ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ? ಅವರನ್ನು ಮುಂಬೈನಿಂದ ಕರೆತರಲಿದ್ದೇವೆ ಅಂದ್ರು ಜಸ್ಟಿನ್ ಲ್ಯಾಂಗರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ? ಅವರನ್ನು ಮುಂಬೈನಿಂದ ಕರೆತರಲಿದ್ದೇವೆ ಅಂದ್ರು ಜಸ್ಟಿನ್ ಲ್ಯಾಂಗರ್

ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ? ಅವರನ್ನು ಮುಂಬೈನಿಂದ ಕರೆತರಲಿದ್ದೇವೆ ಅಂದ್ರು ಜಸ್ಟಿನ್ ಲ್ಯಾಂಗರ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್‌, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಭಾರಿ ಉತ್ಸುಕರಾಗಿದ್ದಾರೆ. ಈ ಬಾರಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿರುವ ಹಿಟ್‌ಮ್ಯಾನ್‌, ಮುಂಬರುವ ಆವೃತ್ತಿಗೂ ಮುನ್ನ ಮೆಗಾ ಹರಾಜಿಗೆ ಹೆಸರು ನಮೂದಿಸುವ ಸಾಧ್ಯತೆ ಇದೆ.

ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ
ಐಪಿಎಲ್ 2025ರಲ್ಲಿ ಲಕ್ನೋ ಪರ ಆಡ್ತಾರಾ ರೋಹಿತ್ ಶರ್ಮಾ (ANI-Screengrab)

ಐಪಿಎಲ್ 2024ರ ಆವೃತ್ತಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ. ಇದುವರೆಗೂ ಎಂಐ ಫ್ರಾಂಚೈಸಿಗೆ ಸಾಲು ಸಾಲು ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟ ಹಿಟ್‌ಮ್ಯಾನ್‌, ಈ ತಂಡದ ಅಸ್ಮಿತೆ. ಸದ್ಯ ಅವರ ಕೈಯಲ್ಲಿ ನಾಯಕತ್ವ ಇಲ್ಲವಾದರೂ ತಂಡದ ಪರವಂತೂ ಆಡುತ್ತಿದ್ದಾರೆ. ಆದರೆ, ಮುಂದಿನ ಆವೃತ್ತಿಯ ವೇಳೆ ಸನ್ನಿವೇಶ ಇದೇ ರೀತಿ ಇರುತ್ತದೆ ಎಂದು ಹೇಳಲಾಗದು. ಈ ವರ್ಷದ ಕೊನೆಯಲ್ಲಿ ಮುಂಬರುವ ಆವೃತ್ತಿಗಾಗಿ ಮೆಗಾ ಹರಾಜು ನಡೆಯಲಿದೆ. ಅಲ್ಲಿ ಏನಾಗುತ್ತದೆ ಎಂಬುದು ಸದ್ಯ ಯಾರಿಗೂ ತಿಳಿದಿಲ್ಲ.

ಪ್ರಸಕ್ತ ಆವೃತ್ತಿಯ ಪಂದ್ಯಾವಳಿಗೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್‌ ಅವರನ್ನು ಕೆಳಗಿಳಿಸಿದ್ದು ಹಳೆಯ ವಿಷಯ. ಅಭಿಮಾನಿಗಳ ವ್ಯಾಪಕ ಅಸಮಾಧಾನಕ್ಕೆ ಕಾರಣವಾದ ನಾಯಕತ್ವ ಬದಲಾವಣೆ ಬಳಿಕ, ರೋಹಿತ್ ಅವರ ಭವಿಷ್ಯದ ಕುರಿತು ಸಾಕಷ್ಟು ಊಹಾಪೋಹಗಳಿವೆ. ಮುಂದಿನ ಆವೃತ್ತಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾರೆ ಎಂದು ಒಂದು ಕಡೆ ಹೇಳಿದರೆ, ಮತ್ತೊಂದೆಡೆ ಆರ್‌ಸಿಬಿಗೆ ಬರಬೇಕೆಂಬ ಅಭಿಪ್ರಾಯವೂ ಬರುತ್ತಿದೆ. ಸಿಎಸ್‌ಕೆ ತಂಡ ಸೇರಿಕೊಂಡು ತಂಡ ಮುನ್ನಡೆಸಲಿದ್ದಾರೆ ಎಂದು ಅಂಬಾಟಿ ರಾಯುಡು ಹೇಳಿದ್ದರು. ಈ ನಡುವೆ, ರೋಹಿತ್ ಅವರನ್ನು ತಂಡಕ್ಕೆ ಕರೆಸಿಕೊಳ್ಳುವ ಆಸೆಯಲ್ಲಿ ಮತ್ತೊಂದು ಫ್ರಾಂಚೈಸಿ ಉತ್ಸುಕವಾಗಿದೆ. ಅದುವೇ ಲಕ್ನೋ ಸೂಪರ್ ಜೈಂಟ್ಸ್.

