ರಣಜಿ ಟ್ರೋಫಿ: ಪಂದ್ಯ ಡ್ರಾ ಆಗಿದ್ದರೂ ಆ ಒಂದು ರನ್ನಿಂದ ಸೆಮಿಫೈನಲ್ ಪ್ರವೇಶಿಸಿದ ಕೇರಳ, ಜಮ್ಮು ಮತ್ತು ಕಾಶ್ಮೀರಕ್ಕೆ ನಿರಾಸೆ
ಕನ್ನಡ ಸುದ್ದಿ  /  ಕ್ರಿಕೆಟ್  /  ರಣಜಿ ಟ್ರೋಫಿ: ಪಂದ್ಯ ಡ್ರಾ ಆಗಿದ್ದರೂ ಆ ಒಂದು ರನ್ನಿಂದ ಸೆಮಿಫೈನಲ್ ಪ್ರವೇಶಿಸಿದ ಕೇರಳ, ಜಮ್ಮು ಮತ್ತು ಕಾಶ್ಮೀರಕ್ಕೆ ನಿರಾಸೆ

ರಣಜಿ ಟ್ರೋಫಿ: ಪಂದ್ಯ ಡ್ರಾ ಆಗಿದ್ದರೂ ಆ ಒಂದು ರನ್ನಿಂದ ಸೆಮಿಫೈನಲ್ ಪ್ರವೇಶಿಸಿದ ಕೇರಳ, ಜಮ್ಮು ಮತ್ತು ಕಾಶ್ಮೀರಕ್ಕೆ ನಿರಾಸೆ

ರಣಜಿ ಟ್ರೋಫಿಯಲ್ಲಿ ಕೇರಳ ಅದ್ಭುತ ಸಾಧನೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯ ಡ್ರಾ ಆಗಿದ್ದರೂ ಕೇರಳ ಸೆಮಿಫೈನಲ್ ಪ್ರವೇಶಿಸಿದೆ. ಅದಕ್ಕೆ ಕಾರಣ ಆ ಒಂದು ರನ್.!

ರಣಜಿ ಟ್ರೋಫಿ: ಪಂದ್ಯ ಡ್ರಾ ಆಗಿದ್ದರೂ ಆ ಒಂದು ರನ್ನಿಂದ ಸೆಮಿಫೈನಲ್ ಪ್ರವೇಶಿಸಿದ ಕೇರಳ, ಜಮ್ಮು ಮತ್ತು ಕಾಶ್ಮೀರಕ್ಕೆ ನಿರಾಸೆ
ರಣಜಿ ಟ್ರೋಫಿ: ಪಂದ್ಯ ಡ್ರಾ ಆಗಿದ್ದರೂ ಆ ಒಂದು ರನ್ನಿಂದ ಸೆಮಿಫೈನಲ್ ಪ್ರವೇಶಿಸಿದ ಕೇರಳ, ಜಮ್ಮು ಮತ್ತು ಕಾಶ್ಮೀರಕ್ಕೆ ನಿರಾಸೆ (KCA)

ಕ್ರಿಕೆಟ್​ನಲ್ಲಿ ಪ್ರತಿಯೊಂದು ರನ್ನಿಗೂ ಅದರದ್ದೇ ಆದ ಮಹತ್ವ ಇದೆ ಎನ್ನುವುದಕ್ಕೆ ಇಲ್ಲೊಂದು ಪಂದ್ಯ ಸಾಕ್ಷಿಯಾಗಿದೆ. ಆ ಒಂದೇ ಒಂದು ರನ್ನಿಂದ ತಂಡವೊಂದರ ಸೆಮಿಫೈನಲ್​ ಕನಸು ನುಚ್ಚು ನೂರಾಯಿತು ಎಂದರೆ ನಂಬಲೇಬೇಕು. ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳ ನಡುವಿನ ಸೆಣಸಾಟದಲ್ಲಿ ಇಂತಹದೊಂದು ಸನ್ನಿವೇಶ ನಿರ್ಮಾಣವಾಗಿದೆ. ಫೆಬ್ರವರಿ 12ರ ಬುಧವಾರ ನಡೆದ ರಣಜಿ ಟ್ರೋಫಿಯ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಡ್ರಾ ಮಾಡಿಕೊಂಡ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿದ ಕೇರಳ ಮೊದಲ ಇನ್ನಿಂಗ್ಸ್​​ನಲ್ಲಿ 1 ರನ್ ಮುನ್ನಡೆ ಸಾಧಿಸಿದ ಆಧಾರದ ಮೇಲೆ ಸೆಮಿಫೈನಲ್​ಗೆ ಅರ್ಹತೆ ಪಡೆಯಿತು. ಇದರಿಂದ ಜಮ್ಮ ಮತ್ತು ಕಾಶ್ಮೀರಕ್ಕೆ ನಿರಾಸೆಯಾಯಿತು.

ಕೇರಳ ಎರಡನೇ ಇನ್ನಿಂಗ್ಸ್​​ನಲ್ಲಿ 400 ರನ್​ಗಳ ಗುರಿ ಪಡೆದಿತ್ತು. ಆದರೆ, ಬ್ಯಾಟರ್ಸ್ ರಕ್ಷಣಾತ್ಮಕ ಬ್ಯಾಟಿಂಗ್ ನಡೆಸುವ ಮೂಲಕ ಪಂದ್ಯದ ಐದನೇ ದಿನದಲ್ಲಿ ಡ್ರಾ ಸಾಧಿಸಿದ ಪರಿಣಾಮ ಜಮ್ಮು ಮತ್ತು ಕಾಶ್ಮೀರಕ್ಕೆ ಗೆಲ್ಲಲು ಅವಕಾಶ ನೀಡಲಿಲ್ಲ. ಕೇರಳ ಎರಡನೇ ಇನ್ನಿಂಗ್ಸ್​​​ನಲ್ಲಿ 6 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿತು. ಮೊದಲ ಇನ್ನಿಂಗ್ಸ್​​ನಲ್ಲಿ ಜಮ್ಮು ಮತ್ತು ಕಾಶ್ಮೀರ 280 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಕೇರಳ 281 ರನ್​ ಗಳಿಸಿ 1 ರನ್ ಮುನ್ನಡೆ ಸಾಧಿಸಿತು. ಜಮ್ಮು ತನ್ನ ಎರಡನೇ ಇನ್ನಿಂಗ್ಸ್​​ನಲ್ಲಿ 9 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕೇರಳದ ಬ್ಯಾಟರ್​ಗಳಾದ ಸಲ್ಮಾನ್ ನಿಜಾರ್ (162 ಎಸೆತಗಳಲ್ಲಿ ಅಜೇಯ 44) ಮತ್ತು ಮೊಹಮ್ಮದ್ ಅಜರುದ್ದೀನ್ (118 ಎಸೆತಗಳಲ್ಲಿ ಅಜೇಯ 67) ಪಂದ್ಯವನ್ನು ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸೆಮಿಫೈನಲ್​ನಲ್ಲಿ ಕೇರಳಕ್ಕೆ ಗುಜರಾತ್ ಎದುರಾಳಿ

ಸುಮಾರು 43 ಓವರ್​​ಗಳನ್ನು ಎದುರಿಸಿದ ಇವರಿಬ್ಬರು 7ನೇ ವಿಕೆಟ್​​ಗೆ 115 ರನ್​ ಸೇರಿಸಿದರು. ಸಲ್ಮಾನ್ ಮತ್ತು ಅಜರುದ್ದೀನ್ ಅವರ ಅದ್ಭುತ ಪ್ರದರ್ಶನಕ್ಕೆ ಹೈರಾಣಾದ ಜಮ್ಮು ಮತ್ತು ಕಾಶ್ಮೀರ ವಿಕೆಟ್​ ಪಡೆಯಲು ಪರದಾಡಿತು. ಸಲ್ಮಾನ್ ನಿಜಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ 5ನೇ ಮತ್ತು ಅಂತಿಮ ದಿನದಂದು ಬೆಳಿಗ್ಗೆ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದ್ದ ಕೇರಳಕ್ಕೆ, ಈ ಇಬ್ಬರ ಜೊತೆಯಾಟವು ಪಂದ್ಯವನ್ನು ಡ್ರಾ ಮಾಡಲು ಮತ್ತು ಸೆಮಿಫೈನಲ್ ಪ್ರವೇಶಿಸಲು ನೆರವಾಯಿತು. ಫೆ 17ರಿಂದ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ತಂಡ ಮಾಜಿ ಚಾಂಪಿಯನ್ ಗುಜರಾತ್ ತಂಡವನ್ನು ಎದುರಿಸಲಿದೆ. ರಣಜಿ ಟ್ರೋಫಿಯಲ್ಲಿ ಕೇರಳ ಸೆಮಿಫೈನಲ್ ಪ್ರವೇಶಿಸುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2018-19ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ವಿದರ್ಭ ವಿರುದ್ಧ ಸೋತಿತ್ತು.

ಮುಂಬೈ vs ವಿದರ್ಭ

ಮಂಗಳವಾರ (ಫೆ 11) ನಡೆದ ಕ್ವಾರ್ಟರ್​​ಫೈನಲ್​​ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಇನ್ನಿಂಗ್ಸ್ ಹಾಗೂ 98 ರನ್​​ಗಳಿಂದ ಮಣಿಸಿದ ಗುಜರಾತ್ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ಹರಿಯಾಣವನ್ನು 152 ರನ್​​ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್​​ನಲ್ಲಿ ಮುಂಬೈ ತಂಡ ವಿದರ್ಭ ತಂಡವನ್ನು ಎದುರಿಸಲಿದೆ. ಇನ್ನೊಂದು ಕ್ವಾರ್ಟರ್ ಫೈನಲ್​ನಲ್ಲಿ ವಿದರ್ಭ ತಂಡ ತಮಿಳುನಾಡನ್ನು 198 ರನ್​ಗಳಿಂದ ಸೋಲಿಸಿತ್ತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner