ಭಾರತದ ಸರಣಿಗೆ ಗಾಯಗೊಂಡಿರುವ ಜೋಶ್ ಹೇಜಲ್‌ವುಡ್ ಐಪಿಎಲ್ಗೂ ಅಲಭ್ಯರಾದರೆ ಆರ್ಸಿಬಿ ಮುಂದಿದೆ ಈ ಮೂರು ಆಯ್ಕೆ!
Josh Hazlewood: ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಗಾಯದ ಕಾರಣ ಮುಂಬರುವ ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಒಂದು ವೇಳೆ ಐಪಿಎಲ್ಗೂ ಅಲಭ್ಯರಾದರೆ ಆರ್ಸಿಬಿ ಮುಂದಿರುವ ಅವಕಾಶಗಳೇನು? ಇಲ್ಲಿದೆ ವಿವರ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy 2025) ಟೀಮ್ ಇಂಡಿಯಾ ವಿರುದ್ಧದ 2ನೇ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಭಾರತ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ತವರಿನಲ್ಲಿ ಮೊದಲ ಟೆಸ್ಟ್ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ, ಪಿಂಕ್ ಬಾಲ್ ಟೆಸ್ಟ್ನಲ್ಲಿ ಗೆಲುವಿನೊಂದಿಗೆ ಲಯಕ್ಕೆ ಮರಳಲು ಯತ್ನಿಸುತ್ತಿದೆ. ಆ ಮೂಲಕ ಭಾರತಕ್ಕೆ ತಿರುಗೇಟಿ ನೀಡಿ ಪುಟಿದೇಳುವ ವಿಶ್ವಾಸ ಹೊಂದಿದೆ. ಆದರೆ ಇದರ ನಡುವೆ ಆಸೀಸ್ ಮತ್ತೊಂದು ಆಘಾತವಾಗಿದೆ. ಎರಡನೇ ಟೆಸ್ಟ್ಗೂ ಮುನ್ನ ಸ್ಟಾರ್ ವೇಗದ ಬೌಲರ್ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಗಾಯದ ಕಾರಣ ಮುಂಬರುವ ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಅನುಭವಿ ಬಲಗೈ ವೇಗಿ ಎಡಗೈಗೆ ಗಾಯಗೊಂಡಿರುವ ಕಾರಣ ಗುಲಾಬಿ ಬಾಲ್ ಡೇ-ನೈಟ್ ಟೆಸ್ಟ್‌ನಿಂದ ಅವರನ್ನು ಬದಿಗಿಟ್ಟಿದ್ದಾರೆ. ಪ್ರಥಮ ಟೆಸ್ಟ್ನಲ್ಲಿ ಆಸೀಸ್ ಸೋತರೂ ಹೇಜಲ್‌ವುಡ್ ಉತ್ತಮ ಪ್ರದರ್ಶನ ನೀಡಿದ್ದರು. ಎರಡೂ ಇನ್ನಿಂಗ್ಸ್ಗಳಲ್ಲಿ 5 ವಿಕೆಟ್ ಕಿತ್ತಿದ್ದರು. ಇದೀಗ ಇಂಜುರಿ ಕಾರಣ ಜೋಶ್ ಹೇಜಲ್‌ವುಡ್ ಟೀಮ್ ಇಂಡಿಯಾ ಎದುರಿನ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ತಲೆ ನೋವು ಹೆಚ್ಚಾಗಿದೆ.
ಐಪಿಎಲ್ಗೆ ಜೋಶ್ ಹೇಜಲ್‌ವುಡ್ ಡೌಟ್?
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಆರ್ಸಿಬಿ, ಜೋಶ್ ಹೇಜಲ್‌ವುಡ್ ಅವರನ್ನು ಖರೀದಿಸಿತು. 12.50 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಆ ಮೂಲಕ ಬೌಲಿಂಗ್ ವಿಭಾಗದಕ್ಕೆ ಬಲ ತಂದಿತು. ಆದರೀಗ ಇಂಜುರಿ ಆಗಿದ್ದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಐಪಿಎಲ್ ಆರಂಭಕ್ಕೆ ಇನ್ನೂ ಮೂರ್ನಾಲ್ಕು ತಿಂಗಳ ಕಾಲಾವಕಾಶ ಇರುವ ಕಾರಣ, ಅಷ್ಟರೊಳಗೆ ಜೋಶ್ ಚೇತರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ಚೇತರಿಕೆಯಾಗದಿದ್ದರೆ, ಅವರ ಬದಲಿಗೆ ಆರ್ಸಿಬಿ ಈ ಮೂವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು.
