ಪಲಾವ್, ಹೈದರಾಬಾದ್ ಬಿರಿಯಾನಿ, ಮಟನ್ ಚಾಪ್ಸ್ ಸೇರಿ ಹತ್ತಾರು ಭಕ್ಷ್ಯ ಭೋಜನ; ಪಾಕಿಸ್ತಾನ ತಂಡದ ಆಹಾರ ಮೆನು ಬಹಿರಂಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಲಾವ್, ಹೈದರಾಬಾದ್ ಬಿರಿಯಾನಿ, ಮಟನ್ ಚಾಪ್ಸ್ ಸೇರಿ ಹತ್ತಾರು ಭಕ್ಷ್ಯ ಭೋಜನ; ಪಾಕಿಸ್ತಾನ ತಂಡದ ಆಹಾರ ಮೆನು ಬಹಿರಂಗ

ಪಲಾವ್, ಹೈದರಾಬಾದ್ ಬಿರಿಯಾನಿ, ಮಟನ್ ಚಾಪ್ಸ್ ಸೇರಿ ಹತ್ತಾರು ಭಕ್ಷ್ಯ ಭೋಜನ; ಪಾಕಿಸ್ತಾನ ತಂಡದ ಆಹಾರ ಮೆನು ಬಹಿರಂಗ

Pakistan Team food menu in Hyderabad: ಪಾಕಿಸ್ತಾನ ತಂಡದ ಆಟಗಾರರನ್ನು ಹೈದರಾಬಾದ್​ನ ರಾಜೀವ್​ ಗಾಂಧಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಹೈದರಾಬಾದ್​ಗೆ ಬಂದ ಬೆನ್ನಲ್ಲೇ ಪಾಕಿಸ್ತಾನ ಆಟಗಾರರಿಗೆ ನೀಡಿರುವ ಆಹಾರದ ಮೆನು ಬಹಿರಂಗಗೊಂಡಿದೆ.

ಪಾಕಿಸ್ತಾನ ತಂಡದ ಆಹಾರ ಮೆನು ಬಹಿರಂಗ.
ಪಾಕಿಸ್ತಾನ ತಂಡದ ಆಹಾರ ಮೆನು ಬಹಿರಂಗ.

ಅಕ್ಟೋಬರ್​ 5ರಿಂದ ಶುರುವಾಗುವ ಏಕದಿನ ವಿಶ್ವಕಪ್​ ಟೂರ್ನಿಗೆ (ODI World Cup 2023) ನಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಕೊನೆಗೂ ಬಾಬರ್ ಅಜಮ್ (Babar Azam) ಪಡೆಯನ್ನು 2016ರ ನಂತರ ಭಾರತಕ್ಕೆ ಕಳುಹಿಸಿಕೊಟ್ಟಿದೆ. ಹಲವು ತಿಂಗಳ ಕಾಲ ನಡೆದ ಹಗ್ಗಾಜಗ್ಗಾಟದ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ತಂಡಕ್ಕೆ ಭವ್ಯ ಸ್ವಾಗತ ಸಿಕ್ಕಿದ್ದು, ಆಟಗಾರರೇ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ತಂಡದ ಆಟಗಾರರನ್ನು ಹೈದರಾಬಾದ್​ನ ರಾಜೀವ್​ ಗಾಂಧಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಅಲ್ಲಿಂದ ಬಾಬರ್ ಪಡೆಯನ್ನು ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ಗೆ ಪೊಲೀಸರ ಬಿಗಿ ಭದ್ರತೆಯ ನಡುವೆ ಕರೆದುಕೊಂಡು ಹೋಗಲಾಯಿತು. ಪಾಕ್ ಆಟಗಾರರು, ಇಲ್ಲಿಯೇ 15 ದಿನಗಳ ಕಾಲ ಉಳಿಯಲಿದ್ದಾರೆ. ಇದೀಗ ಪಾಕ್ ಆಟಗಾರರಿಗೆ ತರಹೇವಾರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿದ್ದು, ಅವರ ಆಹಾರದ ಮೆನು ಬಹಿರಂಗಗೊಂಡಿದೆ.

