ಯುಎಸ್​ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ
ಕನ್ನಡ ಸುದ್ದಿ  /  ಕ್ರಿಕೆಟ್  /  ಯುಎಸ್​ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ

ಯುಎಸ್​ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ

United States vs South Africa: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸೂಪರ್​​-8ರ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೌತ್ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದೆ.

ಯುಎಸ್​ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ
ಯುಎಸ್​ಎ ವಿರುದ್ಧ ಸೌತ್ ಆಫ್ರಿಕಾಗೆ 18 ರನ್ ಭರ್ಜರಿ ಗೆಲುವು; ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ (AP)

ಕ್ವಿಂಟನ್ ಡಿ ಕಾಕ್ (Quinton de Kock) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಅಮೆರಿಕ ವಿರುದ್ಧದ ಟಿ20 ವಿಶ್ವಕಪ್​ 2024 ಸೂಪರ್-8 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 24 ರನ್​ಗಳಿಂದ ಗೆದ್ದು ಬೀಗಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಸೂಪರ್​-8 ಹಂತದ ಗ್ರೂಪ್-2ರ ಮೊದಲ ಪಂದ್ಯದಲ್ಲಿ ಯುಎಸ್​ಎ 18 ರನ್​ಗಳಿಂದ ಸೋಲನುಭವಿಸಿತು. ಆದರೆ, ಆಂಡ್ರಿಸ್ ಗೌಸ್ ಅಜೇಯ ಹೋರಾಟ ವ್ಯರ್ಥವಾಯಿತು. ಈ ಹಂತದಲ್ಲಿ ಎರಡು ಗೆಲುವು ಸಾಧಿಸಿದ ತಂಡವು ಸೆಮಿಫೈನಲ್ ಪ್ರವೇಶಿಸಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ, ಭರ್ಜರಿ ಬ್ಯಾಟಿಂಗ್ ನಡೆಸಿತು. ಕಠಿಣ ಪಿಚ್​​​ಗಳಲ್ಲೂ ಉತ್ತಮ ಮೊತ್ತ ಪೇರಿಸಿತು. ಅದರಲ್ಲೂ ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪರಿಣಾಮ 20 ಓವರ್​​​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತು. ಸೌರಭ್ ನೇತ್ರಾವಲ್ಕರ್-ಹರ್ಮೀತ್ ಸಿಂಗ್ ತಲಾ 2 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಅಮೆರಿಕ ಪ್ರತಿರೋಧ ತೋರಿತು. ಆಂಡ್ರಿಸ್ ಗೌಸ್ ಅರ್ಧಶತಕ ಸಿಡಿಸಿ ಹೋರಾಡಿದರೂ ಗೆಲುವು ಸಾಧ್ಯವಾಗಿಲ್ಲ.

ಆಂಡ್ರೀಸ್ ಗೌಸ್ ಅಜೇಯ ಹೋರಾಟ ವ್ಯರ್ಥ

195 ರನ್​ಗಳ ಸವಾಲಿನ ಮೊತ್ತ ಹಿಂಬಾಲಿಸಿದ ಅಮೆರಿಕ, ಮೊದಲ ವಿಕೆಟ್​ಗೆ 33 ರನ್ ಕಲೆ ಹಾಕಿತು. ಸ್ಟೀವನ್ ಟೇಲರ್​ 24 ರನ್ ಗಳಿಸಿ ಔಟಾದರು. ತದನಂತರ ಸ್ಕೋರ್​​ ವೇಗವಾಗಿ ಹರಿದು ಬರಲಿಲ್ಲ. ನಿತೀಶ್ ಕುಮಾರ್​ (8) ಕೂಡ ಕೈಹಿಡಿಯಲಿಲ್ಲ. ತಂಡದ ಆಪತ್ಬಾಂದವನಾಗಿದ್ದ ಆರೋನ್ ಜೋನ್ಸ್​ ಡಕೌಟಾದರು. ಕೋರಿ ಆ್ಯಂಡರ್ಸನ್ (12) ಮತ್ತು ಶಯನ್ ಜಹಂಗೀರ್​ (3) ಕೂಡ ನಿರಾಸೆ ಮೂಡಿಸಿದರು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಸೋಲಿನಂಚಿಗೆ ಬಂದಿದ್ದ ತಂಡಕ್ಕೆ ಆಂಡ್ರೀಸ್ ಗೌಸ್ ಮತ್ತು ಹರ್ಮೀತ್ ಸಿಂಗ್ ಆಸರೆಯಾದರು.

