ಐಪಿಎಲ್ 2ನೇ ಹಂತದ ಪಂದ್ಯಗಳಿಗೆ ಲಭ್ಯವಿರುವ ವಿದೇಶಿ ಆಟಗಾರರಿವರು; ತಾತ್ಕಾಲಿಕ ಬದಲಿ ಆಟಗಾರರ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2ನೇ ಹಂತದ ಪಂದ್ಯಗಳಿಗೆ ಲಭ್ಯವಿರುವ ವಿದೇಶಿ ಆಟಗಾರರಿವರು; ತಾತ್ಕಾಲಿಕ ಬದಲಿ ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್ 2ನೇ ಹಂತದ ಪಂದ್ಯಗಳಿಗೆ ಲಭ್ಯವಿರುವ ವಿದೇಶಿ ಆಟಗಾರರಿವರು; ತಾತ್ಕಾಲಿಕ ಬದಲಿ ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್‌ 18ನೇ ಆವೃತ್ತಿಯ ಎರಡನೇ ಹಂತದ ಪಂದ್ಯಗಳು ಆರಂಭವಾಗಿವೆ. ವಿವಿಧ ತಂಡಗಳ ಪರ ಆಡಲು ಬಹುತೇಕ ಎಲ್ಲಾ ಆಟಗಾರರು ಸಜ್ಜಾಗಿದ್ದಾರೆ. ಉಳಿದ ಪಂದ್ಯಗಳಿಗೆ ಲಭ್ಯವಿಲ್ಲದ ವಿದೇಶಿ ಆಟಗಾರರು ಹಾಗೂ ತಾತ್ಕಾಲಿಕ ಬದಲಿ ಆಟಗಾರರ ಪಟ್ಟಿ ಇಲ್ಲಿದೆ.

ಐಪಿಎಲ್ 2ನೇ ಹಂತದ ಪಂದ್ಯಗಳಿಗೆ ಲಭ್ಯವಿರುವ ವಿದೇಶಿ ಆಟಗಾರರಿವರು; ತಾತ್ಕಾಲಿಕ ಬದಲಿ ಆಟಗಾರರು (File)
ಐಪಿಎಲ್ 2ನೇ ಹಂತದ ಪಂದ್ಯಗಳಿಗೆ ಲಭ್ಯವಿರುವ ವಿದೇಶಿ ಆಟಗಾರರಿವರು; ತಾತ್ಕಾಲಿಕ ಬದಲಿ ಆಟಗಾರರು (File) (PTI)

ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ 2025ರ ಪಂದ್ಯಾವಳಿಯ ಕೊನೆಯ ಹಂತದ ಪಂದ್ಯಗಳು, ಶನಿವಾರವಾರದಿಂದ (ಮೇ 17) ಆರಂಭವಾಗಿದೆ. ಇದು ವಿವಿಧ ತಂಡಗಳ ಆಟಗಾರರ ಲಭ್ಯತೆಗೆ ಸಮಸ್ಯೆಯಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಡಬ್ಲ್ಯೂಟಿಸಿ 2025ರ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಕಾರಣದಿಂದಾಗಿ ಹಲವು ವಿದೇಶಿ ಆಟಗಾರರು ಟೂರ್ನಿಗೆ ಲಭ್ಯವಿರುವುದಿಲ್ಲ. ಕೆಲವು ಆಟಗಾರರು ಪಂದ್ಯಾವಳಿಯ ಉಳಿದ ಭಾಗಕ್ಕೆ ಅಥವಾ ಪ್ಲೇಆಫ್‌ಗಳಿಗೆ ಲಭ್ಯವಿರುವುದಿಲ್ಲ. ಇದು ಕೆಲವು ತಂಡಗಳ ಚಿಂತೆಗೆ ಕಾರಣವಾಗಿದೆ.

ಬಿಸಿಸಿಐ ಕೂಡಾ ಈ ಬಾರಿಯ ಐಪಿಎಲ್‌ಗೆ ಹೊಸ ನಿಯಮವನ್ನು ಪರಿಚಯಿಸಿದೆ. ಫ್ರಾಂಚೈಸಿಗಳು ಪಂದ್ಯಾವಳಿಯ ಉಳಿದ ಭಾಗಕ್ಕೆ ಲಭ್ಯವಿಲ್ಲದ ಆಟಗಾರರ ಬದಲಿಗೆ ತಾತ್ಕಾಲಿಕವಾಗಿ ಬದಲಿ ಆಟಗಾರರನ್ನು ಹೆಸರಿಸಲು ಅವಕಾಶ ನೀಡಿದೆ. ಆದರೆ, ಐಪಿಎಲ್ 2026ರ ಹರಾಜಿಗೂ ಮೊದಲು ಇಂಥಾ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿಲ್ಲ.

ಸದ್ಯ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳಿಗೆ ವಿವಿಧ ತಂಡಗಳ ಪರ ಆಡಲು ಲಭ್ಯವಿಲ್ಲದ ವಿದೇಶಿ ಆಟಗಾರರ ಪಟ್ಟಿ ಹಾಗೂ ತಾತ್ಕಾಲಿಕ ಬದಲಿ ಆಟಗಾರರ ಪಟ್ಟಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಲಭ್ಯವಿರುವ ಆಟಗಾರರು: ರೊಮಾರಿಯೊ ಶೆಫರ್ಡ್, ಫಿಲ್ ಸಾಲ್ಟ್, ಜಾಕೊಬ್ ಬೆಥೆಲ್ (ಲೀಗ್ ಹಂತದ ಎರಡು ಪಂದ್ಯಗಳಿಗೆ ಮಾತ್ರ ಲಭ್ಯ), ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟನ್, ಲುಂಗಿ ಎನ್‌ಗಿಡಿ (ಲೀಗ್ ಹಂತಕ್ಕೆ ಲಭ್ಯ), ನುವಾನ್ ತುಷಾರ.

ಇನ್ನಷ್ಟೇ ಸೇರಬೇಕಿರುವ ಅಥವಾ ಹೊರಗುಳಿಯಬಲ್ಲ ಆಟಗಾರ: ಜೋಶ್ ಹೇಜಲ್‌ವುಡ್.

ಗುಜರಾತ್ ಟೈಟಾನ್ಸ್

ಲಭ್ಯವಿರುವ ಆಟಗಾರರು: ಜೋಸ್ ಬಟ್ಲರ್ (ಲೀಗ್ ಹಂತ ಮುಗಿಯುವವರೆಗೆ), ಶೆರ್ಫೇನ್ ರುದರ್ಫೋರ್ಡ್, ಕಗಿಸೊ ರಬಾಡ (ಲೀಗ್ ಹಂತ ಮುಗಿಯುವವರೆಗೆ), ರಶೀದ್ ಖಾನ್, ಕರೀಮ್ ಜನತ್, ದಸುನ್ ಶನಕ, ಜೆರಾಲ್ಡ್ ಕೋಟ್ಜೀ.

ಬದಲಿ ಆಟಗಾರರು: ಕುಸಲ್ ಮೆಂಡಿಸ್ (ಜೋಸ್ ಬಟ್ಲರ್ ಬದಲಿಗೆ ಪ್ಲೇಆಫ್‌ಗಳಲ್ಲಿ ಮಾತ್ರ).

ಮುಂಬೈ ಇಂಡಿಯನ್ಸ್

ಲಭ್ಯವಿರುವ ಆಟಗಾರರು: ವಿಲ್ ಜ್ಯಾಕ್ಸ್ (ಲೀಗ್ ಹಂತದವರೆಗೆ), ರೆಯಾನ್ ರಿಕಲ್ಟನ್ (ಲೀಗ್ ಹಂತದವರೆಗೆ), ಬೆವೊನ್ ಜಾಕೋಬ್ಸ್, ಕಾರ್ಬಿನ್ ಬಾಷ್ (ಲೀಗ್ ಹಂತದವರೆ), ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ರೀಸ್ ಟೋಪ್ಲಿ, ಮುಜೀಬ್ ಉರ್ ರೆಹಮಾನ್.

ತಾತ್ಕಾಲಿಕ ಬದಲಿ ಆಟಗಾರರು: ಜಾನಿ ಬೈರ್‌ಸ್ಟೋ (ಪ್ಲೇಆಫ್‌ ಹಂತದಲ್ಲಿ ವಿಲ್ ಜ್ಯಾಕ್ಸ್‌ ಬದಲಿ), ರಿಚರ್ಡ್ ಗ್ಲೀಸನ್ (ಪ್ಲೇಆಫ್‌ಗಳಲ್ಲಿ ರೆಯಾನ್ ರಿಕಲ್ಟನ್‌ಗೆ ಬದಲಿ).

ಡೆಲ್ಲಿ ಕ್ಯಾಪಿಟಲ್ಸ್‌

ಲಭ್ಯವಿರುವ ಆಟಗಾರರು: ಟ್ರಿಸ್ಟಾನ್ ಸ್ಟಬ್ಸ್ (ಲೀಗ್ ಹಂತದವರೆಗೆ ಲಭ್ಯ), ಫಾಫ್ ಡು ಪ್ಲೆಸಿಸ್, ದುಷ್ಮಂತ ಚಮೀರ, ಸೆಡಿಕುಲ್ಲಾ ಅಟಲ್.

ಲಭ್ಯವಿಲ್ಲದ ಆಟಗಾರರು: ಮಿಚೆಲ್ ಸ್ಟಾರ್ಕ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಡೊನೊವನ್ ಫೆರೇರಾ.

ತಾತ್ಕಾಲಿಕ ಬದಲಿ ಆಟಗಾರರು: ಮುಸ್ತಾಫಿಜುರ್ ರೆಹಮಾನ್ (ಜೇಕ್-ಫ್ರೇಸರ್ ಮೆಕ್‌ಗುರ್ಕ್‌ ಬದಲಿಗೆ ಮೇ 18-24 ರವರೆಗೆ ಮಾತ್ರ ಲಭ್ಯ).

