ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡದಿರುವುದು ನಾಚಿಕೆಗೇಡಿನ ಸಂಗತಿ; ಜೇಮ್ಸ್ ಆ್ಯಂಡರ್ಸನ್ ವಿಷಾದ-it is a shame he is not been playing james anderson on virat kohli absence from test series india vs england test prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡದಿರುವುದು ನಾಚಿಕೆಗೇಡಿನ ಸಂಗತಿ; ಜೇಮ್ಸ್ ಆ್ಯಂಡರ್ಸನ್ ವಿಷಾದ

ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡದಿರುವುದು ನಾಚಿಕೆಗೇಡಿನ ಸಂಗತಿ; ಜೇಮ್ಸ್ ಆ್ಯಂಡರ್ಸನ್ ವಿಷಾದ

James Anderson on Virat Kohli: ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೇಮ್ಸ್ ಆ್ಯಂಡರ್ಸನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡದಿರುವುದು ನಾಚಿಕೆಗೇಡಿನ ಸಂಗತಿ; ಜೇಮ್ಸ್ ಆ್ಯಂಡರ್ಸನ್
ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡದಿರುವುದು ನಾಚಿಕೆಗೇಡಿನ ಸಂಗತಿ; ಜೇಮ್ಸ್ ಆ್ಯಂಡರ್ಸನ್

ಧರ್ಮಶಾಲಾದಲ್ಲಿ ಮಾರ್ಚ್ 7ರಿಂದ ನಡೆಯುವ 5ನೇ ಟೆಸ್ಟ್​ ಪಂದ್ಯಕ್ಕೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸಜ್ಜಾಗುತ್ತಿವೆ. 3-1ರ ಅಂತರದಲ್ಲಿ ಸರಣಿ ಗೆದ್ದುಕೊಂಡ ಕಾರಣ ಅಂತಿಮ ಟೆಸ್ಟ್​​ ಪಂದ್ಯ ಭಾರತದ ಪಾಲಿಗೆ ಔಪಚಾರಿಕವಾದರೂ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ದೃಷ್ಟಿಯಿಂದ ಮಹತ್ವದ್ದಾಗಿದೆ. ಧರ್ಮಶಾಲಾಗೆ ಈಗಾಗಲೇ ಇಂಗ್ಲೆಂಡ್ ಆಗಮಿಸಿದ್ದು, ಅಭ್ಯಾಸ ಆರಂಭಿಸಿದೆ.

ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆದ್ದು ತೀವ್ರ ಮುಖಭಂಗದಿಂದ ಪಾರಾಗಲು ಇಂಗ್ಲೆಂಡ್ ಯೋಜನೆ ರೂಪಿಸಿದೆ. ಇದರ ನಡುವೆ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕುರಿತು ಹೇಳಿಕೆ ನೀಡಿದ್ದಾರೆ. ಕೊಹ್ಲಿ ಟೆಸ್ಟ್ ಸರಣಿ ಕಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಮತ್ತು ಆ್ಯಂಡರ್ಸನ್ ನಡುವಿನ ಪೈಪೋಟಿ ಕಳೆದುಕೊಂಡರು.

ಟೆಸ್ಟ್ ಸರಣಿಗೆ ವಿರಾಟ್ ಕೂಡ ಆಯ್ಕೆಯಾಗಿದ್ದರು. ಆದರೆ ಸರಣಿ ಆರಂಭಕ್ಕೆ 2 ದಿನಗಳು ಬಾಕಿ ಇರುವಾಗ ವೈಯಕ್ತಿಕ ಕಾರಣಗಳಿಂದ ತನ್ನ ಹೆಸರನ್ನು ಹಿಂಪಡೆದಿದ್ದರು. ಫೆಬ್ರವರಿ 15ರಂದು ಅವರ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಕೊಹ್ಲಿ- ಆ್ಯಂಡರ್ಸನ್ ನಡುವಿನ ಕಾಳಗದಿಂದ ಅಭಿಮಾನಿಗಳು ಸಹ ವಂಚಿತರಾದರು. ಸೂಪರ್ ಸ್ಟಾರ್ ಬ್ಯಾಟರ್​ನನ್ನು ಇಂಗ್ಲೆಂಡ್ ವೇಗಿ ಒಟ್ಟು 10 ಬಾರಿ ಔಟ್ ಮಾಡಿದ್ದಾರೆ.

ಕೊಹ್ಲಿ ಬಗ್ಗೆ ಆ್ಯಂಡರ್ಸನ್ ಹೇಳಿದ್ದೇನು?

ಕೊಹ್ಲಿ ಅಲಭ್ಯತೆ ಕುರಿತು ಮಾತನಾಡಿದ ಆ್ಯಂಡರ್ಸನ್, ಈ ಮಹತ್ವದ ಸರಣಿಯಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ಅತ್ಯುತ್ತಮ ಆಟಗಾರರಿಗೆ ಬೌಲಿಂಗ್ ಮಾಡಲು ಬೌಲರ್​​​ಗಳು ಹೆಚ್ಚು ಬಯಸುತ್ತಾರೆ. ಯಾರೇ ಆಗಲಿ ವಿಶ್ವದ ಅತ್ಯುನ್ನತ ಆಟಗಾರರೊಂದಿಗೆ ಆಡಲು ಬಯಸುತ್ತಾರೆ. ನಾನು ಅದನ್ನೇ ಬಯಸುತ್ತೇನೆ. ಆದರೆ ಅಂತಹ ಆಟಗಾರ ಸರಣಿಯ ಭಾಗವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.

ಸರಣಿಯಲ್ಲಿ ಕೊಹ್ಲಿ ಆಡದೇ ಇರುವುದಕ್ಕೆ ಇಂಗ್ಲೆಂಡ್ ಅಭಿಮಾನಿಗಳು ಸಾಕಷ್ಟು ಸಂತೋಷಪಡುತ್ತಿದ್ದಾರೆ. ಆದರೆ, ನನ್ನ ದೃಷ್ಟಿಕೋನವೇ ಬೇರೆ. ಪ್ರಮುಖ ಆಟಗಾರರ ಜೊತೆ ಹೋರಾಡಲು ಬಯಸುತ್ತೇನೆ. ಕೊಹ್ಲಿಗೆ ಬೌಲಿಂಗ್​​ ಮಾಡುವುದು ದೊಡ್ಡ ಸವಾಲು. ಬೌಲಿಂಗ್ ಮಾಡಲು ನಿಜವಾಗಿಯೂ ಸವಾಲಿನ ವ್ಯಕ್ತಿಯಾಗಿದ್ದರು. ಆದರೆ ಆ ಅವಕಾಶದಿಂದ ವಂಚಿತನಾಗಿದ್ದೇನೆ. ವಿಶ್ವದ ಶ್ರೇಷ್ಠ ಕೊಹ್ಲಿ ವಿರುದ್ಧ ಆಡಲು ಎದುರು ನೋಡುತ್ತಿದ್ದೇನೆ. ಭಾರತ ತಂಡದಲ್ಲಿ ಇದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಆ್ಯಂಡರ್ಸನ್ ಹೇಳಿದ್ದಾರೆ.

ಐದನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮುಕೇಶ್ ಕುಮಾರ್, ಆಕಾಶ್ ದೀಪ್.