ಕನ್ನಡ ಸುದ್ದಿ  /  ಕ್ರಿಕೆಟ್  /  ಬಟ್ಲರ್-ಜೋರ್ಡನ್ ಮಿಂಚು; ಅಮೆರಿಕ ವಿರುದ್ಧ 10 ವಿಕೆಟ್​ಗಳ ಗೆಲುವು, ಇಂಗ್ಲೆಂಡ್ ಸೆಮಿಫೈನಲ್​ಗೆ ಲಗ್ಗೆ

ಬಟ್ಲರ್-ಜೋರ್ಡನ್ ಮಿಂಚು; ಅಮೆರಿಕ ವಿರುದ್ಧ 10 ವಿಕೆಟ್​ಗಳ ಗೆಲುವು, ಇಂಗ್ಲೆಂಡ್ ಸೆಮಿಫೈನಲ್​ಗೆ ಲಗ್ಗೆ

United States vs England: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್​-8 ಪಂದ್ಯದಲ್ಲಿ ಅಮೆರಿಕ ವಿರುದ್ಧ ಇಂಗ್ಲೆಂಡ್ 10 ವಿಕೆಟ್​​ಗಳಿಂದ ಸುಲಭ ಗೆಲುವು ದಾಖಲಿಸಿತು.

ಬಟ್ಲರ್-ಜೋರ್ಡನ್ ಮಿಂಚು; ಅಮೆರಿಕ ವಿರುದ್ಧ 10 ವಿಕೆಟ್​ಗಳ ಗೆಲುವು, ಇಂಗ್ಲೆಂಡ್ ಸೆಮಿಫೈನಲ್​ಗೆ ಲಗ್ಗೆ
ಬಟ್ಲರ್-ಜೋರ್ಡನ್ ಮಿಂಚು; ಅಮೆರಿಕ ವಿರುದ್ಧ 10 ವಿಕೆಟ್​ಗಳ ಗೆಲುವು, ಇಂಗ್ಲೆಂಡ್ ಸೆಮಿಫೈನಲ್​ಗೆ ಲಗ್ಗೆ (AP)

ಟಿ20 ವಿಶ್ವಕಪ್ 2024 ಟೂರ್ನಿಯ ಸೂಪರ್​-8 ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಇಂಗ್ಲೆಂಡ್ ತಂಡ ಸುಲಭ ಗೆಲುವು ದಾಖಲಿಸಿತು. ಅಮೆರಿಕ ತಂಡವನ್ನು 10 ವಿಕೆಟ್​ಗಳಿಂದ ಮಣಿಸಿದ ಆಂಗ್ಲರು, ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿತು. ಸೂಪರ್​​-8 ಎರಡನೇ ಗುಂಪಿನಲ್ಲಿ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕೆ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ನಡುವೆ ಸೆಣಸಾಟ ನಡೆಯಲಿದೆ. ಮತ್ತೊಂದೆಡೆ, ಲೀಗ್​ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುನೈಟೆಡ್​ ಸ್ಟೇಟ್ಸ್​ ಸೂಪರ್​-8 ಹಂತದಲ್ಲಿ ಮೂರಕ್ಕೆ ಮೂರು ಸೋತು ಹೊರಬಿತ್ತು. ಮೊದಲ ತಂಡವಾಗಿ ಎಲಿಮಿನೇಟ್ ಆಯಿತು.

ಮೊದಲು ಬ್ಯಾಟಿಂಗ್ ನಡೆಸಿದ ಸಹ ಆತಿಥೇಯ ಯುಎಸ್​ಎ, ತೀವ್ರ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕ್ರಿಸ್ ಜೋರ್ಡಾನ್ ಅವರ ಹ್ಯಾಟ್ರಿಕ್ ವಿಕೆಟ್ ಬಲದಿಂದ ಯುಎಸ್​ 115 ರನ್​ಗಳ ಅಲ್ಪಮೊತ್ತಕ್ಕೆ ಕುಸಿಯಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್​ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 9.4 ಓವರ್​​ಗಳಲ್ಲೇ ಗೆದ್ದು ಬೀಗಿದೆ. ಬಟ್ಲರ್ ಅಜೇಯ 83 ರನ್ ಬಾರಿಸಿದರು. ಫಿಲ್ ಸಾಲ್ಟ್ 25 ರನ್ ಗಳಿಸಿ ಬಟ್ಲರ್​ಗೆ ಸಾಥ್ ಕೊಟ್ಟರು.

