PSL Final: ಕೊನೆಯ ಎಸೆತದಲ್ಲಿ ಮುಲ್ತಾನ್‌ ಗೆಲುವು ಕಸಿದ ಹುನೈನ್ ಶಾ; 3ನೇ ಬಾರಿ ಟ್ರೋಫಿ ಗೆದ್ದ ಇಸ್ಲಾಮಾಬಾದ್ ಯುನೈಟೆಡ್
ಕನ್ನಡ ಸುದ್ದಿ  /  ಕ್ರಿಕೆಟ್  /  Psl Final: ಕೊನೆಯ ಎಸೆತದಲ್ಲಿ ಮುಲ್ತಾನ್‌ ಗೆಲುವು ಕಸಿದ ಹುನೈನ್ ಶಾ; 3ನೇ ಬಾರಿ ಟ್ರೋಫಿ ಗೆದ್ದ ಇಸ್ಲಾಮಾಬಾದ್ ಯುನೈಟೆಡ್

PSL Final: ಕೊನೆಯ ಎಸೆತದಲ್ಲಿ ಮುಲ್ತಾನ್‌ ಗೆಲುವು ಕಸಿದ ಹುನೈನ್ ಶಾ; 3ನೇ ಬಾರಿ ಟ್ರೋಫಿ ಗೆದ್ದ ಇಸ್ಲಾಮಾಬಾದ್ ಯುನೈಟೆಡ್

Pakistan Super League 2024: ಕೊನೆಯ ಬಾರಿಗೆ 2018ರಲ್ಲಿ ಇಸ್ಲಮಾಬಾದ್‌ ಯುನೈಟೆಡ್ ತಂಡ ಪಿಎಸ್‌ಎಲ್ ಟ್ರೋಫಿ ಗೆದ್ದಿತ್ತು. ಇದೀಗ ಆರು ವರ್ಷಗಳ ಬಳಿಕ ತಂಡವು ಮೂರನೇ ಟ್ರೋಫಿ ಗೆದ್ದಿದೆ. ಕೊನೆಯ ಎಸೆತದಲ್ಲಿ ಹುನೈನ್ ಶಾ ಸಿಡಿಸಿದ ಬೌಂಡರಿ, ಇಸ್ಲಾಮಾಬಾದ್ ತಂಡಕ್ಕೆ ಗೆಲುವು ತಂದುಕೊಟ್ಟಿತು.

3ನೇ ಬಾರಿ ಟ್ರೋಫಿ ಗೆದ್ದ ಇಸ್ಲಾಮಾಬಾದ್ ಯುನೈಟೆಡ್
3ನೇ ಬಾರಿ ಟ್ರೋಫಿ ಗೆದ್ದ ಇಸ್ಲಾಮಾಬಾದ್ ಯುನೈಟೆಡ್

ಇಸ್ಲಾಮಾಬಾದ್ ಯುನೈಟೆಡ್ ತಂಡವು ಪಾಕಿಸ್ತಾನ ಸೂಪರ್ ಲೀಗ್ 2024ರ ಟ್ರೋಫಿ ಗೆದ್ದಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ (Multan Sultans vs Islamabad United) ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿದ ಶಾದಾಬ್‌ ಖಾನ್‌ ಪಡೆ, ಮೂರನೇ ಬಾರಿಗೆ ಪಿಎಸ್‌ಎಲ್‌ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತು. ಭಾರಿ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ 20 ವರ್ಷದ ಆಟಗಾರ ಹುನೈನ್ ಶಾ ಗಳಿಸಿದ ಬೌಂಡರಿಯು, ತಂಡದ ಗೆಲುವಿಗೆ ನೆರವಾಯ್ತು.

ಚಾಂಪಿಯನ್‌ ಪಟ್ಟ ಅಕಂಕರಿಸಲು ಕೊನೆಯ ಓವರ್‌ನಲ್ಲಿ ಯುನೈಟೆಡ್ ತಂಡಕ್ಕೆ 8 ರನ್‌ಗಳ ಅಗತ್ಯವಿತ್ತು. ಮುಲ್ತಾನ್‌ ನಾಯಕ ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅಲಿ ಕೈಗೆ ಚೆಂಡು ನೀಡಿದರು. ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವಿಗೆ ಒಂದು ರನ್ ಅಗತ್ಯವಿತ್ತು. ಈ ವೇಳೆ ಆಗ ತಾನೆ ಮೈದಾನಕ್ಕೆ ಬಂದ ಹುನೈನ್, ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ತಂಡವನ್ನು ಗೆಲುವನ ದಡ ಸೇರಿಸಿದ ಆಟಗಾರ, ಭಾರಿ ಸಂಭ್ರಮಾಚರಣೆ ನಡೆಸಿದರು.

ಕೊನೆಯ ಬಾರಿಗೆ 2018ರಲ್ಲಿ ಇಸ್ಲಮಾಬಾದ್‌ ತಂಡ ಪಿಎಸ್‌ಎಲ್ ಟ್ರೋಫಿ ಗೆದ್ದಿತ್ತು. ಇದೀಗ ಆರು ವರ್ಷಗಳ ಬಳಿಕ ತಂಡವು ಮೂರನೇ ಟ್ರೋಫಿ ಗೆದ್ದಿದೆ. ಕೊನೆಗೂ ಟ್ರೋಫಿ ಬರ ನೀಗಿಸಿದ ತಂಡವು, ಮೈದಾನದಲ್ಲಿ ಭಾರಿ ಸಂಭ್ರಮಾಚರಣೆ ನಡೆಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಲ್ತಾನ್ ಸುಲ್ತಾನ್ಸ್, 9 ವಕೆಟ್‌ ಕಳೆದುಕೊಂಡು 159 ರನ್‌ ಕಲೆ ಹಾಕಿತು. ತಂಡದ ಪರ ಉಸ್ಮಾನ್‌ ಖಾನ್‌ 57 ರನ್‌ ಗಳಿಸಿದರು. ಯುನೈಟೆಡ್‌ ಪರ ಆಲ್‌ರೌಂಡರ್ ಇಮಾದ್ ವಾಸಿಮ್ 5 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.

ಇದನ್ನೂ ಓದಿ | ಮುಂಬೈ ಇಂಡಿಯನ್ಸ್‌ಗೆ ಗಾಯದ ಮೇಲೆ ಬರೆ; ಸ್ಟಾರ್‌ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಔಟ್, ಬದಲಿ ಆಟಗಾರನ ಘೋಷಣೆ

ಚೇಸಿಂಗ್‌ ವೇಳೆ ಇಸ್ಲಮಾಬಾದ್‌ ಪರ ಮಾರ್ಟಿನ್ ಗಪ್ಟಿಲ್ ಅರ್ಧಶತಕ ಬಾರಿಸಿದರು. ವಾಸಿಮ್ ಅಜೇಯ 19 ಮತ್ತು ನಸೀಮ್ ಶಾ 17 ರನ್‌ ಗಳಿಸಿ ಅಮೂಲ್ಯ ಕಾಣಿಕೆ ನೀಡಿದರು. ಆದರೆ ಅವರಿಂದ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೊನೆಯ ಎಸೆತದಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು.

Whats_app_banner