ಕನ್ನಡ ಸುದ್ದಿ  /  Cricket  /  James Anderson Equals Historical Record Without Batting Or Bowling Surpasses Viv Richards In Elite List Ind Vs Eng Prs

ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್; ವಿವಿಯನ್ ರಿಚರ್ಡ್ಸ್ ಹಿಂದಿಕ್ಕಿದ ವೇಗಿ

James Anderson : ಭಾರತಕ್ಕೆ ಏಳನೇ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್, ಭಾರತ ನೆಲದಲ್ಲಿ ಅತ್ಯಧಿಕ ಟೆಸ್ಟ್​​ಗಳನ್ನು ಆಡಿದ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್
ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್

ರಾಂಚಿಯ ಜೆಎಸ್​ಸಿಎ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಭಾರತ vs ಇಂಗ್ಲೆಂಡ್ (India vs England 4th Test) ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜೇಮ್ಸ್ ಆಂಡರ್ಸನ್ (James Anderson) ಅವರು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡದೆಯೇ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತಕ್ಕೆ ಏಳನೇ ಪ್ರವಾಸ ಕೈಗೊಂಡಿರುವ ಜೇಮ್ಸ್ ಆಂಡರ್ಸನ್, ಭಾರತದಲ್ಲಿ ಅತ್ಯಧಿಕ ಟೆಸ್ಟ್​​ಗಳನ್ನು ಆಡಿದ ಐತಿಹಾಸಿಕ ದಾಖಲೆ ಬರೆದಿದ್ದಾರೆ.

41ರ ವರ್ಷದ ವೇಗಿ 700 ಟೆಸ್ಟ್ ವಿಕೆಟ್‌ಗಳ ಸಮೀಪದಲ್ಲಿದ್ದಾರೆ. ಅದಕ್ಕೆ ನಾಲ್ಕು ವಿಕೆಟ್​​ಗಳ ಕೊರತೆ ಇದೆ. ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದೇ ಆದರೆ 700 ವಿಕೆಟ್​​ಗಳ ಮೈಲಿಗಲ್ಲನ್ನು ಮುಟ್ಟಿದ ವಿಶ್ವದ ಏಕೈಕ ವೇಗದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆದಾಗ್ಯೂ, ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡದೆಯೇ ಮತ್ತೊಂದು ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ಭಾರತದ ನೆಲದಲ್ಲಿ ಅತ್ಯಧಿಕ ಟೆಸ್ಟ್​​​ಗಳನ್ನು ಆಡಿದ ಜಂಟಿ ದಾಖಲೆ ಹೊಂದಿದ್ದಾರೆ. ರಾಂಚಿಯಲ್ಲಿ ನಡೆಯಯುತ್ತಿರುವ 4ನೇ ಟೆಸ್ಟ್​ನಲ್ಲಿ ಅವಕಾಶ ಪಡೆಯುತ್ತಿದ್ದಂತೆ ಈ ದಾಖಲೆ ನಿರ್ಮಿಸಿದರು. ಭಾರತದಲ್ಲಿ ಇಂಗ್ಲೆಂಡ್​​ನ ಈ ವೇಗಿಗೆ ಇದು 16ನೇ ಟೆಸ್ಟ್ ಪಂದ್ಯವಾಗಿದೆ. ಭಾರತದ ನೆಲದಲ್ಲಿ ಇಷ್ಟೇ ಪಂದ್ಯಗಳನ್ನಾಡಿರುವ ಇಂಗ್ಲೆಂಡ್​ನ ಮಾಜಿ ಬೌಲರ್ ಡೆರೆಕ್ ಅಂಡರ್‌ವುಡ್‌ ಅವರ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಆದರೆ ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್​ರನ್ನು ಹಿಂದಿಕ್ಕಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್‌ಗಳನ್ನು ವಿದೇಶಿ ಆಟಗಾರರು (ಟಾಪ್-5)

1 - ಜೇಮ್ಸ್ ಆಂಡರ್ಸನ್: 16* ಟೆಸ್ಟ್

2 - ಡೆರೆಕ್ ಅಂಡರ್‌ವುಡ್: 16 ಟೆಸ್ಟ್‌

3 - ವಿವ್ ರಿಚರ್ಡ್ಸ್: 15 ಟೆಸ್ಟ್

4 - ರಿಕಿ ಪಾಂಟಿಂಗ್: 14 ಟೆಸ್ಟ್

5 - ಕ್ಲೈವ್ ಲಾಯ್ಡ್: 14 ಟೆಸ್ಟ್​

ಮೊದಲ ಬಾರಿಗೆ ಮಾರ್ಚ್ 2006ರಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಅವರ ನಾಯಕತ್ವದಲ್ಲಿ ಆಂಡರ್ಸನ್ ಭಾರತದ ಪ್ರವಾಸ ಕೈಗೊಂಡಿದ್ದರು. ಅವರು 2012 ರಲ್ಲಿ ಸರಣಿ ಗೆಲುವಿನ ಇಂಗ್ಲೆಂಡ್ ಭಾಗವಾಗಿದ್ದರು. ಇದು ಕೊನೆಯ ಬಾರಿಗೆ ಭಾರತ ಹೋಮ್ ಟೆಸ್ಟ್ ಸರಣಿ ಕಳೆದುಕೊಂಡಿತು. 15 ಟೆಸ್ಟ್‌ಗಳಲ್ಲಿ (ಪ್ರಸ್ತುತ ಆಡುತ್ತಿರುವ ಪಂದ್ಯ ಹೊರತುಪಡಿಸಿ), ಅವರು ಭಾರತದಲ್ಲಿ 30.30 ಸರಾಸರಿಯಲ್ಲಿ 40 ವಿಕೆಟ್‌ ಪಡೆದಿದ್ದಾರೆ.

ಭಾರತದ ನೆಲದಲ್ಲಿ ಈ ದಿಗ್ಗಜ ಬೌಲರ್​ ಒಂದು ಬಾರಿಯೂ 5 ವಿಕೆಟ್​​ಗಳ ಗುಚ್ಛ ಪಡೆಯಲಿಲ್ಲ. ಇಲ್ಲಿ ಅವರ ಬೆಸ್ಟ್​ ಇನ್ನಿಂಗ್ಸ್​ ಬೌಲಿಂಗ್​ 4/40 ಆಗಿದೆ. ಪಂದ್ಯವೊಂದರಲ್ಲಿ ಅಂಕಿಅಂಶಗಳು 6/79. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ನಲ್ಲಿ 186 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 696 ವಿಕೆಟ್ ಪಡೆದಿದ್ದಾರೆ. 39655 ಎಸೆತಗಳನ್ನು ಎಸಿದಿದ್ದು 18448 ರನ್ ಬಿಟ್ಟುಕೊಟ್ಟಿದ್ದಾರೆ. ಬೌಲಿಂಗ್ ಸರಾಸರಿ 26.51.

ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​ನ ಮೊದಲ ದಿನದಾಟದಲ್ಲಿ ಇಂಗ್ಲೆಂಡ್​, ಜೋ ರೂಟ್​ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 302 ರನ್ ಕಲೆ ಹಾಕಿದೆ.

IPL_Entry_Point