ತಮ್ಮದೇ ಕ್ರಿಕೆಟ್ ಅಕಾಡೆಮಿಯಲ್ಲಿ ನಿತ್ಯ ಕಠಿಣ ಅಭ್ಯಾಸ, ಜಿಮ್ ವರ್ಕೌಟ್‌, ವಿಡಿಯೊ ವಿಶ್ಲೇಷಣೆ; ಇದು ಇಶಾನ್ ಕಿಶನ್ ಕಂಬ್ಯಾಕ್‌ ಸ್ಟೋರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ತಮ್ಮದೇ ಕ್ರಿಕೆಟ್ ಅಕಾಡೆಮಿಯಲ್ಲಿ ನಿತ್ಯ ಕಠಿಣ ಅಭ್ಯಾಸ, ಜಿಮ್ ವರ್ಕೌಟ್‌, ವಿಡಿಯೊ ವಿಶ್ಲೇಷಣೆ; ಇದು ಇಶಾನ್ ಕಿಶನ್ ಕಂಬ್ಯಾಕ್‌ ಸ್ಟೋರಿ

ತಮ್ಮದೇ ಕ್ರಿಕೆಟ್ ಅಕಾಡೆಮಿಯಲ್ಲಿ ನಿತ್ಯ ಕಠಿಣ ಅಭ್ಯಾಸ, ಜಿಮ್ ವರ್ಕೌಟ್‌, ವಿಡಿಯೊ ವಿಶ್ಲೇಷಣೆ; ಇದು ಇಶಾನ್ ಕಿಶನ್ ಕಂಬ್ಯಾಕ್‌ ಸ್ಟೋರಿ

ಐಪಿಎಲ್‌ನಲ್ಲು ಎಸ್ಆರ್‌ಎಚ್‌ ತಂಡದ ಪರ ಪದಾರ್ಪಣೆ ಮಾಡಿದ ಇಶಾನ್ ಕಿಶನ್, ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಅಜೇಯ ಶತಕ ಸಿಡಿಸಿದರು. ಇದರೊಂದಿಗೆ ಭರ್ಜರಿ ಕಂಬ್ಯಾಕ್‌ ಮಾಡಿದರು. ಕಿಶನ್‌ ಪುನರಾಗಮನದ ಹಿಂದೆ ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮವಿದೆ.

ನಿತ್ಯ ಕಠಿಣ ಅಭ್ಯಾಸ, ಜಿಮ್ ವರ್ಕೌಟ್‌, ವಿಡಿಯೊ ವಿಶ್ಲೇಷಣೆ; ಇಶಾನ್ ಕಿಶನ್ ಕಂಬ್ಯಾಕ್‌ ಸ್ಟೋರಿ
ನಿತ್ಯ ಕಠಿಣ ಅಭ್ಯಾಸ, ಜಿಮ್ ವರ್ಕೌಟ್‌, ವಿಡಿಯೊ ವಿಶ್ಲೇಷಣೆ; ಇಶಾನ್ ಕಿಶನ್ ಕಂಬ್ಯಾಕ್‌ ಸ್ಟೋರಿ (Surjeet Yadav)

ಇಶಾನ್ ಕಿಶನ್ ಪಾಲಿಗೆ 2024 ಕಹಿ ವರ್ಷ. ವರ್ಷದ ಹಿಂದೆ ಟೀಮ್‌ ಇಂಡಿಯಾ ಕಾಯಂ ಸದಸ್ಯನಾಗಿದ್ದ ಕಿಶನ್‌, ದಿಢೀರ್‌ ಭಾರತ ತಂಡದಿಂದ ಕಣ್ಮರೆಯಾದರು. 26 ವರ್ಷದ ಆಟಗಾರ ಮತ್ತೆ ಟೀಮ್‌ ಇಂಡಿಯಾ ಕಂಬ್ಯಾಕ್‌ ಎದುರು ನೋಡುತ್ತಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಐಪಿಎಲ್‌ ಆರಂಭದೊಂದಿಗೆ ಇಶಾನ್‌ ಕಿಶನ್‌ ಹೊಸ ಯುಗ ಆರಂಭಿಸಿದ್ದಾರೆ. ಭಾನುವಾರ (ಮಾ. 23) ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ಆಡಿತು. ಎಸ್‌ಆರ್‌ಎಚ್‌ ಪರ ಪದಾರ್ಪಣೆ ಪಂದ್ಯದಲ್ಲೇ ಕಿಶನ್‌ ಶತಕ ಬಾರಿಸಿ ಮಿಂಚಿದರು. ಕೇವಲ 45 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದರು.

