ಕನ್ನಡ ಸುದ್ದಿ  /  ಕ್ರಿಕೆಟ್  /  Video: ಟಾಸ್‌ಗೂ ಮುನ್ನ ನಾಣ್ಯಕ್ಕೆ ಕಿಸ್ ಮಾಡಿದ ಶ್ರೇಯಸ್ ಅಯ್ಯರ್; ಗೆದ್ದಿದ್ದು ಮಾತ್ರ ಸಂಜು ಸ್ಯಾಮ್ಸನ್

Video: ಟಾಸ್‌ಗೂ ಮುನ್ನ ನಾಣ್ಯಕ್ಕೆ ಕಿಸ್ ಮಾಡಿದ ಶ್ರೇಯಸ್ ಅಯ್ಯರ್; ಗೆದ್ದಿದ್ದು ಮಾತ್ರ ಸಂಜು ಸ್ಯಾಮ್ಸನ್

Shreyas Iyer: ಟಾಸ್ ಪ್ರಕ್ರಿಯೆ ಕೆಕೆಆರ್‌ ನಾಯಕ ಶ್ರೇಯಸ್ ಅಯ್ಯರ್ ಕಾಯಿನ್‌ಗೆ ಕಿಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಟಾಸ್‌ ಪ್ರಕ್ರಿಯೆ ನಡೆಸುತ್ತಿದ್ದ ಸಂಜಯ್ ಮಂಜ್ರೇಕರ್, ಈ ಬಗ್ಗೆ ಎದುರಾಳಿ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ತಿಳಿಸಿದಾಗ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟಾಸ್‌ಗೂ ಮುನ್ನ ನಾಣ್ಯಕ್ಕೆ ಕಿಸ್ ಮಾಡಿದ ಶ್ರೇಯಸ್ ಅಯ್ಯರ್
ಟಾಸ್‌ಗೂ ಮುನ್ನ ನಾಣ್ಯಕ್ಕೆ ಕಿಸ್ ಮಾಡಿದ ಶ್ರೇಯಸ್ ಅಯ್ಯರ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಏಪ್ರಿಲ್‌ 16ರ ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ಮೊದಲಿಗೆ ಬ್ಯಾಟಿಂಗ್‌ಗೆ ಇಳಿಯಿತು. ಟಾಸ್‌ ಪ್ರಕ್ರಿಯೆ ವೇಳೆ ಕೆಕೆಆರ್‌ ನಾಯಕ ಶ್ರೇಯಸ್ ಅಯ್ಯರ್ ಭಿನ್ನ ರೀತಿಯಲ್ಲಿ ಅದೃಷ್ಟ ಪರೀಕ್ಷಿಸಿದರು. ಆದರೂ, ಟಾಸ್‌ ಮಾತ್ರ ಅವರ ಪರ ಬೀಳಲಿಲ್ಲ. ನಾಣ್ಯವನ್ನು ಚಿಮ್ಮಿಸುವುದಕ್ಕೂ ಮೊದಲು ಅದಕ್ಕೆ ಕಿಸ್‌ ಮಾಡುವ ಮೂಲಕ ಭಿನ್ನ ರೀತಿಯಲ್ಲಿ ಟಾಸ್‌ ಪ್ರಕ್ರಿಯೆಯಲ್ಲಿ ಭಾಗಿಯಾದರು. ಆದರೆ ಟಾಸ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ನಾಯಕ ಸಂಜು ಸ್ಯಾಮ್ಸನ್‌ ಚೇಸಿಂಗ್‌ ಆಯ್ಕೆ ಮಾಡಿದರು.

