ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿ ಕೆಟ್ಟ ಕಾನ್ಸ್ಟಾಸ್, ಜಸ್ಪ್ರೀತ್ ಬುಮ್ರಾ ತಿರುಗೇಟಿಗೆ ಗಪ್​ಚುಪ್, ದಿನದ ಕೊನೆಯಲ್ಲಿ ಹೈಡ್ರಾಮ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿ ಕೆಟ್ಟ ಕಾನ್ಸ್ಟಾಸ್, ಜಸ್ಪ್ರೀತ್ ಬುಮ್ರಾ ತಿರುಗೇಟಿಗೆ ಗಪ್​ಚುಪ್, ದಿನದ ಕೊನೆಯಲ್ಲಿ ಹೈಡ್ರಾಮ, Video

ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿ ಕೆಟ್ಟ ಕಾನ್ಸ್ಟಾಸ್, ಜಸ್ಪ್ರೀತ್ ಬುಮ್ರಾ ತಿರುಗೇಟಿಗೆ ಗಪ್​ಚುಪ್, ದಿನದ ಕೊನೆಯಲ್ಲಿ ಹೈಡ್ರಾಮ, VIDEO

Jasprit Bumrah: ಸಿಡ್ನಿ ಟೆಸ್ಟ್​ ಮೊದಲ ದಿನದಂತ್ಯದ ಕೊನೆಯ ಎಸೆತಕ್ಕೂ ಮುನ್ನ ಕಾಲ್ಕೆರೆದು ಜಗಳಕ್ಕೆ ಬಂದಿದ್ದ ಸ್ಯಾಮ್ ಕಾನ್ಸ್ಟಾಸ್​ಗೆ ಜಸ್ಪ್ರೀತ್ ಬುಮ್ರಾ ಸರಿಯಾಗಿ ತಿರುಗೇಟು ನೀಡಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿದ ಕಾನ್ಸ್ಟಾಸ್​ಗೆ ಜಸ್ಪ್ರೀತ್ ಬುಮ್ರಾ ತಿರುಗೇಟು, ದಿನದಂತ್ಯದ ಕೊನೆಯ ಎಸೆತದಲ್ಲಿ ಹೈಡ್ರಾಮ, VIDEO
ಸಂಬಂಧವಿಲ್ಲದ ವಿಚಾರಕ್ಕೆ ಕೆಣಕಿದ ಕಾನ್ಸ್ಟಾಸ್​ಗೆ ಜಸ್ಪ್ರೀತ್ ಬುಮ್ರಾ ತಿರುಗೇಟು, ದಿನದಂತ್ಯದ ಕೊನೆಯ ಎಸೆತದಲ್ಲಿ ಹೈಡ್ರಾಮ, VIDEO

ಬಾರ್ಡರ್-ಗವಾಸ್ಕರ್​ ಟ್ರೋಫಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ತಂಡವನ್ನು 185 ರನ್​ಗಳಿಗೆ ಆಲೌಟ್ ಮಾಡಿರುವ ಆಸ್ಟ್ರೇಲಿಯಾ, ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದೆ. ಆದರೆ ಇನ್ನೂ 176 ರನ್​​ಗಳ ಹಿನ್ನಡೆಯಲ್ಲಿದೆ. ಆಸೀಸ್​ ಪರ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಅವರು ಮತ್ತೆ ವೈಫಲ್ಯ ಅನುಭವಿಸಿದ್ದು, 2 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಔಟಾದರು. ಸ್ಲಿಪ್​ನಲ್ಲಿದ್ದ ಕೆಎಲ್ ರಾಹುಲ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ದಿನದಂತ್ಯವೂ ಮುಕ್ತಾಯಗೊಂಡಿತು.

