ಸತತ ಸೋಲುಗಳಿಂದ ಕಂಗೆಟ್ಟ ಡೆಲ್ಲಿಗೆ ಲಕ್ನೋ ಸವಾಲು; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಡ್ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಸತತ ಸೋಲುಗಳಿಂದ ಕಂಗೆಟ್ಟ ಡೆಲ್ಲಿಗೆ ಲಕ್ನೋ ಸವಾಲು; ಪ್ಲೇಯಿಂಗ್ Xi, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಡ್ ಹೀಗಿದೆ

ಸತತ ಸೋಲುಗಳಿಂದ ಕಂಗೆಟ್ಟ ಡೆಲ್ಲಿಗೆ ಲಕ್ನೋ ಸವಾಲು; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಡ್ ಹೀಗಿದೆ

Lucknow Super Giants vs Delhi Capitals: 17ನೇ ಆವೃತ್ತಿಯ ಐಪಿಎಲ್​ನ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೆಣಸಾಟ ನಡೆಸಲಿವೆ. ಪಿಚ್ ರಿಪೋರ್ಟ್, ಪ್ಲೇಯಿಂಗ್​ ಇಲೆವೆನ್ ಮತ್ತು ಹೆಡ್​ ಟು ಹೆಡ್ ರೆಕಾರ್ಡ್ ಹೀಗಿದೆ ನೋಡಿ.

ಸತತ ಸೋಲುಗಳಿಂದ ಕಂಗೆಟ್ಟ ಡೆಲ್ಲಿಗೆ ಲಕ್ನೋ ಸವಾಲು
ಸತತ ಸೋಲುಗಳಿಂದ ಕಂಗೆಟ್ಟ ಡೆಲ್ಲಿಗೆ ಲಕ್ನೋ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್ 2024ರ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಲಕ್ನೋ ಮೂರು ಸತತ ಗೆಲುವುಗಳೊಂದಿಗೆ ಅದ್ಭುತ ಲಯದಲ್ಲಿದ್ದರೆ, ನಾಲ್ಕು ಸೋಲುಗಳೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಉಭಯ ತಂಡಗಳು ಏಕನಾ ಕ್ರಿಕೆಟ್ ಮೈದಾನದಲ್ಲಿ ಸೆಣಸಾಟ ನಡೆಸಲಿವೆ.

ಕೆಎಲ್ ರಾಹುಲ್ ನೇತೃತ್ವದ ಎಲ್​ಎಸ್​ಜಿ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಭಾರೀ ಸೋಲಿನೊಂದಿಗೆ ಆವೃತ್ತಿಯನ್ನು ಪ್ರಾರಂಭಿಸಿತು. ಆ ಬಳಿಕ ಬಲವಾದ ಪುನರಾಗಮನ ಮಾಡಿತು. ಪಂಜಾಬ್ ಕಿಂಗ್ಸ್, ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇದೀಗ ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಸಿಎಸ್​ಕೆ ವಿರುದ್ಧ ಮಾತ್ರ ಗೆದ್ದಿರುವ ಡೆಲ್ಲಿ 2ನೇ ಗೆಲುವಿನ ಕನಸಿನಲ್ಲಿದೆ.

ಏತನ್ಮಧ್ಯೆ, ಲಕ್ನೋ ಉದಯೋನ್ಮುಖ ವೇಗದ ಆಟಗಾರ ಮಯಾಂಕ್ ಯಾದವ್ ಗುಜರಾತ್ ವಿರುದ್ಧ ಗಾಯಗೊಂಡರು. ಮಿಚೆಲ್ ಮಾರ್ಷ್ ಅವರ ಮಂಡಿರಜ್ಜು ಗಾಯದಿಂದ ಸಮಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಅದೇ ಪ್ಲೇಯಿಂಗ್ 11 ಅನ್ನು ಆಡುವ ನಿರೀಕ್ಷೆಯಿದೆ. ಬೌಲಿಂಗ್​ನಲ್ಲಿ ಸರಿಯಾದ ಪ್ರದರ್ಶನ ಹೊರಬರದ ಕಾರಣ ಬದಲಾವಣೆಯಾದರೂ ಅಚ್ಚರಿ ಇಲ್ಲ.

ಪಂದ್ಯದ ವಿವರ

ಪಂದ್ಯ: ಐಪಿಎಲ್ 2024, 26ನೇ ಟಿ20 ಪಂದ್ಯ

ಸ್ಥಳ: ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ದಿನಾಂಕ ಮತ್ತು ಸಮಯ: ಶುಕ್ರವಾರ, ಏಪ್ರಿಲ್ 12ರಂದು ರಾತ್ರಿ 7:30 ಗಂಟೆಗೆ (7.00 ಗಂಟೆಗೆ ಟಾಸ್)

ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್.

ಲಕ್ನೋ vs ಡೆಲ್ಲಿ ಹೆಡ್-ಟು-ಹೆಡ್ ರೆಕಾರ್ಡ್

ಲಕ್ನೋ ಮತ್ತು ಡೆಲ್ಲಿ ತಂಡಗಳು ಮೂರು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ ಈ ಮೂರು ಬಾರಿಯೂ ಡೆಲ್ಲಿ ವಿರುದ್ಧ ಲಕ್ನೋ ತಂಡವೇ ಗೆದ್ದಿರುವುದು ವಿಶೇಷ. ಇದೀಗ ಪಂತ್ ಪಡೆ, ರಾಹುಲ್ ಪಡೆಯ ವಿರುದ್ಧ ಗೆಲುವಿನ ಖಾತೆ ತೆರೆಯಲು ಸನ್ನದ್ಧಗೊಂಡಿದೆ.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್​ 11

ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್/ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್​ 11

ಡೇವಿಡ್ ವಾರ್ನರ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಜೇ ರಿಚರ್ಡ್ಸನ್, ಆನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ಏಕನಾ ಕ್ರೀಡಾಂಗಣ ಪಿಚ್ ವರದಿ

ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂ ನಿಧಾನಗತಿಯ ಪಿಚ್‌ಗೆ ಹೆಸರುವಾಸಿಯಾಗಿದೆ. ಇದು ಕಡಿಮೆ ಸ್ಕೋರಿಂಗ್ ಪಿಚ್​ ಕೂಡ ಆಗಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ. ಇಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಬ್ಯಾಟರ್‌ಗಳು ದೊಡ್ಡ ರನ್‌ಗಳಿಗಾಗಿ ಹೋರಾಡಬೇಕಾಗುತ್ತದೆ.

Whats_app_banner