ಜೋಶ್ ಹೇಜಲ್ವುಡ್ಗೆ ಭಾರತದ ಸಂಭಾವ್ಯ ಆಯ್ಕೆಗಳು
ಕಾರ್ತಿಕ್ ತ್ಯಾಗಿ (ಮೂಲ ಬೆಲೆ - 30 ಲಕ್ಷ): ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳನ್ನು ಪ್ರತಿನಿಧಿಸಿರುವ ಕಾರ್ತಿಕ್ ತ್ಯಾಗಿ ಈ ಬಾರಿ ಅನ್ಸೋಲ್ಡ್ ಆಗಿದ್ದಾರೆ. ವೇಗದ ಮತ್ತು ಹಿಟ್ ದ ಡೆಕ್ (ಚೆಂಡನ್ನು ಪುಟಿಯುವಂತೆ ಮಾಡುವುದು) ಬೌಲಿಂಗ್ಗೆ ಹೆಸರುವಾಸಿ. ಆರ್ಸಿಬಿ ತಂಡದಲ್ಲಿ ಆರ್ಸಿಬಿ ತಂಡದಲ್ಲಿ ಸರಿಯಾದ ಹಿಟ್-ದ-ಡೆಕ್ ವೇಗಿ ಇಲ್ಲದ ಕಾರಣ ಹೇಜಲ್‌ವುಡ್ ಐಪಿಎಲ್ 2025ರ ಕಳೆದುಕೊಂಡರೆ ತ್ಯಾಗಿ ಅವರನ್ನು ಬದಲಿಯಾಗಿ ಆಯ್ಕೆ ಮಾಡಲು ಅವಕಾಶ ನೀಡಿದರೆ ಉತ್ತಮ.
ವಿಧ್ವತ್ ಕಾವೇರಪ್ಪ (ಮೂಲ ಬೆಲೆ- 30 ಲಕ್ಷ): ಕರ್ನಾಟಕದ ಪ್ರತಿಭಾನ್ವಿತ ಸೀಮರ್ ವಿಧ್ವತ್ ಕಾವೇರಪ್ಪ, ಆರ್ಸಿಬಿ ಬೌಲಿಂಗ್ ಘಟಕಕ್ಕೆ ಉತ್ತಮ ಆಯ್ಕೆಯೂ ಹೌದು. ಹೊಸ ಚೆಂಡಿನೊಂದಿಗೆ ಅಬ್ಬರದ ಬೌಲಿಂಗ್ ಪ್ರದರ್ಶನ ನೀಡುವ ವಿಧ್ವತ್ ಕಾವೇರಪ್ಪ ಮತ್ತು ಡೆತ್ ಓವರ್ಗಳಲ್ಲೂ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳುಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ಲೋಕಲ್ ಪ್ಲೇಯರ್ ಆಗಿರುವ ಕಾರಣ ಹೇಜಲ್ವುಡ್ಗೆ ಉತ್ತಮ ಬದಲಿ ಆಟಗಾರ ಎಂದರೆ ತಪ್ಪಾಗಲ್ಲ.
ಶಿವಂ ಮಾವಿ (ಮೂಲ ಬೆಲೆ- 75 ಲಕ್ಷ): ಭಾರತದ ಯುವ ಬೌಲರ್ ಶಿವಂ ಮಾವಿ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಅನ್ಸೋಲ್ಡ್ ಆದ ಮಾತ್ರಕ್ಕೆ ಕೆಟ್ಟ ಬೌಲರ್ ಎಂದರ್ಥವಲ್ಲ. ಬ್ಯಾಟರ್ಗಳನ್ನು ಒತ್ತಡಕ್ಕೆ ಸಿಲುಕಿಸುವ ಸಾಮರ್ಥ್ಯ ಹೊಂದಿರುವ ಮಧ್ಯಮ ವೇಗದ ಬೌಲರ್, ಬ್ಯಾಟಿಂಗ್ನಲ್ಲೂ ಕಾಣಿಕೆ ನೀಡಲಿದ್ದಾರೆ. ಅಲ್ಲದೆ, ಭುವನೇಶ್ವರ್ ಕುಮಾರ್ ಅವರೊಂದಿಗೆ ಮಾರಣಾಂತಿಕ ಬೌಲಿಂಗ್ ಜೋಡಿಯನ್ನು ನಿರ್ಮಿಸಬಹುದಾಗಿದೆ. ಡೆತ್ ಓವರ್ಗಳಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ.