ಕನ್ನಡ ಸುದ್ದಿ  /  Cricket  /  Kieron Pollard Leaves Psl To Attend Anant Ambani Radhika Merchant Pre Wedding In Jamnagar Video Goes Viral Prs

ಮುಕೇಶ್ ಅಂಬಾನಿ ಮಗನ ಮದುವೆಗಾಗಿ ಅರ್ಧದಲ್ಲೇ ಪಿಎಸ್​ಎಲ್​ ತೊರೆದು ಬಂದ ಕೀರಾನ್ ಪೊಲಾರ್ಡ್; ವಿಡಿಯೋ ಇಲ್ಲಿದೆ ನೋಡಿ

Kieron Pollard : ಪಿಎಸ್​ಎಲ್​ನಲ್ಲಿ ಕರಾಚಿ ಕಿಂಗ್ಸ್ ಪರ ಅಗ್ರ ಸ್ಕೋರರ್​ ಆಗಿರುವ ಕೀರಾನ್ ಪೊಲಾರ್ಡ್, ಮುಕೇಶ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಂಡ ತೊರೆದು ಬಂದಿದ್ದಾರೆ.

ಮುಕೇಶ್ ಅಂಬಾನಿ ಮಗನ ಮದುವೆಗಾಗಿ ಅರ್ಧದಲ್ಲೇ ಪಿಎಸ್​ಎಲ್​ ತೊರೆದು ಬಂದ ಕೀರಾನ್ ಪೊಲಾರ್ಡ್
ಮುಕೇಶ್ ಅಂಬಾನಿ ಮಗನ ಮದುವೆಗಾಗಿ ಅರ್ಧದಲ್ಲೇ ಪಿಎಸ್​ಎಲ್​ ತೊರೆದು ಬಂದ ಕೀರಾನ್ ಪೊಲಾರ್ಡ್

ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್​​​ನಲ್ಲಿ (PSL 2024) ಕರಾಚಿ ಕಿಂಗ್ಸ್ ತಂಡದ ಪರ ಆಡುತ್ತಿದ್ದ ವೆಸ್ಟ್ ಇಂಡೀಸ್ ಪರ ತಂಡದ ಮಾಜಿ ಕ್ರಿಕೆಟಿಗ ಕೀರಾನ್ ಪೊಲಾರ್ಡ್, ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಮಧ್ಯದಲ್ಲೇ ಟೂರ್ನಿಯನ್ನು ತೊರೆದು ಬಂದಿದ್ದಾರೆ.

ಗುಜರಾತ್​ನ ಜಾಮ್​ನಗರದಲ್ಲಿ ನಡೆಯುತ್ತಿರುವ ಅದ್ಧೂರಿ ಪ್ರಿ-ವೆಡ್ಡಿಂಗ್​​ನಲ್ಲಿ ವಿಶ್ವದ ಗಣ್ಯರೇ ಹಾಜರಿ ಹಾಕಿದ್ದಾರೆ. ಅದಕ್ಕೆ ಕ್ರಿಕೆಟಿಗರು ಸಹ ಇದಕ್ಕೆ ಹೊರತಾಗಿಲ್ಲ. ಭಾರತ ಸೇರಿದಂತೆ ವಿದೇಶಿ ಕ್ರಿಕೆಟಿರೂ ಸಹ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ರೋಹಿತ್ ಶರ್ಮಾ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿ ವಿಶ್ವದ ಅನೇಕ ಅಗ್ರ ಮಾನ್ಯ ಕ್ರಿಕೆಟಿಗರು ಕಾಣಿಸಿಕೊಂಡರು.

ಆದರೆ, ಪಿಎಸ್​ಎಲ್​ನಲ್ಲಿ ಕರಾಚಿ ಕಿಂಗ್ಸ್ ಪರ ಅಗ್ರ ಸ್ಕೋರರ್​ ಆಗಿರುವ ಪೊಲಾರ್ಡ್, ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಂಡ ತೊರೆದು ಬಂದಿದ್ದಾರೆ. ಆದರೆ ಈ ಸಮಾರಂಭ ಮುಕ್ತಾಯದ ನಂತರ ಮತ್ತೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಶಾನ್ ಮಸೂದ್ ನೇತೃತ್ವದ ತಂಡದ ಪರ ಆಡಿರುವ ಐದು ಪಂದ್ಯಗಳಲ್ಲಿ 36 ವರ್ಷದ ಆಲ್​​ರೌಂಡರ್ 98ರ ಸರಾಸರಿ, 161.98 ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದ್ದಾರೆ.

ಮಾರ್ಚ್ 1ರಂದು ಶುಕ್ರವಾರ ಪೊಲಾರ್ಡ್ ಅವರು ಪೂರ್ವ ವಿವಾಹಕ್ಕಾಗಿ ಜಾಮ್‌ನಗರಕ್ಕೆ ಆಗಮಿಸಿದ ಫೋಟೋಗಳು ಮತ್ತು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಫೆಬ್ರವರಿ 29 ರಂದು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಕರಾಚಿ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಪೊಲಾರ್ಡ್, ಭಾನುವಾರ (ಮಾರ್ಚ್ 3) ಮುಲ್ತಾನ್ ಸುಲ್ತಾನ್ಸ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾರ್ಚ್ 4 ರಂದು ರಾವಲ್ಪಿಂಡಿಯಲ್ಲಿ ತಂಡವನ್ನು ಸೇರುವ ನಿರೀಕ್ಷೆಯಿದೆ.

ಪೊಲಾರ್ಡ್ ಮುಂಬೈನ ಬ್ಯಾಟಿಂಗ್ ಕೋಚ್

ಅಂಬಾನಿ ಒಡೆತನದ ಐಪಿಎಲ್​ನ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್​ ಕೋಚ್​ ಕೀರಾನ್ ಪೊಲಾರ್ಡ್ ಸೇವೆ ಸಲ್ಲಿಸುತ್ತಿದ್ದಾರೆ. ಕೋಚ್ ಆಗುವುದಕ್ಕೂ ಮುನ್ನ ಅದೇ ತಂಡದ ಪರ ಆಲ್​ರೌಂಡರ್​ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ, ಮುಂಬೈ ಫ್ರಾಂಚೈಸಿಯೊಂದಿಗೆ ಅಪಾರ ಸಂಬಂಧ ಹೊಂದಿದ್ದಾರೆ. ಐಪಿಎಲ್ ಮಾತ್ರವಲ್ಲದೆ ಅಂಬಾನಿ ಒಡೆತದಲ್ಲಿರುವ ಸೌತ್ ಆಫ್ರಿಕಾದ ಟಿ20 ಲೀಗ್​ನ ಎಂಐ ಕೇಪ್ ಟೌನ್​ ತಂಡದ ಪರ ಕಣಕ್ಕಿಳಿಯಳಿಯುತ್ತಿದ್ದಾರೆ. ಹಾಗೆಯೇ ಮೇಜರ್ ಕ್ರಿಕೆಟ್​ ಲೀಗ್ ಪರವೂ ಆಡುತ್ತಿದ್ದಾರೆ.

ಐಪಿಎಲ್‌ನಲ್ಲಿ ಭಾಗವಹಿಸಿದ ಅತ್ಯುತ್ತಮ ಸಾಗರೋತ್ತರ ಆಟಗಾರರಲ್ಲಿ ಒಬ್ಬರಾದ ವೆಸ್ಟ್ ಇಂಡೀಸ್ ಮಾಜಿ ನಾಯಕ, 2010 ರಿಂದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 13 ವರ್ಷಗಳ ಕಾಲ ಅಂಬಾನಿ ಒಡೆತನದ ತಂಡವನ್ನು ಆಟಗಾರರಾಗಿ ಪ್ರತಿನಿಧಿಸಿದ್ದರು. ನಂತರ 2023ರ ಋತುವಿನ ಆರಂಭದಲ್ಲಿ ಅವರು ರೋಹಿತ್ ಶರ್ಮಾ ನೇತೃತ್ವದ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡರು. ಅವರೊಂದಿಗೆ ಈಗಲೂ ಸಂಬಂಧ ಮುಂದುವರೆದಿದೆ.

ಬಲಗೈ ಬ್ಯಾಟರ್ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿಲ್ಲ. ಪಿಎಸ್​ಎಲ್​​ 2024 ರಲ್ಲಿ ಕಾಣಿಸಿಕೊಳ್ಳುವ ಮೊದಲು ಅವರು ಎಸ್​ಎಟಿ20ನಲ್ಲಿ ಎಂಐ ಕೇಪ್ ಟೌನ್ ಮತ್ತು ಐಎಲ್​ಟಿ20ನಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಪ್ರತಿನಿಧಿಸಿದರು. ಅಲ್ಲದೆ, ಐಎಲ್​ಟಿ20 ಫೈನಲ್​ನಲ್ಲಿ ನಿಕೋಲಸ್ ಪೂರನ್ ನಾಯಕತ್ವದಲ್ಲಿ ಎಂಐ MI ತಂಡವು ದುಬೈ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.