ಕನ್ನಡ ಸುದ್ದಿ  /  ಕ್ರಿಕೆಟ್  /  T20 World Cup: ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಸ್ಟ್ರೈಕ್​ರೇಟ್ ಮತ್ತು ಅತ್ಯಧಿಕ ರನ್ ಗಳಿಸಿದವರ ಪಟ್ಟಿ ಇಲ್ಲಿದೆ

T20 World Cup: ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಸ್ಟ್ರೈಕ್​ರೇಟ್ ಮತ್ತು ಅತ್ಯಧಿಕ ರನ್ ಗಳಿಸಿದವರ ಪಟ್ಟಿ ಇಲ್ಲಿದೆ

T20 World Cup Legends : ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯುತ್ತಮ ಸ್ಟ್ರೈಕ್​ರೇಟ್ ಹೊಂದಿರುವ ಪ್ರಮುಖ ರನ್ ಸ್ಕೋರರ್​ ಮತ್ತು ಬ್ಯಾಟ್ಸ್​​ಮನ್​ಗಳ ಪಟ್ಟಿ ಇಲ್ಲಿದೆ.

T20 World Cup: ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಸ್ಟ್ರೈಕ್​ರೇಟ್ ಮತ್ತು ಅತ್ಯಧಿಕ ರನ್ ಗಳಿಸಿದವರ ಪಟ್ಟಿ ಇಲ್ಲಿದೆ
T20 World Cup: ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಸ್ಟ್ರೈಕ್​ರೇಟ್ ಮತ್ತು ಅತ್ಯಧಿಕ ರನ್ ಗಳಿಸಿದವರ ಪಟ್ಟಿ ಇಲ್ಲಿದೆ

ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ವೇದಿಕೆ ಸಜ್ಜಾಗಿದೆ. ಜೂನ್ 1ರಂದು 9ನೇ ಆವೃತ್ತಿಯ ಚುಟುಕು ವಿಶ್ವಕಪ್​ಗೆ ಚಾಲನೆ ಸಿಗಲಿದೆ. ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಘಟಾನುಘಟಿ ಆಟಗಾರರೇ ಕಣದಲ್ಲಿದ್ದು, ರನ್​ ಮಳೆ ಹರಿಸುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಹಾಗಾದರೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಮತ್ತು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವವರ ಪಟ್ಟಿ ಇಲ್ಲಿದೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಅತಿ ಹೆಚ್ಚು ರನ್ ಗಳಿಸಿದವರು

ವಿರಾಟ್ ಕೊಹ್ಲಿ: 1141 ರನ್

ರನ್ ರಾಕ್ಷಸನಾಗಿರುವ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. 2014ರಲ್ಲಿ ಟೂರ್ನಿಯ ಒಂದೇ ಆವೃತ್ತಿಯಲ್ಲಿ 319 ರನ್, 2016ರ ಆವೃತ್ತಿಯಲ್ಲಿ 273 ರನ್ ಗಳಿಸಿದ್ದರು. 2022ರಲ್ಲಿ 296 ರನ್ ಸಿಡಿಸಿದ್ದರು. 25 ಇನ್ನಿಂಗ್ಸ್​​ಗಳಲ್ಲಿ 14 ಅರ್ಧಶತಕ ಸಹಿತ 1141 ರನ್ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 81.50. ಸ್ಟ್ರೈಕ್​ರೇಟ್ 131.30.

ಮಹೇಲಾ ಜಯವರ್ಧನೆ: 1016 ರನ್

ಕ್ರಿಕೆಟ್​ನಿಂದ ನಿವೃತ್ತರಾಗಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರು ಟಿ20 ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. 31 ಇನ್ನಿಂಗ್ಸ್​ಗಳಲ್ಲಿ 39.07ರ ಬ್ಯಾಟಿಂಗ್ ಸರಾಸರಿಯಲ್ಲಿ 1016 ರನ್ ಸಿಡಿಸಿದ್ದಾರೆ. ಪ್ರಸ್ತುತ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಸ್ಟ್ರೈಕ್​ರೇಟ್ 134.74.

ಕ್ರಿಸ್ ಗೇಲ್;​ 965 ರನ್

ಕ್ರಿಕೆಟ್ ಇತಿಹಾಸದಲ್ಲಿ ಪವರ್​ ಹಿಟ್ಟರ್​ಗಳಲ್ಲಿ ಒಬ್ಬರಾದ ಗೇಲ್ ವೆಸ್ಟ್ ಇಂಡೀಸ್ ಎರಡು ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಮೂರನೇ ಆಟಗಾರ ಎನಿಸಿದ್ದಾರೆ. 31 ಇನ್ನಿಂಗ್ಸ್​​ಗಳಲ್ಲಿ 34.46ರ ಸರಾಸರಿಯಲ್ಲಿ 965 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 142.75.

ರೋಹಿತ್ ಶರ್ಮಾ: 963 ರನ್

ಟಿ20 ವಿಶ್ವಕಪ್​​ನಲ್ಲಿ ಪ್ರಮುಖ ಆಟಗಾರರಾಗಿರುವ ಭಾರತದ ನಾಯಕ ರೋಹಿತ್​ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಭಾರತದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವಹಿಸಿರುವ ರೋಹಿತ್​, ಎಲ್ಲಾ ಆವೃತ್ತಿಗಳಲ್ಲಿ ಆಡಿದ್ದಾರೆ. 36 ಇನ್ನಿಂಗ್ಸ್​​​ಗಳಲ್ಲಿ 963 ರನ್ ಗಳಿಸಿದ್ದಾರೆ. ಸ್ಟ್ರೈಕ್​ರೇಟ್ 127.88.

