ಜೂನಿಯರ್ ಮಲಿಂಗ ಇನ್, ಸ್ಟಾರ್​ ಆಟಗಾರ ಔಟ್; ಸಿಎಸ್​ಕೆ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಜೂನಿಯರ್ ಮಲಿಂಗ ಇನ್, ಸ್ಟಾರ್​ ಆಟಗಾರ ಔಟ್; ಸಿಎಸ್​ಕೆ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ Xi

ಜೂನಿಯರ್ ಮಲಿಂಗ ಇನ್, ಸ್ಟಾರ್​ ಆಟಗಾರ ಔಟ್; ಸಿಎಸ್​ಕೆ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI

Mumbai Indians Playing XI : 2024ರ ಐಪಿಎಲ್​ ಕ್ರಿಕೆಟ್ ಟೂರ್ನಿಯ 29ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕದನಕ್ಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಬದಲಾವಣೆಯಾಗುವ ನಿರೀಕ್ಷೆ ಇದೆ. ಮುಂಬೈ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ ನೋಡಿ.

ಚೆನ್ನೈ ಸೂಪರ್ ಕಿಂಗ್ಸ್ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI
ಚೆನ್ನೈ ಸೂಪರ್ ಕಿಂಗ್ಸ್ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI

ಐಪಿಎಲ್​ನ ಅತಿ ದೊಡ್ಡ ಕಾದಾಟಕ್ಕೆ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನ ಸಜ್ಜಾಗಿದೆ. 17ನೇ ಆವೃತ್ತಿಯ ಐಪಿಎಲ್​ನ 29ನೇ ಪಂದ್ಯದಲ್ಲಿ ತಲಾ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು (Mumbai Indians vs Chennai Super Kings) ಮುಖಾಮುಖಿಯಾಗುತ್ತಿವೆ. ಏಪ್ರಿಲ್ 14ರ ಸಂಜೆ 7.30ಕ್ಕೆ ನಡೆಯುವ ಪಂದ್ಯ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿದೆ.

ಟೂರ್ನಿಯಲ್ಲಿ ಆರಂಭಿಕ ಮೂರು ಪಂದ್ಯಗಳನ್ನು ಸೋತಿದ್ದ ಮುಂಬೈ ಇಂಡಿಯನ್ಸ್ ಇದೀಗ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ವಿರುದ್ಧ ಸತತ ಜಯದ ನಗೆ ಬೀರಿದ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ತನ್ನ ಬದ್ದ ವೈರಿ ಸಿಎಸ್​ಕೆ ತಂಡವನ್ನು ಮಣಿಸಿ ಸತತ ಮೂರನೇ ಜಯ ದಾಖಲಿಸಲು ಸಜ್ಜಾಗಿದೆ. ಅದೇ ಲಯ ಮುಂದುವರೆಸುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್​ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆದ್ದಿದೆ. ಆದರೆ, 2 ಅವೇ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಚೆನ್ನೈ 5ರಲ್ಲಿ 3 ಗೆದ್ದು 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಐದರಲ್ಲಿ 2 ಗೆದ್ದು 4 ಅಂಕ ಪಡೆದು 7ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಸಹ ಅಂಕಪಟ್ಟಿಯಲ್ಲಿ ಮೇಲೇರಲು ಹೈವೋಲ್ಟೇಜ್​ ಫೈಟ್​ಗೆ ಸಿದ್ಧವಾಗಿವೆ.

ಫಾರ್ಮ್​ಗೆ ಮರಳಿದ ಬ್ಯಾಟರ್​​ಗಳು

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿಗೆ ಬ್ಯಾಟರ್‌ಗಳು ನಿರಾಸೆಗೊಳಿಸಿದ್ದೇ ಪ್ರಮುಖ ಕಾರಣವಾಗಿತ್ತು. ಸದ್ಯ ತಂಡದ ಬ್ಯಾಟರ್​​ಗಳು ಪುಟಿದೆದ್ದಿದ್ದಾರೆ. ಇನ್ನು ಬೌಲಿಂಗ್​​ನಲ್ಲಿ ಜಸ್ಪ್ರೀತ್ ಬುಮ್ರಾ ಅವರು ಉತ್ತಮ ಫಾರ್ಮ್​​ನಲ್ಲಿದ್ದಾರೆ. ಆದರೆ ಉಳಿದವರಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ. ಜೆರಾಲ್ಡ್ ಕೊಯೆಟ್ಜಿ. ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್​​ನಲ್ಲೂ ಖದರ್ ಇಲ್ಲ. ಮ್ಯಾಚ್ ವಿನ್ನಿಂಗ್ ಸ್ಪಿನ್ನರ್ ಕೊರತೆ ಕೂಡ ಕಾಡುತ್ತಿದೆ.

