ರಾಹುಲ್, ಜಡೇಜಾ ಅರ್ಧಶತಕ; ಇಂಗ್ಲೆಂಡ್ ವಿರುದ್ಧ ಎರಡನೇ ದಿನದಾಟದಲ್ಲಿ ಭಾರತಕ್ಕೆ 175 ರನ್ ಮುನ್ನಡೆ
India vs England 1st Test: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲೂ ಭಾರತ ತಂಡ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಅಲ್ಲದೆ, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತೆ ಮುನ್ನಡೆಯಲ್ಲಿದೆ. ಎರಡನೇ ದಿನದಾಟದಲ್ಲಿ ಆಂಗ್ಲ ಬೌಲರ್‌ಗಳನ್ನು ಕಾಡಿದ ಭಾರತೀಯ ಬ್ಯಾಟರ್‌ಗಳು, ದಿನದಾಟದ ಅಂತ್ಯಕ್ಕೆ 175 ರನ್‌ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಲ್ಲದೆ ಮೂರನೇ ದಿನವೂ ಭಾರತ ಬ್ಯಾಟಿಂಗ್ ಮುಂದುವರೆಸಲಿದೆ.
ಪಂದ್ಯದ ಮೊದಲ ದಿನ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯ್ತು. ದಿನದ ಕೊನೆಯ ಸೆಷನ್‌ನಲ್ಲಿ ತನ್ನ ಪಾಲಿನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತವು, 1 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಆ ಮೂಲಕ ಕೇವಲ 127 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಇಂದು (ಜನವರಿ 26) ಬೆಳಗ್ಗೆ ಬ್ಯಾಟಿಂಗ್ ಮುಂದುವರೆಸಿದ ಭಾರತ, ದಿನದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಪೇರಿಸಿದೆ.
ದಿನದ ಆರಂಭದಲ್ಲೇ ಭಾರತವು ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. 74 ಎಸೆತಗಳಲ್ಲಿ 80 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್, ರೂಟ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಅದಾದ ಕೆಲವೇ ಹೊತ್ತಿನಲ್ಲಿ ಶುಭ್ಮನ್ ಗಿಲ್ ಕೂಡಾ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ | ಆಂಗ್ಲರಿಗೆ ತಿರುಮಂತ್ರವಾದ ಬಜ್‌ಬಾಲ್ ತಂತ್ರ; ಜೈಸ್ವಾಲ್ ಆಕ್ರಮಣಕಾರಿ ಆಟಕ್ಕೆ ಮಂಕಾದ ಇಂಗ್ಲೆಂಡ್, ಮೊದಲ ಟೆಸ್ಟ್‌ನಲ್ಲಿ ಮುನ್ನಡೆ
ಈ ವೇಳೆ ಒಂದಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಇಬ್ಬರೂ ಅರ್ಧಶತಕದ ಜೊತೆಯಾಟವಾಡಿದರು. ಒಂದು ಸಿಕ್ಸರ್ ಸಹಿತ 35 ರನ್ ಗಳಿಸಿದ್ದ ಅಯ್ಯರ್, ದೊಡ್ಡ ಹೊಡೆತಕ್ಕೆ ಕೈ ಹಾಕಿ ರೆಹಾನ್ ಅಹ್ಮದ್ ಎಸೆತದಲ್ಲಿ ಔಟಾದರು. ಈ ವೇಳೆ ಕೆಎಸ್ ಭರತ್ ಜೊತೆಗೂಡಿದ ರಾಹುಲ್, ಮತ್ತೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಅರ್ಧಶತಕದ ಜೊತೆಯಾಟ ಪೂರ್ಣಗೊಂಡ ಬಳಿಕ, 86 ರನ್ ಗಳಿಸಿದ್ದ ರಾಹುಲ್ ಸಿಕ್ಸರ್ ಸಿಡಿಸಲು ಹೋಗಿ ಕ್ಯಾಚ್ ನೀಡಿ ಔಟಾದರು.