ಖವಾಜ ಔಟಾಗುವುದಕ್ಕೂ ಮುನ್ನ ಇಡೀ ಮೈದಾನವೇ ಕೂಲ್ ಕೂಲ್ ಆಗಿತ್ತು. ಆದರೆ ಅದೊಂದು ಘಟನೆ ಮೊದಲ ದಿನದ ಹೈಲೈಟ್ ಆಗುವಂತೆ ಮಾಡಿತು. ಇದ್ದಕ್ಕಿದ್ದಂತೆ ವಾಗ್ವಾದ ಜೊರಾಯಿತು. ದಿನದ ಕೊನೆಯ ಓವರ್​​ನ ಅಂತಿಮ ಎಸೆತ ಎಸೆಯಲು ಟೀಮ್ ಇಂಡಿಯಾ ವೇಗಿ ಬುಮ್ರಾ ಸಜ್ಜಾಗಿದ್ದರು. ಈ ವೇಳೆ ಆಸೀಸ್​ನ ಆರಂಭಿಕ ಆಟಗಾರ ಸ್ಯಾಮ್​ ಕಾನ್ಸ್ಟಾಸ್​ ಅನಗತ್ಯ ವಿಚಾರಕ್ಕೆ ಸುಖಾಸುಮ್ಮನೆ ಜಗಳಕ್ಕಿಳಿದರು. ಆದರೆ ಕಾಲ್ಕೆರೆದು ಜಗಳಕ್ಕೆ ನಿಂತ ಚಿಗುರು ಮೀಸೆಯ ಯುವಕನಿಗೆ ಬುಮ್ರಾ ಸರಿಯಾಗಿ ತಿರುಗೇಟು ಕೊಟ್ಟಿದ್ದು ಅದ್ಭುತವಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಷ್ಟಕ್ಕೂ ಇಬ್ಬರ ನಡುವೆ ಆಗಿದ್ದೇನು? ಬುಮ್ರಾ ತಿರುಗೇಟು ನೀಡಿದ್ದು ಹೇಗೆ? ಇಲ್ಲಿದೆ ವಿವರ.

ಇಷ್ಟಕ್ಕೂ ಆಗಿದ್ದೇನು?

ಸಿಡ್ನಿ ಟೆಸ್ಟ್​​ನ ಮೊದಲ ದಿನದಾಟ ಮುಕ್ತಾಯಕ್ಕೆ ಇನ್ನೊಂದು ಓವರ್ ಬಾಕಿ ಉಳಿದಿತ್ತು. ಬುಮ್ರಾ ಬೌಲಿಂಗ್​ ಮಾಡಲು ಬಂದರು. ಈ ಓವರ್​​ನಲ್ಲಿ ಮೊದಲ 3 ಎಸೆತಗಳನ್ನು ಎದುರಿಸಿದ್ದ ಕಾನ್ಸ್ಟಾಸ್, 3ನೇ ಎಸೆತದಲ್ಲಿ 1 ರನ್ ಪಡೆದು ನಾನ್​ಸ್ಟ್ರೈಕ್​ಗೆ ಬಂದರು. ಬಳಿಕ 4 ಮತ್ತು 5ನೇ ಎಸೆತವನ್ನು ಎದುರಿಸಿದ ಖವಾಜ, ರನ್ ಗಳಿಸಲು ವಿಫಲರಾದರು. ಆಗ ದಿನದ ಕೊನೆಯ ಎಸೆತವನ್ನು ಬೌಲ್ ಮಾಡಲು ಬುಮ್ರಾ ಮುಂದಾದರು. ಆದರೆ ಖವಾಜ, ಬ್ಯಾಟಿಂಗ್​ಗೆ ಇನ್ನೂ ಸಿದ್ದವಾಗಿರಲಿಲ್ಲ. ಹಾಗಂತ ಬುಮ್ರಾ ಯಾವುದೇ ಕೋಪ ಮಾಡಿಕೊಂಡಿರಲಿಲ್ಲ. ಆದರೆ, ಮತ್ತೆ ಬೌಲ್ ಮಾಡಲು ಮುಂದಾದಾಗಲೂ ಖವಾಜ ಸಿದ್ದರಿರಲಿಲ್ಲ. ಈ ಘಟನೆ ಬುಮ್ರಾ ಕೋಪಕ್ಕೆ ಕಾರಣವಾಯಿತು.

ಬುಮ್ರಾ ಆ ವೇಳೆ ಬ್ಯಾಟಿಂಗ್ ಮಾಡಲು ಇನ್ನೆಷ್ಟು ಸಮಯ ಬೇಕು ಎನ್ನುವರ್ಥದಲ್ಲಿ ಕೈ ಸನ್ನೆ ಮಾಡಿ ಅಸಮಾಧಾನ ಹೊರಹಾಕಿದರು. ಆದರೆ ಸ್ಟ್ರೈಕ್​ನಲ್ಲಿದ್ದ ಖವಾಜ ಸುಮ್ಮನಿದ್ದರೂ ನಾನ್​ಸ್ಟ್ರೈಕ್​ನಲ್ಲಿದ್ದ ಸ್ಯಾಮ್ ಕಾನ್ಟ್ಸಾಸ್ ತನ್ನ ಪಾಡಿಗೆ ತಾನಿರದೆ ಕಾಲ್ಕೆರದು ಜಗಳಕ್ಕೆ ಬಂದರು. ಬ್ಯಾಟಿಂಗ್ ಮಾಡುತ್ತಿದ್ದ ಖವಾಜ ಅವರೇ ಸುಮ್ಮನಿದ್ದರೆ, ಈತ ಬೇಕೆಂತಲೇ ಬುಮ್ರಾ ಜತೆಗೆ ಜಗಳಕ್ಕಿಳಿದು ದೊಡ್ಡ ಹೈಡ್ರಾಮಾವನ್ನೇ ಸೃಷ್ಟಿಸಿ ಬಿಟ್ಟರು. ಬುಮ್ರಾ ಬೌಲಿಂಗ್ ಮಾಡುವುದನ್ನೇ ಬಿಟ್ಟು ಕಾನ್ಸ್ಟಾಸ್​ಗೆ ಬಳಿಗೆ ಬಂದರು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಅಂಪೈರ್ಸ್, ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಜಸ್ಪ್ರೀತ್ ಬುಮ್ರಾ ತಿರುಗೇಟು

ಪರಿಸ್ಥಿತಿ ತಿಳಿಯಾದ ಬಳಿಕ ದಿನದ ಕೊನೆಯ ಎಸೆತವನ್ನು ಎದುರಿಸಿದ ಸ್ಟ್ರೈಕ್​ನಲ್ಲಿದ್ದ ಖವಾಜ ಅವರನ್ನು ಬುಮ್ರಾ ಔಟ್ ಮಾಡಿದರು. ಕೊನೆಯ ಎಸೆತವನ್ನು ಡಾಟ್ ಮಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಳ್ಳಲು ಮುಂದಾಗಿದ್ದ ಖವಾಜಗೆ ಬುಮ್ರಾ ಗೇಟ್ ಪಾಸ್ ನೀಡಿದರು. ಖವಾಜರನ್ನು ಔಟ್ ಮಾಡಿದ ಬೆನ್ನಲ್ಲೇ ಭಾರತದ ಆಟಗಾರರು ಕಾನ್ಸ್ಟಾಸ್​ ಮುಂದೆ ಬಂದು ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ತನಗೆ ಸಂಬಂಧ ಇಲ್ಲದ ವಿಚಾರಕ್ಕೆ ಕೈ ಹಾಕಿ ಕೆಣಕಿದ್ದ ಕಾನ್ಸ್ಟಾಸ್​ಗೆ ಇದು ಮುಜುಗರವೂ ತಂದಿತು. ಆದರೆ ಔಟಾದ ಬೇಸರದಲ್ಲಿ ಖವಾಜ ತನ್ನ ಪಾಡಿಗೆ ತಾನು ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕಿದರು. ಅದರಲ್ಲೂ ವಿರಾಟ್ ಕೊಹ್ಲಿ ಅವರ ಸಂಭ್ರಮವಂತೂ ಮುಗಿಲು ಮುಟ್ಟಿತ್ತು. ಕಾನ್ಸ್ಟಾಸ್ ಮುಂದೆಯೇ ಅಗ್ರೆಸ್ಸಿವ್ ಸೆಲೆಬ್ರೇಷನ್​ ಮಾಡಿದರು. ಬುಮ್ರಾ ಸಹ ಕಾನ್ಸ್ಟಾಸ್​ ಮುಂದೆಯೇ ಕಿರಿಚಾಡಿದರು. ವಿಧಿ ಇಲ್ಲದೆ ಕಾನ್ಸ್ಟಾಸ್​ ತನಗೆ ಏನೂ ಸಂಬಂಧವೇ ಇಲ್ಲ ಎನ್ನುವಂತೆ ಗ್ಲೌಸ್ ತೆಗೆದು ಡಗೌಟ್​ನತ್ತ ಹೆಜ್ಜೆ ಹಾಕಿದರು. ಆದರೆ ಈ ದೃಶ್ಯ ಎಲ್ಲರನ್ನೂ ರೋಮಾಂಚನಗೊಳಿಸಿದ್ದಂತೂ ಸುಳ್ಳಲ್ಲ.

Whats_app_banner