ಕಾವ್ಯಾ ಮಾರನ್ ನಿವ್ವಳ ಮೌಲ್ಯ ಎಷ್ಟಿದೆ? ದುಡ್ಡಿನಲ್ಲೇ ಕೋಟೆ ಕಟ್ಟಿದ್ದಾರೆ ಎಸ್​ಆರ್​​ಹೆಚ್ ಮಾಲಕಿಯ ತಂದೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ಕಾವ್ಯಾ ಮಾರನ್ ನಿವ್ವಳ ಮೌಲ್ಯ ಎಷ್ಟಿದೆ? ದುಡ್ಡಿನಲ್ಲೇ ಕೋಟೆ ಕಟ್ಟಿದ್ದಾರೆ ಎಸ್​ಆರ್​​ಹೆಚ್ ಮಾಲಕಿಯ ತಂದೆ!

ಕಾವ್ಯಾ ಮಾರನ್ ನಿವ್ವಳ ಮೌಲ್ಯ ಎಷ್ಟಿದೆ? ದುಡ್ಡಿನಲ್ಲೇ ಕೋಟೆ ಕಟ್ಟಿದ್ದಾರೆ ಎಸ್​ಆರ್​​ಹೆಚ್ ಮಾಲಕಿಯ ತಂದೆ!

ಸನ್​ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಆಸ್ತಿ ಮೌಲ್ಯ ಎಷ್ಟಿದೆ? ಅವರ ಹಿನ್ನೆಲೆ ಏನು? ಐಪಿಎಲ್​ ಜತೆಗೆ ಬೇರೆ ಫ್ರಾಂಚೈಸಿ ಲೀಗ್​ನಲ್ಲಿ ತಂಡ ಹೊಂದಿದ್ದಾರೆ ಎನ್ನುವ ಕುರಿತು ಈ ಮುಂದೆ ತಿಳಿಯೋಣ.

ಕಾವ್ಯಾ ಮಾರನ್ ನಿವ್ವಳ ಮೌಲ್ಯ ಎಷ್ಟಿದೆ? ದುಡ್ಡಿನಲ್ಲೇ ಕೋಟೆ ಕಟ್ಟಿದ್ದಾರೆ ಎಸ್​ಆರ್​​ಹೆಚ್ ಮಾಲಕಿಯ ತಂದೆ!
ಕಾವ್ಯಾ ಮಾರನ್ ನಿವ್ವಳ ಮೌಲ್ಯ ಎಷ್ಟಿದೆ? ದುಡ್ಡಿನಲ್ಲೇ ಕೋಟೆ ಕಟ್ಟಿದ್ದಾರೆ ಎಸ್​ಆರ್​​ಹೆಚ್ ಮಾಲಕಿಯ ತಂದೆ!

ಸನ್​​ರೈಸರ್ಸ್ ಹೈದರಾಬಾದ್ ಐಪಿಎಲ್​ನಲ್ಲಿ ಅತ್ಯಂತ ಭಯಾನಕ ತಂಡಗಳಲ್ಲಿ ಒಂದು. ಶ್ರೀಮಂತ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಮೊದಲ ತಂಡ ಮತ್ತು ಅತಿ ಹೆಚ್ಚು ರನ್ ಚೇಸ್ ಮಾಡಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2024ರಲ್ಲಿ ರನ್ನರ್​ಅಪ್ ಆಗಿದ್ದ ಎಸ್​ಆರ್​ಹೆಚ್, ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದೆ. ಆದರೆ ಈ ತಂಡದ ಮಾಲಕಿ ಕಾವ್ಯಾ ಮಾರನ್ ಕುರಿತು ಸಾಕಷ್ಟು ಮಂದಿಗೆ ತಿಳಿದಿಲ್ಲ. ಅವರ ಆಸ್ತಿ ಮೌಲ್ಯ ಎಷ್ಟಿದೆ? ಅವರ ಹಿನ್ನೆಲೆ ಏನು? ಐಪಿಎಲ್​ ಜೊತೆಗೆ ಬೇರೆ ಫ್ರಾಂಚೈಸಿ ಲೀಗ್​ನಲ್ಲಿ ತಂಡ ಹೊಂದಿದ್ದಾರೆ ಎನ್ನುವ ಕುರಿತು ಈ ಮುಂದೆ ತಿಳಿಯೋಣ.

