ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ರೋಹಿತ್​ ಶರ್ಮಾ, ಖಾಲಿ ಚೆಕ್ ಕೊಟ್ಟಿದ್ದಾರಂತೆ ಕಾವ್ಯಾ ಮಾರನ್; ಅಸಲಿಯತ್ತು ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ರೋಹಿತ್​ ಶರ್ಮಾ, ಖಾಲಿ ಚೆಕ್ ಕೊಟ್ಟಿದ್ದಾರಂತೆ ಕಾವ್ಯಾ ಮಾರನ್; ಅಸಲಿಯತ್ತು ಇಲ್ಲಿದೆ

ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ರೋಹಿತ್​ ಶರ್ಮಾ, ಖಾಲಿ ಚೆಕ್ ಕೊಟ್ಟಿದ್ದಾರಂತೆ ಕಾವ್ಯಾ ಮಾರನ್; ಅಸಲಿಯತ್ತು ಇಲ್ಲಿದೆ

Rohit Sharma Joins Sunrisers Hyderabad : ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಮನಸ್ತಾಪದ ಕಾರಣ ತಂಡವನ್ನು ತೊರೆಯಲು ರೋಹಿತ್​ ಶರ್ಮಾ ಸಿದ್ಧರಾಗಿದ್ದು, ಸನ್​ರೈಸರ್ಸ್ ಹೈದರಾಬಾದ್ ಸೇರುತ್ತಾರೆ ಎಂದು ವರದಿಯಾಗಿದೆ.

ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ರೋಹಿತ್​ ಶರ್ಮಾ, ಖಾಲಿ ಚೆಕ್ ಕೊಟ್ಟಿದ್ದಾರಂತೆ ಕಾವ್ಯಾ ಮಾರನ್; ಅಸಲಿಯತ್ತು ಇಲ್ಲಿದೆ
ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ರೋಹಿತ್​ ಶರ್ಮಾ, ಖಾಲಿ ಚೆಕ್ ಕೊಟ್ಟಿದ್ದಾರಂತೆ ಕಾವ್ಯಾ ಮಾರನ್; ಅಸಲಿಯತ್ತು ಇಲ್ಲಿದೆ

ಮುಂಬೈ ಇಂಡಿಯನ್ಸ್ (Mumbai Indians) ಸತತ 3 ಸೋಲುಗಳ ನಂತರ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾರ್ದಿಕ್ ಪಾಂಡ್ಯ (Hardik Pandya) ಬದಲಿಗೆ ರೋಹಿತ್ ಶರ್ಮಾ (Rohit Sharma) ತಂಡವನ್ನು ಮುನ್ನಡೆಸಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿಯುತ್ತಿದ್ದಾರೆ. ಇದರ ಮಧ್ಯೆ ಹಾರ್ದಿಕ್ ಜೊತೆಗಿನ ನಿರಂತರ ವಾಗ್ವಾದಗಳಿಂದ ರೋಹಿತ್, ಎಂಐಗೆ ಗುಡ್​ಬೈ ಹೇಳಲು ನಿರ್ಧರಿಸಿದ್ದಾರೆ ಎಂಬ ವದಂತಿಗಳು ಹಬ್ಬಿವೆ.

ಇದೀಗ ಮತ್ತೊಂದು ಗಾಸಿಫ್ ಎದ್ದಿದ್ದು, ಮುಂಬೈ ಇಂಡಿಯನ್ಸ್ ತೊರೆಯಲಿರುವ ರೋಹಿತ್​ ಶರ್ಮಾ ಸನ್​ರೈಸರ್ಸ್​ ಹೈದರಾಬಾದ್ (Hyderabad Captaincy) ತಂಡವನ್ನು ಸೇರಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಫ್ರಾಂಚೈಸಿ ಒಡತಿ ಕಾವ್ಯಾ ಮಾರನ್ (Kaviya Maran) ಮತ್ತು ರೋಹಿತ್​ ಶರ್ಮಾ ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಂದು ಹೆಜ್ಜೆ ಮುಂದೆ ರೋಹಿತ್​ಗೆ ಕಾವ್ಯಾ ಮಾರನ್ ಅವರು ಖಾಲಿ ಚೆಕ್ ಕೊಟ್ಟಿದ್ದಾರೆ ಎಂದು ವದಂತಿಗಳು ಹೇಳುತ್ತಿವೆ.

ಮುಂದಿನ ವರ್ಷದಿಂದ ರೋಹಿತ್​ಗೆ ನಾಯಕತ್ವ ನೀಡುವುದಾಗಿ ಹೇಳಿದೆ. ಈಗಾಗಲೇ ವೈರಲ್ ಆಗಿರುವ ವರದಿಗಳಲ್ಲಿ 2025ರ ಐಪಿಎಲ್​ನಲ್ಲಿ ಹಿಟ್​ಮ್ಯಾನ್​ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ. ಹಾರ್ದಿಕ್ ಜೊತೆಗೆ ಮನಸ್ತಾಪ ಹೆಚ್ಚಿರುವ ಕಾರಣ ರೋಹಿತ್​ ಈ ನಿರ್ಧಾರ ಕೈಗೊಂಡಿದ್ದಾರೆ. ಅವರು ಮುಂಬೈ ತಂಡ ತೊರೆದು 2025ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹೆಚ್ಚಾಗುತ್ತಿವೆ.

ಆದರೆ ಈ ವರದಿಗಳೆಲ್ಲೂ ಯಾವುವೂ ಸಹ ಅಧಿಕೃತವಲ್ಲ. ಮುಂಬೈ ಇಂಡಿಯನ್ಸ್ ಮತ್ತು ರೋಹಿತ್​ ಶರ್ಮಾ, ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯಿಂದಲೂ ದೃಢೀಕರಿಸಿಲ್ಲ. ಆದರೆ ಅತ್ಯಂತ ಅಸ್ಪಷ್ಟವಾಗಿ ಸೂಚಿಸುವ ಟ್ವೀಟ್‌ಗಳು ಹರಿದಾಡುತ್ತಿವೆ. ಆದರೆ ಇವೆಲ್ಲವೂ ಸತ್ಯಕ್ಕೆ ದೂರವಾದವು. ಕೆಲ ಕಿಡಿಗೇಡಿಗಳು ಅನಗತ್ಯ ಸುದ್ದಿಗಳನ್ನು ಹರಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳು ವೈರಲ್

ಐಪಿಎಲ್ ನಿಯಮ ಏನು ಹೇಳುತ್ತದೆ, ಯಾವ ರೀತಿ ಆಟಗಾರನನ್ನು ತಂಡಕ್ಕೆ ಕರೆಸಿಕೊಳ್ಳಬೇಕು ಎನ್ನುವುದರ ಜ್ಞಾನ ಇಲ್ಲದೆ ಸುಳ್ಳು ಪೋಸ್ಟ್​​ಗಳ ಮೂಲಕ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಐಪಿಎಲ್ ಟೂರ್ನಿ ನಡೆಯುವಾಗ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ಕರೆಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಐಪಿಎಲ್ ಆಡಳಿತ ಮಂಡಳಿ ಒಪ್ಪಿಗೆ ನೀಡುವುದಿಲ್ಲ.

ಶಿಕ್ಷೆ ತಪ್ಪಿದ್ದಲ್ಲ

ಆದರೆ ರೋಹಿತ್​ ಶರ್ಮಾ ಮುಂದಿನ ಹರಾಜಿಗೆ ತಂಡದಿಂದ ಹೊರ ಬಂದರೆ ಆಗ ಸನ್​ರೈಸರ್ಸ್ ಹೈದರಾಬಾದ್ ಸೇರಿದಂತೆ 10 ತಂಡಗಳು ಸಹ ಅವರನ್ನು ಖರೀದಿಸಲು ಮುಂದಾಗಬಹುದು. ಆದರೆ ಟೂರ್ನಿ ಮಧ್ಯೆ ತಂಡಕ್ಕೆ ಕರೆಸಿಕೊಳ್ಳಲು, ಮಾತುಕತೆ ನಡೆಸಲು ಮುಂದಾದರೆ, ನಿಷೇಧದ ಶಿಕ್ಷೆ ಎದುರಿಸಬೇಕಾಗುತ್ತದೆ. ಆಟಗಾರನ ಜೊತೆಗೆ ಫ್ರಾಂಚೈಸಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಈ ಮೇಲಿನ ವರದಿಗಳು ಸಂಪೂರ್ಣ ಸುಳ್ಳು ಸುದ್ದಿಗಳು.

ಡ್ರೆಸ್ಸಿಂಗ್​ ರೂಮ್​ನಲ್ಲಿ ಬಿರುಕು

ನ್ಯೂಸ್ 24 ವರದಿಯ ಪ್ರಕಾರ, ಮುಂಬೈ ನಾಯಕತ್ವದಲ್ಲಿ ರೋಹಿತ್ ಅವರನ್ನು ಹೇಗೆ ನಡೆಸಿಕೊಳ್ಳಲಾಗಿದೆ ಎಂಬುದರ ಕುರಿತು 'ಅಸಂತೋಷ'ವಿದೆ. ಡ್ರೆಸ್ಸಿಂಗ್ ಕೊಠಡಿಯ ವಾತಾವರಣವು ಉತ್ತಮವಾಗಿಲ್ಲ. ಇದು ತಂಡದ ಆಟಗಾರರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ವರದಿ ಮಾಡಿದೆ. ಈ ಬೆಳವಣಿಗೆ ಕುರಿತು ಫ್ರಾಂಚೈಸಿ ಆಟಗಾರರೊಬ್ಬರು ನ್ಯೂಸ್ 24ಗೆ ಖಚಿತಪಡಿಸಿದ್ದಾರೆ. ಈವರೆಗೂ 3 ಪಂದ್ಯಗಳಲ್ಲಿ ಸೋತಿರುವ ಮುಂಬೈ, ಆವೃತ್ತಿಯ ಮಧ್ಯದಲ್ಲೇ ರೋಹಿತ್​ಗೆ ನಾಯಜಕತ್ವ ಹಸ್ತಾಂತರಿಸಲಿದೆ ಎಂಬ ವರದಿಗಳಿವೆ.

 

Whats_app_banner