ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ಸೇರ್ಪಡೆ, ಎಲ್‌ಎಸ್‌ಜಿ ಆಡುವ ಬಳಗದಿಂದ ಪಡಿಕ್ಕಲ್ ಔಟ್; ಕೋಲ್ಕತ್ತಾ Vs ಲಕ್ನೋ ಸಂಭಾವ್ಯ ತಂಡ

ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ಸೇರ್ಪಡೆ, ಎಲ್‌ಎಸ್‌ಜಿ ಆಡುವ ಬಳಗದಿಂದ ಪಡಿಕ್ಕಲ್ ಔಟ್; ಕೋಲ್ಕತ್ತಾ vs ಲಕ್ನೋ ಸಂಭಾವ್ಯ ತಂಡ

KKR vs LSG: ಐಪಿಎಲ್‌ 2024ರ ಆವೃತ್ತಿಯ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳೂ ಎದುರಾಗುತ್ತಿವೆ. ಕೋಲ್ಕತ್ತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಉಭಯ ತಂಡಗಳ ಸಂಭಾವ್ಯ ಆಡುವ ಬಳಗ ಹೀಗಿದೆ.

ಕೋಲ್ಕತ್ತಾ vs ಲಕ್ನೋ ಸಂಭಾವ್ಯ ತಂಡ
ಕೋಲ್ಕತ್ತಾ vs ಲಕ್ನೋ ಸಂಭಾವ್ಯ ತಂಡ

ಕೆಕೆಆರ್ ವಿರುದ್ಧ 3-0 ಅಂತರದ ಅಜೇಯ ದಾಖಲೆ ಹೊಂದಿರುವ ಎಲ್‌ಎಸ್‌ಜಿ, ನಾಲ್ಕನೇ ಮುಖಾಮುಖಿಗೆ ಸಜ್ಜಾಗಿದೆ. ಎರಡು ತಂಡಗಳು ಕೂಡಾ ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿವೆ. ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರು ಅಂಕಗಳನ್ನು ಕಲೆ ಹಾಕಿದೆ. ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತ ಕೆಎಲ್‌ ರಾಹುಲ್‌ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟೂರ್ನಿಯ ಮೊದಲ ಸೋಲನುಭವಿಸಿತು. ಆದರೂ ತಂಡ ಅಂಕಪಟ್ಟಿಯಲ್ಲಿ ಸುಸ್ಥಿತಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಇದೀಗ ಉಭಯ ತಂಡಗಳು ಐಪಿಎಲ್‌ 2024ರ ಆವೃತ್ತಿಯ 28ನೇ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಉಭಯ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಏಪ್ರಿಲ್‌ 14ರ ಭಾನುವಾರದ ಎರಡನೇ ಪಂದ್ಯ ಇದಾಗಿದ್ದು, ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಪ್ಡೇಟ್‌

ಕೈಗೆ ಗಾಯದಿಂದಾಗ ಉಪನಾಯಕ ನಿತೀಶ್ ರಾಣಾ ಹಾಗೂ ಭುಜದ ಗಾಯಕ್ಕೊಳಗಾಗಿದ್ದ ವೇಗಿ ಹರ್ಷಿತ್ ರಾಣಾ ಸದ್ಯ ತಂಡದ ತರಬೇತಿ ಅವಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ನಿತೀಶ್‌ ಆಡುವ ಬಳಗಕ್ಕೆ ಮರಳಲು ಸಜ್ಜಾಗಿದ್ದು, ರಮಣದೀಪ್ ಸಿಂಗ್ ಬದಲಿಗೆ ನಿತೀಶ್ ಆಡುವ ಬಳಗಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಸುಯಶ್ ಶರ್ಮಾ ಇಂಪ್ಯಾಕ್ಟ್‌ ಆಟಗಾರನಾಗಿ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ | ಜೂನಿಯರ್ ಮಲಿಂಗ ಇನ್, ಸ್ಟಾರ್​ ಆಟಗಾರ ಔಟ್; ಸಿಎಸ್​ಕೆ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI

ಲಕ್ನೋ ತಂಡದಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ಮಯಾಂಕ್ ಯಾದವ್‌ಮತ್ತು ಮೊಹ್ಸಿನ್ ಖಾನ್ ಇಬ್ಬರೂ ಆಡುವ ಬಳಗಕ್ಕೆ ಲಭ್ಯರಿಲ್ಲ. ಮಯಾಂಕ್‌ ಮುಂದಿನ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನ.

ರಾಹುಲ್ ಬಳಗದಿಂದ ದೇವದತ್ ಪಡಿಕ್ಕಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಳಪೆ ಫಾರ್ಮ್‌ನಿಂದ ಕನ್ನಡಿಗ ಬಳಲುತ್ತಿದ್ದು, ಮುಂದೆ ಬೆಂಚ್‌ಗೆ ಸೀಮಿತರಾಗುವ ಸಂಭಾವ್ಯತೆ ದಟ್ಟವಾಗಿದೆ. ಹೀಗಾಗಿ ಅರ್ಶಿನ್ ಕುಲಕರ್ಣಿ, ಯುದ್ವೀರ್ ಸಿಂಗ್ ಅಥವಾ ಪ್ರೇರಕ್ ಮಂಕಡ್‌ ಈ ಮೂವರಲ್ಲಿ ಒಬ್ಬರು ಆಡುವ ಸಾಧ್ಯತೆ ಇದೆ. ಇಂಥಾ ಸಂದರ್ಭದಲ್ಲಿ ತಂಡದ ವಿದೇಶಿ ಆಟಗಾರರಲ್ಲಿ ಬದಲಾವಣೆ ನಿರೀಕ್ಷೆ ಮಾಡಲಾಗದು. ಮೊದಲು ಬ್ಯಾಟಿಂಗ್‌ ಮಾಡಿದರೆ ಕ್ವಿಂಟನ್ ಡಿ ಕಾಕ್ ಆಡಲಿದ್ದು, ಬಳಿಕ ಸ್ಪಿನ್ನರ್ ಎಂ ಸಿದ್ಧಾರ್ಥ್ ಇಂಪ್ಯಾಕ್ಟ್‌ ಆಟಗಾರನಾಗಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ

ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ ಹಾಗೂ ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ರವಿ ಬಿಷ್ಣೋಯ್, ನವೀನ್ ಖಾನ್, ಅರ್ಷದ್ ಖಾನ್ -ಉಲ್-ಹಕ್, ಯಶ್ ಠಾಕೂರ್, ಎಂ ಸಿದ್ಧಾರ್ಥ್.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ಫಿಲ್ ಸಾಲ್ಟ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಮಿಚೆಲ್ ವೈಬ್, ಅರೋರಾ/ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.

IPL_Entry_Point