2 ಓವರ್​​ಗಳಲ್ಲಿ 66 ರನ್; 14 ವರ್ಷದ ಹುಡುಗನ ಅಬ್ಬರಕ್ಕೆ ಅಘ್ಘಾನಿಸ್ತಾನ ಬೌಲರ್ ಐಪಿಎಲ್ ಕರಿಯರ್​ ಬಹುತೇಕ ಕ್ಲೋಸ್?
ಕನ್ನಡ ಸುದ್ದಿ  /  ಕ್ರಿಕೆಟ್  /  2 ಓವರ್​​ಗಳಲ್ಲಿ 66 ರನ್; 14 ವರ್ಷದ ಹುಡುಗನ ಅಬ್ಬರಕ್ಕೆ ಅಘ್ಘಾನಿಸ್ತಾನ ಬೌಲರ್ ಐಪಿಎಲ್ ಕರಿಯರ್​ ಬಹುತೇಕ ಕ್ಲೋಸ್?

2 ಓವರ್​​ಗಳಲ್ಲಿ 66 ರನ್; 14 ವರ್ಷದ ಹುಡುಗನ ಅಬ್ಬರಕ್ಕೆ ಅಘ್ಘಾನಿಸ್ತಾನ ಬೌಲರ್ ಐಪಿಎಲ್ ಕರಿಯರ್​ ಬಹುತೇಕ ಕ್ಲೋಸ್?

ಅಫ್ಘಾನಿಸ್ತಾನ ಬೌಲರ್​ ಕರಿಮ್ ಜನತ್ ಅವರು ತನ್ನ ಐಪಿಎಲ್ ಪದಾರ್ಪಣೆ ಪಂದ್ಯದ ಮೊದಲ ಓವರ್​​ನಲ್ಲೇ 30 ರನ್ ಬಿಟ್ಟುಕೊಡುವ ಮೂಲಕ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ.

2 ಓವರ್​​ಗಳಲ್ಲಿ 66 ರನ್; 14 ವರ್ಷದ ಹುಡುಗನ ಅಬ್ಬರಕ್ಕೆ ಅಘ್ಘಾನಿಸ್ತಾನ ಬೌಲರ್ ಐಪಿಎಲ್ ಕರಿಯರ್​ ಬಹುತೇಕ ಕ್ಲೋಸ್?
2 ಓವರ್​​ಗಳಲ್ಲಿ 66 ರನ್; 14 ವರ್ಷದ ಹುಡುಗನ ಅಬ್ಬರಕ್ಕೆ ಅಘ್ಘಾನಿಸ್ತಾನ ಬೌಲರ್ ಐಪಿಎಲ್ ಕರಿಯರ್​ ಬಹುತೇಕ ಕ್ಲೋಸ್?

ಇಂಡಿಯನ್ ಪ್ರೀಮಿಯರ್ ಲೀಗ್​ 2025ರ 47ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಶತಕದ ಬ್ಯಾಟಿಂಗ್ ವೈಭವಕ್ಕೆ ದಾಖಲೆಗಳು ಪುಡಿಪುಡಿಯಾಗಿವೆ. ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ವೈಭವ್, ಅಘ್ಘಾನಿಸ್ತಾನದ ಈ​ ಬೌಲರ್ ಭವಿಷ್ಯವನ್ನೂ ಬಹುತೇಕ ಅಂತ್ಯಗೊಳಿಸಿದ್ದಾರೆ. ವಿದೇಶದ ಈ ಬೌಲರ್ ಭಾರತದಲ್ಲಿ ಆಡಿರುವ ಕೊನೆಯ ಎರಡು ಟಿ20ಗಳಲ್ಲಿ ಒಟ್ಟು 66 ರನ್ ನೀಡಿದ್ದಾರೆ.

ಜನತ್​ಗೆ 30 ರನ್ ಚಚ್ಚಿದ ವೈಭವ್

ಅಫ್ಘಾನಿಸ್ತಾನದ ವೇಗದ ಬೌಲರ್ ಕರೀಮ್ ಜನತ್​ ಸೋಮವಾರ (ಏಪ್ರಿಲ್ 28) ಐಪಿಎಲ್​​ಗೆ ಗುಜರಾತ್ ಟೈಟಾನ್ಸ್ ಪರ ಪದಾರ್ಪಣೆ ಮಾಡಿದರು. ಸುಮಾರು 10:30ರ ಸುಮಾರಿಗೆ 10ನೇ ಓವರ್​ ಬೌಲಿಂಗ್ ಮಾಡಲು ಜನ್ನತ್​ ಚೆಂಡು ಪಡೆದರು. ಆದರೆ ಕ್ರೀಸ್​ನಲ್ಲಿದ್ದ ವೈಭವ್, ರೌದ್ರಾವತಾರ ತಾಳಿದರು. ಕರೀಮ್ ಜನತ್ ತನ್ನ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದ ಪಂದ್ಯವಲ್ಲೇ ಅಂತ್ಯವನ್ನೂ ವೈಭವ್ ಬರೆದುಬಿಟ್ಟರು. ಈ ಓವರ್​ನ ಮೊದಲ ಎಸೆತದಲ್ಲೇ ಸಿಕ್ಸರ್ ಬಿಟ್ಟುಕೊಟ್ಟ ಜನತ್, ನಂತರ 4, 6, 4, 4, 6 ರನ್ ನೀಡಿದ್ದಾರೆ. ಒಟ್ಟು ಈ ಓವರ್​​ನಲ್ಲಿ 30 ರನ್ ಬಿಟ್ಟುಕೊಟ್ಟರು.

36 ರನ್ ಬಿಟ್ಟುಕೊಟ್ಟಿದ್ದ ಜನತ್

ಮತ್ತೊಂದು ಅಚ್ಚರಿ ಏನೆಂದರೆ ಭಾರತದಲ್ಲಿ ಇದು ಜನತ್ ಅವರ 2ನೇ ಟಿ20 ಪಂದ್ಯ. ಒಂದು ಅಂತಾರಾಷ್ಟ್ರೀಯ ಪಂದ್ಯ ಸೇರಿ. ಜನತ್ ತಾನು ಕೊನೆಯದಾಗಿ ಭಾರತದಲ್ಲಿ ಟಿ20 ಪಂದ್ಯ ಆಡಿದ್ದು ಕಳೆದ ವರ್ಷ ಜನವರಿಯಲ್ಲಿ. ಅಂದು ಭಾರತ-ಅಫ್ಘಾನಿಸ್ತಾನ ನಡುವೆ 3ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. ಪಂದ್ಯದ ಕೊನೆಯ ಓವರ್ ಎಸೆದ ಜನತ್, ಭಾರಿ ದಂಡನೆಗೆ ಒಳಗಾದರು. ರೋಹಿತ್​ ಶರ್ಮಾ ಮತ್ತು ರಿಂಕು ಸಿಂಗ್ ಸೇರಿ ಒಟ್ಟು 36 ರನ್ ಬಾರಿಸಿದರು. ಬಳಿಕ ಏಪ್ರಿಲ್ 28 ರಂದು ಐಪಿಎಲ್​ನಲ್ಲಿ ಕಣಕ್ಕಿಳಿದ ಜನತ್, 2ನೇ ಟಿ20 ಪಂದ್ಯ ಆಡಿದರು.

ಪದಾರ್ಪಣೆ ಓವರ್​ನಲ್ಲೇ 30 ರನ್, ಕೆಟ್ಟ ದಾಖಲೆ

ಒಟ್ಟಾರೆ ಭಾರತದಲ್ಲಿ ಕರೀಮ್ ಜನತ್ ಮಾಡಿದ ಈ ಎರಡು ಓವರ್​ಗಳಲ್ಲಿ ಒಟ್ಟು 66 ರನ್ ಬಿಟ್ಟುಕೊಟ್ಟಿದ್ದಾರೆ. ಜನತ್ ಅವರ ಓವರ್​​​ನಲ್ಲಿ ವೈಭವ್ ಸೂರ್ಯವಂಶಿ ಒಟ್ಟು 30 ರನ್ ಗಳಿಸಿದ ಬಳಿಕ ಶುಭ್ಮನ್ ಗಿಲ್​ಗೆ ಒಂದೇ ಒಂದು ಓವರ್ ನೀಡಲಿಲ್ಲ. ಕರೀಮ್ ಜನತ್ ಹೆಸರಿನಲ್ಲಿ ಇದು ಮುಜುಗರದ ದಾಖಲೆಯೂ ಆಗಿದೆ. ಏಕೆಂದರೆ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಯಾವುದೇ ಬೌಲರ್ ಮೊದಲ ಓವರ್​​ನಲ್ಲಿ 30ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿಲ್ಲ. 2019ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ವರುಣ್ ಚಕ್ರವರ್ತಿ ಕೆಕೆಆರ್​ ವಿರುದ್ಧ 25 ರನ್ ಬಿಟ್ಟುಕೊಟ್ಟಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಮತ್ತೊಂದೆಡೆ, ಅನುಭವಿ ವೇಗಿ ಇಶಾಂತ್ ಶರ್ಮಾ ತಾನು ಎಸೆದ 2 ಓವರ್​ಗಳ ಬೌಲಿಂಗ್​ನಲ್ಲಿ 36 ರನ್ ಬಿಟ್ಟುಕೊಟ್ಟಿದ್ದಾರೆ. ಒಂದೇ ಓವರ್​​ನಲ್ಲಿ 28 ರನ್ ಚಚ್ಚಿದರು. ಈ ಓವರ್​​ನಲ್ಲಿ 3 ಸಿಕ್ಸರ್, 2 ಬೌಂಡರಿ, 2 ವೈಡ್​ಗಳು ಬಂದವು. ಯುವ ಆಟಗಾರನ ಆರ್ಭಟದ ಮುಂದೆ ಅನುಭವಿಯ ತಂತ್ರಗಳು ಕೆಲಸ ಮಾಡಲಿಲ್ಲ. ಇವರ ವೃತ್ತಿಜೀವನಕ್ಕೂ ಕುತ್ತು ತರುವಂತೆ ಮಾಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಯಾವ ತಂಡದ ಬೌಲರ್​ ಮೇಲೆ ಸವಾರಿ ಮಾಡುತ್ತಾರೆ ಎನ್ನುವುದನ್ನು ಕಾದುನೋಡೋಣ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.