ಕಿಶನ್‌ ಪಾಲಿಗೆ ಈ ಶತಕ ಅನಿವಾರ್ಯವಾಗಿತ್ತು. ಟೀಮ್‌ ಇಂಡಿಯಾಗೆ ಮತ್ತೆ ಕಂಬ್ಯಾಕ್‌ ಮಾಡಲು ಕಾಯುತ್ತಿದ್ದ ಯುವ ಬ್ಯಾಟರ್‌, ಒಂದೊಳ್ಳೆ ಇನ್ನಿಂಗ್ಸ್‌ ಎದುರು ನೋಡುತ್ತಿದ್ದರು. ಐಪಿಎಲ್‌ನ ಮೊದಲ ಪಂದ್ಯದಲ್ಲೇ ಅವರ ಆತ್ಮವಿಶ್ವಾಸ ಹೆಚ್ಚಿದೆ. ಪಂದ್ಯದ ಬಳಿಕ ಮಾತನಾಡಿದ ಕಿಶನ್‌, "ಆಡುವ ಮುನ್ನ ಆತಂಕವಿತ್ತು. ನಾಯಕ ಪ್ಯಾಟ್ ಕಮಿನ್ಸ್ ಮತ್ತು ಕೋಚ್ ಸಾಕಷ್ಟು ಆತ್ಮವಿಶ್ವಾಸ ತುಂಬಿದರು. ತಂಡದ ವಾತಾವರಣ ತುಂಬಾ ಶಾಂತವಾಗಿದೆ. ನಾನು ಮೈದಾನದಲ್ಲಿ ಖುಷಿಯಿಂದ ಆಡಿದೆ" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಹೇಳಿದರು.

ರಣಜಿ ಟ್ರೋಫಿ ಆಡಿಲ್ಲವೆಂದು, ಕಳೆದ ವರ್ಷ ಬಿಸಿಸಿಐ ಉನ್ನತ ಅಧಿಕಾರಿಗಳು ಕಿಶನ್ ಅವರನ್ನು ಕೇಂದ್ರೀಯ ಒಪ್ಪಂದಗಳಿಂದ ಕೈಬಿಟ್ಟರು. ಟೀಮ್‌ ಇಂಡಿಯಾ ಪಂದ್ಯಗಳಿಗೂ ಕಿಶನ್‌ ಆಯ್ಕೆಯಾಗಲಿಲ್ಲ. ಇದು ವಿಕೆಟ್‌ ಕೀಪರ್‌ಗೆ ಭಾರಿ ಹಿನ್ನಡೆಯಾಗಿತ್ತು. ರಿಷಭ್ ಪಂತ್, ಕೆಎಲ್‌ ರಾಹುಲ್ ಮತ್ತು ಸಂಜು ಸ್ಯಾಮ್ಸನ್ ಜೊತೆಗೆ ದೇಶದ ಅಗ್ರ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದ ಕಿಶನ್, ದಿಡೀರನೆ ಕಣ್ಮರೆಯಾದರು.

ಕಠಿಣ ಅಭ್ಯಾಸ

ಸುದೀರ್ಘ ಅವಧಿಯ ವಿಶ್ರಾಂತಿ ಪಡೆದು, ಕಂಬ್ಯಾಕ್‌ಗಾಗಿ ಕಾಯುತ್ತಿದ್ದರು. ತಮ್ಮ ಕಂಬ್ಯಾಕ್‌ ಬಗ್ಗೆ ಮಾತನಾಡಿದ ಕಿಶನ್‌, “ನನಗೆ ಸಾಕಷ್ಟು ಸಮಯ ಸಿಕ್ಕಿತು. ನಾನು ಬಹಳಷ್ಟು ಅಭ್ಯಾಸ ಮಾಡುತ್ತಿದ್ದೆ. ಬ್ಯಾಟಿಂಗ್‌ ಸುಧಾರಿಸಲು ಸಾಕಷ್ಟು ಶ್ರಮಿಸಿದೆ. ತಯಾರಿ ಚೆನ್ನಾಗಿತ್ತು” ಎಂದು ಹೇಳಿದ್ದಾರೆ.

ಈ ಹಿಂದೆ ಘಾನ್ಸೋಲಿಯಲ್ಲಿರುವ ಮುಂಬೈ ಇಂಡಿಯನ್ಸ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಕಿಶನ್, ಈ ಬಾರಿ ಅಲ್ಲಿಗೆ ಹೋಗಲಿಲ್ಲ. ತಮ್ಮದೇ ಆದ ಅಕಾಡೆಮಿ ಸ್ಥಾಪಿಸಿ ಅದರಲ್ಲಿ ಅಭ್ಯಾಸ ನಡೆಸಿದರು. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತಮ್ಮ ತವರು ನೆಲ ಪಾಟ್ನಾದಲ್ಲಿ ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯನ್ನು ನಿರ್ಮಿಸಲು ಬಳಸಿದರು. ಅಲ್ಲೇ ಅಭ್ಯಾಸ ಮಾಡಿದರು.

ಇಶಾನ್ ಕಿಶನ್ ಪ್ರತಿದಿನ ಎರಡು ಅವಧಿಗಳಲ್ಲಿ ತರಬೇತಿ ಪಡೆದರು. ಬೆಳಗಿನ ಅವಧಿಯು ಅವರ ಅಕಾಡೆಮಿಯಲ್ಲಿ ಕ್ರಿಕೆಟ್ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿದರು. 2-3 ಗಂಟೆಗಳ ಕಾಲ ತೀವ್ರ ಅಭ್ಯಾಸ ನಡೆಯಿತು. ಸಂಜೆ ಜಿಮ್ ವರ್ಕೌಟ್‌ ಅಥವಾ 1-2 ಗಂಟೆಗಳ ಕಾಲ ತರಬೇತಿ ಪಡೆಯುತ್ತಿದ್ದರು” ಎಂದು ಕಿಶನ್ ಅವರ ಕಠಿಣ ಪರಿಶ್ರಮವನ್ನು ನೋಡಿದ ಮೂಲವೊಂದು ತಿಳಿಸಿದೆ. ಈ ಕುರಿತು ಸುದ್ದಿಸಂಸ್ಥೆ ಎನ್‌ಡಿಟಿವಿ ವರದಿ ಮಾಡಿದೆ.

ವಿಡಿಯೋ ವಿಶ್ಲೇಷಣೆ

ಇಷ್ಟಕ್ಕೆ ಮುಗಿದಿಲ್ಲ. ತಮ್ಮ ಆಟದಲ್ಲಿನ ತಾಂತ್ರಿಕ ದೋಷಗಳನ್ನು ಕಡಿಮೆ ಮಾಡಲು, ಸಂಜೆ ವೇಳೆ ಕುಳಿತುಕೊಂಡು ತಮ್ಮದೇ ಅಭ್ಯಾಸ ಮತ್ತು ಆಟದ ವಿಡಿಯೊಗಳನ್ನು ನೋಡುತ್ತಾ ವಿಶ್ಲೇಷಿಸುತ್ತಿದ್ದರು. ಇದು ಅವರ ತಪ್ಪುಗಳನ್ನು ಸರಿಪಡಿಸಲು ನೆರವಾಯ್ತು.‌

ಈ ಹಿಂದೆ ಟೀಮ್‌ ಇಂಡಿಯಾ ಪರ ಆಡುವ ಸಲುವಾಗಿ ಪ್ರಯಾಣದಲ್ಲಿರುತಿದ್ದ ಸಮಯವನ್ನು ತಮ್ಮ ಕುಟುಂಬದೊಂದಿಗೆ ಮನೆಯಲ್ಲಿಯೇ ಕಳೆಯುತ್ತಿದ್ದರು. "ಅವರು ಪಾಟ್ನಾದಲ್ಲಿರುವ ತಮ್ಮದೇ ಆದ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಬೇರೆಡೆಗೆ ಎಂದಿಗೂ ಪ್ರಯಾಣಿಸಲಿಲ್ಲ. ಇದು ಅವರಿಗೆ ಗಮನವನ್ನು ಕೇಂದ್ರೀಕರಿಸಲು ಮತ್ತು ತಮ್ಮದೇ ಆದ ವಾತಾವರಣದಲ್ಲಿ ಸ್ಥಿರವಾಗಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿತು" ಎಂದು ಮೂಲಗಳು ತಿಳಿಸಿವೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner