ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತೀಯ ಕ್ರಿಕೆಟ್​ನಲ್ಲಿ 1000 ಪಟ್ಟು ರಾಜಕೀಯ ನಡೆಯುತ್ತೆ ಎಂದಿದ್ದ ಕೆಎಲ್ ರಾಹುಲ್​ಗೆ ಕುತ್ತು; ಅಮಾನತು ಸಾಧ್ಯತೆ

ಭಾರತೀಯ ಕ್ರಿಕೆಟ್​ನಲ್ಲಿ 1000 ಪಟ್ಟು ರಾಜಕೀಯ ನಡೆಯುತ್ತೆ ಎಂದಿದ್ದ ಕೆಎಲ್ ರಾಹುಲ್​ಗೆ ಕುತ್ತು; ಅಮಾನತು ಸಾಧ್ಯತೆ

KL Rahul in Trouble : ಭಾರತೀಯ ಕ್ರಿಕೆಟ್​​ನಲ್ಲಿ ಸಾವಿರ ಪಟ್ಟು ರಾಜಕೀಯ ಇದೆ ಎಂದು ಕೆಎಲ್ ರಾಹುಲ್ ಹೇಳಿರುವುದಾಗಿ ಎಲ್​ಎಸ್​ಜಿ ಕೋಚ್ ಜಸ್ಟಿನ್ ಲ್ಯಾಂಗರ್ ಬಹಿರಂಗಪಡಿಸಿದ್ದಾರೆ. ಹೀಗಾಗಿ ಕರ್ನಾಟಕದ ಆಟಗಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತನ್ನ ಮಾತು ತನಗೆ ಮುಳ್ಳಾಯಿತು; ಭಾರತೀಯ ಕ್ರಿಕೆಟ್​ನಲ್ಲಿ 1000 ಪಟ್ಟು ರಾಜಕೀಯ ನಡೆಯುತ್ತೆ ಎಂದಿದ್ದ ಕೆಎಲ್ ರಾಹುಲ್​ಗೆ ಕುತ್ತು
ತನ್ನ ಮಾತು ತನಗೆ ಮುಳ್ಳಾಯಿತು; ಭಾರತೀಯ ಕ್ರಿಕೆಟ್​ನಲ್ಲಿ 1000 ಪಟ್ಟು ರಾಜಕೀಯ ನಡೆಯುತ್ತೆ ಎಂದಿದ್ದ ಕೆಎಲ್ ರಾಹುಲ್​ಗೆ ಕುತ್ತು

ಭಾರತೀಯ ಕ್ರಿಕೆಟ್​ನಲ್ಲಿ ಸಾವಿರ ಪಟ್ಟು ರಾಜಕೀಯ ನಡೆಯುತ್ತದೆ ಎಂದು ಲಕ್ನೋ ಸೂಪರ್ ಜೈಂಟ್ಸ್ ಹೆಡ್​ಕೋಚ್ ಜಸ್ಟಿನ್ ಲ್ಯಾಂಗರ್​ಗೆ ಸಲಹೆ ನೀಡಿದ್ದ ಅದೇ ತಂಡದ ನಾಯಕ ಹಾಗೂ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್​ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ ನೂತನ ಮುಖ್ಯಕೋಚ್ ಹುಡುಕಾಟ ಪ್ರಕ್ರಿಯೆಯಲ್ಲಿ ಜಸ್ಟೀನ್ ಲ್ಯಾಂಗರ್​ ಅವರನ್ನು ಬಿಸಿಸಿಐ ಸಂಪರ್ಕಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಜೂನ್​ 1 ರಿಂದ 29ರ ತನಕ ವೆಸ್ಟ್‌ ಇಂಡೀಸ್‌ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತದ ತಂಡದ ಹಾಲಿ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ‌ಅಧಿಕಾರಾವಧಿ ಕೊನೆಗೊಳ್ಳಲಿದೆ. ವಿಶ್ವ ಕ್ರಿಕೆಟ್‌ನ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳಲು ಹಲವು ದಿಗ್ಗಜ ಕ್ರಿಕೆಟಿಗರು ಹಿಂದೆ ಸರಿದಿದ್ದಾರೆ. ಹೀಗಾಗಿ ಈ ಕುರಿತು ಈಗಲೇ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಜಸ್ಟಿನ್ ಲ್ಯಾಂಗರ್​ಗೆ ಕೆಎಲ್ ರಾಹುಲ್ ಹೇಳಿದ್ದೇನು?

ಭಾರತೀಯ ಕ್ರಿಕೆಟ್ ಹೆಡ್​ಕೋಚ್​ ಕುರಿತು ಜಸ್ಟೀನ್ ಲ್ಯಾಂಗರ್​ ಮಾತನಾಡಿ, ‘ಕೋಚ್‌ ಹುದ್ದೆ ಅದ್ಭುತವಾದ ಕೆಲಸ. ಆದರೆ ನಾನು ಅದರಿಂದ ಹೊರಗಿದ್ದೇನೆ. ಇದು ಸರ್ವವ್ಯಾಪಿ ಪಾತ್ರ ಎಂದು ನನಗೆ ತಿಳಿದಿದೆ. ಆಸ್ಟ್ರೇಲಿಯಾ ತಂಡದೊಂದಿಗೆ 4 ವರ್ಷಗಳ ಕಾಲ ಈ ಕೆಲಸ ಮಾಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಈಗಾಗಲೇ ದಣಿದಿದ್ದೇನೆ’ ಎಂದು ಬಿಬಿಸಿಯ ಸ್ಟಂಪ್ಡ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದರು.

ಇದಲ್ಲದೆ, ಐಪಿಎಲ್‌ನಲ್ಲಿ ಎಲ್​ಎಸ್​ಜಿ ಮುಖ್ಯ ಕೋಚ್ ಆಗಿರುವ ಲ್ಯಾಂಗರ್, ಟೀಮ್ ಇಂಡಿಯಾ ಹೇಗಿರಲಿದೆ ಎಂಬುದರ ಬಗ್ಗೆ ನಮ್ಮ ನಾಯಕ ಕೆಎಲ್ ರಾಹುಲ್ ಜತೆಗೆ ಮಾತುಕತೆ ನಡೆಸಿದ್ದೆ. ಈ ವೇಳೆ ರಾಹುಲ್ ಐಪಿಎಲ್ ತಂಡದಲ್ಲಿ ಒತ್ತಡ, ರಾಜಕೀಯ ಇದೆ ಎಂದು ನೀವು ಭಾವಿಸಿದರೆ, ಭಾರತ ತಂಡದಲ್ಲಿ ಸಾವಿರ ಪಟ್ಟು ಇರುತ್ತದೆ ಎಂದು ತಿಳಿಸಿದ್ದರು ಎಂದು ಲ್ಯಾಂಗರ್​ ಹೇಳಿದ್ದರು.

ಕೆಎಲ್ ರಾಹುಲ್ ಅವ​ರ ಇದೇ ಮಾತುಗಳು ತನಗೆ ಕುತ್ತು ತಂದಿವೆ. ಭಾರತೀಯ ಕ್ರಿಕೆಟ್​ನ ಆಂತರಿಕ ವಿಷಯಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡಿದ್ದಲ್ಲದೆ, ಅದು ವಿಶ್ವ ಮಟ್ಟಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ಈಗ ಬಿಸಿಸಿಐನಲ್ಲಿ ಸಾವಿರ ಪಟ್ಟು ರಾಜಕೀಯ ನಡೆಯುತ್ತದೆ ಎಂದು ರಾಹುಲ್​ ಹೇಳಿರುವುದನ್ನು ಲ್ಯಾಂಗರ್ ಬಹಿರಂಗಪಡಿಸಿದ್ದು, ರಾಹುಲ್ ವೃತ್ತಿಜೀವನದ ಪರಿಣಾಮ ಬೀರುವಂತೆ ಮಾಡುತ್ತಿದೆ.

ಕೆಎಲ್ ರಾಹುಲ್​ಗೆ ಶಿಕ್ಷೆ?

ಕೆಎಲ್ ರಾಹುಲ್, ಲ್ಯಾಂಗರ್ ಅವರೊಂದಿಗೆ ಬಿಸಿಸಿಐ ಆಂತರಿಕ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದರೆ ಮತ್ತು ಭಾರತೀಯ ಕ್ರಿಕೆಟ್​ಗೆ ಕಳಂಕ ತರುವಂತಹ ಹೇಳಿಕೆಗಳನ್ನು ನೀಡಿರುವುದು ಖಚಿತವಾದರೆ, ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇದು ಸಾಬೀತಾದರೆ ಅಮಾನತಿನ ಶಿಕ್ಷೆಗೂ ಗುರಿಯಾಗಬಹುದು. ಇಲ್ಲವಾದರೆ, ಮುಂದಿನ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗದಿರಬಹುದು.

2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ತನ್ನ ಕ್ರಿಕೆಟ್ ಜರ್ನಿಯಲ್ಲಿ ಹಲವು ವಿವಾದಗಳಿಗೂ ಕಾರಣರಾಗಿದ್ದಾರೆ. ಇದರ ನಡುವೆಯೂ ಭಾರತೀಯ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಕೆಎಲ್, 5 ವರ್ಷಗಳ ಹಿಂದೆ ಹಾರ್ದಿಕ್​ ಪಾಂಡ್ಯ ಅವರೊಂದಿಗೆ ಚಾಟ್​​ ಶೋನಲ್ಲಿ ಭಾಗವಹಿಸಿ ಲೈಂಗಿಕ ಟೀಕೆಗಳಿಗೆ ಅನಗತ್ಯ ವಿವಾದಕ್ಕೆ ಸಿಲುಕಿದ್ದರು.

2018ರ ಮೇ ತಿಂಗಳಿಂದ 2022ರ ಫೆಬ್ರವರಿವರೆಗೆ ಲ್ಯಾಂಗರ್ ಅವರು ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಗಿದ್ದರು. ಆದರೆ, ಆಟಗಾರರು ಮತ್ತು ಹೊಸ ನಾಯಕ ಪ್ಯಾಟ್ ಕಮಿನ್ಸ್ ಅವರೊಂದಿಗೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗಳ ನಡುವೆ ಅವರು ರಾಜೀನಾಮೆ ನೀಡಿದ್ದರು. ಸದ್ಯದ ಮಟ್ಟಿಗೆ ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯ ಉನ್ನತ ಹುದ್ದೆ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