ಕನ್ನಡ ಸುದ್ದಿ  /  ಕ್ರಿಕೆಟ್  /  ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ವರ್ಷಗಳ ನಂತರ ಗೆದ್ದ ಕೆಕೆಆರ್​; ಹಾರ್ದಿಕ್ ಪಡೆ ಪ್ಲೇಆಫ್ ಕನಸು ಭಗ್ನ

ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ವರ್ಷಗಳ ನಂತರ ಗೆದ್ದ ಕೆಕೆಆರ್​; ಹಾರ್ದಿಕ್ ಪಡೆ ಪ್ಲೇಆಫ್ ಕನಸು ಭಗ್ನ

KKR beat MI : 17ನೇ ಆವೃತ್ತಿಯ ಐಪಿಎಲ್​ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 24 ರನ್​​ಗಳ ಭರ್ಜರಿ ಗೆಲುವು ಸಾಧಿಸಿತು.

ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ವರ್ಷಗಳ ನಂತರ ಗೆದ್ದ ಕೆಕೆಆರ್​; ಹಾರ್ದಿಕ್ ಪಡೆ ಪ್ಲೇಆಫ್ ಕನಸು ಭಗ್ನ
ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ವರ್ಷಗಳ ನಂತರ ಗೆದ್ದ ಕೆಕೆಆರ್​; ಹಾರ್ದಿಕ್ ಪಡೆ ಪ್ಲೇಆಫ್ ಕನಸು ಭಗ್ನ (PTI)

ಮುಂಬೈ ಇಂಡಿಯನ್ಸ್​ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (Mumbai Indians vs Kolkata Knight Riders) ಐತಿಹಾಸಿಕ ದಾಖಲೆಯ ಗೆಲುವು ಸಾಧಿಸಿತು. 2012ರ ನಂತರ ವಾಂಖೆಡೆ ಮೈದಾನದಲ್ಲಿ ಎಂಐ ವಿರುದ್ಧ ಕೆಕೆಆರ್​ ಗೆಲುವಿನ ಕೇಕೆ ಹಾಕಿತು. 169 ರನ್​ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಶ್ರೇಯಸ್ ಅಯ್ಯರ್ ಪಡೆ, 24 ರನ್​ಗಳಿಂದ ಗೆದ್ದು ಬೀಗಿತು. ಈ ಮೈದಾನದಲ್ಲಿ​ ಎಂಐ ವಿರುದ್ಧ ಕೆಕೆಆರ್ ಸಾಧಿಸಿದ ಎರಡನೇ ಗೆಲುವು ಇದಾಗಿದೆ. ಮತ್ತೊಂದು ಸೋಲಿಗೆ ಶರಣಾದ ಹಾರ್ದಿಕ್ ಪಾಂಡ್ಯ ಪ್ಲೇಆಫ್ ಕನಸು ಭಗ್ನಗೊಂಡಿತು. 5 ಬಾರಿಯ ಚಾಂಪಿಯನ್ ತಂಡ ಒಟ್ಟು 8 ಸೋಲು ಕಂಡು ಭಾರಿ ಮುಖಭಂಗಕ್ಕೆ ಒಳಗಾಯಿತು. 

ಟ್ರೆಂಡಿಂಗ್​ ಸುದ್ದಿ

ಮುಂಬೈನ ಐಕಾನಿಕ್​ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, ಸ್ಪರ್ಧಾತ್ಮ ಮೊತ್ತಕ್ಕೆ ಕುಸಿಯಿತು, ಮುಂಬೈ ಬೌಲರ್​ಗಳ ಮಾರಕ ದಾಳಿಯ ನಡುವೆಯೂ ವೆಂಕಟೇಶ್​​ ಅಯ್ಯರ್ 70 ರನ್ ಸಿಡಿಸಿ ತಂಡವನ್ನು ರಕ್ಷಿಸಿದರು. 20 ಓವರ್​​ಗಳಲ್ಲಿ ಕೋಲ್ಕತ್ತಾ 169 ರನ್​​ಗಳಿಗೆ ಆಲೌಟ್ ಆಯಿತು. ನುವಾನ್ ತುಷಾರ ಮತ್ತು ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಗುರಿ ಬೆನ್ನಟ್ಟಿದ ಮುಂಬೈ, ಗೆಲುವಿನ ಅಂಚಿಗೆ ತಲುಪಿಗೆ ಶರಣಾಯಿತು. 4 ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್ ಮುಂಬೈ ತಂಡವನ್ನು 145 ರನ್​ಗಳಿಗೆ ಆಲೌಟ್ ಮಾಡಿದರು.

