ರನೌಟ್ ಭೀತಿಯಿಂದ ಪಾರಾದ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಸಮರ-james anderson and rohit sharma exchanges words after hitman survives from run out in india vs england 4th test jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರನೌಟ್ ಭೀತಿಯಿಂದ ಪಾರಾದ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಸಮರ

ರನೌಟ್ ಭೀತಿಯಿಂದ ಪಾರಾದ ಬೆನ್ನಲ್ಲೇ ರೋಹಿತ್ ಶರ್ಮಾ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಸಮರ

India vs England: ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ರನ್ ಔಟ್‌ನಿಂದ ಪಾರಾದ ನಂತರ, ಇಂಗ್ಲೆಂಡ್‌ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಹಿಟ್‌ಮ್ಯಾನ್‌ ನಡುವೆ ಲಘು ಮಾತಿನ ಸಮರ ನಡೆಯಿತು. ಈ ವೇಳೆ ರವಿಶಾಸ್ತ್ರಿ ಕಾಮೆಂಟರಿ ಗಮನಸೆಳೆಯಿತು.

ರೋಹಿತ್ ಶರ್ಮಾ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಸಮರ
ರೋಹಿತ್ ಶರ್ಮಾ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಸಮರ (Screengrab)

ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಫೆಬ್ರವರಿ 26ರ ಸೋಮವಾರ ರೋಹಿತ್ ಶರ್ಮಾ (Rohit Sharma) ಮತ್ತು ಯಶಸ್ವಿ ಜೈಸ್ವಾಲ್, ಭಾರತದ ಕೊನೆಯ ಇನ್ನಿಂಗ್ಸ್‌ ಮುಂದುವರೆಸಿದರು. ಗೆಲುವಿಗೆ 192 ರನ್‌ಗಳ ಸಾಧಾರಣ ಗುರಿ ಪಡೆದ ಟೀಮ್‌ ಇಂಡಿಯಾ ಪರ, ಆರಂಭಿಕ ಆಟಗಾರರಿಬ್ಬರು ವೇಗದ ಆಟಕ್ಕೆ ಕೈ ಹಾಕಿದರು. ಮೂರನೇ ದಿನದ ಅಂತಿಮ ಹಂತದಂತೆಯೇ ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿಯೂ ಭರ್ಜರಿ ಆರಂಭ ತಂಡಕ್ಕೆ ಸಿಕ್ಕಿತು.

ಹಿಟ್‌ಮ್ಯಾನ್‌ ಹಾಗೂ ಜೈಶ್ವಾಲ್‌ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವಾಡಿದರು. ಪಂದ್ಯದ ಮೊದಲ ಅರ್ಧ ಗಂಟೆಯಲ್ಲಿ ಮೂರು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಿಡಿಯಿತು. ಈ ನಡುವೆ ಜೈಸ್ವಾಲ್ ಔಟಾದರೂ, ಹಿಟ್‌ಮ್ಯಾನ್‌ ಆಕರ್ಷಕ ಅರ್ಧಶತಕ ಸಿಡಿಸಿದರು.

ಇದನ್ನೂ ಓದಿ | Rohit Sharma: ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ ರೋಹಿತ್​ ಶರ್ಮಾ; ಈ ದಾಖಲೆ ಬರೆದ ಭಾರತದ 17ನೇ ಆಟಗಾರ

ಈ ನಡುವೆ ಇಂಗ್ಲೆಂಡ್‌ನ ಅನುಭವಿ ಬೌಲರ್‌ ಜೇಮ್ಸ್‌ ಆಂಡರ್ಸನ್‌ ಎಸೆತಕ್ಕೆ ರೋಹಿತ್‌ ಶರ್ಮಾ ಸಿಕ್ಸರ್‌ ಬಾರಿಸಿದರು. ಇದಾದ ಬಳಿಕ, ಹಿಟ್‌ಮ್ಯಾನ್‌ ರನೌಟ್‌ ಭೀತಿಯಿಂದ ಪಾರಾದರು. ಈ ಸಂದರ್ಭದಲ್ಲಿ ಆಂಡರ್ಸನ್ ಮತ್ತು ಭಾರತದ ನಾಯಕನ ನಡುವೆ ಲಘು ಮಾತಿನ ಚಕಮಕಿ ನಡೆಯಿತು. ಇದು ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು. ಇಬ್ಬರ ಮುಖಛರ್ಯೆ ನೋಡಿದಾಗ, ಅವರಿಬ್ಬರು ಕುಶಲೋಪರಿ ಮಾತನಾಡಿದಂತೆ ಇರಲಿಲ್ಲ. ಈ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ರವಿ ಶಾಸ್ತ್ರಿ ಕೂಡಾ ಇದನ್ನು ಗಮನಿಸಿದ್ದಾರೆ. ಇದು ಕೇವಲ ಹಲೋ ಅಥವಾ ಗುಡ್ ಮಾರ್ನಿಂಗ್ ಅಂತೂ ಅಲ್ಲ ಎಂದು ಅವರು ಹೇಳಿದರು.

“ಅವರು ಇನ್ನೊಂದು ಬದಿ ತಲುಪುತ್ತಿದ್ದಂತೆ, ಆಂಡರ್ಸನ್ ಮತ್ತು ರೋಹಿತ್ ಶರ್ಮಾ ನಡುವೆ ಕೆಲವು ಮಾತುಗಳ ವಿನಿಮಯವಾದವು. ಇದು ಆಹ್ಲಾದಕರವಲ್ಲ,” ಎಂದು ಭಾರತದ ಮಾಜಿ ಕೋಚ್ ಹೇಳಿದ್ದಾರೆ.

ಇದನ್ನೂ ಓದಿ | ಏನಪ್ಪಾ ಇಷ್ಟೊಂದ್ ಕ್ರೇಜ್! ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ

4ನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್‌ಗೆ ಮುನ್ನಡೆ ಪಡೆಯುವ ಅಗತ್ಯವಿತ್ತು. ಜೋ ರೂಟ್ ಅವರ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆದ ಆಂಡರ್ಸನ್‌, ಜೈಸ್ವಾಲ್ ವಿಕೆಟ್‌ ಪಡೆದರು. ಆ ಬಳಿಕ ರೋಹಿತ್ ಶರ್ಮಾ ಅರ್ಧಶತಕ ಪಡೆದರು. ಈ ನಡುವೆ ಅವರು 9000 ಪ್ರಥಮ ದರ್ಜೆ ರನ್‌ಗಳನ್ನು ಪೂರ್ಣಗೊಳಿಸಿದರು. ಕೊನೆಗೆ ಟೀಮ್‌ ಇಂಡಿಯಾ ನಾಯಕ 55 ರನ್‌ ಗಳಿಸಿ ಔಟಾದರು.

ಇದನ್ನೂ ಓದಿ | ರಣಜಿಗೆ ಚಕ್ಕರ್, ಐಪಿಎಲ್​ ಜಾಹೀರಾತು ಶೂಟಿಂಗ್​ಗೆ ಹಾಜರ್; ಇದು ಶ್ರೇಯಸ್ ಅಯ್ಯರ್​ ಒಂದು ಸುಳ್ಳಿನ ಕಥೆ

(This copy first appeared in Hindustan Times Kannada website. To read more like this please logon to kannada.hindustantimes.com)