ಟ್ರೆಂಡಿಂಗ್​ ಸುದ್ದಿ

ಈಡನ್ ಗಾರ್ಡನ್ಸ್‌ ಮೈದಾನಲ್ಲಿ ಸಾಮಾನ್ಯವಾಗಿ ತಂಡಗಳು ಚೇಸಿಂಗ್‌ಗಾಗಿ ಎದುರು ನೋಡುತ್ತವೆ. ಕಳೆದ ಪಂದ್ಯಗಳಲ್ಲಿ ಈ ಮೈದಾನದಲ್ಲಿ ರನ್ ಮಳೆ ಹರಿದು ಬಂದಿತ್ತು. ಹೀಗಾಗಿ ಉಭಯ ತಂಡಗಳಿಗೂ ಟಾಸ್ ನಿರ್ಣಾಯಕವಾಗಿತ್ತು.

ಇದು ಟಾಸ್ ಪ್ರಕ್ರಿಯೆಯನ್ನು ಸಂಜಯ್ ಮಂಜ್ರೇಕರ್ ನಡೆಸಿಕೊಟ್ಟರು. ಅಯ್ಯರ್‌ ನಾಣ್ಯಕ್ಕೆ ಕಿಸ್‌ ಮಾಡುವುದನ್ನು ಎದುರಾಳಿ ನಾಯಕ ಸಂಜು ಸ್ಯಾಮ್ಸನ್ ಗಮನಿಸಿರಲಿಲ್ಲ. ಈ ಬಗ್ಗೆ ಮಂಜ್ರೇಕರ್ ಅವರು ಹೇಳಿದಾಗ, ಆರ್‌ಆರ್ ನಾಯಕ ಅಚ್ಚರಿಯಿಂದ ನಕ್ಕರು. ಆ ಬಳಿಕ ಕಿಸ್‌ ಮಾಡಿದ ಬಗ್ಗೆ ಅಯ್ಯರ್ ಬಳಿ ಕೇಳಿದಾಗ, ಅದು ಕಿಸ್‌ ಮಾಡಿದ್ದಲ್ಲ. ಫ್ಲೈಯಿಂಗ್ ಕಿಸ್ ಎಂದು ಕೆಕೆಆರ್ ನಾಯಕ ನಗುತ್ತಾ ಹೇಳಿದರು.

ಇದನ್ನೂ ಓದಿ | ಆರ್​​ಸಿಬಿ ತಂಡದ ಮಾಲೀಕರು ಯಾರು; 2023ರಲ್ಲಿ ಬಂದ ಆದಾಯವೆಷ್ಟು? ನಿವ್ವಳ ಮೌಲ್ಯ, ಹಿನ್ನೆಲೆಯ ವಿವರ ಇಲ್ಲಿದೆ

ಇಂದಿನ ಪಂದ್ಯಕ್ಕೆ ಜೋಸ್ ಬಟ್ಲರ್ ಮತ್ತು ರವಿಚಂದ್ರನ್ ಅಶ್ವಿನ್ ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಿಕೊಂಡಿದ್ದಾರೆ. ಬಟ್ಲರ್ ಇಂಪ್ಯಾಕ್ಟ್ ಪ್ಲೇಯರ್ಸ್‌ ಪಟ್ಟಿಯಲ್ಲಿದ್ದು, ನೇರವಾಗಿ ಎರಡನೇ ಇನ್ನಿಂಗ್ಸ್‌ ವೇಳೆ ಬ್ಯಾಟಿಂಗ್‌ ಮಾಡಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಕುಲ್ದೀಪ್ ಸೇನ್, ಯುಜ್ವೇಂದ್ರ ಚಾಹಲ್.

ಆರ್‌ಆರ್ ಇಂಪ್ಯಾಕ್ಟ್ ಆಯ್ಕೆಗಳು: ಜೋಸ್ ಬಟ್ಲರ್, ಕೊಹ್ಲರ್-ಕಾಡ್ಮೋರ್, ಶುಭಂ ದುಬೆ, ನವದೀಪ್ ಸೈನಿ, ನಂಡ್ರೆ ಬರ್ಗರ್.

ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಕೆಕೆಆರ್ ಇಂಪ್ಯಾಕ್ಟ್ ಆಯ್ಕೆಗಳು: ಸುಯಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್.

IPL_Entry_Point