76ಕ್ಕೆ 5 ವಿಕೆಟ್ ಕಳೆದುಕೊಂಡು ಅಮೆರಿಕಗೆ ಈ ಇಬ್ಬರು 6ನೇ ವಿಕೆಟ್​ಗೆ 91 ರನ್​ಗಳ ಪಾಲುದಾರಿಕೆ ಒದಗಿಸಿದರು. ಇದರೊಂದಿಗೆ ತಂಡದಲ್ಲಿ ಗೆಲುವಿನ ಆಸೆ ಹೆಚ್ಚಿಸಿದರು. ಮತ್ತೊಂದೆಡೆ ಗೌಸ್ ಅದ್ಭುತ ಅರ್ಧಶತಕ ಸಿಡಿಸಿ ಗೆಲುವಿಗೆ ಹೋರಾಡಿದರು. ಗೌಸ್​ಗೆ ಹರ್ಮೀತ್ ಸಿಂಗ್ ಸಾಥ್ ನೀಡಿದರು. ಹರ್ಮೀತ್ 38 ರನ್ ಸಿಡಿಸಿ ಔಟಾದರೆ, ಗೌಸ್ 47 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಸಹಿತ ಅಜೇಯ 80 ರನ್ ಸಿಡಿಸಿದರೂ ಗೆಲುವು ತಂದುಕೊಡಲು ವಿಫಲರಾದರು. 20 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಕಗಿಸೋ ರಬಾಡ 4 ಓವರ್​​ಗಳಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದರು.

ಕ್ವಿಂಟನ್ ಡಿ ಕಾಕ್ ಭರ್ಜರಿ ಬ್ಯಾಟಿಂಗ್

ಮೊದಲು ಬ್ಯಾಟಿಂಗ್​ ನಡೆಸಿದ ಆಫ್ರಿಕಾ, ಉತ್ತಮ ಆರಂಭ ಪಡೆಯಲಿಲ್ಲ. ರೀಜಾ ಹೆಂಡ್ರಿಕ್ಸ್ 11 ರನ್ ಗಳಿಸಿ ಹೊರ ನಡೆದರು. ಆ ಬಳಿಕ ಜೊತೆಯಾದ ಕ್ವಿಂಟನ್ ಡಿ ಕಾಕ್ ಮತ್ತು ಏಡನ್ ಮಾರ್ಕ್ರಮ್ ಎರಡನೇ ವಿಕೆಟ್​ಗೆ 110 ರನ್​​ಗಳ ಪಾಲುದಾರಿಕೆ ನೀಡಿದರು. ಅಮೆರಿಕ ಬೌಲರ್​​ಗಳ ಎದುರು ಆರ್ಭಟಿಸಿದರು. ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿದ ಡಿ ಕಾಕ್, ಸಖತ್ ಅರ್ಧಶತಕ ಸಿಡಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು.

ಅಂತಿಮವಾಗಿ 40 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಿತ 74 ರನ್ ಗಳಿಸಿ ಔಟಾದರು. ಇನ್ನು ಡೇವಿಡ್ ಮಿಲ್ಲರ್​ ಗೋಲ್ಡನ್ ಡಕೌಟ್ ಆಗಿ ಹೊರ ನಡೆದರು. ಮತ್ತೊಂದೆಡೆ, ನಾಯಕ ಮಾರ್ಕ್ರಮ್ ಅರ್ಧಶತಕದ ಅಂಚಿನಲ್ಲಿ ಎಡವಿದರು. 32 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 46 ರನ್ ಪೇರಿಸಿ ಔಟಾದರು. ಬಳಿಕ ಕೊನೆಯ ಹಂತದಲ್ಲಿ ಹೆನ್ರಿಚ್ ಕ್ಲಾಸೆನ್-ಟ್ರಿಸ್ಟಾನ್ ಸ್ಟಬ್ಸ್ 53 ರನ್​ಗಳ ಪಾಲುದಾರಿಕೆ ಒದಗಿಸಿದರು. ಕ್ಲಾಸೆನ್ ಅಜೇಯ 36 ಮತ್ತು ಸ್ಟಬ್ಸ್ ಅಜೇಯ 20 ರನ್ ಗಳಿಸಿದರು.

Whats_app_banner