ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ Vs ಸಿಎಸ್​ಕೆ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್​ ಡೇ ಇದೆಯೇ; ಸೋಲು-ಗೆಲುವಿನ ಲೆಕ್ಕಾಚಾರವೇನು?

ಆರ್​ಸಿಬಿ vs ಸಿಎಸ್​ಕೆ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್​ ಡೇ ಇದೆಯೇ; ಸೋಲು-ಗೆಲುವಿನ ಲೆಕ್ಕಾಚಾರವೇನು?

RCB vs CSK : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವು ಮಳೆಯಿಂದ ರದ್ದಾದರೆ ಮೀಸಲು ದಿನ ಇದೆಯೇ? ಬಿಸಿಸಿಐ ನಿಯಮ ಹೇಳುವುದೇನು? ಇಲ್ಲಿದೆ ವಿವರ

ಆರ್​ಸಿಬಿ vs ಸಿಎಸ್​ಕೆ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್​ ಡೇ ಇದೆಯೇ; ಸೋಲು-ಗೆಲುವಿನ ಲೆಕ್ಕಾಚಾರವೇನು?
ಆರ್​ಸಿಬಿ vs ಸಿಎಸ್​ಕೆ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್​ ಡೇ ಇದೆಯೇ; ಸೋಲು-ಗೆಲುವಿನ ಲೆಕ್ಕಾಚಾರವೇನು?

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್​ (RCB vs CSK) ನಡುವಿನ ಹೈವೋಲ್ಟೇಜ್​ ಕದನಕ್ಕೆ ಮಳೆಯ ಭೀತಿ ಎದುರಾಗಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ, ಸಿಎಸ್‌ಕೆ ವಿರುದ್ಧ ಜಯಗಳಿಸಲೇಬೇಕಾಗಿದೆ. ಕೇವಲ ಗೆಲುವಲ್ಲ, ದೊಡ್ಡ ಅಂತರದ ಗೆಲುವು ಬೇಕು. ಆರ್​ಸಿಬಿ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 12 ಅಂಕಗಳೊಂದಿಗೆ +0.387 ರನ್​ರೇಟ್ ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಮತ್ತೊಂದೆಡೆ ಸಿಎಸ್​ಕೆ 14 ಅಂಕ ಹೊಂದಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆರ್​​ಸಿಬಿ 18 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳಿಂದ ಸೋಲಿಸಿದರೆ ಅಥವಾ 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿದರೆ (ಮೊದಲ ಇನಿಂಗ್ಸ್ ಸ್ಕೋರ್ 200 ಎಂದು ಭಾವಿಸಿದರೆ), ರನ್​ರೇಟ್‌ನಲ್ಲಿ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಆದರೆ ಸಿಎಸ್‌ಕೆಗೆ ಯಾವುದೇ ರನ್ ರೇಟ್ ಚಿಂತೆ ಇಲ್ಲ. ಕೇವಲ ಗೆದ್ದರೆ ಸಾಕು. ಒಂದು ವೇಳೆ ಆರ್​ಸಿಬಿ ಕಡಿಮೆ ಅಂತರದ ಗೆಲುವು ಸಾಧಿಸಿದರೂ ಸಹ ಸಿಎಸ್​ಕೆ ಪ್ಲೇಆಫ್​ಗೆ ಪ್ರವೇಶಿಸಲಿದೆ.

ಬ್ಲಾಕ್​ಬಸ್ಟರ್​​ ಪಂದ್ಯಕ್ಕೆ ಮಳೆಯ ಅಡ್ಡಿಪಡಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಹಲವೆಡೆ ಮಳೆ ಸುರಿಯುತ್ತಿದೆ. ಕೆಲವೆಡೆ ಜೋರು ಮತ್ತು ಕೆಲವೆಡೆ ಜಡಿ ಮಳೆ ಆಗುತ್ತಿದೆ. ಹವಾಮಾನ ಮುನ್ಸೂಚನೆಯಂತೆ ಸಂಜೆಯ ಮೇಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದ್ದರೆ, ಆರ್​ಸಿಬಿ ಪ್ಲೇಆಫ್ ರೇಸ್‌ನಿಂದ ಹೊರಬೀಳುತ್ತದೆ. ಸಿಎಸ್​ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಆದಾಗ್ಯೂ, ಸಿಎಸ್​ಕೆ 2ನೇ ಸ್ಥಾನ ಪಡೆಯುವ ಅವಕಾಶ ಕಳೆದುಕೊಳ್ಳುತ್ತದೆ.

