128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಮರಳಿದ ಕ್ರಿಕೆಟ್, ಅಮೆರಿಕ ಆಡೋದು ಖಚಿತ; ಉಳಿದ 5 ತಂಡಗಳಿಗೆ ಪೈಪೋಟಿ, ಆಯ್ಕೆ ಪ್ರಕ್ರಿಯೆ ಹೇಗೆ?
ಕನ್ನಡ ಸುದ್ದಿ  /  ಕ್ರಿಕೆಟ್  /  128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಮರಳಿದ ಕ್ರಿಕೆಟ್, ಅಮೆರಿಕ ಆಡೋದು ಖಚಿತ; ಉಳಿದ 5 ತಂಡಗಳಿಗೆ ಪೈಪೋಟಿ, ಆಯ್ಕೆ ಪ್ರಕ್ರಿಯೆ ಹೇಗೆ?

128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಮರಳಿದ ಕ್ರಿಕೆಟ್, ಅಮೆರಿಕ ಆಡೋದು ಖಚಿತ; ಉಳಿದ 5 ತಂಡಗಳಿಗೆ ಪೈಪೋಟಿ, ಆಯ್ಕೆ ಪ್ರಕ್ರಿಯೆ ಹೇಗೆ?

128 ವರ್ಷಗಳ ನಂತರ ಲಾಸ್ ಏಂಜಲೀಸ್ ಒಲಿಂಪಿಕ್ಸ್​​ಗೆ ಕ್ರಿಕೆಟ್ ಸೇರ್ಪಡೆಯಾಗಿದ್ದು, ಕ್ರಿಕೆಟ್ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಆರು ತಂಡಗಳು ಚಿನ್ನಕ್ಕಾಗಿ ಸ್ಪರ್ಧಿಸಲಿವೆ.

128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಮರಳಿದ ಕ್ರಿಕೆಟ್, ಅಮೆರಿಕ ಆಡೋದು ಖಚಿತ; ಉಳಿದ 5 ತಂಡಗಳಿಗೆ ಪೈಪೋಟಿ, ಆಯ್ಕೆ ಪ್ರಕ್ರಿಯೆ ಹೇಗೆ?
128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಮರಳಿದ ಕ್ರಿಕೆಟ್, ಅಮೆರಿಕ ಆಡೋದು ಖಚಿತ; ಉಳಿದ 5 ತಂಡಗಳಿಗೆ ಪೈಪೋಟಿ, ಆಯ್ಕೆ ಪ್ರಕ್ರಿಯೆ ಹೇಗೆ? (BCCI )

ಜಗತ್ತಿನ ಅತಿ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್​ಗೆ ಕೊನೆಗೂ ಕ್ರಿಕೆಟ್​ ಸೇರ್ಪಡೆ ಆಗಿದೆ. 128 ವರ್ಷಗಳ ನಂತರ ಮೊದಲ ಬಾರಿಗೆ ಜಂಟಲ್​ಮ್ಯಾನ್​ ಗೇಮ್ ಅನ್ನು ಅಳವಡಿಸಲಾಗಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಅನ್ನು ಹೊಸದಾಗಿ ಸೇರಿಸಲಾಗಿದೆ. ಟಿ20 ಮಾದರಿಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಆದರೆ ಆರು ತಂಡಗಳು ಮತ್ತು ಒಟ್ಟಾರೆ 90 ಆಟಗಾರರು (6 ತಂಡಗಳು ಸೇರಿ) ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಈ ಮೆಗಾ ಟೂರ್ನಿಗೆ ಪುರುಷರ ಮತ್ತು ಮಹಿಳೆಯರ ಸ್ಪರ್ಧೆಗಳಲ್ಲಿ ಆರು ತಂಡಗಳು ಸ್ಪರ್ಧಿಸಲಿವೆ. ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ 90-90 ಆಟಗಾರರ ಕೋಟಾ ನಿಗದಿಪಡಿಸಿದ ಕಾರಣ ಪ್ರತಿ ತಂಡವು 15 ಸದಸ್ಯರ ತಂಡವನ್ನು ಆಯ್ಕೆ ಮಾಡಬಹುದು. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC) ದೃಢಪಡಿಸಿದೆ. ಏಪ್ರಿಲ್ 9ರ ಬುಧವಾರ ನಡೆದ ಐಒಸಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಒಲಿಂಪಿಕ್ಸ್​ನಲ್ಲಿ ಒಟ್ಟಾರೆ 351 ಪದಕಗಳಿಗಾಗಿ ಸ್ಪರ್ಧೆಗಳು ನಡೆಯಲಿದ್ದು, ಈ ಸಲ ಹೊಸದಾಗಿ 5 ಕ್ರೀಡೆಗಳನ್ನು ಸೇರಿಸಲಾಗಿದೆ.

ಮೊದಲ ಬಾರಿಗೆ ಕ್ರಿಕೆಟ್ ಆಡಿದ್ದು 1990ರಲ್ಲಿ!

ಫ್ಲ್ಯಾಗ್ ಫುಟ್‌ಬಾಲ್, ಸ್ಕ್ವಾಷ್, ಬೇಸ್‌ಬಾಲ್/ಸಾಫ್ಟ್‌ಬಾಲ್ ಮತ್ತು ಲ್ಯಾಕ್ರೋಸ್ ಜೊತೆಗೆ ಕ್ರಿಕೆಟ್ ಹೊಸದಾಗಿ ಸೇರ್ಪಡೆಗೊಂಡಿವೆ. ಕ್ರಿಕೆಟ್ ಅನ್ನು 1900ರಲ್ಲಿ ನಡೆದಿದ್ದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಡಿಸಲಾಗಿತ್ತು. ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ ಮಾತ್ರ ಕ್ರಿಕೆಟ್​​ನಲ್ಲಿ ಭಾಗವಹಿಸಿದ್ದವು. ಉಭಯ ತಂಡಗಳು ಎರಡು ದಿನಗಳ ಪಂದ್ಯವನ್ನು ಆಡಿದ್ದು, ಇದನ್ನು ಅನಧಿಕೃತ ಟೆಸ್ಟ್ ಪಂದ್ಯವೆಂದು ಪರಿಗಣಿಸಲಾಗಿದೆ. ಆ ಬಳಿಕ ಕ್ರಿಕೆಟ್ ಅನ್ನು ತೆಗೆದು ಹಾಕಲಾಯಿತು.

ಕಳೆದ ಹಲವು ದಶಕಗಳಿಂದ ಕ್ರಿಕೆಟ್ ಅನ್ನು ಒಲಿಂಪಿಕ್ಸ್ ನಲ್ಲಿ ಸೇರ್ಪಡೆಗೊಳಿಸಬೇಕು ಎಂಬ ಬಗ್ಗೆ ಒತ್ತಾಯವಿತ್ತು. ಆದರೆ ಬೇರೆ ಬೇರೆ ಕಾರಣಗಳಿಗಾಗಿ ಒಲಿಂಪಿಕ್ಸ್ ಸಮಿತಿ ಈ ವಿಚಾರವಾಗಿ ಆಸಕ್ತಿ ವಹಿಸಿರಲಿಲ್ಲ. ಆದರೆ ಕಾಮನ್ ವೆಲ್ತ್ ಮತ್ತು ಏಶ್ಯನ್ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಕಾಣಿಸಿಕೊಂಡದ್ದು ಒಲಿಂಪಿಕ್ಸ್ ಪ್ರವೇಶಕ್ಕೂ ರಹದಾರಿಯಾಯಿತು. ಆದರೆ ಹಲವು ವರ್ಷಗಳಿಂದ ಕ್ರಿಕೆಟ್ ಅನ್ನು ಒಲಿಂಪಿಕ್ಸ್​ಗೆ ಸೇರ್ಪಡೆ ಮಾಡಬೇಕು ಎನ್ನುವ ಒತ್ತಾಯ ಇತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಆದರೆ ಕಾಮನ್​ವೆಲ್ತ್ ಮತ್ತು ಏಷ್ಯನ್ ಗೇಮ್ಸ್​​ನಲ್ಲಿ ಕ್ರಿಕೆಟ್ ಕಾಣಿಸಿಕೊಂಡದ್ದರ ಪರಿಣಾಮ ಒಲಿಂಪಿಕ್ಸ್​​ಗೂ ದಾರಿ ಮಾಡಿಕೊಟ್ಟಿತು. ಇದೀಗ ಕೊನೆಗೂ ಆ ದಿನ ಬಂದಿದೆ.

ತಂಡಗಳ ಆಯ್ಕೆ ಮಾನದಂಡ ಹೇಗೆ?

ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ 12 ಪೂರ್ಣ ಸದಸ್ಯತ್ವದ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಒಳಗೊಂಡಿದೆ. ಇದಲ್ಲದೆ, 94 ದೇಶಗಳು ಸಹ ಸದಸ್ಯ ರಾಷ್ಟ್ರಗಳಾಗಿವೆ. 2028 ರ ಒಲಿಂಪಿಕ್ಸ್​​​ನಲ್ಲಿ ಕ್ರಿಕೆಟ್​ಗೆ ಅರ್ಹತೆ ಪಡೆಯುವ ಕಾರ್ಯವಿಧಾನವನ್ನು ಇನ್ನೂ ದೃಢಪಡಿಸಲಾಗಿಲ್ಲ. ಆದರೆ ಯುಎಸ್ಎ ಆತಿಥೇಯ ರಾಷ್ಟ್ರವಾಗಿರುವುದರಿಂದ ನೇರ ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಪ್ರತಿ ವಿಭಾಗದಲ್ಲಿ ಉಳಿದ ಐದು ತಂಡಗಳು ಪಂದ್ಯಾವಳಿಗೆ ಅರ್ಹತೆ ಪಡೆಯುತ್ತವೆ. ಒಂದು ಆಯ್ಕೆ ಮಾಡುವುದಾದರೆ ಟಿ20 ಶ್ರೇಯಾಂಕವನ್ನು ಪರಿಗಣಿಸಬಹುದು. ಹೀಗಾದರೆ ಭಾರತದ ಪುರುಷರು, ಮಹಿಳಾ ತಂಡಗಳು ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳಲಿವೆ. ಅರ್ಹತೆ ಪಡೆದ ತಂಡಗಳ ಪರ ಸ್ಟಾರ್ ಆಟಗಾರರು ಆಡುವುದು ಖಚಿತ. ಆದರೆ ತಂಡಗಳ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಎನ್ನುವ ಕುತೂಹಲ ಹುಟ್ಟುಹಾಕಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner