ಸಂಜೀವ್ ಗೋಯೆಂಕಾ ನಿಲ್ಲಿಸಲು ಯತ್ನಿಸಿದರೂ ಮುಲಾಜು ನೀಡದೆ ಮುಂದಕ್ಕೆ ಹೋದ ಕೆಎಲ್ ರಾಹುಲ್; ತನಗಾಗಿದ್ದ ಅವಮಾನಕ್ಕೆ ತಿರುಗೇಟು
ಇಂಡಿಯನ್ ಪ್ರೀಮಿಯರ್ ಲೀಗ್ 40ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿದ್ದಕ್ಕಿಂತ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ಪುನರ್ಮಿಲನ ಹೆಚ್ಚು ಚರ್ಚೆಯ ವಿಷಯವಾಗಿದೆ.

18ನೇ ಆವೃತ್ತಿಯ ಐಪಿಎಲ್ 2025ರ ಮೊದಲ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆಡಿದಾಗ, ಕೆಎಲ್ ರಾಹುಲ್ ತಂಡದ ಭಾಗವಾಗಿರಲಿಲ್ಲ. ಆ ಪಂದ್ಯ ವಿಶಾಖಪಟ್ಟಣದಲ್ಲಿ ನಡೆದಿತ್ತು. ತಂದೆಯಾದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರಾಹುಲ್, ಇದೀಗ ಲಕ್ನೋದಲ್ಲಿ ನಡೆದ ಅದೇ ತಂಡದ ವಿರುದ್ಧ ಮತ್ತು ತನ್ನ ಮಾಜಿ ತಂಡದ ಎದುರು ಕಣಕ್ಕಿಳಿದ ಕೆಎಲ್, ಅಬ್ಬರಿಸಿ ಬೊಬ್ಬಿರಿದರು. ತನಗೆ ಮಾಡಿದ್ದ ಅವಮಾನಕ್ಕೆ ಉತ್ತರವಾಗಿ ಎಲ್ಎಸ್ಜಿ ವಿರುದ್ಧ ಸೊಗಸಾದ ಫಿಫ್ಟಿ ಬಾರಿಸಿ ಡೆಲ್ಲಿಗೆ ಭರ್ಜರಿ ಗೆಲುವು ತಂದುಕೊಟ್ಟರು. ಪಂದ್ಯ ಗೆದ್ದ ಬೆನ್ನಲ್ಲೇ ಎಸ್ಎಲ್ಜಿ ಮಾಲೀಕ ಸಂಜೀವ್ ಗೋಯೆಂಕಾ ಕನ್ನಡಿಗನನ್ನು ಯತ್ನಿಸದರೂ ರಾಹುಲ್ ಕ್ಯಾರೆ ಎನ್ನದೆ ಅಲ್ಲಿಂದ ಹೊರಟು ಹೋದ ದೃಶ್ಯ ವೈರಲ್ ಆಗುತ್ತಿದೆ.
ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡವು ಇದೇ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಸೋತಿದೆ. ಪಂತ್ ಪಡೆಯ ವಿರುದ್ಧ ಅಕ್ಷರ್ ಪಡೆ 8 ವಿಕೆಟ್ಗಳಿಂದ ಗೆದ್ದ ಬೆನ್ನಲ್ಲೇ ಸಾಂಪ್ರದಾಯಿಕವಾಗಿ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಲಾಯಿತು. ಈ ವೇಳೆ ರಾಹುಲ್ ಎದುರಾಳಿ ಮತ್ತು ತಮ್ಮ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ಹಸ್ತಲಾಘವ ಮಾಡಿದರು. ಕೊನೆಯಲ್ಲಿ ಎಲ್ಎಸ್ಜಿ ಮಾಲೀಕ ಮತ್ತು ಅವರ ಪುತ್ರ ಶಾಶ್ವತ್ ಗೋಯೆಂಕಾ ಅವರು ಕೆಎಲ್ಗೆ ಶೇಕ್ ಮಾಡಿದರು. ಅದರಲ್ಲೂ ಸಂಜೀವ್ ಗೋಯೆಂಕಾ ಅವರು ಕೈಕುಲುಕಿದ ಬೆನ್ನಲ್ಲೇ ರಾಹುಲ್ರನ್ನು ನಿಲ್ಲಿಸಲು ಯತ್ನಿಸಿದರು. ಆದರೆ ಕ್ಯಾರೆ ಎನ್ನದೆ ಮುಂದಕ್ಕೆ ಹೋದರು. ಇದು ಲಕ್ನೋ ಮಾಲೀಕರಿಗೆ ಮುಜುಗರ ಎನಿಸಿದರೂ ನಗುತ್ತಲೇ ಮುಂದೆ ಸಾಗಿದರು.
ಪಂದ್ಯದ ನಂತರ ಮೈದಾನಕ್ಕೆ ತೆರಳಿದ ಗೋಯೆಂಕಾ ಅವರು ರಾಹುಲ್ ಬಳಿಗೆ ತೆರಳಿ ಅಭಿನಂದನೆ ಸಲ್ಲಿಸಿದರು. ಎಲ್ಎಸ್ಜಿ ಮಾಲೀಕರು ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸುವ ಮೊದಲು ಇಬ್ಬರೂ ಕೈಕುಲುಕಿದರು. ಆದರೆ ರಾಹುಲ್ ಅವರೊಂದಿಗೆ ಮಾತನಾಡುವುದನ್ನು ತಪ್ಪಿಸಿ ಮುಂದಕ್ಕೆ ಸಾಗಿದರು. ಗೋಯೆಂಕಾ ಅವರನ್ನು ತಣ್ಣಗೆ ಹೆಗಲ ಮೇಲೆ ಹೊತ್ತುಕೊಂಡು ಹೊರಟುಹೋದರು. ತಂದೆಯ ನಂತರ ಸರತಿ ಸಾಲಿನಲ್ಲಿ ನಿಂತಿದ್ದ ಗೋಯೆಂಕಾ ಅವರ ಮಗ ಶಾಶ್ವತ್ ಅವರೊಂದಿಗೂ ರಾಹುಲ್ ಇದೇ ರೀತಿ ಮಾಡಿದರು. ಎಲ್ಎಸ್ಜಿಯ ತಂದೆ-ಮಗ ಜೋಡಿ ರಾಹುಲ್ ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ರಾಹುಲ್ ಏನನ್ನೂ ಮಾತನಾಡದೆ ಹೊರಟು ಹೋದರು. ಪಂದ್ಯಕ್ಕಿಂತ ಈ ದೃಶ್ಯವೇ ಅದ್ಭುತವಾಗಿದೆ ಎಂದು ನೆಟ್ಟಿಗರು ಬಗೆ ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ರಾಹುಲ್ಗೆ ಅವಕಾಶ ಮಾಡಿದ್ದ ಸಂಜೀವ್
2024ರ ಐಪಿಎಲ್ನಲ್ಲಿ ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್ಗೆ ಬಹಿರಂಗವಾಗಿ ಅವಮಾನಿಸಿದ್ದರು. ಅಂದು ಲಕ್ನೋ ತಂಡದ ನಾಯಕನಾಗಿದ್ದದ್ದು ಕೆಎಲ್ ರಾಹುಲ್. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಪಡೆ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಪಂದ್ಯದ ನಂತರ ಮೈದಾನದಲ್ಲಿ ಕೆಎಲ್ ಅವರನ್ನು ಮಾಲೀಕ ಸಂಜೀವ್ ಅವರು ಮನಬಂದಂತೆ ಬೈದಿದ್ದರು. ಹೀಗಾ ಆಡೋದು ಎನ್ನುವ ರೀತಿ ಕೆಲವೊಂದು ಸಿಗ್ನಲ್ ಮೂಲಕ ಕಿಡಿಕಾರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ತನ್ನ ಸುತ್ತಮುತ್ತಲೂ ಸಹ ಆಟಗಾರರು, ಎದುರಾಳಿ ತಂಡದ ಆಟಗಾರರೂ ಇದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಹೀಗಾಗಿ, ರಾಹುಲ್ ಲಕ್ನೋ ತೊರೆಯುವ ನಿರ್ಧಾರ ಕೈಗೊಂಡಿದ್ದರು. ಅದರಂತೆ ಮೆಗಾ ಹರಾಜಿಗೆ ಬಂದಿದ್ದ ಕೆಎಲ್ 14 ಕೋಟಿ ರೂಪಾಯಿಗೆ ಡೆಲ್ಲಿ ಪಾಲಾದರು.
ಗೋಯೆಂಕಾ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಫ್ರಾಂಚೈಸಿಯಿಂದ ಬೇರ್ಪಡುವ ಮೊದಲು, ಕಳೆದ 3 ಐಪಿಎಲ್ ಋತುಗಳನ್ನು ಸೂಪರ್ ಜೈಂಟ್ಸ್ನೊಂದಿಗೆ ಕಳೆದಿದ್ದ ರಾಹುಲ್ಗೆ ಲಕ್ನೋ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದ, ಡೆಲ್ಲಿ 13 ಎಸೆತಗಳು ಬಾಕಿ ಇರುವಾಗ 160 ರನ್ ಬೆನ್ನಟ್ಟಿತು. 8 ವಿಕೆಟ್ಗಳ ಜಯ ಸಾಧಿಸಿತು. ರಾಹುಲ್ 42 ಎಸೆತಗಳಲ್ಲಿ ಅಜೇಯ 57 ರನ್ ಗಳಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ತಮ್ಮ 3ನೇ ಅರ್ಧಶತಕ ಗಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5000 ರನ್ ಪೂರೈಸಿದ ಅತ್ಯಂತ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ತಮ್ಮ 130 ನೇ ಇನ್ನಿಂಗ್ಸ್ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು, ಇದು ಹಿಂದಿನ ದಾಖಲೆ ಹೊಂದಿರುವ ಡೇವಿಡ್ ವಾರ್ನರ್ಗಿಂತ (135) ಐದು ಕಡಿಮೆ.