ಜಡೇಜಾ-ಅಕ್ಷರ್ ಅಜೇಯ ಆಟ
ಈ ವೇಳೆ ರವೀಂದ್ರ ಜಡೇಜಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆಡಿದ ಭರತ್, 41 ರನ್ ಗಳಿಸಿದ್ದಾಗ ರೂಟ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅವರ ಬೆನ್ನಲ್ಲೇ ಆರ್ ಅಶ್ವಿನ್ ರನೌಟ್ ಆದರು. ಈ ವೇಳೆ ಒಂದಾದ ಜಡೇಜಾ ಮತ್ತು ಅಕ್ಷರ್ ಪಟೇಲ್ ಮತ್ತೆ ಜೊತೆಯಾಟ ಮುಂದುವರೆಸಿದರು. ಉತ್ತಮ ಇನ್ನಿಂಗ್ಸ್ ಆಡಿದ ಜಡೇಜಾ ಅರ್ಧಶತಕ ಸಂಭ್ರಮಿಸಿದರು.

|#+|
ದಿನದಾಟದ ಅಂತ್ಯದ ವೇಳೆಗೆ ಜಡೇಜಾ 155 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದ್ದಾರೆ. ಅತ್ತ ಅಕ್ಷರ್ ಪಟೇಲ್ ಅಜೇಯ 35 ರನ್ ಪೇರಿಸಿದ್ದಾರೆ. ಇಬ್ಬರೂ ಎಂಟನೇ ವಿಕೆಟ್‌ಗೆ ಅಜೇಯ 63 ರನ್ ಒಟ್ಟಗೂಡಿಸಿದ್ದಾರೆ. ಮೂರನೇ ದಿನವೂ ಹೈದರಾಬಾದ್ ಪಿಚ್‌ನಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ಇದನ್ನೂ ಓದಿ | ಗಳಿಸಿದ್ದು 29 ರನ್, ಬರೆದಿದ್ದು ವಿಶ್ವದಾಖಲೆ; ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜೋ ರೂಟ್ ಹೊಸ ಸಾಧನೆ
ಮೊದಲ ದಿನದಾಟದ ಕೊನೆಯ ಸೆಷನ್‌ನಲ್ಲಿ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್, ಮೊದಲ ವಿಕೆಟ್‌ಗೆ 80 ರನ್‌ಗಳ ಜೊತೆಯಾಟವಾಡಿದರು. 27 ಎಸೆತಗಳಲ್ಲಿ 24 ರನ್ ಗಳಿಸಿದ ರೋಹಿತ್ ಶರ್ಮಾ, ಲೀಚ್ ಎಸೆತದಲ್ಲಿ ಸ್ಟೋಕ್ಸ್‌ಗೆ ಕ್ಯಾಚ್ ನೀಡಿ ಔಟಾದರು. ಮತ್ತೊಂದೆಡೆ ಆಂಗ್ಲರ ಬಜ್‌ಬಾಲ್ ತಂತ್ರದಂತೆ ಆಕ್ರಮಣಕಾರಿ ಆಟವಾಡಿದ ಜೈಸ್ವಾಲ್, ಕೇವಲ 70 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್ ಸಹಿತ 76 ರನ್ ಸಿಡಿಸಿದ್ದರು. ಎರಡನೇ ದಿನ ಆಟ ಮುಂದುವರೆಸಿ 80 ರನ್‌ಗೆ ಔಟಾದರು.
ಅದಕ್ಕೂ ಮುನ್ನ ಪಂದ್ಯದಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, 55 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. 39 ಎಸೆತಗಳಲ್ಲಿ 35 ರನ್ ಗಳಿಸಿದ್ದ ಡಕೆಟ್, ಅಶ್ವಿನ್ ಬೌಲಿಂಗ್ನಲ್ಲಿ ಔಟಾದರು. ಓಲಿ ಪೋಪ್ 1 ರನ್ ಗಳಿಸಿದರು. 37 ರನ್ ಗಳಿಸಿದ್ದ ಬೇರ್‌ಸ್ಟೋ ಅಕ್ಸರ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಅವರ ಬೆನ್ನಲ್ಲೇ ರೂಟ್ ಆಟ 29 ರನ್‌ಗೆ ಅಂತ್ಯವಾಯ್ತು. ನಾಯಕ ಬೆನ್ ಸ್ಟೋಕ್ಸ್ ವೇಗದ ಬ್ಯಾಟಿಂಗ್ ನಡೆಸಿ 88 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್ ಸಹಿತ 70 ರನ್ ಗಳಿಸಿದರು. ಅಂತಿಮವಾಗಿ 246 ರನ್ ಗಳಿಸಿ ಇಂಗ್ಲೆಂಡ್ ಆಲೌಟ್ ಆಯ್ತು.