ಕನ್ನಡ ಸುದ್ದಿ  /  ಕ್ರಿಕೆಟ್  /  Kkr Vs Srh Highlights:​ 4ನೇ ಬಾರಿಗೆ ಫೈನಲ್ ಪ್ರವೇಶಿಸಿದ ಕೆಕೆಆರ್​; ಸೋತ ಎಸ್​​ಆರ್​​ಹೆಚ್​​ಗೆ ಮತ್ತೊಂದು ಅವಕಾಶ

:​ 4ನೇ ಬಾರಿಗೆ ಫೈನಲ್ ಪ್ರವೇಶಿಸಿದ ಕೆಕೆಆರ್​; ಸೋತ ಎಸ್​​ಆರ್​​ಹೆಚ್​​ಗೆ ಮತ್ತೊಂದು ಅವಕಾಶ

KKR vs SRH Highlights:​ 4ನೇ ಬಾರಿಗೆ ಫೈನಲ್ ಪ್ರವೇಶಿಸಿದ ಕೆಕೆಆರ್​; ಸೋತ ಎಸ್​​ಆರ್​​ಹೆಚ್​​ಗೆ ಮತ್ತೊಂದು ಅವಕಾಶ

05:46 PM ISTMay 21, 2024 10:49 PM Jayaraj
  • twitter
  • Share on Facebook
05:46 PM IST

KKR vs SRH Qualifier 1 Highlights: 17ನೇ ಆವೃತ್ತಿಯ ಐಪಿಎಲ್​ನ ಮೊದಲ ಕ್ವಾಲಿಫೈಯರ್​​​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಜಯಭೇರಿ ಬಾರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್​​ ನಾಲ್ಕನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿದೆ. ಸೋತ ಎಸ್​ಆರ್​​ಹೆಚ್​ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಕಾದಾಟ ನಡೆಸಲಿವೆ.

Tue, 21 May 202405:41 PM IST

4ನೇ ಬಾರಿಗೆ ಫೈನಲ್ ಪ್ರವೇಶಿಸಿದ ಕೆಕೆಆರ್​

2024ರ ಐಪಿಎಲ್​ ಟೂರ್ನಿಯುದ್ದಕ್ಕೂ ಸನ್​ರೈಸರ್ಸ್ ತಂಡವನ್ನು ‘ರನ್​’ರೈಸರ್ಸ್ ಎಂದೇ ಕರೆಸಿಕೊಳ್ಳುತ್ತಿತ್ತು. ಮೊದಲ ಎಸೆತದಿಂದಲೇ ಬೌಂಡರಿ, ಸಿಕ್ಸರ್​ಗಳಿಂದಲೇ ಇನ್ನಿಂಗ್ಸ್​ ಆರಂಭಿಸುತ್ತಿದ್ದ ಎಸ್​​ಆರ್​ಹೆಚ್​, ಕ್ವಾಲಿಫೈಯರ್​​ನಲ್ಲಿ ಠುಸ್ ಆಗಿದೆ.

17ನೇ ಆವೃತ್ತಿಯ ಐಪಿಎಲ್​ನ ಕ್ವಾಲಿಫೈಯರ್​-1 ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕು ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿತು. ಸೋತು ಮೂರನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾದ ಎಸ್​​ಆರ್​​ಹೆಚ್​ ತಂಡಕ್ಕೆ ಮತ್ತೊಂದು ಅವಕಾಶ ಇದೆ. ಎಲಿಮಿನೇಟರ್​​​ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಹೈದರಾಬಾದ್ ಸೆಣಸಾಟ ನಡೆಸಲಿದೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್​​ಆರ್​​ಹೆಚ್​, ನೀರಸ ಬ್ಯಾಟಿಂಗ್​ ನಡೆಸಿತು. ರಾಹುಲ್ ತ್ರಿಪಾಠಿ ಅರ್ಧಶತಕ ಸಿಡಿಸಿದ ಹೊರತಾಗಿಯೂ 19.3 ಓವರ್​​​​ಗಳಲ್ಲಿ159 ರನ್ ಗಳಿಸಲಷ್ಟೇ ಶಕ್ತವಾಯಿತು. ಮಿಚೆಲ್ ಸ್ಟಾರ್ಕ್​ ಮೂರು ವಿಕೆಟ್ ಪಡೆದು ಮಿಂಚಿದರು. 160 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​, 13.4 ಓವರ್​​ಗಳಲ್ಲೇ ಗೆದ್ದು ಬೀಗಿತು. ಅಂದರೆ ಇನ್ನೂ 38 ಎಸೆತಗಳನ್ನು ಉಳಿಸಿತು.