ಮೆನುವಿನಲ್ಲಿ ಏನೆಲ್ಲಾ ಇದೆ?

ಹೈದರಾಬಾದ್​​ನಲ್ಲಿ ತಮ್ಮ ಮೊದಲ ಪ್ರಾಕ್ಟೀಸ್​ ಸೆಷನ್ ಅವಧಿಯನ್ನು ಸಖತ್ ಎಂಜಾಯ್ ಮಾಡಿರುವ ಪಾಕ್ ಕ್ರಿಕೆಟಿಗರಿಗೆ, ಇಲ್ಲಿನ ಆಹಾರ ಪದ್ದತಿಯೂ ತೃಪ್ತಿಪಡಿಸಿದೆ. ಭಾರತದಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳಿಗೆ ಗೋಮಾಂಸ ಲಭ್ಯವಿಲ್ಲ. ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ತಂಗಿರುವ ಪಾಕಿಸ್ತಾನದ ಆಟಗಾರರಿಗೆ ತಮ್ಮ ದೈನಂದಿನ ಪ್ರೋಟೀನ್ ಸೇವನೆಗಾಗಿ ಹೈದರಾಬಾದ್ ಬಿರಿಯಾರಿ, ಪಲಾವ್, ಮೀನು ಸೇರಿದಂತೆ ತರಹೇವಾರಿ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಗ್ರಿಲ್ಡ್ ಲ್ಯಾಂಬ್ ಚಾಪ್ಸ್, ಮಟನ್ ಕರಿ, ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ಕೂಡ ಅವರ ಮೆನುವಿನಲ್ಲಿ ಸೇರಿವೆ. ತಮ್ಮ ಕಾರ್ಬೋಹೈಡ್ರೇಟ್ ಸೇವನೆಗಾಗಿ ಪಾಕಿಸ್ತಾನ ತಂಡವು ಸ್ಟೇಡಿಯಂ ಕ್ಯಾಟರಿಂಗ್​ಗೆ ಸ್ಟೀಮ್ ಮಾಡಿದ ಬಾಸ್ಮತಿ ಅಕ್ಕಿ, ಬೊಲೊಗ್ನೀಸ್ ಸಾಸ್‌ನಲ್ಲಿನ ಶಾವಿಗೆ, ಪುಲಾವ್ ಅನ್ನೂ ಕೇಳಿದೆ. ಪಾಕಿಸ್ತಾನ ಸುಮಾರು 2 ವಾರಗಳ ಕಾಲ ಇಲ್ಲಿರಲಿದ್ದು, ತಮ್ಮ ಭಕ್ಷ್ಯ ಭೋಜನದಲ್ಲಿ ಪ್ರಸಿದ್ಧ ಹೈದರಾಬಾದಿ ಬಿರಿಯಾನಿ ಮಿಸ್​​ ಮಾಡದೆ ಇರಲಿದೆ.

ಸೆ.​ 29ರಂದು ಪಾಕ್-ಕಿವೀಸ್ ಅಭ್ಯಾಸ ಪಂದ್ಯ

ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಅದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ಅದರಂತೆ ಸೆಪ್ಟೆಂಬರ್​ 29ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಅಭ್ಯಾಸ ಪಂದ್ಯವನ್ನಾಡಲಿವೆ. ಆದರೆ ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಮುಂದಿನ 15 ದಿನಗಳ ಕಾಲ ಪಾಕಿಸ್ತಾನ ಹೈದರಾಬಾದ್​ನಲ್ಲೇ ಇರಲಿದೆ. ಪಾಕಿಸ್ತಾನ ತನ್ನ ಏಕದಿನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್​ 6ರಂದು ನ್ಯೂಜಿಲೆಂಡ್ ವಿರುದ್ದವೇ ಪ್ರಾರಂಭಿಸಲಿದೆ.

ಏಕದಿನ ವಿಶ್ವಕಪ್​ಗೆ ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಆಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹಸನ್ ಅಲಿ, ಮೊಹಮ್ಮದ್ ವಾಸೀಂ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್.

Whats_app_banner