170 ರನ್​ ಟಾರ್ಗೆಟ್ ಬೆನ್ನಟ್ಟಿದ ಮುಂಬೈ, ಪವರ್​​​ಪ್ಲೇನಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ (13), ರೋಹಿತ್​ ಶರ್ಮಾ (11), ನಮನ್ ಧೀರ್ (11) ಬೇಗನೇ ಔಟಾದರು. ಒಂದೆಡೆ ಸೂರ್ಯಕುಮಾರ್ ಕ್ರೀಸ್ ಕಚ್ಚಿನಿಂತು ಬೌಲರ್​​ಗಳ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಬ್ಯಾಟ್​ ಹಿಡಿದು ಬಂದ ಬೌಲರ್​​​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಹಾರ್ದಿಕ್ ಪಾಂಡ್ಯ ಡಕೌಟ್ ಆದರೆ, ತಿಲಕ್ ವರ್ಮಾ (4), ನೇಹಾಲ್ ವದೇರಾ (6) ನಿರಾಸೆ ಮೂಡಿಸಿದರು.

ಇದರ ನಡುವೆಯೂ ಸೂರ್ಯಕುಮಾರ್ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವಿನ ಆಸೆ ಹೆಚ್ಚಿಸಿದರು. ಸೂರ್ಯಗೆ ಟಿಮ್ ಡೇವಿಡ್ ಸಾಥ್ ನೀಡಿದರು. ಆದರೆ, ಸ್ಕೈ 35 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 56 ರನ್ ಸಿಡಿಸಿ ಕೊನೆಯ ಹಂತದಲ್ಲಿ ಔಟಾದರು. ಇದರೊಂದಿಗೆ ಎಂಐ ಗೆಲುವಿನ ಕನಸು ಕೂಡ ಕಮರಿತು. ಟಿಮ್ ಡೇವಿಡ್ ಸಹ 24 ರನ್​​ಗಳಿಗೆ ಸುಸ್ತಾದರು. ಕೆಕೆಆರ್​ ಬೌಲರ್​​ಗಳು ಆರಂಭದಿಂದ ಕೊನೆಯವರೆಗೂ ಅದ್ಭುತ ಪ್ರದರ್ಶನ ನೀಡಿದರು. ಮಿಚೆಲ್ ಸ್ಟಾರ್ಕ್​ 4 ವಿಕೆಟ್, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಸುನಿಲ್ ನರೇನ್ ತಲಾ 2 ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​ ಕೂಡ ಪವರ್​​ಪ್ಲೇನಲ್ಲೇ 4 ವಿಕೆಟ್​ ಕಳೆದುಕೊಂಡಿತು. ಫಿಲ್ ಸಾಲ್ಟ್ (5), ಸುನಿಲ್ ನರೇನ್ (8), ಆಂಗ್ಕ್ರಿಷ್ ರಘುವಂಶಿ (13) ಮತ್ತು ಶ್ರೇಯಸ್ ಅಯ್ಯರ್ (6) ನಿರಾಸೆ ಮೂಡಿಸಿದರು. ಪವರ್​​​ಪ್ಲೇ ಮುಕ್ತಾಯಗೊಂಡ ಮೊದಲ ಓವರ್​​ನಲ್ಲೇ ರಿಂಕು ಸಿಂಗ್ ಸಹ ಪೆವಿಲಿಯನ್ ಸೇರಿದರು. ಆಗ ತಂಡದ ಮೊತ್ತ 57/5. ಆ ಬಳಿಕ ಆದರೆ ವೆಂಕಟೇಶ್ ಅಯ್ಯರ್ ಮತ್ತು ಮನೀಶ್ ಪಾಂಡೆ 83 ರನ್​ಗಳ ಪಾಲುದಾರಿಕೆ ಒದಗಿಸಿದರು. ಅದರಲ್ಲೂ ವೆಂಕಿ 70 ರನ್ ಸಿಡಿಸಿದರು. ಮನೀಶ್ 42 ರನ್ ಸಿಡಿಸಿದರು. ಪರಿಣಾಮ 19.5 ಓವರ್​​​ಗಳಲ್ಲಿ 169 ರನ್​ಗಳಿಗೆ ಆಲೌಟ್ ಆಯಿತು.

IPL_Entry_Point