ಶ್ರೇಯಸ್ ಅಯ್ಯರ್ (58*) ಮತ್ತು ವೆಂಕಟೇಶ್ ಅಯ್ಯರ್ (51*) ತಲಾ ಅರ್ಧಶತಕ ಸಿಡಿಸಿ ಮಿಂಚಿದರು. 2012, 2014, 2021ರ ನಂತರ ಫೈನಲ್ ಪ್ರವೇಶಿಸಿದೆ. ಆದರೆ 2012 ಮತ್ತು 2014ರಲ್ಲಿ ಟ್ರೋಫಿ ಗೆದ್ದಿದ್ದ ಕೆಕೆಆರ್, 2021ರಲ್ಲಿ ರನ್ನರ್​​ಅಪ್ ಆಗಿತ್ತು. ಈಗ ಗೌತಮ್ ಗಂಭೀರ್ ನಂತರ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತ್ತಾ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಮೇ 26ರಂದು ಕೆಕೆಆರ್​, ಫೈನಲ್ ಪಂದ್ಯವನ್ನು ಆಡಲಿದೆ.

Tue, 21 May 202405:08 PM IST

ಕೋಲ್ಕತ್ತಾ 129/2

12‌ ಓವರ್‌ ಬಳಿಕ ಕೋಲ್ಕತ್ತಾ 129/2

ಶ್ರೇಯಸ್‌ ಅಯ್ಯರ್‌ ಹಾಗೂ ವೆಂಕಟೇಶ್ ಅಯ್ಯರ್‌ ಅರ್ಧಶತಕದ ಜೊತೆಯಾಟ

Tue, 21 May 202405:00 PM IST

ಕೆಕೆಆರ್‌ 107 ರನ್‌

10 ಓವರ್‌ ಅಂತ್ಯಕ್ಕೆ ಕೆಕೆಆರ್‌ 107 ರನ್‌ ಗಳಿಸಿದೆ. ತಂಡ 2 ವಿಕೆಟ್‌ ಮಾತ್ರ ಕಳೆದುಕೊಂಡಿದ್ದು, ಭರ್ಜರಿ ಫಾರ್ಮ್‌ನಲ್ಲಿದೆ.

Tue, 21 May 202404:55 PM IST

ಗೆಲುವಿನತ್ತ ಕೋಲ್ಕತ್ತಾ

9 ಓವರ್ ಮುಕ್ತಾಯಕ್ಕೆ 96 ರನ್ ಗಳಿಸಿದೆ. ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಎಸ್​​ಆರ್​ಹೆಚ್​ - 159 (19.3)

ಕೆಕೆಆರ್​​ - 96/2 (9)

ಗೆಲುವಿಗೆ ಬೇಕು - 64 ರನ್

Tue, 21 May 202404:45 PM IST

ಸುನಿಲ್ ನರೇನ್ ಔಟ್

ಪವರ್​ ಪ್ಲೇ ಮುಗಿದ ನಂತರ 7ನೇ ಓವರ್​​ನ 2ನೇ ಎಸೆತದಲ್ಲಿ ಸುನಿಲ್ ನರೇನ್ ಔಟಾದರು. ಪ್ಯಾಟ್ ಕಮಿನ್ಸ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿದ ನರೇನ್ 16 ಎಸೆತಗಳಲ್ಲಿ 4 ಬೌಂಡರಿ ಸಹಿತ 21 ರನ್ ಗಳಿಸಿದರು.

Tue, 21 May 202404:40 PM IST

ಪವರ್​​ಪ್ಲೇ ಮುಕ್ತಾಯ

ಪವರ್​​ಪ್ಲೇ ಮುಕ್ತಾಯಗೊಂಡಿದೆ. 6 ಓವರ್​ ಮುಗಿದಿದ್ದು 63ಕ್ಕೆ 1 ವಿಕೆಟ್ ಕಳೆದುಕೊಂಡಿದೆ. ಸುನಿಲ್ ಮರೇನ್ 17 (14), ವೆಂಕಟೇಶ್ ಅಯ್ಯರ್ 12(8)

ಎಸ್​​ಆರ್​ಹೆಚ್​ - 159 (19.3)

ಕೆಕೆಆರ್​​ - 63/1 (6)

ಗೆಲುವಿಗೆ ಬೇಕು - 97 ರನ್

Tue, 21 May 202404:23 PM IST

ಮೊದಲ ವಿಕೆಟ್ ಪತನ, ಗುರ್ಬಾಜ್ ಔಟ್

ಭರ್ಜರಿ ಆರಂಭ ಪಡೆದ ಕೆಕೆಆರ್​​ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. 14 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 23 ರನ್ ಗಳಿಸಿ ರೆಹಮಾನುಲ್ಲಾ ಗುರ್ಬಾಜ್ ಅವರು ನಟರಾಜನ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿದರು.

Tue, 21 May 202404:15 PM IST

ಕಮಿನ್ಸ್​ಗೆ 20 ರನ್ ಚಚ್ಚಿದ ಕೆಕೆಆರ್​

ಪ್ಯಾಟ್ ಕಮಿನ್ಸ್ ಎಸೆದ 20ನೇ ಓವರ್​​ನಲ್ಲಿ ನರೇನ್ ಮತ್ತು ಗುರ್ಬಾಜ್ ಸೇರಿ 20 ರನ್ ಚಚ್ಚಿದರು.

ಎಸ್​ಆರ್​ಹೆಚ್ -​ 159 (19.3)

ಕೆಕೆಆರ್​ - 26/0 (2)

Tue, 21 May 202404:06 PM IST

ಮೊದಲ ಓವರ್ ಮುಕ್ತಾಯ 6/0 (1)

ಮೊದಲ ಓವರ್ ಮುಕ್ತಾಯಕ್ಕೆ ಕೆಕೆಆರ್​ _ ರನ್ ಗಳಿಸಿದೆ. ಗುರ್ಬಾಜ್ ಒಂದು ಬೌಂಡರಿ ಸಿಡಿಸಿದರು.

Tue, 21 May 202404:04 PM IST

ಕೆಕೆಆರ್​ ಬ್ಯಾಟಿಂಗ್​ ಆರಂಭ

ಕೆಕೆಆರ್ ಬ್ಯಾಟಿಂಗ್ ಆರಂಭಗೊಂಡಿದೆ. 160 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಸಜ್ಜಾಗಿದೆ. ರೆಹಮಾನುಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೇನ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಭುವನೇಶ್ವರ್​ ಕುಮಾರ್​ ಬೌಲಿಂಗ್ ಮಾಡುತ್ತಿದ್ದಾರೆ.

Tue, 21 May 202403:51 PM IST

ಯಾರಿಗೆ ಫೈನಲ್ ಟಿಕೆಟ್​?

ಕ್ವಾಲಿಫೈಯರ್ -1 ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು 159 ರನ್​ಗಳಿಗೆ ಆಲೌಟ್ ಆಗಿದೆ. ಕೆಕೆಆರ್​ ನಾಲ್ಕನೇ ಬಾರಿಗೆ ಐಪಿಎಲ್​ ಫೈನಲ್ ಪ್ರವೇಶಿಸಲು 20 ಓವರ್​ಗಳಲ್ಲಿ 160 ರನ್ ಗಳಿಸಬೇಕಿದೆ. ಅದೇ ರೀತಿ ಎಸ್​​ಆರ್​​ಹೆಚ್​ ಮೂರನೇ ಬಾರಿಗೆ ಪ್ರಶಸ್ತಿಗೇರಲು 159 ರನ್​ಗಳ ಒಳಗೆ ಕಟ್ಟಿ ಹಾಕಬೇಕಿದೆ. ಮಿಚೆಲ್ ಸ್ಟಾರ್ಕ್​ 3, ವರುಣ್ ಚಕ್ರವರ್ತಿ 2, ವೈಭವ್ ಅರೋರಾ, ಸುನಿಲ್ ನರೇನ್​, ಹರ್ಷಿತ್ ರಾಣಾ, ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದರು.

Tue, 21 May 202403:48 PM IST

ಕೆಕೆಆರ್​​ಗೆ 160 ರನ್ ಟಾರ್ಗೆಟ್

20 ಓವರ್​ ಮುಕ್ತಾಯಕ್ಕೆ ಎಸ್​ಆರ್​ಹೆಚ್​ 159 ರನ್ ಗಳಿಸಿತು. ರಸೆಲ್ ಎಸೆದ 20 ಓವರ್​ನ 3ನೇ ಎಸೆತದಲ್ಲಿ ಪ್ಯಾಟ್ ಕಮಿನ್ಸ್ ಔಟಾದರು. ಇದರೊಂದಿಗೆ ತಂಡವು ಆಲೌಟ್ ಆಯಿತು. ಕಮಿನ್ಸ್ 30 ರನ್ ಗಳಿಸಿದರು. 9ನೇ ವಿಕೆಟ್​ಗೆ 33 ರನ್​ಗಳ ಜೊತೆಯಾಟ ಬಂತು. ಕೆಕೆಆರ್​ ಗೆಲುವಿಗೆ 160 ರನ್ ಬೇಕು.

