2023ರ ನಂತರ ಮರಳಿದ ಸ್ಟಾರ್ ಆಟಗಾರ; ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದ ಇಂಗ್ಲೆಂಡ್
ಕನ್ನಡ ಸುದ್ದಿ  /  ಕ್ರಿಕೆಟ್  /  2023ರ ನಂತರ ಮರಳಿದ ಸ್ಟಾರ್ ಆಟಗಾರ; ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದ ಇಂಗ್ಲೆಂಡ್

2023ರ ನಂತರ ಮರಳಿದ ಸ್ಟಾರ್ ಆಟಗಾರ; ಮೊದಲ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದ ಇಂಗ್ಲೆಂಡ್

ಭಾರತ ವಿರುದ್ಧದ ಮುಂಬರುವ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಬಹುನಿರೀಕ್ಷಿತ ತಂಡಕ್ಕೆ ಮರಳುವ ಗಮನ ಸೆಳೆದಿದ್ದಾರೆ.

Cricket - First One Day International - India v England - Practice - Vidarbha Cricket Association Stadium, Nagpur, India - February 5, 2025 England head coach Brendon McCullum with Jos Buttler during practice REUTERS/Anushree Fadnavis
Cricket - First One Day International - India v England - Practice - Vidarbha Cricket Association Stadium, Nagpur, India - February 5, 2025 England head coach Brendon McCullum with Jos Buttler during practice REUTERS/Anushree Fadnavis (REUTERS)

ಬೆಂಗಳೂರು (ಫೆ.05): ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ಇಂಗ್ಲೆಂಡ್​ ತಂಡವು ತನ್ನ ಬಲಿಷ್ಠ ಪ್ಲೇಯಿಂಗ್ 11 ಘೋಷಿಸಿದೆ. ಫೆಬ್ರವರಿ 6ರ ಗುರುವಾರ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಜೋಸ್ ಬಟ್ಲರ್​ ನಾಯಕನಾಗಿದ್ದರೆ, ಜೋ ರೂಟ್ (Joe Root) 2023ರ ನಂತರ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ಗೆ​ ಮರಳಿದ್ದಾರೆ.

ಟಿ20ಐ ಸರಣಿಯಲ್ಲಿದ್ದ ಬಹುತೇಕ ಮಂದಿ ಏಕದಿನ ಸರಣಿಗೂ ಅವಕಾಶ ಪಡೆದಿದ್ದಾರೆ. ಅದೇ ರೀತಿ ಆಡುವ 11ರ ಬಳಗದಲ್ಲೂ ಕಾಣಿಸಿಕೊಂಡಿದ್ದಾರೆ. ಫಿಲ್ ಸಾಲ್ಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್​ಸ್ಟನ್ ಸೇರಿದಂತೆ ಘಟಾನುಘಟಿಗಳೇ ತಂಡದ ಮೈದಾನಕ್ಕಿಳಿಯಲಿದ್ದಾರೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ 2025ಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ರಕ್ಷಿಸಬಲ್ಲ ಬ್ಯಾಟ್ಸ್‌ಮನ್‌ನ ಅಗತ್ಯವನ್ನು ಪರಿಗಣಿಸಿ ಜೋ ರೂಟ್ ಸೇರ್ಪಡೆ ಮಾಡಲಾಗಿದೆ ಎಂದು ಹೇಳಬಹುದು.

ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರು ಸಹ ಜೋ ರೂಟ್ ಸೇರ್ಪಡೆಯ ಕುರಿತು ಭರವಸೆಯ ಮಾತುಗಳನ್ನಾಡಿದ್ದರು. ಏಕದಿನ ಸೆಟ್‌ಅಪ್‌ನಲ್ಲಿ ರೂಟ್ ಅವರ ಮಹತ್ವದ ಬಗ್ಗೆ ಮತ್ತು 34 ವರ್ಷದ ಆಟಗಾರನನ್ನು ಮತ್ತೊಮ್ಮೆ ಕಾರ್ಯಪ್ರವೃತ್ತವಾಗಿ ನೋಡಲು ಅವರು ಉತ್ಸುಕರಾಗಿರುವುದಾಗಿ ಹೇಳಿದ್ದರು. ಭಾರತದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಕಳೆದುಕೊಂಡಿದ್ದ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿ ಲೆಕ್ಕ ಚುಕ್ತಾ ಮಾಡುವ ವಿಶ್ವಾಸದಲ್ಲಿದೆ.

ಜೋ ರೂಟ್ ಏಕದಿನ ಕ್ರಿಕೆಟ್ ಪ್ರದರ್ಶನ

ಏಕದಿನ ಕ್ರಿಕೆಟ್​ನಲ್ಲಿ ಜೋ ರೂಟ್ ಉತ್ತಮ ಪ್ರದರ್ಶನ ನೀಡಿದ್ದಾರೆ. 171 ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಬ್ಯಾಟ್ ಬೀಸಿರುವ ರೂಟ್, 16 ಅರ್ಧಶತಕ, 39 ಅರ್ಧಶತಕ ಸಹಿತ 6522 ರನ್ ಗಳಿಸಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 133. ಬ್ಯಾಟಿಂಗ್ ಸರಾಸರಿ 47.61.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್​ಎ20 ಲೀಗ್‌ನಲ್ಲಿ ಪರ್ಲ್ ರಾಯಲ್ಸ್ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದಾರೆ. ಟೂರ್ನಿಯಲ್ಲಿ ರೂಟ್​, 55ರ ಬ್ಯಾಟಿಂಗ್ ಸರಾಸರಿಯಲ್ಲಿ 279 ರನ್ ಗಳಿಸಿದ್ದಾರೆ. 140 ರ ಸ್ಟ್ರೈಕ್ ರೇಟ್ ಹೊಂದಿದ್ದರು.

ಇಂಗ್ಲೆಂಡ್ ಪ್ಲೇಯಿಂಗ್ XI

ಬೆನ್ ಡಕೆಟ್, ಫಿಲ್ ಸಾಲ್ಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.

ಭಾರತ-ಇಂಗ್ಲೆಂಡ್: ಮುಖಾಮುಖಿ ದಾಖಲೆ

ಭಾರತ ಮತ್ತು ಇಂಗ್ಲೆಂಡ್ ತಂಡಗಳು ನಾಗ್ಪುರದಲ್ಲಿ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಲಿವೆ. ಒಟ್ಟಾರೆಯಾಗಿ, ಉಭಯ ತಂಡಗಳು 107 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮೆನ್ ಇನ್ ಬ್ಲೂ ತಂಡವು 58 ಪಂದ್ಯಗಳಲ್ಲಿ ಜಯಗಳಿಸಿ ಮುನ್ನಡೆ ಸಾಧಿಸಿದೆ. ಕ್ರಿಕೆಟ್ ಜನಕರು 44 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

Whats_app_banner