Jaiswal-Shubman: ರೋಹಿತ್-ರಾಹುಲ್ರ 6 ವರ್ಷಗಳ ದಾಖಲೆ ಸರಿಗಟ್ಟಿದ ಜೈಸ್ವಾಲ್-ಶುಭ್ಮನ್; ಜಂಟಿ ರೆಕಾರ್ಡ್ ಸೃಷ್ಟಿಸಿದ ಯುವ ಜೋಡಿ
- Yashasvi Jaiswal and Shubman Gill: ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ 9 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿದೆ. ಭಾರತೀಯ ಆರಂಭಿಕರಿಬ್ಬರ ಬೆಂಕಿ-ಬಿರುಗಾಳಿ ಆಟಕ್ಕೆ ಕೆರಿಬಿಯನ್ನರು ಶರಣಾದರು. ಇದರೊಂದಿಗೆ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ದಾಖಲೆಯನ್ನೂ ಬರೆದರು.
- Yashasvi Jaiswal and Shubman Gill: ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ 9 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿದೆ. ಭಾರತೀಯ ಆರಂಭಿಕರಿಬ್ಬರ ಬೆಂಕಿ-ಬಿರುಗಾಳಿ ಆಟಕ್ಕೆ ಕೆರಿಬಿಯನ್ನರು ಶರಣಾದರು. ಇದರೊಂದಿಗೆ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ದಾಖಲೆಯನ್ನೂ ಬರೆದರು.
(1 / 11)
ವೆಸ್ಟ್ ಇಂಡೀಸ್ ಎದುರಿನ 4ನೇ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಶಿಮ್ರಾನ್ ಹೆಟ್ಮೆಯರ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು.(ICC Twitter)
(2 / 11)
179 ರನ್‌ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಉತ್ತಮ ಪ್ರದರ್ಶನ ತೋರಿತು. ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಅರ್ಧಶತಕಗಳ ಸಹಾಯದಿಂದ ಭಾರತ, ಇನ್ನೂ 3 ಓವರ್ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.(AFP)
(3 / 11)
4ನೇ ಟಿ20 ಪಂದ್ಯದಲ್ಲಿ ಭಾರತದ ಪರ ಓಪನರ್ಗಳಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ 165 ರನ್‌ಗಳ ಆರಂಭಿಕ ಜೊತೆಯಾಟವಾಡಿದರು. ಇದರೊಂದಿಗೆ 6 ವರ್ಷಗಳ ಹಿಂದೆ ರೋಹಿತ್ ಶರ್ಮಾ-ಕೆಎಲ್ ರಾಹುಲ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ಸು ಕಂಡಿದ್ದಾರೆ.
(4 / 11)
ಶುಭ್ಮನ್ ಗಿಲ್ ಅವರು 47 ಎಸೆತಗಳಲ್ಲಿ 3 ಬೌಂಡರಿ, 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ 77 ರನ್ ಗಳಿಸಿದ್ದಾರೆ. ಇದು ಟಿ20 ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ.(AP)
(5 / 11)
ಯಶಸ್ವಿ ಜೈಸ್ವಾಲ್ ಆಡಿದ 51 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ಗಳ ಸಹಾಯದಿಂದ ಅಜೇಯ 84 ರನ್ ಬಾರಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಚಚ್ಚಿದ ಭಾರತದ 4ನೇ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ. ಇದು ಜೈಸ್ವಾಲ್ಗೆ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ.(AP)
(6 / 11)
165 ರನ್‌ಗಳ ದಾಖಲೆಯ ಪಾಲುದಾರಿಕೆ ನೀಡಿದ ಗಿಲ್- ಜೈಸ್ವಾಲ್ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅಧಿಕ ಆರಂಭಿಕ ಜೊತೆಯಾಟವನ್ನಾಡಿದ ರೋಹಿತ್ ಮತ್ತು ರಾಹುಲ್ ಅವರ 2017ರ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.
(7 / 11)
2017ರಲ್ಲಿ ರೋಹಿತ್ ಮತ್ತು ರಾಹುಲ್ ಜೋಡಿ ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ಶ್ರೀಲಂಕಾ ಎದುರಿನ ಟಿ20 ಪಂದ್ಯದಲ್ಲಿ 165 ರನ್‌ಗಳ ಆರಂಭಿಕ ಜೊತೆಯಾಟವನ್ನಾಡಿದ್ದರು. ಜೈಸ್ವಾಲ್ ಮತ್ತು ಗಿಲ್ ಜೊತೆಯಾಟ ಯಾವುದೇ ವಿಕೆಟ್‌ಗೆ ಭಾರತೀಯ ಜೋಡಿಯ ಜಂಟಿ 2ನೇ ಜೊತೆಯಾಟ ಎಂಬ ದಾಖಲೆ ಬರೆದಿದೆ.
(8 / 11)
2018ರಲ್ಲಿ ರೋಹಿತ್ ಮತ್ತು ಶಿಖರ್ ಧವನ್ ಜೋಡಿ, ಐರ್ಲೆಂಡ್ ಎದುರಿನ ಟಿ20 ಪಂದ್ಯದಲ್ಲಿ 160 ರನ್ ಪಾರ್ಟ್ನರ್ಶಿಪ್ ಕಟ್ಟಿತ್ತು. ಇದು ಭಾರತ 4ನೇ ಅತ್ಯಧಿಕ ಆರಂಭಿಕ ಜೊತೆಯಾಟ ಎನಿಸಿದೆ.
(9 / 11)
2022ರಲ್ಲಿ ಐರ್ಲೆಂಡ್ ಎದುರಿನ ಪಂದ್ಯದಲ್ಲಿ 2ನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಅವರು 176 ರನ್‌ಗಳ ದೊಡ್ಡ ಪಾಲುದಾರಿಕೆ ನೀಡಿದ್ದರು. ಇದು ಟಿ20 ಮಾದರಿಯಲ್ಲಿ ಭಾರತದ ಪರ ಅತ್ಯಧಿಕ ಜೊತೆಯಾಟ ಎಂಬ ದಾಖಲೆಯಾಗಿದೆ. ಈ ಪಂದ್ಯದಲ್ಲಿ ದೀಪಕ್ ಹೂಡಾ ಶತಕ ಬಾರಿಸಿದ್ದರು.
(10 / 11)
ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 26 ರನ್ 2 ವಿಕೆಟ್ ಉರುಳಿಸಿದ್ದಾರೆ.(BCCI Twitter)
ಇತರ ಗ್ಯಾಲರಿಗಳು