ಹಗಲು-ರಾತ್ರಿ ಪಂದ್ಯಕ್ಕೆ ಕೆಂಪು ಚೆಂಡಿನ ಬದಲಿಗೆ ಪಿಂಕ್ ಬಾಲ್ ಬಳಸುವುದೇಕೆ; ಗುಲಾಬಿ ಚೆಂಡಿನ ಬೆಲೆಯೆಷ್ಟು, ವಿಶೇಷತೆಗಳೇನು?
Red Ball Vs Pink Ball: ಹಗಲು-ರಾತ್ರಿ ಪಂದ್ಯಕ್ಕೆ ಕೆಂಪು ಚೆಂಡಿನ ಬದಲಿಗೆ ಪಿಂಕ್ ಬಾಲ್ ಬಳಸುವುದೇಕೆ? ಪಿಂಕ್ ಬಾಲ್ ಬೆಲೆ ಎಷ್ಟು? ಇದರ ವಿಶೇಷತೆಗಳೇನು? ಇಲ್ಲಿದೆ ವಿವರ.
ಬಾರ್ಡರ್-ಗವಾಸ್ಕರ್ ಟ್ರೋಫಿ 2024-2025ರ ಸರಣಿಯಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಅಡಿಲೇಡ್‌ನ ಓವಲ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭಗೊಂಡಿದೆ. ಒಂಬತ್ತು ವರ್ಷಗಳ ಹಿಂದೆ ಅಧಿಕೃತವಾಗಿ ಆರಂಭಗೊಂಡ ಹಗಲು ರಾತ್ರಿ ಟೆಸ್ಟ್ ಪಂದ್ಯಗಳು ಅಭಿಮಾನಿಗಳನ್ನು ಆಕರ್ಷಿಸಿವೆ. ಈವರೆಗೂ ಒಟ್ಟು 22 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ಜರುಗಿದ್ದು, ಒಂದು ಪಂದ್ಯ ಸಹ ಡ್ರಾನಲ್ಲಿ ಅಂತ್ಯಗೊಂಡಿಲ್ಲ. ಹಗಲು-ರಾತ್ರಿ ಪಂದ್ಯಕ್ಕೆ ಕೆಂಪು ಚೆಂಡಿನ ಬದಲಿಗೆ ಪಿಂಕ್ ಬಾಲ್ ಬಳಸುವುದೇಕೆ? ಪಿಂಕ್ ಬಾಲ್ ಬೆಲೆ ಎಷ್ಟು? ಇದರ ವಿಶೇಷತೆಗಳೇನು? ಇಲ್ಲಿದೆ ವಿವರ.
- ಮೈದಾನದ ಫ್ಲೈಡ್ ಲೈಟ್ಗಳ ಅಡಿಯಲ್ಲಿ ಸಂಜೆಯ ವೇಳೆ ಚೆಂಡನ್ನು ಗುರುತಿಸಲು ಪಿಂಕ್ ಬಾಲ್ ಬಳಕೆ
- ಸಾಮಾನ್ಯ ಟೆಸ್ಟ್ ಪಂದ್ಯದಲ್ಲಿ ಕೆಂಪು ಚೆಂಡು ಬಳಕೆ. ಈ ಚೆಂಡು ರಾತ್ರಿ ವೇಳೆ ಗೋಚರಿಸುವುದಿಲ್ಲ.
- ಬೆಳಕಿನ ದೀಪಗಳ ಅಡಿಯಲ್ಲಿ ಗೋಚರತೆ ಖಚಿತಪಡಿಸಿಕೊಳ್ಳಲು ಹೊಸ ಚೆಂಡಿನ ಬಣ್ಣವು ಅಗತ್ಯವಾಗಿತ್ತು.
- ಅಧಿಕೃತ ಆರಂಭಕ್ಕೂ ಮುನ್ನ ಪಿಂಕ್ ಬಾಲ್ ಜೊತೆಗೆ ಹಳದಿ ಮತ್ತು ಕಿತ್ತಳೆ ಚೆಂಡುಗಳ ಪ್ರಯೋಗ ನಡೆದಿತ್ತು.
- ರಾತ್ರಿ ವೇಳೆ ಪಿಂಕ್ ಬಾಲ್ ಸ್ಪಷ್ಟವಾಗಿ ಕಾಣುತ್ತಿದ್ದ ಹಿನ್ನೆಲೆ ಅದನ್ನೇ ಅಂತಿಮಗೊಳಿಸಿ ಆಯ್ಕೆ ಮಾಡಲಾಯಿತು.
- ಕೆಂಪು ಮತ್ತು ಗುಲಾಬಿ ಚೆಂಡಿನ ವ್ಯತ್ಯಾಸವೆಂದರೆ ಹೊಲಿಗೆ ಸಾಲು. ಗುಲಾಬಿ ಬಣ್ಣದ ಚೆಂಡು ಕಪ್ಪು ದಾರದಿಂದ ಹೊಲಿದಿರಲಾಗಿರುತ್ತದೆ. ದೀರ್ಘಕಾಲದವರೆಗೆ ಅದರ ಹೊಳಪನ್ನು ಕಾಪಾಡಿಕೊಳ್ಳುತ್ತದೆ.
- ಕೆಂಪು ಚೆಂಡುಗಳಿಗೆ ಹೋಲಿಸಿದರೆ ಪಿಂಕ್ ಬಾಲ್ 40 ಓವರ್ಗಳ ತನಕ ಹೊಳಪು ಹೊಂದಿರುತ್ತದೆ.
- ಹೀಗಾಗಿ ಬೌಲರ್ಗಳು ಹೆಚ್ಚು ಸ್ವಿಂಗ್ ಮತ್ತು ಸೀಮ್ ಪಡೆಯುತ್ತಾರೆ. ಇದು ಬ್ಯಾಟರ್‌ಗಳಿಗೆ ಸವಾಲಿನ ಪರಿಸ್ಥಿತಿ ಸೃಷ್ಟಿಸುತ್ತದೆ.
- ಚೆಂಡು ಪಿಚ್ಗೆ ತಾಗುತ್ತಿದ್ದಂತೆ ಜಾರುತ್ತದೆ. ಸ್ವಿಂಗ್ ಮತ್ತು ಸ್ಕಿಡ್ ಆಗಲಿದ್ದು, ಬೌಲರ್ಗಳಿಗೆ ಹೆಚ್ಚು ನೆರವಾಗುತ್ತದೆ.
- ಕೆಂಪು ಚೆಂಡಿಗೆ ಹೋಲಿಸಿದರೆ ಪಿಂಕ್ ಬಾಲ್ ತುಂಬಾ ವಿಭಿನ್ನ. ಬ್ಯಾಟರ್ ಈ ಚೆಂಡಿನ ಪಥ ಗುರುತಿಸುವುದು ಸುಲಭವಲ್ಲ.
- ಹೊಳಪು ಹೆಚ್ಚಿರುವ ಕಾರಣ ಸ್ವಿಂಗ್ ಆಗುವ ಕಾರಣ ಚೆಂಡು ಬಿದ್ದು ಯಾವ ಕಡೆ ಟರ್ನ್ ಆಗುತ್ತದೆ ಎಂಬುದನ್ನು ಗುರುತಿಸುವುದು ಕಷ್ಟ.
- ಅಡಿಲೇಡ್ ಟೆಸ್ಟ್ನಲ್ಲಿ ಕೂಕಬುರಾ ಕಂಪನಿಯ ಪಿಂಕ್ ಬಾಲ್ ಅನ್ನು ಬಳಕೆ ಮಾಡಲಾಗುತ್ತಿದೆ.
- ವರದಿಗಳ ಪ್ರಕಾರ ಈ ಗುಲಾಬಿ ಚೆಂಡಿನ ಬೆಲೆ ಸುಮಾರು 20 ರಿಂದ 25 ರೂಪಾಯಿ ಆಗಿರಲಿದೆ.
- ಟೆಸ್ಟ್ ಕ್ರಿಕೆಟ್ ಅನ್ನು ಹಗಲು ಮತ್ತು ರಾತ್ರಿ ನಡೆಸಲು 2012ರಲ್ಲಿ ಐಸಿಸಿ ಅನುಮತಿ ನೀಡಿತು.
- 2015ರಲ್ಲಿ ಅಧಿಕೃತವಾಗಿ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ನಡೆಯಿತು. ಅದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಡಿಲೇಡ್ನಲ್ಲಿ ನಡೆಯಿತು.
- ಏಕದಿನ ಮತ್ತು ಟಿ20 ಕ್ರಿಕೆಟ್ ಭರಾಟೆಯಿಂದ ಕಳೆದು ಹೋಗುತ್ತಿದ್ದ ಟೆಸ್ಟ್ ಕ್ರಿಕೆಟ್ಗೆ ಅಭಿಮಾನಿಗಳನ್ನು ಸೆಳೆಯಲು ಪಿಂಕ್ ಬಾಲ್ ಟೆಸ್ಟ್ ಆರಂಭಿಸಲಾಯಿತು.