ಕನ್ನಡ ಸುದ್ದಿ  /  ಕ್ರಿಕೆಟ್  /  Kkr Vs Mi: ಮುಂಬೈ ಇಂಡಿಯನ್ಸ್ ಮಣಿಸಿ ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

KKR vs MI: ಮುಂಬೈ ಇಂಡಿಯನ್ಸ್ ಮಣಿಸಿ ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

KKR vs MI Highlights: 17ನೇ ಆವೃತ್ತಿಯ ಐಪಿಎಲ್​ನ 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್​ಗಳಿಂದ ಮಣಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಅಧಿಕೃತವಾಗಿ ಪ್ಲೇಆಫ್​ ಪ್ರವೇಶಿಸಿದೆ.

ಮುಂಬೈ ಇಂಡಿಯನ್ಸ್ ಮಣಿಸಿ ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
ಮುಂಬೈ ಇಂಡಿಯನ್ಸ್ ಮಣಿಸಿ ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ (AP)

ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್​ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್​ ರೈಡರ್ಸ್ ಮೊದಲ ತಂಡವಾಗಿ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​​ನಲ್ಲಿ ಪ್ಲೇಆಫ್​ ಪ್ರವೇಶಿಸಿವೆ. ಟೂರ್ನಿಯಲ್ಲಿ 9ನೇ ಗೆಲುವು ಸಾಧಿಸಿದ ಕೆಕೆಆರ್, 18 ಅಂಕ ಪಡೆದಿದೆ. ಆದರೆ ಮುಂಬೈ ಔಪಚಾರಿಕ ಪಂದ್ಯದಲ್ಲೂ ಸೋಲಿನ ಕಹಿ ಅನುಭವಿಸಿದೆ. ಇದು ಹಾರ್ದಿಕ್ ಪಡೆಯ 9ನೇ ಸೋಲು ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್ ಇತಿಹಾಸದಲ್ಲಿ ಎರಡು ಟ್ರೋಫಿ ಗೆದ್ದಿರುವ ಕೋಲ್ಕತ್ತಾ, ಪ್ರಸಕ್ತ ಆವೃತ್ತಿಯೂ ಸೇರಿ ಒಟ್ಟು 8 ಬಾರಿ ಪ್ಲೇಆಫ್​ ಪ್ರವೇಶಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲೂ ಸೋತ ಹಾರ್ದಿಕ್ ಪಡೆ, ಕೆಕೆಆರ್​ ವಿರುದ್ಧವೇ ಸೋತಿತ್ತು. ಈಗ ಮತ್ತೊಮ್ಮೆ ಭಾರಿ ಮುಖಭಂಗಕ್ಕೆ ಒಳಗಾಗಿದೆ.

ಕೋಲ್ಕತ್ತಾದಲ್ಲಿ ಭಾರಿ ಮಳೆಯ ಕಾರಣ ಟಾಸ್ ವಿಳಂಬವಾಗಿತ್ತು. ಓವರ್​​ಗಳ ಕಡಿತದೊಂದಿಗೆ ರಾತ್ರಿ 9.15ಕ್ಕೆ ಪಂದ್ಯ ಆರಂಭವಾಯಿತು. 16 ಓವರ್​​ಗಳಿಗೆ ಪಂದ್ಯವನ್ನು ಕಡಿತಗೊಳಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ, ತನ್ನ ಪಾಲಿನ 16 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಪೇರಿಸಿತು. ಮುಂಬೈ, ಅಷ್ಟೇ ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿತು.

ಕೆಕೆಆರ್​ ಬೌಲಿಂಗ್​ಗೆ ಮುಂಬೈ ತತ್ತರ

158 ರನ್​ ಗುರಿ ಬೆನ್ನಟ್ಟಿದ ಮುಂಬೈ ಭರ್ಜರಿ ಆರಂಭ ಪಡೆಯಿತು. 5 ಓವರ್​​ಗಳ ಪವರ್​​ಪ್ಲೇನಲ್ಲಿ ಇಶಾನ್ ಕಿಶನ್ ಮತ್ತು ರೋಹಿತ್​ ಶರ್ಮಾ 59 ರನ್ ಕಲೆ ಹಾಕಿದರು. ಆದರೆ ಪವರ್​​ಪ್ಲೇ ಬಳಿಕ ಮುಂಬೈ ತಂಡದ ಚಿತ್ರಣ ಬದಲಾಯಿತು. ಕೆಕೆಆರ್ ಬೌಲರ್​ಗಳು ಮೇಲುಗೈ ಸಾಧಿಸಿದ್ರು. ಇಶಾನ್ 40, ರೋಹಿತ್​ 19, ಸೂರ್ಯಕುಮಾರ್ 11, ಹಾರ್ದಿಕ್ ಪಾಂಡ್ಯ 2, ಟಿಮ್ ಡೇವಿಡ್ 0 ರನ್ ಗಳಿಸಿ ಬ್ಯಾಕ್ ಟು ಬ್ಯಾಕ್ ಔಟಾದರು.

ಅದರಲ್ಲೂ ಮುಂಬೈ ಬ್ಯಾಟರ್​ಗಳ ಆರ್ಭಟಕ್ಕೆ ವರುಣ್ ಚಕ್ರವರ್ತಿ 2, ಆಂಡ್ರೆ ರಸೆಲ್ 2, ಸುನಿಲ್ ನರೇನ್ 1 ವಿಕೆಟ್ ಕಿತ್ತು ಬ್ರೇಕ್​ ಹಾಕಿದರು. ಕೊನೆಯಲ್ಲಿ ತಿಲಕ್ ವರ್ಮಾ 32 ರನ್ ಹೋರಾಡಿದರೂ ಗೆಲುವು ದಕ್ಕಲಿಲ್ಲ. ಹರ್ಷಿತ್ ರಾಣಾ ಸಹ 2 ವಿಕೆಟ್ ಪಡೆದು ಮಿಂಚಿದರು. ಅಂತಿಮ ಕ್ಷಣದಲ್ಲಿ ನೇಹಾಲ್ ವದೇರಾ 3, ನಮನ್ ಧೀರ್ 17 ರನ್ ಗಳಿಸಿದರು.

ವೆಂಕಟೇಶ್ ಅಯ್ಯರ್ ಉತ್ತಮ ಪ್ರದರ್ಶನ

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್, ಮೊದಲ ಐದು ಓವರ್​​ಗಳಲ್ಲಿ ಸುನಿಲ್ ನರೇನ್ (0), ಫಿಲ್ ಸಾಲ್ಟ್ (6), ಶ್ರೇಯಸ್ ಅಯ್ಯರ್ (7) ಅವನ್ನು ಕಳೆದುಕೊಂಡಿತು. ಆಗ ತಂಡದ ಸ್ಕೋರ್ 40 ಆಗಿತ್ತು. ಬಳಿಕ ವೆಂಕಟೇಶ್ ಅಯ್ಯರ್ ಮತ್ತು ನಿತೀಶ್ ರಾಣಾ ತಂಡಕ್ಕೆ ಆಸರೆಯಾದರು. ವೆಂಕಿ 21 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ ಸಹಿತ 42 ರನ್ ಸಿಡಿಸಿದರೆ, ರಾಣಾ 23 ಎಸೆತಗಳಲ್ಲಿ (4 ಬೌಂಡರಿ, 1 ಸಿಕ್ಸರ್) 33 ರನ್ ಗಳಿಸಿದರು.

ಕೊನೆಯಲ್ಲಿ ಆಂಡ್ರೆ ರಸೆಲ್ ಸ್ಫೋಟಕ 24 ರನ್ ಸಿಡಿಸಿದರೆ, ರಿಂಕು ಸಿಂಗ್ 20 ರನ್ ಬಾರಿಸಿದರು. ರಮನ್​ದೀಪ್​ ಸಿಂಗ್ ಅಜೇಯ 17 ರನ್ ಬಾರಿಸಿದರು. ಮುಂಬೈ ಬೌಲರ್​​ಗಳು ರನ್​ ಬಿಟ್ಟರೂ ಅಗತ್ಯವಿದ್ದಾಗ ವಿಕೆಟ್ ಕಬಳಿಸಿ ಗಮನ ಸೆಳೆದರು. ಜಸ್ಪ್ರೀತ್ ಬುಮ್ರಾ ಮತ್ತು ಪಿಯೂಷ್ ಚಾವ್ಲಾ ತಲಾ ವಿಕೆಟ್ ಪಡೆದರೆ, ಅನ್ಶುಲ್ ಕಂಬೋಜ್ ಮತ್ತು ನುವಾನ್ ತುಷಾರ ಅವರು ತಲಾ 1 ವಿಕೆಟ್ ಉರುಳಿಸಿದರು.

IPL_Entry_Point