ಸಿಎಸ್​ಕೆ vs ಸಿಎಸ್​ಕೆ ಪಂದ್ಯಕ್ಕೆ ಮೀಸಲು ದಿನವಿದೆಯೇ?

ಪಂದ್ಯವು ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಐಪಿಎಲ್​ ಪ್ಲೇಆಫ್‌ ಮತ್ತು ಪಂದ್ಯಕ್ಕೆ ಮೀಸಲು ದಿನ ಇದೆ. ಆದರೆ, ಆರ್​ಸಿಬಿ vs ಸಿಎಸ್​ಕೆ ಲೀಗ್ ಪಂದ್ಯವಾಗಿರುವುದರಿಂದ ಯಾವುದೇ ಮೀಸಲು ದಿನವನ್ನು ಹೊಂದಿಲ್ಲ. ಮಳೆ ನಿಲ್ಲದಿದ್ದರೆ ಪಂದ್ಯವನ್ನು ರದ್ದುಪಡಿಸಲಾಗುತ್ತದೆ. ಆದಾಗ್ಯೂ, ಬೆಂಗಳೂರು ಭಾರತದ ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ಹೊಂದಿರುವುದರಿಂದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಮಳೆ ನಿಂತ ನಂತರ 15 ನಿಮಿಷಗಳಲ್ಲಿ ಸಬ್​ ಏರ್​ ಸಿಸ್ಟಮ್ ಮೂಲಕ ಮೈದಾನವನ್ನು ಸಿದ್ಧಪಡಿಸಬಹುದು.

ಎಂಎಸ್ ಧೋನಿಗಿದು ಕೊನೆಯ ಐಪಿಎಲ್ ಪಂದ್ಯವೇ?

ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಸಿಎಸ್​ಕೆ ತಂಡವನ್ನು ಸೋಲಿಸಿದರೆ ಎಂಎಸ್ ಧೋನಿ ಇದೇ ಕೊನೆಯ ಐಪಿಎಲ್ ಪಂದ್ಯವಾಗಲಿದೆ. ಒಂದು ಸಿಎಸ್​ಕೆ ಪ್ಲೇಆಫ್ ಪ್ರವೇಶಿಸಿದರೂ ಧೋನಿಗೆ ಇದೆ ಅಂತಿಮ ಐಪಿಎಲ್ ಆಗಿರಲಿದೆ. ಸ್ನೇಹಿತರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅವರು ಇದೇ ಪಂದ್ಯದಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಕೊಹ್ಲಿ-ಧೋನಿ ಒಟ್ಟಿಗೆ ಆಡುವುದನ್ನು ನೋಡಲು ಅಭಿಮಾನಿಗಳಿಗೆ ಇದು ಉತ್ತಮ ಕ್ಷಣವಾಗಿದೆ.

ಧೋನಿ ಬಗ್ಗೆ ಕೊಹ್ಲಿ ಹೇಳಿದ್ದೇನು?

"ಮಹಿ ಭಾಯ್ ಮತ್ತು ನಾನು ಮತ್ತೆ ಆಡುತ್ತೇವೆ. ಬಹುಶಃ ಕೊನೆಯೇ ಆಗಿರಬಹುದು, ಯಾರಿಗೆ ಗೊತ್ತು. ಇದು ಅಭಿಮಾನಿಗಳಿಗೆ ಉತ್ತಮ ಕ್ಷಣವಾಗಿದೆ. ವರ್ಷಗಳಲ್ಲಿ ನಾವು ಭಾರತಕ್ಕಾಗಿ ಉತ್ತಮ ಪಾಲುದಾರಿಕೆ ಹೊಂದಿದ್ದೇವೆ. ಅವರು ಎಷ್ಟು ಪಂದ್ಯಗಳನ್ನು ಮುಗಿಸಿದ್ದಾರೆ, ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ತಂಡಕ್ಕೆ ಪಂದ್ಯ ಎಂದು ಜಿಯೋ ಸಿನಿಮಾದ ಇನ್‌ಸೈಡ್ ಔಟ್ ಶೋನಲ್ಲಿ ಕೊಹ್ಲಿ ಹೇಳಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