ವೇಗವಾಗಿ 7000 ರನ್; ಐದು ವರ್ಷಗಳ ನಂತರ ಏಕದಿನ ಶತಕ ಸಿಡಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ಕೇನ್ ವಿಲಿಯಮ್ಸನ್
ಕನ್ನಡ ಸುದ್ದಿ  /  ಕ್ರಿಕೆಟ್  /  ವೇಗವಾಗಿ 7000 ರನ್; ಐದು ವರ್ಷಗಳ ನಂತರ ಏಕದಿನ ಶತಕ ಸಿಡಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ಕೇನ್ ವಿಲಿಯಮ್ಸನ್

ವೇಗವಾಗಿ 7000 ರನ್; ಐದು ವರ್ಷಗಳ ನಂತರ ಏಕದಿನ ಶತಕ ಸಿಡಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ಕೇನ್ ವಿಲಿಯಮ್ಸನ್

Kane Williamson: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಹಿಂದಿಕ್ಕಿದ ಕೇನ್ ವಿಲಿಯಮ್ಸನ್ ಇತಿಹಾಸ ನಿರ್ಮಿಸಿದ್ದಾರೆ.

ಐದು ವರ್ಷಗಳ ನಂತರ ಏಕದಿನ ಶತಕ ಸಿಡಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ಕೇನ್ ವಿಲಿಯಮ್ಸನ್
ಐದು ವರ್ಷಗಳ ನಂತರ ಏಕದಿನ ಶತಕ ಸಿಡಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ಕೇನ್ ವಿಲಿಯಮ್ಸನ್ (AP)

ಪಾಕಿಸ್ತಾನವನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಅನುಭವಿ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ (Kane Williamson) ಏಕದಿನ ಕ್ರಿಕೆಟ್‌ನಲ್ಲಿ ಬೃಹತ್ ದಾಖಲೆಯೊಂದನ್ನು ತಲುಪಿದ್ದಾರೆ. ಐದೂವರೆ ವರ್ಷಗಳ ನಂತರ ತಮ್ಮ ಮೊದಲ ಏಕದಿನ ಶತಕವನ್ನು ಬಾರಿಸಿರುವ ಕಿವೀಸ್ ತಂಡದ ಮಾಜಿ ನಾಯಕ, ವಿರಾಟ್ ಕೊಹ್ಲಿ (Virat Kohli) ಅವರ ವಿಶ್ವ ದಾಖಲೆಯನ್ನು (World Record) ಮುರಿದಿದ್ದಾರೆ.

113 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್​ ಸಹಿತ ಅಜೇಯ 133 ರನ್ ಗಳಿಸಿ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿಲಿಯಮ್ಸನ್, ಚಾಂಪಿಯನ್ಸ್ ಟ್ರೋಫಿಗೂ (Champions Trophy 2025) ಮುನ್ನ ಏಕದಿನದಲ್ಲಿ ಲಯಕ್ಕೆ ಮರಳಿರುವುದು ಕಿವೀಸ್​​ ಬಲ ಹೆಚ್ಚಿಸಿದೆ. ಪಂದ್ಯದಲ್ಲಿ ಭರ್ಜರಿ ಸೆಂಚುರಿಯನ್ನು ಸಿಡಿಸುವುದರೊಂದಿಗೆ ಕೇನ್​, ವಿಶ್ವ ದಾಖಲೆ ಕೂಡ ನಿರ್ಮಿಸಿದ್ದಾರೆ. ಸಚಿನ್ ತೆಂಡೂಲ್ಕರ್​ (Sachin Tendulkar) ಕೂಡ ಈ ಸಾಧನೆ ಮಾಡಿಲ್ಲ.

133 ರನ್​ಗಳೊಂದಿಗೆ ಕಿವೀಸ್, ಏಕದಿನ ಕ್ರಿಕೆಟ್‌ನಲ್ಲಿ 7,000 ರನ್‌ಗಳ ಗಡಿ ದಾಟಿದರು. ಅತಿ ವೇಗವಾಗಿ 7000 ಏಕದಿನ ರನ್‌ ತಲುಪಿದ ಮೊದಲ ನ್ಯೂಜಿಲೆಂಡ್ ಬ್ಯಾಟರ್ ಮತ್ತು ವಿಶ್ವದ 2ನೇ ಅತಿ ವೇಗದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ 158 ಇನ್ನಿಂಗ್ಸ್‌ಗಳಲ್ಲಿ 6868 ರನ್‌ ಗಳಿಸಿದ್ದ ಕೇನ್​ಗೆ ಈ ದಾಖಲೆ ನಿರ್ಮಿಸಲು 132 ರನ್‌ ಬೇಕಿತ್ತು.

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ ವಿಲಿಯಮ್ಸನ್ 7000 ಏಕದಿನ ರನ್‌ ತಲುಪಿದ ಎರಡನೇ ಅತಿ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 159 ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಕೇವಲ 150 ಇನ್ನಿಂಗ್ಸ್‌ಗಳಲ್ಲಿ 7000 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಕೊಹ್ಲಿ-ತೆಂಡೂಲ್ಕರ್ ಕ್ರಮವಾಗಿ 161 ಮತ್ತು 189 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌: ವೇಗವಾಗಿ 7000 ರನ್ ಗಳಿಸಿದ ಟಾಪ್-5 ಆಟಗಾರರು

1 - ಹಾಶಿಮ್ ಆಮ್ಲಾ: 150 ಇನ್ನಿಂಗ್ಸ್

2 - ಕೇನ್ ವಿಲಿಯಮ್ಸನ್: 159 ಇನ್ನಿಂಗ್ಸ್

3 - ವಿರಾಟ್ ಕೊಹ್ಲಿ: 161 ಇನ್ನಿಂಗ್ಸ್

4 - ಎಬಿ ಡಿವಿಲಿಯರ್ಸ್: 166 ಇನ್ನಿಂಗ್ಸ್

5 - ಸೌರವ್ ಗಂಗೂಲಿ: 174 ಇನ್ನಿಂಗ್ಸ್

ನ್ಯೂಜಿಲೆಂಡ್​ಗೆ ಗೆಲುವು, ಫೈನಲ್​ಗೆ ಪ್ರವೇಶ

ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಜರುಗಿದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಮ್ಯಾಥ್ಯೂ ಬ್ರೀಟ್ಜ್ಕೆ ಅವರ ಶತಕದ (150) ನೆರವಿನಿಂದ 50 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 304 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 48.4 ಓವರ್​​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್ ನಾಲ್ಕು ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿ ತ್ರಿಕೋನ ಸರಣಿಯಲ್ಲಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದು ಫೈನಲಿಸ್ಟ್ ತಂಡವು ಯಾವುದೆಂದು ಫೆಬ್ರವರಿ 12ರಂದು ತಿಳಿಯಲಿದೆ. ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ನಡೆಯುವ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್​ಗೆ ಪ್ರವೇಶಿಸಲಿದೆ.

ಇನ್ನಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner