ಓವರ್​ವೊಂದರಲ್ಲಿ 100ಕ್ಕೂ ಅಧಿಕ ಮೀಟರ್​ ದೂರದ 4 ಸಿಕ್ಸರ್​ ಚಚ್ಚಿದ ಪೊಲಾರ್ಡ್; ವಿಡಿಯೋ ನೋಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಓವರ್​ವೊಂದರಲ್ಲಿ 100ಕ್ಕೂ ಅಧಿಕ ಮೀಟರ್​ ದೂರದ 4 ಸಿಕ್ಸರ್​ ಚಚ್ಚಿದ ಪೊಲಾರ್ಡ್; ವಿಡಿಯೋ ನೋಡಿ

ಓವರ್​ವೊಂದರಲ್ಲಿ 100ಕ್ಕೂ ಅಧಿಕ ಮೀಟರ್​ ದೂರದ 4 ಸಿಕ್ಸರ್​ ಚಚ್ಚಿದ ಪೊಲಾರ್ಡ್; ವಿಡಿಯೋ ನೋಡಿ

Kieron Pollard: ಒಂದೇ ಓವರ್​​ನಲ್ಲಿ 4 ಸಿಕ್ಸರ್​​​ಗಳನ್ನು 100ಕ್ಕೂ ಅಧಿಕ ಮೀಟರ್​ ದೂರ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವೆಸ್ಟ್ ಇಂಡೀಸ್​ನ ಕಿರನ್ ಪೊಲಾರ್ಡ್ ಭಾಜನರಾಗಿದ್ದಾರೆ.

ಕಿರನ್ ಪೊಲಾರ್ಡ್ ಬ್ಯಾಟಿಂಗ್.
ಕಿರನ್ ಪೊಲಾರ್ಡ್ ಬ್ಯಾಟಿಂಗ್.

ನಿಕೋಲಸ್ ಪೂರನ್ (Nicholas Pooran) ಭರ್ಜರಿ ಅರ್ಧಶತಕ ಮತ್ತು ನಾಯಕ ಕಿರನ್ ಪೊಲಾರ್ಡ್ (Kieron Pollard) ಅವರ ಭರ್ಜರಿ 5 ಸಿಕ್ಸರ್​​ಗಳ ಸಹಾಯದಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್‌ (CPL 2023) 12ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು (Trinbago Knight Riders) ಭರ್ಜರಿ ಗೆಲುವು ಸಾಧಿಸಿದೆ. ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡದ (St Kitts and Nevis Patriots) ಎದುರು 6 ವಿಕೆಟ್​​ಗಳ ಗೆಲುವು ದಾಖಲಿಸಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ 17.1 ಓವರ್‌ಗಳಲ್ಲೇ ಗುರಿ ಮುಟ್ಟಿತು.

ಟಾಸ್ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್, ಬೌಲಿಂಗ್ ಆಯ್ಕೆ ಮಾಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೇಂಟ್ ಕೀಟ್ಸ್​ ತಂಡವು ನಿಗದಿತ 20 ಓವರ್​​ಗಳಲ್ಲಿ 179 ರನ್​​ಗಳ ಗುರಿ ನೀಡಿತು. ನಾಯಕ ಶೆರ್ಫಾನೆ ರುದರ್​ಫೋರ್ಡ್ (Sherfane Rutherford)​ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. 38 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್​​ಗಳ ನೆರವಿನಿಂದ 62 ರನ್​ಗಳಿಸಿ ತಂಡವು ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು.

ಈ ಗುರಿ ಬೆನ್ನಟ್ಟಿದ ನೈಟ್​ ರೈಡರ್ಸ್​, ನಿಕೋಲಸ್ ಪೂರನ್ ಅವರ ಬೆಂಕಿ-ಬಿರುಗಾಳಿ ಅರ್ಧಶತಕ ಮತ್ತು ಪೊಲಾರ್ಡ್ ಅವರ ಭರ್ಜರಿ 5 ಸಿಕ್ಸರ್​​ಗಳ ಸಹಾಯದಿಂದ ಪಂದ್ಯವನ್ನು ಗೆದ್ದು ಬೀಗಿತು. ಪೂರನ್, 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್​ ಸಿಡಿಸಿ 61 ರನ್ ಚಚ್ಚಿದರೆ, ಪೊಲಾರ್ಡ್​ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇದರಲ್ಲಿ ಐದು ಸಿಕ್ಸರ್​ಗಳಿವೆ ಎಂಬುದು ವಿಶೇಷ.

100 ಮೀಟರ್​ನ 4 ಸಿಕ್ಸರ್​ಗಳು

ಪೊಲಾರ್ಡ್​​​ 15ನೇ ಓವರ್​​​ನಲ್ಲಿ ಭರ್ಜರಿ 4 ಸಿಕ್ಸರ್​​ಗಳನ್ನು ಸ್ಟೇಡಿಯಂನಲ್ಲಿ ಲ್ಯಾಂಡ್ ಮಾಡಿದರು. ಇಜಾರುಲ್ಹಕ್ ನವೀದ್ ಬೌಲಿಂಗ್​​ನಲ್ಲಿ 4 ಎಸೆತಗಳನ್ನು ಸಿಕ್ಸರ್​ ಬಾರಿಸಿದರು. ಈ ಸಿಕ್ಸರ್​​ಗಳ ವಿಶೇಷ ಅಂದರೆ ಈ ನಾಲ್ಕು ಸಿಕ್ಸರ್​​ಗಳೂ 100 ಮೀಟರ್​​ಗೂ ಅಧಿಕ ದೂರ ಹೋಗಿವೆ ಎಂಬುದು. 100ಕ್ಕೂ ಮೀಟರ್​​ಗೂ ಅಧಿಕ ದೂರ ಹೋದ ಸಿಕ್ಸರ್​​ಗಳನ್ನು ನೋಡಿದ್ದೇವೆ. ಆದರೆ ಒಂದೇ ಓವರ್​​​ನಲ್ಲಿ 4 ಸಿಕ್ಸರ್​​​ಗಳನ್ನು 100 ಮೀಟರ್​​ನಲ್ಲಿ ಸಿಡಿಸಿರುವುದು ಇದೇ ಮೊದಲು.

Whats_app_banner