Tue, 21 May 202403:45 PM IST

150ರ ಗಡಿ ದಾಟಿಸಿದ ಪ್ಯಾಟ್ ಕಮಿನ್ಸ್

ಪ್ಯಾಟ್ ಕಮಿನ್ಸ್ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 19ನೇ ಓವರ್​​ನಲ್ಲಿ 12 ರನ್ ಗಳಿಸಿದರು. ಪ್ರಸ್ತುತ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಸ್ಕೋರ್​-156/9 (9). ಪ್ಯಾಟ್ ಕಮಿನ್ಸ್ 30(22), ವಿಜಯ್​ಕಾಂತ್ 4(4).

Tue, 21 May 202403:31 PM IST

ಭುವನೇಶ್ವರ್ ಔಟ್

ವರುಣ್ ಚಕ್ರವರ್ತಿ ಬೌಲಿಂಗ್​​ನಲ್ಲಿ ಭುವನೇಶ್ವರ್ ಕುಮಾರ್ 4 ಎಸೆತಗಳಲ್ಲಿ ಡಕೌಟ್ ಆಗಿದ್ದಾರೆ. ವರುಣ್​ಗೆ ಇದು 2ನೇ ವಿಕೆಟ್​. ತಂಡದ ಮೊತ್ತ 126/9 (16), ಪ್ಯಾಟ್ ಕಮಿನ್ಸ್ 4(8), ವಿಜಯ್ ಕಾಂತ್ 0 (0)

Tue, 21 May 202403:30 PM IST

ಅಬ್ದುಲ್ ಸಮದ್ ಔಟ್

ತ್ರಿಪಾಠಿ, ಸನ್ವೀರ್ ಔಟಾದ ಬೆನ್ನಲ್ಲೇ ಅಬ್ದುಲ್ ಸಮದ್ ಕೂಡ ವಿಕೆಟ್ ಒಪ್ಪಿಸಿದರು. 12 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 16 ರನ್ ಗಳಿಸಿ ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ ಪೆವಿಲಿಯನ್ ಸೇರಿದರು.

Tue, 21 May 202403:19 PM IST

ತ್ರಿಪಾಠಿ ಔಟಾದ ಮರು ಎಸೆತದಲ್ಲೇ ಸನ್ವೀರ್ ಸಿಂಗ್ ಔಟ್

ರಾಹುಲ್ ತ್ರಿಪಾಠಿ ರನೌಟ್ ಆದ ಮರು ಎಸೆದಲ್ಲೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸನ್ವೀರ್ ಸಿಂಗ್​, ಸುನಿಲ್ ನರೇನ್ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ತಂಡದ ಮೊತ್ತ 123/7 (14), ಪ್ಯಾಟ್ ಕಮಿನ್ಸ್ 2(3), ಅಬ್ದುಲ್ ಸಮದ್ 15(9

Tue, 21 May 202403:17 PM IST

ತ್ರಿಪಾಠಿ ರನೌಟ್

ಅಬ್ದುಲ್ ಸಮದ್ ಮತ್ತು ರಾಹುಲ್ ತ್ರಿಪಾಠಿ ನಡುವಿನ ಸಂಹವನದ ಕೊರತೆಯಿಂದ ತ್ರಿಪಾಠಿ ರನೌಟ್ ಆದರು. 55 ರನ್ ಗಳಿಸಿ ತಂಡಕ್ಕೆ ಆಸರೆಯಾಗುತ್ತಿದ್ದ ತ್ರಿಪಾಠಿ, ರಸೆಲ್ ನಡೆಸಿದ ಅದ್ಭುತ ಫೀಲ್ಡಿಂಗ್​ನಿಂದ ರನೌಟ್ ಆದರು.

Tue, 21 May 202403:11 PM IST

13 ಓವರ್ ಮುಕ್ತಾಯ ಎಸ್​​ಆರ್​ಹೆಚ್ 115/5

ಸನ್​ರೈಸರ್ಸ್​ ಹೈದರಾಬಾದ್ 13 ಓವರ್ ಮುಕ್ತಾಯಕ್ಕೆ 115 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ಉಳಿದ 7 ಓವರ್​​ಗಳಲ್ಲಿ 200ರ ಗಡಿ ದಾಟಿಸಲು ಯತ್ನಿಸುತ್ತಿದೆ. ಕ್ರೀಸ್​ನಲ್ಲಿ ಅರ್ಧಶತಕ ಸಿಡಿಸಿರುವ ರಾಹುಲ್ ತ್ರಿಪಾಠಿ 55(35), ಅಬ್ದುಲ್ ಸಮದ್ 9(7).

Tue, 21 May 202403:04 PM IST

ಕ್ಲಾಸೆನ್ ಔಟ್, ಉತ್ತಮ ಜೊತೆಯಾಟಕ್ಕೆ ಬ್ರೇಕ್

ರಾಹುಲ್ ತ್ರಿಪಾಠಿ ಜೊತೆಗೆ 62 ರನ್​ಗಳ ಜೊತೆಯಾಟವಾಡಿದ ಹೆನ್ರಿಚ್ ಕ್ಲಾಸೆನ್ 21 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ತಂಡದ ಮೊತ್ತ 101/5 (11), ತ್ರಿಪಾಠಿ 51 (26), ಅಬ್ದುಲ್ ಸಮದ್ 0 (0)

Tue, 21 May 202402:58 PM IST

ಎಸ್​​ಆರ್​ಹೆಚ್​ ಮತ್ತೊಂದು ಉತ್ತಮ ಓವರ್​

ಆಂಡ್ರೆ ರಸೆಲ್ 10ನೇ ಓವರ್​​ನಲ್ಲಿ ಎಸ್​ಆರ್​ಹೆಚ್​ 12 ರನ್ ಕಲೆ ಹಾಕಿತು. 2 ಬೌಂಡರಿಗಳು ಬಂದವು. ತಂಡದ ಮೊತ್ತ 92/4 (10), ತ್ರಿಪಾಠಿ 45(26), ಕ್ಲಾಸೆನ್ 30(18)

Tue, 21 May 202402:53 PM IST

18 ರನ್ ನೀಡಿದ ನರೇನ್

ರಾಹುಲ್ ಮತ್ತು ಕ್ಲಾಸೆನ್​ ತಂಡಕ್ಕೆ ಚೇತರಿಕೆ ನೀಡುತ್ತಿದ್ದಾರೆ. 9ನೇ ಓವರ್​​ನಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದಾರೆ. ತಂಡದ ಮೊತ್ತ 80/4 (9), ತ್ರಿಪಾಠಿ 39(23), ಕ್ಲಾಸೆನ್ 24(15)

Tue, 21 May 202402:48 PM IST

ಮೊದಲ ಸಿಕ್ಸರ್​ ಸಿಡಿಸಿದ ತ್ರಿಪಾಠಿ

ಎಸ್​​ಆರ್​​ಹೆಚ್​ ಪರ ತ್ರಿಪಾಠಿ ಮೊದಲ ಸಿಕ್ಸರ್​ ಸಿಡಿಸಿದರು. ಹರ್ಷಿತ್ ರಾಣಾ ಓವರ್​​​ನಲ್ಲಿ 12 ರನ್ ಹರಿದು ಬಂತು. ತಂಡದ ಮೊತ್ತ 50/4 (7), ತ್ರಿಪಾಠಿ 26(18), ಕ್ಲಾಸೆನ್ 8(8)

Tue, 21 May 202402:42 PM IST

ಕೇವಲ 5 ರನ್ ನೀಡಿದ ನರೇನ್

7ನೇ ಓವರ್ ಬೌಲಿಂಗ್ ಮಾಡಿದ ಸುನಿಲ್ ನರೇನ್ ಕೇವಲ 5 ರನ್ ಬಿಟ್ಟುಕೊಟ್ಟಿದ್ದಾರೆ. ತಂಡದ ಮೊತ್ತ 50/4 (7), ತ್ರಿಪಾಠಿ 26(18), ಕ್ಲಾಸೆನ್ 8(8)

Tue, 21 May 202402:39 PM IST

ಪವರ್​​ಪ್ಲೇ ಮುಕ್ತಾಯಕ್ಕೆ ಎಸ್​ಆರ್​ಹೆಚ್ 45/4

6 ಓವರ್​​ಗಳ ಪವರ್​​ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ತಂಡವು 45 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ರಾಹುಲ್ ತ್ರಿಪಾಠಿ 24(16), ಹೆನ್ರಿಚ್ ಕ್ಲಾಸೆನ್ 5(4).