ಮುಂಬೈ ತಂಡದಲ್ಲಿ ಬದಲಾವಣೆ ಸಾಧ್ಯತೆ

ಸಿಎಸ್​ಕೆ ತಂಡದ ಸವಾಲು ಎದುರಿಸಲು ಬ್ಯಾಟಿಂಗ್​ನಲ್ಲಿ ಬದಲಾವಣೆ ಮಾಡದಿರಲು ಎಂಐ ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಆದರೆ ಬೌಲಿಂಗ್​ ವಿಭಾಗವನ್ನು ಬಲಿಷ್ಠಗೊಳಿಸಲು ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಲಸಿತ್ ಮಾಲಿಂಗ ಅವರಂತೆ ಬೌಲಿಂಗ್ ಮಾಡುವ ನುವಾನ್ ತುಷಾರ ಅವರಿಗೆ ಚೊಚ್ಚಲ ಅವಕಾಶ ನೀಡುವ ಸಾಧ್ಯತೆ ಇದೆ. ಮೊಹಮ್ಮದ್ ನಬಿ ಬದಲಿಗೆ ಆಡುವ ಸಾಧ್ಯತೆ ಇದೆ. ಉಳಿದಂತೆ ಸೂರ್ಯಕುಮಾರ್ ಇಂಪ್ಯಾಕ್ಟ್ ಪ್ಲೇಯರ್ ಆಗುವ ಸಾಧ್ಯತೆ ಇದೆ.

ಆಕಾಶ್ ಮಧ್ಬಾಲ್ ಬೌಲಿಂಗ್​​ನಲ್ಲಿ ದುಬಾರಿಯಾಗುತ್ತಿರುವ ಕಾರಣ ಒಬ್ಬರ ನೇಹಾಲ್ ವದೇರಾಗೆ ಅವಕಾಶ ನೀಡಲು ಮುಂಬೈ ಚಿಂತಿಸಿದೆ. ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಮುಂದುವರಿಯುತ್ತಾರೆ. ಮುಂಬೈ ಮೊದಲು ಬ್ಯಾಟಿಂಗ್ ನಡೆಸಿದರೆ 3ನೇ ಕ್ರಮಾಂಕದಲ್ಲಿ ಸೂರ್ಯ ಆಡುತ್ತಾರೆ. ನಂತರ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯಲಿದ್ದಾರೆ. ನೇಹಾಲ್ ವದೇರಾ ಅವಕಾಶ ಪಡೆದರೆ, ಮಧ್ಯಮ ಕ್ರಮಾಂಕದಲ್ಲಿ ಫಿಕ್ಸ್ ಆಗುವ ಸಾಧ್ಯತೆ ಇದೆ.

ರೊಮಾರಿಯೋ ಶೆಫರ್ಡ್ ಬೌಲಿಂಗ್ ಆಲ್​ರೌಂಡರ್ ಆಗಿದ್ದು, ಶ್ರೇಯಸ್ ಗೋಪಾಲ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ ಮತ್ತು ಜೆರಾಲ್ಡ್ ಕೊಯೆಟ್ಜಿ ವೇಗದ ಬೌಲರ್‌ಗಳಾಗಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅಥವಾ ಪಿಯೂಷ್ ಚಾವ್ಲಾ ಇಂಪ್ಯಾಕ್ಟ್ ಪ್ಲೇಯರ್​ಗಳಾಗಬಹುದು. ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿರುವ ಏಕೈಕ ತಂಡವಾಗಿರುವ ಮುಂಬೈ, ಸಾಕಷ್ಟು ರಣತಂತ್ರಗಳು ರೂಪಿಸುತ್ತಿದೆ.

ಸಿಎಸ್​ಕೆ ವಿರುದ್ಧದ ಕದನಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ XI

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನೆಹಾಲ್ ವಧೇರಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ.

ಇಂಪ್ಯಾಕ್ಟ್ ಪ್ಲೇಯರ್: ಅರ್ಜುನ್ ತೆಂಡೂಲ್ಕರ್/ ಪಿಯೂಷ್ ಚಾವ್ಲಾ

Whats_app_banner