ಜೋಸ್ ಬಟ್ಲರ್​ ಸಿಡಿಲಬ್ಬರದ ಬ್ಯಾಟಿಂಗ್

116 ರನ್​ಗಳ ಅಲ್ಪ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಭರ್ಜರಿ ಆರಂಭ ಪಡೆಯಿತು. ಯುಎಸ್​ ಬೌಲರ್​​ಗಳಿಗೆ ಮನಬಂದಂತೆ ದಂಡಿಸಿದರು. ಎದುರಾಳಿ ಬೌಲರ್​​ಗಳು ವಿಕೆಟ್​ ಪಡೆಯಲು ಪರದಾಡಿದರು. ಜೋಸ್ ಬಟ್ಲರ್​ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿ ಸ್ಪೋಟಕ ಅರ್ಧಶತಕ ಸಿಡಿಸಿದರು. ಅದರಲ್ಲೂ 9ನೇ ಓವರ್​​​ನಲ್ಲಿ 5 ಸಿಕ್ಸರ್​ ಸಹಿತ 32 ರನ್ ಬಾರಿಸಿದರು. 38 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ ಸಹಿತ ಅಜೇಯ 83 ರನ್ ಬಾರಿಸಿದರು. ಸಾಲ್ಟ್ 21 ಎಸೆತಗಳಲ್ಲಿ 25 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟ್ರೆಂಡಿಂಗ್​ ಸುದ್ದಿ

ಇಂಗ್ಲೆಂಡ್ ಭರ್ಜರಿ ಬೌಲಿಂಗ್​

ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ​, ಕಳಪೆ ಬ್ಯಾಟಿಂಗ್ ನಿರ್ವಹಿಸಿತು. ಆದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡನ್ ಭರ್ಜರಿ ಬೌಲಿಂಗ್ ಮಾಡಿದರು. ನಿತೀಶ್ ಕುಮಾರ್​ 30, ಕೋರಿ ಆಂಡರ್ಸನ್ 29, ಹರ್ಮೀತ್ ಸಿಂಗ್​ 21 ರನ್ ಗಳಿಸಿ ಅಲ್ಪ ಕಾಣಿಕೆ ನೀಡಿದರು. ಉಳಿದ ಬ್ಯಾಟರ್​​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಜೋರ್ಡನ್ ಒಂದೇ ಓವರ್​​ನಲ್ಲಿ 4 ವಿಕೆಟ್​ ಪಡೆದು ಅಮೆರಿಕ ಕುಸಿತಕ್ಕೆ ಕಾರಣರಾದರು. ಅಲ್ಲದೆ, ಆದಿಲ್ ರಶೀದ್ ಮತ್ತು ಸ್ಯಾಮ್ ಕರನ್ ತಲಾ 2 ವಿಕೆಟ್ ಪಡೆದರು. ಲಿವಿಂಗ್ ಸ್ಟನ್ 1 ವಿಕೆಟ್ ಪಡೆದರು.

ಮೊದಲ ತಂಡವಾಗಿ ಸೆಮಿಫೈನಲ್​ಗೆ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ​, ಕಳಪೆ ಬ್ಯಾಟಿಂಗ್ ನಿರ್ವಹಿಸಿತು. ಆದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡನ್ ಭರ್ಜರಿ ಬೌಲಿಂಗ್ ಮಾಡಿದರು. ನಿತೀಶ್ ಕುಮಾರ್​ 30, ಕೋರಿ ಆಂಡರ್ಸನ್ 29, ಹರ್ಮೀತ್ ಸಿಂಗ್​ 21 ರನ್ ಗಳಿಸಿ ಅಲ್ಪ ಕಾಣಿಕೆ ನೀಡಿದರು. ಉಳಿದ ಬ್ಯಾಟರ್​​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಜೋರ್ಡನ್ ಒಂದೇ ಓವರ್​​ನಲ್ಲಿ 4 ವಿಕೆಟ್​ ಪಡೆದು ಅಮೆರಿಕ ಕುಸಿತಕ್ಕೆ ಕಾರಣರಾದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