ತಿಲಕರತ್ನೆ ದಿಲ್ಶಾನ್: 897 ರನ್

2009ರ ಆವೃತ್ತಿಯಲ್ಲಿ ಏಳು ಪಂದ್ಯಗಳಿಂದ 317 ರನ್​ಗಳೊಂದಿಗೆ ಅಗ್ರ ರನ್ ಸ್ಕೋರರ್ ಆಗಿದ್ದ ದಿಲ್ಶಾನ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಅಗ್ರ ಕ್ರಮಾಂಕದಲ್ಲಿ ತ್ವರಿತ ಆರಂಭವನ್ನು ನೀಡುವ ಸಾಮರ್ಥ್ಯದೊಂದಿಗೆ, 6 ಆವೃತ್ತಿಗಳಲ್ಲಿ ಶ್ರೀಲಂಕಾ ಪರ ಉತ್ತಮ ಪ್ರದರ್ಶನ ನೀಡಿದ್ದರು. 34 ಇನ್ನಿಂಗ್ಸ್​​​ಗಳಲ್ಲಿ 897 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 124.06.

ಅತ್ಯಧಿಕ ಸ್ಟ್ರೈಕ್ ರೇಟ್ (ಕನಿಷ್ಠ 300 ರನ್ ಸಿಡಿಸಿರಬೇಕು)

ಜೋಸ್ ಬಟ್ಲರ್: 144.48 ಸ್ಟ್ರೈಕ್​ರೇಟ್

ಅತ್ಯಂತ ಕ್ರಿಯಾತ್ಮಕ ಮತ್ತು ವಿನಾಶಕಾರಿ ಬ್ಯಾಟ್ಸ್​ಮನ್​​ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಇಂಗ್ಲೆಂಡ್​ನ ಜೋಸ್ ಬಟ್ಲರ್ ಅವರು ವೇಗವಾಗಿ ಸ್ಕೋರ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ 27 ಪಂದ್ಯಗಳಲ್ಲಿ 799 ರನ್ ಗಳಿಸಿರುವ ಬಟ್ಲರ್, 144.48ರ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ.

ಎಬಿ ಡಿವಿಲಿಯರ್ಸ್: 143.40 ಸ್ಟ್ರೈಕ್​ರೇಟ್

ದಕ್ಷಿಣ ಆಫ್ರಿಕಾದ ಆಟಗಾರ ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವದ ಎರಡನೇ ಆಟಗಾರ. ಅತ್ಯಂತ ಭಯಭೀತ ಬ್ಯಾಟ್ಸ್​ಮನ್​​ಗಳಲ್ಲಿ ಒಬ್ಬರನ್ನಾಗಿ ಮಾಡಿತು. ಡಿವಿಲಿಯರ್ಸ್ 29 ಇನ್ನಿಂಗ್ಸ್​​​ಗಳಲ್ಲಿ 51 ಬೌಂಡರಿ ಮತ್ತು 30 ಸಿಕ್ಸರ್​​ಗಳ ಸಹಾಯದಿಂದ 717 ರನ್ ಗಳಿಸಿದ್ದಾರೆ. 143.40 ಸ್ಟ್ರೈಕ್​ರೇಟ್ ಇದೆ.

ಕ್ರಿಸ್ ಗೇಲ್: 142.75 ಸ್ಟ್ರೈಕ್​ರೇಟ್

ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸ್ಟ್ರೇಕ್​ರೇಟ್​ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಗೇಲ್, ರನ್ ಗಳಿಕೆಯಲ್ಲೂ ಮೂರನೇ ಸ್ಥಾನ ಹೊಂದಿದ್ದಾರೆ. ಅದ್ಭುತ 142.75 ಸ್ಟ್ರೈಕ್ ರೇಟ್​ ಹೊಂದಿದ್ದು, ಈ ಟೂರ್ನಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ.

ಮಹೇಲಾ ಜಯವರ್ಧನೆ: 134.74 ಸ್ಟ್ರೈಕ್​ರೇಟ್

ಜಯವರ್ಧನೆ 39.07ರ ಸರಾಸರಿ ಮತ್ತು 134.74 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಸ್ಥಿರತೆ ಕಾಪಾಡಿಕೊಳ್ಳುವಾಗ ತ್ವರಿತವಾಗಿ ಸ್ಕೋರ್ ಮಾಡುವ ಅವರ ಸಾಮರ್ಥ್ಯದ ಉತ್ತಮ ಪ್ರತಿಬಿಂಬವಾಗಿದೆ.

ಡೇವಿಡ್ ವಾರ್ನರ್: 133.22 ಸ್ಟ್ರೈಕ್​ರೇಟ್

ವಾರ್ನರ್ ಅವರ ಆಕ್ರಮಣಕಾರಿ ವಿಧಾನವು ಆಸ್ಟ್ರೇಲಿಯಾಕ್ಕೆ ಮತ್ತೊಮ್ಮೆ ನಿರ್ಣಾಯಕವಾಗಿದೆ. ವೇಗವಾಗಿ ರನ್ ಗಳಿಸುವ ಅವರ ಸಾಮರ್ಥ್ಯವು ಅವರನ್ನು ಟಿ20 ವಿಶ್ವಕಪ್​​​ಗಳಲ್ಲಿ ಅತ್ಯಂತ ರೋಮಾಂಚಕಾರಿ ಮತ್ತು ಪರಿಣಾಮಕಾರಿ ಬ್ಯಾಟ್ಸ್​​ಮನ್​ಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