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಈಸ್ಟರ್ನ್ ಕೇಪ್​ನ ತಂಡ ಹೊಂದಿರುವ ಕಾವ್ಯಾ ಮಾರನ್, 1992ರ ಆಗಸ್ಟ್ 6ರಂದು ಜನಿಸಿದ್ದಾರೆ. ಕಾವ್ಯಾ ಅವರು ಪ್ರಬಲ ವ್ಯಾಪಾರ ಕುಟುಂಬದಿಂದ ಬಂದವರು. ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ ನ ಅಧ್ಯಕ್ಷ ಮತ್ತು ಸ್ಥಾಪಕರು. ತಾಯಿ ಕಾವೇರಿ ಮಾರನ್ ಅವರು ಸೋಲಾರ್ ಟಿವಿ ಕಮ್ಯುನಿಟಿ ರೆಗ್ಯುಲೇಟೆಡ್ ನ ಸಿಇಒ ಆಗಿದ್ದಾರೆ. ಕ್ರಿಕೆಟ್ ಅಲ್ಲದೆ, ಕಾವ್ಯಾ ಸನ್ ಗ್ರೂಪ್​ನ ವಿಶಾಲ ವ್ಯವಹಾರ ಕಾರ್ಯಾಚರಣೆಗಳಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸುತ್ತಾರೆ. ಸನ್ ಟಿವಿ ನೆಟ್​ವರ್ಕ್​ ಸಾಮ್ರಾಜ್ಯ ಕಟ್ಟಿದ್ದಾರೆ.

ಕಾವ್ಯ ಕಲಾನಿಧಿ ಮಾರನ್ ಎಂದೂ ಕರೆಯಲ್ಪಡುವ ಕಾವ್ಯಾ ಮಾರನ್ ಅವರು ಮುರಸೋಲಿ ಮಾರನ್ ಅವರ ಮೊಮ್ಮಗಳು. ದಿವಂಗತ ರಾಜಕಾರಣಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರೊಂದಿಗೂ ಸಂಪರ್ಕ ಹೊಂದಿದ್ದಾರೆ. ಅವರು ಚೆನ್ನೈ ಸೆಂಟ್ರಲ್​ನಿಂದ 4 ಬಾರಿ ಸಂಸತ್ ಸದಸ್ಯರಾಗಿರುವ ದಯಾನಿಧಿ ಮಾರನ್ ಅವರ ಸೋದರ ಸೊಸೆ. ಕಾವ್ಯಾ ಮಾರನ್ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ (B.Com) ಪದವಿಯನ್ನು 2012ರಲ್ಲಿ ಮುಗಿಸಿದರು. 

ನಂತರ ಅವರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದರು. 2016ರಲ್ಲಿ ಇಂಗ್ಲೆಂಡ್​​ನ ಕೊವೆಂಟ್ರಿಯ ಪ್ರತಿಷ್ಠಿತ ವಾರ್ವಿಕ್ ಬಿಸಿನೆಸ್ ಸ್ಕೂಲ್​ನಿಂದ ಎಂಬಿಎ ಪಡೆದರು. ಕಾವ್ಯಾ ಅಧಿಕೃತವಾಗಿ 2018ರಲ್ಲಿ ಎಸ್ಆರ್​ಹೆಚ್​ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ಎಸ್​​ಆರ್​ಹೆಚ್​ ರನ್ನರ್​ಅಪ್​ ಆಗಿತ್ತು. 2024ರಲ್ಲಿ ಮತ್ತೆ ರನ್ನರ್​ಅಪ್ ಆಗಿತ್ತು. ಆದರೆ 2016ರಲ್ಲಿ ಹೈದರಾಬಾದ್ ತಂಡ ಚಾಂಪಿಯನ್ ಆಗಿತ್ತು. 

ಕಾವ್ಯಾ ಮಾರನ್ ನಿವ್ವಳ ಮೌಲ್ಯ

400 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ಅವರು ಭಾರತೀಯ ಕ್ರೀಡೆಯ ಅತ್ಯಂತ ಶಕ್ತಿಶಾಲಿ ಯುವ ಉದ್ಯಮಿಗಳಲ್ಲಿ ಒಬ್ಬರು. ಆದಾಗ್ಯೂ, ಫೋರ್ಬ್ಸ್ ಪ್ರಕಾರ, ಅವರ ತಂದೆಯ ನಿವ್ವಳ ಮೌಲ್ಯವು ಸುಮಾರು 25,000 ಕೋಟಿ ರೂ (2.9 ಬಿಲಿಯನ್ ಡಾಲರ್) ಆಗಿದೆ. 2025ರ ಐಪಿಎಲ್ ಅಭಿಯಾನವನ್ನು ಅದ್ಭುತ ರೀತಿಯಲ್ಲಿ ಪ್ರಾರಂಭಿಸಿದ ಎಸ್​​ಆರ್​​ಹೆಚ್, ತನ್ನ ಆರಂಭಿಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್​​ಗಳನ್ನು ನಾಶಪಡಿಸಿ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. 

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಸ್ಫೋಟಕ ಬ್ಯಾಟ್ಸಮನ್​ಗಳನ್ನು ಹೊಂದಿದೆ. ಈವರೆಗೂ (ಈ ಸುದ್ದಿ ಪಬ್ಲಿಷ್ ಆಗುವ ತನಕ) ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸೋತು 2ರಲ್ಲಿ ಗೆದ್ದಿದೆ. ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner