ಇವತ್ತು ನಿನ್ನನ್ನು ಬಿಡಲ್ಲ ಎಂದಿದ್ದೆ; ಕೊಹ್ಲಿ​ಗೆ ಸ್ಲೆಡ್ಜ್ ಮಾಡಿದ್ದ ಘಟನೆ ನೆನೆದ ಪಾಕ್ ಆಟಗಾರ
ಕನ್ನಡ ಸುದ್ದಿ  /  ಕ್ರಿಕೆಟ್  /  ಇವತ್ತು ನಿನ್ನನ್ನು ಬಿಡಲ್ಲ ಎಂದಿದ್ದೆ; ಕೊಹ್ಲಿ​ಗೆ ಸ್ಲೆಡ್ಜ್ ಮಾಡಿದ್ದ ಘಟನೆ ನೆನೆದ ಪಾಕ್ ಆಟಗಾರ

ಇವತ್ತು ನಿನ್ನನ್ನು ಬಿಡಲ್ಲ ಎಂದಿದ್ದೆ; ಕೊಹ್ಲಿ​ಗೆ ಸ್ಲೆಡ್ಜ್ ಮಾಡಿದ್ದ ಘಟನೆ ನೆನೆದ ಪಾಕ್ ಆಟಗಾರ

Junaid Khan: 2012-2013ರಲ್ಲಿ ಭಾರತದ ಪ್ರವಾಸ ಕೈಗೊಂಡಾಗ 3ನೇ ಏಕದಿನ ಪಂದ್ಯದ ಮೊದಲು ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಕೊಹ್ಲಿಯನ್ನು ಸ್ಲೆಡ್ಜ್ ಮಾಡಿದ್ದೆ ಎಂದು ಪಾಕಿಸ್ತಾನದ ವೇಗಿ ಜುನೈದ್ ಖಾನ್ ಹೇಳಿದ್ದಾರೆ.

ಕೊಹ್ಲಿ​ಗೆ ಸ್ಲೆಡ್ಜ್ ಮಾಡಿದ್ದ ಘಟನೆ ನೆನೆದ ಪಾಕ್ ಆಟಗಾರ ಜುನೈದ್ ಖಾನ್.
ಕೊಹ್ಲಿ​ಗೆ ಸ್ಲೆಡ್ಜ್ ಮಾಡಿದ್ದ ಘಟನೆ ನೆನೆದ ಪಾಕ್ ಆಟಗಾರ ಜುನೈದ್ ಖಾನ್.

2012-13ರಲ್ಲಿ ಪಾಕಿಸ್ತಾನ, ಭಾರತದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವೇಗಿ ಜುನೈದ್ ಖಾನ್ (Junaid Khan), ಭಾರತದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಸ್ಲೆಡ್ಜಿಂಗ್ ಮಾಡಿದ್ದ ಘಟನೆಯನ್ನು ಈಗ ನೆನೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸುದೀರ್ಘ ವೃತ್ತಿಜೀವನ ಹೊಂದಿರದ ಜುನೈದ್ ಖಾನ್, 2012-13ರಲ್ಲಿ ನಡೆದ ಘಟನೆ ಕುರಿತು ವಿವರಿಸಿದ್ದಾರೆ.

ಅಲ್ಲದೆ, ವಿರಾಟ್ ಕೊಹ್ಲಿ ವಿಕೆಟ್ ವಿಶೇಷ ಎಂಬುದನ್ನು ತಿಳಿಸಿದ್ದಾರೆ. ಭಾರತದಲ್ಲಿ ನಡೆದ ಈ ಸರಣಿಯು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ ಈ ಒಡಿಐ ಸಿರೀಸ್​ನಲ್ಲಿ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲೂ ಈ ಎಡಗೈ ವೇಗಿಗೆ ಒಪ್ಪಿಸಿದ್ದರು. ಅಲ್ಲದೆ, ಕಿಂಗ್ ಪಾಲಿಗೆ ಅದು ಅತ್ಯಂತ ಕೆಟ್ಟ ಸರಣಿ. ಏಕೆಂದರೆ ಕೊಹ್ಲಿ ಮೂರು ಪಂದ್ಯಗಳಲ್ಲಿ ಕೇವಲ 13 ರನ್ ಗಳಿಸಿದ್ದರು.

ಸ್ಲೆಡ್ಜ್ ಮಾಡಿದ್ದೆ ಎಂದ ಜುನೈದ್

ಇದು ಆಧುನಿಕ ದಿಗ್ಗಜ ಆಟಗಾರನ ವೃತ್ತಿಜೀವನದ ಅತ್ಯಂತ ಕೆಟ್ಟ ದ್ವಿಪಕ್ಷೀಯ ಸರಣಿಯಾಗಿ ಉಳಿದಿದೆ. ಈ ಸರಣಿ ನೆನೆದು ಮಾತನಾಡಿದ ಪಾಕಿಸ್ತಾನದ ವೇಗದ ಬೌಲರ್ ಜುನೈದ್ ಖಾನ್, 3ನೇ ಏಕದಿನ ಪಂದ್ಯದ ಮೊದಲು ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಕೊಹ್ಲಿಯನ್ನು ಸ್ಲೆಡ್ಜ್ ಮಾಡಿದ್ದೆ. ಸತತ 2 ಪಂದ್ಯಗಳಲ್ಲಿ ಕೊಹ್ಲಿ ವಿಕೆಟ್​ ಪಡೆದಿದ್ದ ನನಗೆ, ನಾಯಕ ಯೂನಿಸ್ ಖಾನ್​ ಮತ್ತೊಮ್ಮೆ ಔಟ್ ಮಾಡುವಂತೆ ಪ್ರೋತ್ಸಾಹಿಸಿದ್ದರು ಎಂದು ಹೇಳಿದರು.

ವಿರಾಟ್ ವಿಕೆಟ್ ವಿಶೇಷ

ಕೊಹ್ಲಿಯ ವಿಕೆಟ್ ತನ್ನ ವೃತ್ತಿಜೀವನದಲ್ಲಿ ಸ್ಮರಣೀಯವಾಗಿದೆ ಎಂದು ಜುನೈದ್ ಹೇಳಿದ್ದಾರೆ. ನಾನು ಹಲವರನ್ನು ಔಟ್​ ಮಾಡಿದ್ದೇನೆ. ಪ್ರಮುಖ ಆಟಗಾರರ ವಿಕೆಟ್ ಪಡೆದಿದ್ದೇನೆ. ಆದರೆ ನನಗ್ಯಾವುದು ತೃಪ್ತಿಕೊಟ್ಟಿಲ್ಲ. ಜನರು ಯಾವಾಗಲೂ ವಿರಾಟ್ ಕೊಹ್ಲಿಯ ವಿಕೆಟ್ ನೆನಪಿಸಿಕೊಳ್ಳುತ್ತಾರೆ ಎಂದು ನಾದಿರ್ ಅಲಿ ಪಾಡ್‌ಕ್ಯಾಸ್ಟ್‌ನಲ್ಲಿ ಜುನೈದ್ ತಿಳಿಸಿದ್ದಾರೆ.

ಮತ್ತೆಂದೂ ಸಂಭವಿಸಲ್ಲ ಎಂದಿದ್ದ ಕೊಹ್ಲಿ

ನಾವು ಅಂಡರ್​-19 ವಿಶ್ವಕಪ್‌ನಲ್ಲಿ ಆಡಿದ್ದೇವೆ. ಒಬ್ಬರಿಗೊಬ್ಬರು ಪರಸ್ಪರ ಪರಿಚಯ ಹೊಂದಿದ್ದೇವೆ. ಇದು (2012-13) ನನ್ನ ಕಂಬ್ಯಾಕ್ ಸರಣಿಯಾಗಿತ್ತು. ಮತ್ತು ಭಾರತದಲ್ಲಿ ನನಗೆ ಮೊದಲ ಸರಣಿಯಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದಿದ್ದೆ. ಇದಕ್ಕೆ ಉತ್ತರಿಸಿದ್ದ ಕೊಹ್ಲಿ, ಈ ಘಟನೆ ಮತ್ತೆಂದೂ ಸಂಭವಿಸುವುದಿಲ್ಲ ಎಂದು ಅವರು ನನಗೆ ಹೇಳಿದ್ದರು. ಆದರೆ 3ನೇ ಮತ್ತು 3ನೇ ಪಂದ್ಯದಲ್ಲೂ ನಾನೇ ಔಟ್ ಮಾಡಿದ್ದೆ ಎಂದರು.

‘ನಿನ್ನನ್ನು ಇಂದು ಔಟ್ ಮಾಡುವೆ’

ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ನಾನು ಬ್ರೇಕ್‌ಫಾಸ್ಟ್ ಟೇಬಲ್​ನಲ್ಲಿ ಕೂತಿದ್ದೆವು. ಆಗ ಕೊಹ್ಲಿಗೆ ಇವತ್ತು ಕೂಡ ನಿನ್ನನ್ನು ಬಿಡಲ್ಲ, ನಾನೇ ಔಟ್ ಮಾಡುವೆ ಎಂದು ಹೇಳಿದ್ದೆ. ಯೂನಿಸ್ ಖಾನ್ ಕೂಡ ಅಲ್ಲಿದ್ದರು. ಕೊಹ್ಲಿಯನ್ನು ಇವತ್ತು ಸಹ ಔಟ್ ಮಾಡುವಂತೆ ಬೆಂಬಲ ನೀಡಿದ್ದರು. ವಿಶೇಷ ಅಂದರೆ ನನ್ನ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದ್ದ ಕೊಹ್ಲಿ ಕ್ಯಾಚ್ ಅನ್ನು ಯೂನಿಸ್ ಭಾಯ್ ಪಡೆದರು ಎಂದು ತಿಳಿಸಿದ್ದಾರೆ.

ಜುನೈದ್ ಕ್ರಿಕೆಟ್ ಕರಿಯರ್

ಜುನೈದ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 22 ಟೆಸ್ಟ್ ಪಂದ್ಯ, 76 ಏಕದಿನಗಳು ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 189 ವಿಕೆಟ್ ಪಡೆದಿದ್ದಾರೆ. 2014ರಲ್ಲಿ ತನ್ನ ಕೊನೆಯ ಟೆಸ್ಟ್ ಮತ್ತು ಟಿ20 ಪಂದ್ಯವನ್ನಾಡಿದ ಜುನೈದ್, 2019ರಲ್ಲಿ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಅದು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯ. 2012-13 ಭಾರತ-ಪಾಕಿಸ್ತಾನವು ಈವರೆಗಿನ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿಯಾಗಿದೆ.

Whats_app_banner