಾಕಿದ್ದರು. ಈಗ ರೋಹಿತ್​ರನ್ನು ನಾಯಕತ್ವ ಕೈ ತಪ್ಪಲು ಕಾರಣ ಬಹಿರಂಗಗೊಂಡಿದೆ.

ರೋಹಿತ್​ ಶರ್ಮಾ ಅವರನ್ನು ನಾಯಕತ್ವದಿಂದ ವಜಾಗೊಳಿಸಲು ಒಬ್ಬರ ಕೈವಾಡ ಇದೆ. ಅದು ಬೇರೆ ಯಾರೂ ಅಲ್ಲ, ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್. ಹೌದು, ಸಚಿನ್​ ಹಾಕಿದ ಮಾಸ್ಟರ್ ಪ್ಲಾನ್​ನಿಂದ ರೋಹಿತ್​​ ಕ್ಯಾಪ್ಟನ್ಸಿ ಕಳೆದುಕೊಳ್ಳುವಂತಾಗಿದೆ. ನಾಯಕತ್ವ ಬದಲಾವಣೆಯ ಹಿಂದಿರುವ ಪ್ರಮುಖ ರೂವಾರಿ ಮೆಂಟರ್​ ಸಚಿನ್. ಅವರಿಂದ ಹಿಟ್​​ಮ್ಯಾನ್​ಗೆ ಅನ್ಯಾಯವಾಗಿದೆ ಎಂದು ಹಿಟ್​ಮ್ಯಾನ್ ಅಭಿಮಾನಿಗಳು ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್​ ನೌವರದಿ ಮಾಡಿದೆ.

ಮಗ ಅರ್ಜುನ್​ಗೆ ಅನ್ಯಾಯ, ಸಚಿನ್ ಕೈವಾಡ

ತಮ್ಮ ಮಗ ಅರ್ಜುನ್​ ತೆಂಡೂಲ್ಕರ್​ಗೆ ಅವಕಾಶ ನೀಡದ ಕಾರಣ ರೋಹಿತ್​ ಶರ್ಮಾ ವಿರುದ್ಧ ಸಚಿನ್ ತೆಂಡೂಲ್ಕರ್ ಹೆಗೆತನ ತೋರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗಳು ಆರಂಭಗೊಂಡಿವೆ. ಐಪಿಎಲ್ 2021ರ ಸೀಸನ್‌ಗಾಗಿ ಸಚಿನ್ ಪುತ್ರ ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತು. ಆದರೆ 2021 ಮತ್ತು 2022ರ ಋತುವಿನಲ್ಲಿ ಅರ್ಜುನ್ ಸಂಪೂರ್ಣವಾಗಿ ಬೆಂಚ್‌ಗೆ ಸೀಮಿತರಾಗಿದ್ದರು. 2023ರಲ್ಲಿ ಒಂದೆರಡು ಪಂದ್ಯಗಳಲ್ಲಿ ಕಣಕ್ಕಿಳಿದರೂ ನಿಯಮಿತ ಅವಕಾಶ ಸಿಗಲಿಲ್ಲ.

ಅರ್ಜುನ್ 2023ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 31 ರನ್​​ಗಳನ್ನು ಚಚ್ಚಿಸಿಕೊಂಡಿದ್ದರು. ಬಳಿಕ ಮುಂದಿನ ಪಂದ್ಯಗಳಲ್ಲಿ ಅರ್ಜುನ್ ಸ್ಥಾನ ಪಡೆಯಲಿಲ್ಲ. ಸಂಪೂರ್ಣವಾಗಿ ರಿಸರ್ವ್ ಬೆಂಚ್‌ಗೆ ಸೀಮಿತಗೊಂಡಿದ್ದರಿಂದ ತೀವ್ರ ನಿರಾಶೆಗೊಂಡಿರುವ ಮಾರ್ಗದರ್ಶಕ ಸಚಿನ್ ತೆಂಡೂಲ್ಕರ್, ರೋಹಿತ್​ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವರೇ ಹಿಟ್​ಮ್ಯಾನ್​ಗೆ ನಾಯಕತ್ವದಿಂದ ವಜಾಗೊಳಿಸಲು ಕಾರಣ ಎಂದು ಆರೋಪಿಸುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಮತ್ತು ಮಾರ್ಕ್​ ಬೌಚರ್ ಅವರ ಕೈವಾಡ ಇಲ್ಲ ಎಂದು ಹೇಳುತ್ತಿದ್ದಾರೆ.

ಆದರೆ ತಂಡದ ಆಯ್ಕೆ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ. ಅರ್ಜುನ್​ರನ್ನು​ 2 ಸೀಸನ್‌ಗಳಿಂದ ಬೆಂಚ್​​ನಲ್ಲಿ ಕೂರಿಸಿದರೆ ಆತನಿಗೆ ಅವಕಾಶ ಯಾವಾಗ? ಆತ ಬೆಳೆಯುವುದು ಯಾವಾಗ ಎಂದು ಸಚಿನ್ ನಿರಾಸೆಗೊಂಡಿದ್ದಾರೆ. ಹಾಗಾಗಿ ಸಚಿನ್ ತೆಂಡೂಲ್ಕರ್ ನಾಯಕತ್ವ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಹಿಟ್​ಮ್ಯಾನ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಆದರೆ ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎನ್ನುತ್ತಿದ್ದಾರೆ ಮಾಸ್ಟರ್ ಅಭಿಮಾನಿಗಳು.

2022 ಮತ್ತು 2023 ಆವೃತ್ತಿಗಳಲ್ಲಿ ಹಾರ್ದಿಕ್ ಪಾಂಡ್ಯ ಎರಡು ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಗುಜರಾತ್ ಟೈಟಾನ್ಸ್ 2022ರಲ್ಲಿ ಪ್ರಶಸ್ತಿ ಜಯಿಸಿತ್ತು. 2023ರಲ್ಲಿ ರನ್ನರ್​ಅಪ್​​ಗೆ ತೃಪ್ತಿಯಾಗಿತ್ತು. 15 ಕೋಟಿಗೆ ಟ್ರೇಡ್​ ಮೂಲಕ ಮುಂಬೈ ಸೇರಿದ್ದಾರೆ ಪಾಂಡ್ಯ. 2022ರ ಐಪಿಎಲ್​ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದ ಮುಂಬೈ, 2021ರ ಋತುವಿನಲ್ಲಿ ತಮ್ಮ ನೆಟ್​ರನ್ ರೇಟ್‌ನಿಂದ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. 2023ರ ಸೀಸನ್​​ನಲ್ಲಿ ಪ್ಲೇಆಫ್​ ಪ್ರವೇಶಿಸಿದರೂ ಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ.

IPL_Entry_Point