ಕನ್ನಡ ಸುದ್ದಿ  /  ಕ್ರಿಕೆಟ್  /  Kavya Maran: ಎಸ್‌ಆರ್‌ಎಚ್ ವಿರುದ್ಧ ಐಪಿಎಲ್ ಫೈನಲ್ ಗೆದ್ದ ಕೆಕೆಆರ್; ಜಾಲತಾಣದಲ್ಲಿ ಕಾವ್ಯಾ ಮಾರನ್ ಕುರಿತ ಮೀಮ್ಸ್ ವೈರಲ್

Kavya Maran: ಎಸ್‌ಆರ್‌ಎಚ್ ವಿರುದ್ಧ ಐಪಿಎಲ್ ಫೈನಲ್ ಗೆದ್ದ ಕೆಕೆಆರ್; ಜಾಲತಾಣದಲ್ಲಿ ಕಾವ್ಯಾ ಮಾರನ್ ಕುರಿತ ಮೀಮ್ಸ್ ವೈರಲ್

ಐಪಿಎಲ್ ಫೈನಲ್‌ನಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಕೆಕೆಆರ್ ಚಾಂಪಿಯಾನ್ ಆಗುತ್ತಿದ್ದಂತೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರ ಮೀಮ್ಸ್‌ಗಳು ಜಾಲತಾಣದಲ್ಲಿ ವೈರಲ್ ಆಗಿವೆ.

ಎಸ್‌ಆರ್‌ಎಚ್ ವಿರುದ್ಧ ಐಪಿಎಲ್ ಫೈನಲ್ ಗೆದ್ದ ಕೆಕೆಆರ್; ಜಾಲತಾಣದಲ್ಲಿ ಕಾವ್ಯಾ ಮಾರನ್ ಕುರಿತ ಮೀಮ್ಸ್ ವೈರಲ್ ಆಗಿದೆ.
ಎಸ್‌ಆರ್‌ಎಚ್ ವಿರುದ್ಧ ಐಪಿಎಲ್ ಫೈನಲ್ ಗೆದ್ದ ಕೆಕೆಆರ್; ಜಾಲತಾಣದಲ್ಲಿ ಕಾವ್ಯಾ ಮಾರನ್ ಕುರಿತ ಮೀಮ್ಸ್ ವೈರಲ್ ಆಗಿದೆ.

ಚೆನ್ನೈ (ತಮಿಳುನಾಡು): ಭಾರತದ ಅತಿ ದೊಡ್ಡ ಕಡಲ ತೀರಗಳಲ್ಲೊಂದಾದ ಮರೀನಾ ಬೀಚ್ ಪಕ್ಕದಲ್ಲೇ ಇರುವ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ (IPL 2024 Final) ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು (Sunrisers Hyderabad) 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತ್ತ ನೈಟ್ ರೈಡರ್ಸ್ (Kolkata Knight Riders) 2024ರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮತ್ತೊಂದೆಡೆ ಫಲಿತಾಂಶ ಹೊರಬೀಳುವ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರ ಕುರಿತ ಮೀಮ್ಸ್‌ಗಳು ಸಾಮಾಜಿಕ ಜಾಲಾತಣಗಳಲ್ಲಿ ಸಖತ್ ವೈರಲ್ ಆಗಿವೆ. ಆ ಮೀಮ್ಸ್‌ಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶಿವು ಎಂಬುವರು ಕಾವ್ಯಾ ಮಾರನ್‌ ಅವರಿಗೆ ಅತ್ಯಂತ ಕೆಟ್ಟ ಐಪಿಎಲ್ ಫೈನಲ್ ಪಂದ್ಯ ಎಂದು ಪೋಸ್ಟ್ ಮಾಡಿದ್ದಾರೆ.

ರಾಜುಬಾಬು ಎಂಬುವರು ಕೂಡ ಕಾವ್ಯಾ ಮಾರನ್ ಐಪಿಎಲ್ ಫೈನಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪ್ರದರ್ಶನವನ್ನು ನೋಡುವಾಗ ಎಂದು ಈ ಕೆಳಿಗಿನ ಫೋಸ್ಟ್ ಮಾಡಿದ್ದಾರೆ.

ಕಾವ್ಯಾ ಮಾರನ್ ಸ್ಟೇಡಿಯಂನಿಂದ ಹೊರ ನಡೆದಿದ್ದಾರೆ ಅಂತ ಮತ್ತೊಬ್ಬ ನೆಟ್ಟಿಗರ ಪೋಸ್ಟ್ ಮಾಡಿದ್ದಾರೆ.

ಅಕ್ಷಯ್ ಗಲಾವ್ ಎಂಬುವರು ಸ್ಯಾಡ್ ಫಾರ್ ಕಾವ್ಯಾ ಮಾರನ್ ಎಂದು ಬರೆದಿದ್ದಾರೆ.

ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಕೆಆರ್ 8 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ಆ ಮೂಲಕ 3ನೇ ಬಾರಿಗೆ ಐಪಿಎಲ್ ಚಾಂಪಿಯನ್ ತಂಡವನ್ನು ಹೊರಹೊಮ್ಮಿದೆ.

ಚೆಪಾಕ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ಯಾಟ್ ಕಮ್ಮಿನ್ಸ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಎಸ್‌ಆರ್‌ಎಚ್ ಬ್ಯಾಟರ್ಸ್ ವಿಫಲರಾದರು. ಇನ್ನಿಂಗ್ಸ್‌ನ ಮೊದಲ ಓವರ್‌ನಿಂದಲೇ ಪೆವಿಲಿಯನ್ ಪೆರೇಡ್ ನಡೆಸಿದರು. ಪರಿಣಾಮವಾಗಿ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 10.3 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 114 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