ಕೆಎಲ್ ರಾಹುಲ್​ಗಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ; 30 ವರ್ಷದ ಆಲ್​ರೌಂಡರ್​ಗೆ ಜವಾಬ್ದಾರಿ ಸಿಗಲಿದ್ಯಂತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್​ಗಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ; 30 ವರ್ಷದ ಆಲ್​ರೌಂಡರ್​ಗೆ ಜವಾಬ್ದಾರಿ ಸಿಗಲಿದ್ಯಂತೆ

ಕೆಎಲ್ ರಾಹುಲ್​ಗಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ; 30 ವರ್ಷದ ಆಲ್​ರೌಂಡರ್​ಗೆ ಜವಾಬ್ದಾರಿ ಸಿಗಲಿದ್ಯಂತೆ

KL Rahul: ಐಪಿಎಲ್ 2025ರ ಹರಾಜಿನಲ್ಲಿ ಕೆಎಲ್ ರಾಹುಲ್​ ಅವರನ್ನು ಖರೀದಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ತಂಡದ ನಾಯಕತ್ವಕ್ಕೆ ಭಾರತದ ಮತ್ತೊಬ್ಬ ಸ್ಟಾರ್​ ಆಟಗಾರನನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಕೆಎಲ್ ರಾಹುಲ್​ಗಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ; 30 ವರ್ಷದ ಆಲ್​ರೌಂಡರ್​ಗೆ ಜವಾಬ್ದಾರಿ ಸಿಗಲಿದ್ಯಂತೆ
ಕೆಎಲ್ ರಾಹುಲ್​ಗಿಲ್ಲ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ; 30 ವರ್ಷದ ಆಲ್​ರೌಂಡರ್​ಗೆ ಜವಾಬ್ದಾರಿ ಸಿಗಲಿದ್ಯಂತೆ (AP)

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2025) ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (Delhi Capitals) ಮುನ್ನಡೆಸುವ ಕನಸು ಕಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್​ಗೆ (KL Rahul) ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ 14 ಕೋಟಿ ರೂಪಾಯಿಗೆ ಡೆಲ್ಲಿ ಸೇರಿರುವ ಕನ್ನಡಿಗನ ಬದಲಿಗೆ 30 ವರ್ಷದ ಆಲ್​ರೌಂಡರ್​ಗೆ ನಾಯಕತ್ವ ಸಿಗಲಿದೆ. ಹೀಗಂತ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಬಹಿರಂಗಪಡಿಸಿದ್ದಾರೆ.

ಐಪಿಎಲ್ 2025ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ಅಕ್ಷರ್ ಪಟೇಲ್ ಹೊಸ ಸವಾಲನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕ್ರಿಕ್​ಬಜ್​ ಹೇಸಿಬಿ ವಿತ್ ಡಿಕೆ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಈ ಬೆಳವಣಿಗೆ ಬಹಿರಂಗಪಡಿಸಿದ್ದಾರೆ. ಆದರೆ ಫ್ರಾಂಚೈಸಿಯಿಂದ ಅಧಿಕೃತ ಪ್ರಕಟಣೆಗಾಗಿ ಇನ್ನೂ ಕಾಯಲಾಗುತ್ತಿದೆ.

2019ರಿಂದ ಡೆಲ್ಲಿ ಭಾಗವಾಗಿದ್ದಾರೆ ರಿಷಭ್

2019 ರಿಂದ ಡೆಲ್ಲಿ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ ಅವರನ್ನು ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಡೆಲ್ಲಿ 18 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ರಿಷಭ್ ಪಂತ್ ತಂಡವನ್ನು ತೊರೆದು ಹರಾಜಿಗೆ ಬಂದ ಕಾರಣ ಮೊದಲ ಆದ್ಯತೆಯಾಗಿ ಅಕ್ಷರ್​ರನ್ನು ಉಳಿಸಿಕೊಳ್ಳಲಾಗಿತ್ತು. ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿದ ಡೆಲ್ಲಿ, ಕೆಎಲ್ ರಾಹುಲ್ ಅವರನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡಿತು.

ರಾಹುಲ್ ತಂಡವನ್ನು ಸೇರ್ಪಡೆಯ ಬಳಿಕ ಡೆಲ್ಲಿಗೆ ಪೂರ್ಣಾವಧಿ ನಾಯಕನಾಗುತ್ತಾರೆ ಎಂದು ಹೇಳಲಾಗಿತ್ತು. ಏಕೆಂದರೆ ರಾಹುಲ್ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್​ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವ ಹೊಂದಿದ್ದ ಕಾರಣ ಅವರೇ ಜವಾಬ್ದಾರಿ ಪಡೆಯುವ ನಿರೀಕ್ಷೆ ಇತ್ತು. ಆದರೀಗ ದಿನೇಶ್ ಕಾರ್ತಿಕ್ ನೀಡಿರುವ ಹೇಳಿಕೆ ಎಲ್ಲರನ್ನೂ ಅಚ್ಚರಿ ಮೂಡಿಸಿದೆ.

ದಿನೇಶ್ ಕಾರ್ತಿಕ್ ಹೇಳಿದ್ದೇನು?

ಇದೆಲ್ಲದರ ಮಧ್ಯೆ ಕಳೆದ ವಾರ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಗೆ ಬಿಸಿಸಿಐ ಘೋಷಿಸಿದ ಭಾರತ ತಂಡದಲ್ಲಿ ಅಕ್ಷರ್ ಅವರನ್ನು ಮೊದಲ ಬಾರಿಗೆ ವೈಸ್ ಕ್ಯಾಪ್ಟನ್​ ಆಗಿ ಹೆಸರಿಸಲಾಗಿದೆ. ದಿನೇಶ್ ಕಾರ್ತಿಕ್ ಮಾತನಾಡಿ, ಭಾರತದ ಉಪನಾಯಕ ಅಕ್ಷರ್ ಪಟೇಲ್​ಗೆ ಆಲ್ ದಿ ಬೆಸ್ಟ್. ಅವರಿಗಿದು ಉತ್ತಮ ಅವಕಾಶ. ಅಕ್ಷರ್​ ಡೆಲ್ಲಿ ತಂಡದ ನಾಯಕರೂ ಆಗಲಿದ್ದಾರೆ. ಆದ್ದರಿಂದ ಅವರಿಗೆ ಮುನ್ನಡೆಸಲು ಮತ್ತು ದಾರಿ ತೋರಿಸಲು ಇಲ್ಲಿ ಉತ್ತಮ ಅವಕಾಶವಿದೆ. ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಕೆಎಲ್ ರಾಹುಲ್ 2020ರ ಋತುವಿನ ನಂತರ ಮೊದಲ ಬಾರಿಗೆ ಕೇವಲ ಬ್ಯಾಟರ್​ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. 32 ವರ್ಷದ ಬೆಂಗಳೂರು ಕ್ರಿಕೆಟಿಗ 2020 ಮತ್ತು 2021ರಲ್ಲಿ ಪಿಬಿಕೆಎಸ್ ಮತ್ತು 2022 ರಿಂದ 2024 ರವರೆಗೆ ಎಲ್ಎಸ್​ಜಿ ನಾಯಕನಾಗಿದ್ದರು. ಡೆಲ್ಲಿ ಪರವೂ ರಾಹುಲ್ ಆರಂಭಿಕನಾಗಿಯೇ ಬ್ಯಾಟ್ ಬೀಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Whats_app_banner