Tue, 21 May 202402:32 PM IST

ನಿತೀಶ್ ರೆಡ್ಡಿ ಮತ್ತು ಶಹಬಾಜ್ ಔಟ್

ಎಸ್​ಆರ್​ಹೆಚ್ ಒಂದೇ ಓವರ್​​ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದೆ. ನಿತೀಶ್ ರೆಡ್ಡಿ ಮತ್ತು ಶಹಬಾಜ್ ಅಹ್ಮದ್​ ಹಿಂದಿದೆಯೇ ಔಟಾಗಿದರು. ಮಿಚೆಲ್ ಸ್ಟಾರ್ಕ್ ಒಟ್ಟು​​ ಮೂರು ವಿಕೆಟ್ ಪಡೆದರು. ತಂಡದ ಮೊತ್ತ 39/4 (5)

Tue, 21 May 202402:25 PM IST

ರಾಹುಲ್ ತ್ರಿಪಾಠಿ ಆಸರೆ

ಸತತ ಎರಡು ವಿಕೆಟ್ ಎರಡು ವಿಕೆಟ್ ಕಳೆದುಕೊಂಡರೂ ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರೆಡ್ಡಿ ತಂಡಕ್ಕೆ ಆಸರೆಯಾತ್ತಿದ್ದಾರೆ. ಈ ಓವರ್​​ನಲ್ಲಿ ಒಂದು ಬೌಂಡರಿ ಬಂತು. ಎಸ್​​ಆರ್​ಹೆಚ್​ 33/2 (4), ತ್ರಿಪಾಠಿ 22 ರನ್

Tue, 21 May 202402:21 PM IST

3 ಓವರ್​ ಮುಕ್ತಾಯಕ್ಕೆ 21/2

ಸನ್​ರೈಸರ್ಸ್​ ಹೈದರಾಬಾದ್​ ಮೂರನೇ ಮುಕ್ತಾಯಕ್ಕೆ 21/2

Tue, 21 May 202402:16 PM IST

ಸಂಕಷ್ಟದಲ್ಲಿ ಎಸ್​ಆರ್​ಹೆಚ್​, ಮತ್ತೊಂದು ವಿಕೆಟ್ ಪತನ

ಇನ್ನಿಂಗ್ಸ್​​ನ ಎರಡನೇ ಓವರ್​​ನಲ್ಲೇ ಮತ್ತೊಂದು ಎಸ್​ಆರ್​​ಹೆಚ್​ ಮತ್ತೊಂದು ವಿಕೆಟ್ ಕಳೆದುಕೊಂಡು ಕಳೆದುಕೊಂಡಿದೆ. ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿದರು. ಅಭಿಷೇಕ್​ 3 ರನ್ ಗಳಿಸಿ ಔಟಾದರು. 2 ಓವರ್​​ ಮುಕ್ತಾಯಕ್ಕೆ 13/2 (2)

Tue, 21 May 202402:09 PM IST

ಮೊದಲ ಓವರ್​ ಮುಕ್ತಾಯ

ಎಸ್​ಆರ್​​ಹೆಚ್ ಮೊದಲ ಓವರ್​ ಮುಕ್ತಾಯಕ್ಕೆ 8 ರನ್ ಗಳಿಸಿತು. ರಾಹುಲ್ ತ್ರಿಪಾಠಿ ಎರಡು ಬೌಂಡರಿ ಸಿಡಿಸಿದರು.

Tue, 21 May 202402:04 PM IST

ಟ್ರಾವಿಸ್ ಹೆಡ್ ಡಕೌಟ್

ಇನ್ನಿಂಗ್ಸ್​ ಆರಂಭಗೊಂಡ ಎರಡನೇ ಎಸೆತದಲ್ಲೇ ಟ್ರಾವಿಸ್​ ಹೆಡ್​ ವಿಕೆಟ್ ಒಪ್ಪಿಸಿದ್ದಾರೆ. ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

Tue, 21 May 202402:01 PM IST

ಎಸ್​ಆರ್​ಹೆಚ್​ ಬ್ಯಾಟಿಂಗ್ ಆರಂಭ

ಎಸ್​​ಆರ್​ಹೆಚ್​ ಬ್ಯಾಟಿಂಗ್ ಆರಂಭವಾಗಿದೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್​ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮಿಚೆಲ್ ಸ್ಟಾರ್ಕ್​ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.