ಪಂಜಾಬ್ ಕಿಂಗ್ಸ್

ಲಭ್ಯವಿರುವ ಆಟಗಾರರು: ಅಜ್ಮತುಲ್ಲಾ ಒಮರ್‌ಜೈ, ಮಾರ್ಕೊ ಜಾನ್ಸೆನ್ (ಲೀಗ್ ಹಂತದವರೆಗೆ), ಕ್ಸೇವಿಯರ್ ಬಾರ್ಟ್ಲೆಟ್.

ತಾತ್ಕಾಲಿಕ ಬದಲಿ ಆಟಗಾರರು: ಮಿಚೆಲ್ ಓವನ್ (ಗ್ಲೆನ್ ಮ್ಯಾಕ್ಸ್‌ವೆಲ್‌ ಬದಲಿ), ಕೈಲ್‌ ಜೇಮಿಸನ್ (ಲಾಕಿ ಫರ್ಗುಸನ್‌ಗೆ ಬದಲಿ).

ಇನ್ನಷ್ಟೇ ಸೇರಬೇಕಾದ ಅಥವಾ ಹೊರಗುಳಿಯಬಲ್ಲ ಆಟಗಾರ: ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯ್ನಿಸ್, ಆರನ್ ಹಾರ್ಡಿ

ಕೋಲ್ಕತ್ತಾ ನೈಟ್ ರೈಡರ್ಸ್

ಲಭ್ಯವಿರುವ ಆಟಗಾರರು: ಸುನಿಲ್ ನರೈನ್, ಆಂಡ್ರೆ ರಸೆಲ್, ಕ್ವಿಂಟನ್ ಡಿ ಕಾಕ್, ಸ್ಪೆನ್ಸರ್ ಜಾನ್ಸನ್, ರಹಮಾನಲ್ಲಾ ಗುರ್ಬಾಜ್, ಅನ್ರಿಚ್ ನಾರ್ಟ್ಜೆ.

ಲಭ್ಯವಿಲ್ಲದ ಆಟಗಾರರು: ಮೊಯಿನ್ ಅಲಿ, ರೋವ್ಮನ್ ಪೊವೆಲ್.

ಲಕ್ನೋ ಸೂಪರ್ ಜೈಂಟ್ಸ್

ಲಭ್ಯವಿರುವ ಆಟಗಾರರು: ಐಡೆನ್ ಮಾರ್ಕ್ರಾಮ್ (ಲೀಗ್ ಹಂತ ಮುಗಿಯುವವರೆಗೆ ಲಭ್ಯ), ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ಬ್ರೀಟ್ಜ್ಕೆ.

ಚೆನ್ನೈ ಸೂಪರ್ ಕಿಂಗ್ಸ್

ಲಭ್ಯವಿರುವ ಆಟಗಾರರು: ನೂರ್ ಅಹ್ಮದ್, ಮಥೀಷ ಪತಿರಾನ, ಡೆವಾಲ್ಡ್ ಬ್ರೆವಿಸ್, ಡೆವೊನ್ ಕಾನ್ವೇ

ಲಭ್ಯವಿಲ್ಲದ ಆಟಗಾರರು: ಜೇಮೀ ಓವರ್ಟನ್, ಸ್ಯಾಮ್ ಕರನ್, ರಚಿನ್ ರವೀಂದ್ರ, ನಾಥನ್ ಎಲ್ಲಿಸ್

ಲಭ್ಯವಿಲ್ಲದ ಆಟಗಾರರು: ಶಮರ್ ಜೋಸೆಫ್

ತಾತ್ಕಾಲಿಕ ಬದಲಿ ಆಟಗಾರರು: ಮಿಚೆಲ್ ಒ'ರೂರ್ಕೆ (ಗಾಯಾಳು ಮಯಾಂಕ್ ಯಾದವ್‌ ಬದಲಿಗೆ)

ಸನ್‌ರೈಸರ್ಸ್ ಹೈದರಾಬಾದ್

ಲಭ್ಯವಿರುವ ಆಟಗಾರರು: ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಕಮಿಂದು ಮೆಂಡಿಸ್, ಎಶಾನ್ ಮಾಲಿಂಗ

ಲಭ್ಯವಿಲ್ಲದ ಆಟಗಾರರು: ವಿಯಾನ್ ಮುಲ್ಡರ್

ರಾಜಸ್ಥಾನ್ ರಾಯಲ್ಸ್

ಲಭ್ಯವಿರುವ ಆಟಗಾರರು: ಶಿಮ್ರಾನ್ ಹೆಟ್ಮೈರ್, ಲುವಾನ್-ಡ್ರೆ ಪ್ರಿಟೋರಿಯಸ್, ಫಜಲ್ಹಾಕ್ ಫಾರೂಕಿ, ಕ್ವೆನಾ ಮಫಾಕ, ವನಿಂದು ಹಸರಂಗ, ಮಹೀಶ್ ತೀಕ್ಷಣ

ಲಭ್ಯವಿಲ್ಲದ ಆಟಗಾರರು: ಜೋಫ್ರಾ ಆರ್ಚರ್, ನಂದ್ರೆ ಬರ್ಗರ್

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.