ಕೆಕೆಆರ್ vs ಆರ್‌ಸಿಬಿ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಪಿಚ್ ವರದಿ; ಯಾರಿಗೆ ಲಾಭ, ಹಿಂದಿನ ದಾಖಲೆಗಳು ಏನು ಹೇಳುತ್ತವೆ?
ಐಪಿಎಲ್ 2025ರ ಮೊದಲ ಪಂದ್ಯ ಮಾರ್ಚ್ 22ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ವಿಶ್ವದ ಅತ್ಯಂತ ವರ್ಣರಂಜಿತ ಲೀಗ್ ಐಪಿಎಲ್ 18ನೇ ಆವೃತ್ತಿಯು ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪ್ರಾರಂಭವಾಗಲಿದೆ. ಕೆಕೆಆರ್ ಮತ್ತು ಆರ್‌ಸಿಬಿ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಆದರೆ ಈ ಪಂದ್ಯದ ಮೇಲೆ ಅಡ್ಡಿಪಡಿಸಿದೆ. ಪ್ರಸ್ತುತ ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದ್ದು, ಪಂದ್ಯವನ್ನು ರದ್ದುಗೊಳಿಸಬಹುದು ಎಂಬ ವರದಿಗಳಿವೆ. ಈ ಮಧ್ಯೆ ಪಿಚ್ ವರದಿ ಹೇಗಿದೆ, ಹೆಡ್ ಟು ಹೆಡ್ ರೆಕಾರ್ಡ್ ವಿವರ ಇಂತಿದೆ.
ಐತಿಹಾಸಿಕ ಮೈದಾನದ ಪಿಚ್ ಬ್ಯಾಟರ್ಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಆದರೆ ಆರಂಭದಲ್ಲಿ ಬೌಲರ್ಗಳು ಕೊಂಚ ನೆರವು ಪಡೆಯಲಿದ್ದಾರೆ. ಹೆಚ್ಚಿನ ತಂಡಗಳು ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಆಯ್ಕೆ ಮಾಡಿರುವುದೇ ಅಧಿಕ. ಏಕೆಂದರೆ ಈ ಮೈದಾನದಲ್ಲಿ ರನ್ ಚೇಸ್ ಸಾಕಷ್ಟು ಸುಲಭ. ಈ ರನ್ ಚೇಸ್ನಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಬಿಸಿಸಿಐನ ಹೊಸ ನಿಯಮದಿಂದಾಗಿ ನಾಯಕರ ಆಲೋಚನೆ ಬದಲಾಗಬಹುದು. ಬಿಸಿಸಿಐನ ಹೊಸ ನಿಯಮಗಳ ಪ್ರಕಾರ, ಮೈದಾನದಲ್ಲಿ ಇಬ್ಬನಿ ಹೆಚ್ಚಾಗಿದ್ದರೆ, ಅಂಪೈರ್ಗಳು 2ನೇ ಇನ್ನಿಂಗ್ಸ್ನಲ್ಲಿ 10ನೇ ಓವರ್ ನಂತರ ಹೊಸ ಚೆಂಡನ್ನು ಬೌಲಿಂಗ್ ತಂಡಕ್ಕೆ ಹಸ್ತಾಂತರಿಸಬಹುದು.
ಈಡನ್ ಗಾರ್ಡನ್ಸ್ ಐಪಿಎಲ್ ಅಂಕಿಅಂಶಗಳು ಮತ್ತು ದಾಖಲೆಗಳು
ಪಂದ್ಯಗಳು - 93
ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಪಂದ್ಯಗಳು - 38 (40.86%)
ಚೇಸಿಂಗ್‌ನಲ್ಲಿ ಗೆದ್ದ ಪಂದ್ಯಗಳು - 55 (59.14%)
ಟಾಸ್ ಗೆದ್ದ ನಂತರ ಜಯಿಸಿದ ಪಂದ್ಯಗಳು – 49 (52.69%)
ಟಾಸ್ ಸೋತ ನಂತರ ಗೆದ್ದ ಪಂದ್ಯಗಳು – 44 (47.31%)
ಅತ್ಯಧಿಕ ಸ್ಕೋರ್ - 262/2
ಕಡಿಮೆ ಸ್ಕೋರ್ - 49
ಚೇಸಿಂಗ್‌ನಲ್ಲಿ ಅತ್ಯಧಿಕ ಸ್ಕೋರ್ - 262/2
ಮೊದಲು ಬ್ಯಾಟಿಂಗ್ ಮಾಡಿದಾಗ ಸರಾಸರಿ ಸ್ಕೋರ್- 163
ಕೆಕೆಆರ್ vs ಆರ್‌ಸಿಬಿ ಮುಖಾಮುಖಿ
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್‌ನಲ್ಲಿ ಈವರೆಗೆ 34 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಕೆಕೆಆರ್ 20 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 14 ಪಂದ್ಯಗಳನ್ನು ಗೆದ್ದಿದೆ. ಮುಂದಿನ ಪಂದ್ಯ ಕೆಕೆಆರ್‌ನ ತವರಿನಲ್ಲಿ ನಡೆಯಲಿದ್ದು, ಅವರಿಗೆ ತಮ್ಮ ಮುನ್ನಡೆ ಹೆಚ್ಚಿಸಿಕೊಳ್ಳುವ ಅವಕಾಶವಿರುತ್ತದೆ.
ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು
ಕೆಕೆಆರ್: ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್ (ಉಪನಾಯಕ), ಮೊಯಿನ್ ಅಲಿ, ವೈಭವ್ ಅರೋರಾ, ಕ್ವಿಂಟನ್ ಡಿ ಕಾಕ್, ಹರ್ಷಿತ್ ರಾಣಾ, ಸ್ಪೆನ್ಸರ್ ಜಾನ್ಸನ್, ಮಾಯಾಂಕ್ ಮಾರ್ಕಂಡೆ, ಸುನಿಲ್ ನರೈನ್, ಆನ್ರಿಚ್ ನೋಕಿಯಾ, ಮನೀಶ್ ಪಾಂಡೆ, ರೋವ್ಮನ್ ಪೊವೆಲ್, ಅಂಗ್ಕ್ರಿಶ್ ರಘುವಂಶಿ, ರಹಮಾನಲ್ಲಾ ಗುರ್ಬಾಜ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಆಂಡ್ರೆ ರಸೆಲ್, ಚೇತನ್ ಸಕರಿಯಾ, ರಿಂಕು ಸಿಂಗ್, ಲವನಿತ್ ಸಿಸೋಡಿಯಾ, ವರುಣ್ ಚಕ್ರವರ್ತಿ.
ಆರ್‌ಸಿಬಿ: ರಜತ್ ಪಾಟೀದಾರ್ (ನಾಯಕ), ಅಭಿನಂದನ್ ಸಿಂಗ್, ಜೇಕಬ್ ಬೆಥೆಲ್, ಮನೋಜ್ ಭಂಡಗೆ, ಸ್ವಸ್ತಿಕ್ ಚಿಕಾರ, ಟಿಮ್ ಡೇವಿಡ್, ಜೋಶ್ ಹೇಜಲ್‌ವುಡ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಹಿತ್ ರಾಠಿ, ಲುಂಗಿ ಎನ್‌ಗಿಡಿ, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ರಸಿಕ್ ಸಲಾಂ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ನುವಾನ್ ತುಷಾರ, ಯಶ್ ದಯಾಳ್.