Tue, 21 May 202401:52 PM IST

ಗೆದ್ದವರು ಫೈನಲ್​ಗೆ, ಸೋತವರಿಗೆ ಮತ್ತೊಂದು ಅವಕಾಶ

ಐಪಿಎಲ್​ನ ಮೊದಲ ಕ್ವಾಲಿಫೈಯರ್​-1 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಯಾರೇ ಗೆದ್ದರೂ ನೇರವಾಗಿ ಫೈನಲ್ ಪ್ರವೇಶಿಸಲಿದ್ದಾರೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರಲಿದೆ.

Tue, 21 May 202401:41 PM IST

ಇಂಪ್ಯಾಕ್ಟ್‌ ಆಟಗಾರರ ಪಟ್ಟಿ

ಸನ್‌ರೈಸರ್ಸ್ ಹೈದರಾಬಾದ್ ಇಂಪ್ಯಾಕ್ಟ್ ಆಟಗಾರರು: ಸನ್ವಿರ್ ಸಿಂಗ್, ಉಮ್ರಾನ್ ಮಲಿಕ್, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್, ಜಯದೇವ್ ಉನದ್ಕತ್.

ಕೋಲ್ಕತ್ತಾ ನೈಟ್ ರೈಡರ್ಸ್ ಇಂಪ್ಯಾಕ್ಟ್ ಆಟಗಾರರು: ಅನುಕುಲ್ ರಾಯ್, ಮನೀಶ್ ಪಾಂಡೆ, ನಿತೀಶ್ ರಾಣಾ, ಕೆಎಸ್ ಭರತ್, ಶೆರ್ಫೈನ್ ರುದರ್ಫೋರ್ಡ್.

Tue, 21 May 202401:39 PM IST

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Tue, 21 May 202401:37 PM IST

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ ನಟರಾಜನ್.

Tue, 21 May 202401:32 PM IST

ಟಾಸ್‌ ಗೆದ್ದ ಎಸ್‌ಆರ್‌ಎಚ್‌ ಬ್ಯಾಟಿಂಗ್

ಐಪಿಎಲ್‌ 2024ರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌‌ ವಿರುದ್ಧ ಟಾಸ್‌ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ನಾಯಕ ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

Tue, 21 May 202411:43 AM IST

ಅಹಮಬಾದಾದ್‌ನಲ್ಲಿ ಮಳೆಯ ಮುನ್ಸೂಚನೆ; ಪಂದ್ಯಕ್ಕೆ ಅಡ್ಡಿಯಾಗಲ್ಲ

ಕೆಕೆಆರ್ ಮತ್ತು ಎಸ್‌ಆರ್‌ಎಚ್ ನಡುವಿನ 2024ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿರುವ ಅಹಮದಾಬಾದ್‌ನಲ್ಲಿಂದು ಮಳೆಯಾಗುವ ಮುನ್ಸೂಚನೆ ಇದೆ. ಆದರೆ ಮಳೆ ಪಂದ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ.

Tue, 21 May 202407:50 AM IST

ಅಹಮದಾಬಾದ್‌ ಪಿಚ್ ವರದಿ

ಅಹಮದಾಬಾದ್‌ ಪಿಚ್ ಬ್ಯಾಟರ್‌ಗಳಿಗೆ ಸಹಾಯ ಮಾಡುವ ನಿರೀಕ್ಷೆ ಇದೆ. ಪ್ರಸಕ್ತ ಋತುವಿನಲ್ಲಿ ಹೆಚ್ಚಿನ ತಂಡಗಳ ನಾಯಕರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇಂದಿನ ಹೈ ಸ್ಕೋರಿಂಗ್ ಪಂದ್ಯದಲ್ಲೂ ಇದೇ ಸಂಪ್ರದಾಯ ಮುಂದುವರೆಯಬಹುದು.

Tue, 21 May 202407:04 AM IST

ಟಿಕೆಟ್‌ ಖರೀದಿಗೆ ಬಿಸಿಸಿಐ ಅಂತಿಮ ಕರೆ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ 2024ರ ಕ್ವಾಲಿಫೈಯರ್ ಪಂದ್ಯದ ಟಿಕೆಟ್‌ಗಳು ಇನ್ನೂ ಖರೀದಿಸಬಹುದು. ಉಳಿದಿರುವ ಕೆಲವು ಟಿಕೆಟ್‌ಗಳಿಗೆ ಬಿಸಿಸಿಐ ಅಂತಿಮ ಕರೆ ನೀಡಿದೆ. ಭಾರತದ ಅತಿದೊಡ್ಡ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಲಕ್ಷಕ್ಕೂ ಅಧಿಕ ಸೀಟ್‌ಗಳು ಈ ಮೈದಾನದಲ್ಲಿವೆ.

Tue, 21 May 202405:07 AM IST

ಹೆಡ್ ಟು ಹೆಡ್ ದಾಖಲೆ

ಉಭಯ ತಂಡಗಳ ಮುಖಾಮುಖಿಯಲ್ಲಿ ಕೆಕೆಆರ್ 17 ಪಂದ್ಯಗಳಲ್ಲಿ ಗೆದ್ದರೆ, ಹೈದರಾಬಾದ್‌ 9ರಲ್ಲಿ ಮೇಲುಗೈ ಸಾಧಿಸಿದೆ. 2020 ರಿಂದ ನೈಟ್ ರೈಡರ್ಸ್ ತಂಡವು ಕೊನೆಯ ಒಂಬತ್ತು ಮುಖಾಮುಖಿಗಳಲ್ಲಿ ಏಳನ್ನು ಗೆದ್ದು ಇನ್ನಷ್ಟು ಪ್ರಾಬಲ್ಯ ಸಾಧಿಸಿದೆ.

Tue, 21 May 202404:49 AM IST

ಮಳೆಯಿಂದ ಪಂದ್ಯ ವಿಳಂಬವಾದರೆ ಮುಂದೇನು?

ಪ್ಲೇಆಫ್ ಪಂದ್ಯಕ್ಕೆ ಮಳೆಯು ಅಡ್ಡಿಪಡಿಸಿದರೆ, ಆಗ ಸಹಜವಾಗಿ ಆರಂಭ ವಿಳಂಬವಾಗುತ್ತದೆ. ಕೊನೆ ಪಕ್ಷ 5 ಓವರ್ ನಡೆಸಲು ನಿರ್ಧರಿಸಲಾಗುತ್ತದೆ. ಒಂದು ವೇಳೆ ಮಳೆ ಮುಂದುವರೆದು ಹೆಚ್ಚುವರಿ ಸಮಯದೊಳಗೆ ಪಂದ್ಯ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಆಗ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ.

ಪ್ಲೇಆಫ್ ಪಂದ್ಯಗಳಿಗೆ ಮೀಸಲು ದಿನ ನಿಗದಿಪಡಿಸಲಾಗಿದೆ. ಮೀಸಲು ದಿನದಂದು ಪಂದ್ಯ ಆರಂಭದಿಂದಲೇ ನಡೆಯುತ್ತದೆ. ಆ ಮೂಲಕ ಉಭಯ ತಂಡಗಳ ಗೆಲುವಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಮೀಸಲು ದಿನವೂ ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡ ವಿಜೇತ ಎಂದು ಘೋಷಿಸಲಾಗುತ್ತದೆ.

Tue, 21 May 202404:46 AM IST

ಅಹಮದಾಬಾದ್‌ ಹವಾಮಾನ ವರದಿ

ಆಕ್ಯೂವೆದರ್ ಪ್ರಕಾರ, ಮೇ 21ರ ಮಂಗಳವಾರ ಅಹಮದಾಬಾದ್‌ ನಗರದಲ್ಲಿ ಮಳೆಯ ಆತಂಕವಿಲ್ಲ. ಗುಜರಾತ್‌ನ ನಗರದಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಹವಾಮಾನ ಮುನ್ಸೂಚನೆ ಹೇಳಿದೆ. ಹಗಲಿನ ಹೊತ್ತು ಭಾರಿ ಬಿಸಿಲು ಇರಲಿದ್ದು, ಸಂಜೆ ಕೂಡಾ ಭಾರಿ ತಾಪಮಾನ ಇರಲಿದೆ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯುವ ಸಾಧ್ಯತೆ ಇದೆ.

Tue, 21 May 202404:44 AM IST

ಸನ್‌ರೈಸರ್ಸ್‌ ಹೈದರಾಬಾದ್ ಸಂಭಾವ್ಯ ತಂಡ

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್.

ಇಂಪ್ಯಾಕ್ಟ್ ಆಟಗಾರ: ಜಯದೇವ್ ಉನದ್ಕತ್

Tue, 21 May 202404:44 AM IST

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಕೆಕೆಆರ್ ಇಂಪ್ಯಾಕ್ಟ್ ಆಟಗಾರ: ವೈಭವ್ ಅರೋರಾ.