ತಂಡದ ಕೋಚ್‌ ಜಸ್ಟಿನ್ ಲ್ಯಾಂಗರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಲು ಬಯಸುವ ಒಬ್ಬ ಆಟಗಾರನ ಹೆಸರು ಹೇಳುವಂತೆ ಕೇಳಲಾಯಿತು. ರೋಹಿತ್ ಅವರ ಹೆಸರು ಬರುತ್ತಿದ್ದಂತೆಯೇ, ಲಕ್ನೋ ಕೋಚ್‌ ಪ್ರತಿಕ್ರಿಯೆಯ ಶೈಲಿಯೇ ಬದಲಾಯ್ತು."ನೀವು ರೋಹಿತ್ ಶರ್ಮಾ ಅವರನ್ನು ಪಡೆಯಬಹುದು ಎಂದು ಭಾವಿಸುತ್ತೀರಾ?" ಎಂದು ಕೇಳಿದಾಗ, ಲ್ಯಾಂಗರ್ ಮುಖದಲ್ಲಿ ಖುಷಿಯ ಅಲೆಗಳು ತೇಲಿ ಬಂತು.

ಇದನ್ನೂ ಓದಿ | ವಿಜಯ್‌ ಶಂಕರ್‌, ವಿಲಿಯಮ್ಸನ್‌ ಔಟ್; ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

“ರೋಹಿತ್ ಶರ್ಮಾ ಅವರಾ? ಹ್ಹಹ್ಹ. ನಾವು ಅವರನ್ನು ಮುಂಬೈನಿಂದ ಕರೆತರಲಿದ್ದೇವೆ. ನೀವು ಸಮಾಲೋಚಕರಾಗುವುದು ಉತ್ತಮ,” ಎಂದು ಎಲ್‌ಎಸ್‌ಜಿ ಕೋಚ್ ಹೇಳಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಮೆಹಾ ಹರಾಜು

ಮುಂದಿನ ಐಪಿಎಲ್‌ ಆವೃತ್ತಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ವರ್ಷದ ಕೊನೆಯಲ್ಲಿ ಡಿಸೆಂಬರ್ ವೇಳೆಗೆ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರನ್ನು ಒಳಗೊಂಡ ಸಭೆಯನ್ನು ಈ ತಿಂಗಳ 16ರಂದು ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಆಟಗಾರರನ್ನು ಉಳಿಸಿಕೊಳ್ಳುವುದು, ರಿಟೈನ್‌ ಮಾಡುವ ಆಟಗಾರರ ಸಂಖ್ಯೆಯನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ. 2022ರಲ್ಲಿ ನಡೆದ ಕೊನೆಯ ಮೆಗಾ ಹರಾಜಿಗೆ ಮುಂಚಿತವಾಗಿ, ಫ್ರಾಂಚೈಸಿಗಳಿಗೆ ಒಂದು ರೈಟ್ ಟು ಮ್ಯಾಚ್ ಕಾರ್ಡ್ ಹಾಗೂ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದೀಗ ಆರ್‌ಟಿಎಂ ಬಳಕೆ ಮಾಡಲು ಅವಕಾಶವಿಲ್ಲ. ಹೀಗಾಗಿ ನಾಲ್ಕಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಬೇಕೆಂದು ಕೆಲವು ಫ್ರಾಂಚೈಸಿಗಳು ಒತ್ತಾಯಿಸಿವೆ.

ಮುಂದಿನ ಆವೃತ್ತಿಗೆ ರೋಹಿತ್‌ ಶರ್ಮಾ ತಂಡದಲ್ಲಿ ಉಳಿಯುವುದು ಅನುಮಾನ ಎನ್ನಲಾಗುತ್ತಿದೆ. ಐದು ಬಾರಿ ಐಪಿಎಲ್ ಕಪ್‌ ಗೆದ್ದಿರುವ ನಾಯಕರಾಗಿರುವ ರೋಹಿತ್, 2013ರಿಂದ ಫ್ರಾಂಚೈಸಿಯ ಅಸ್ಮಿತೆಯಾಗಿದ್ದಾರೆ. ಇದೀಗ ಮಾಜಿ ನಾಯಕನನ್ನು ತಂಡ ಉಳಿಸುತ್ತಾ ಎಂಬ ಕುತೂಹಲವೂ ಇದೆ.

Whats_app_banner