ಎಲ್‌ಎಸ್‌ಜಿ vs ಜಿಟಿ, ಎಸ್‌ಆರ್‌ಎಚ್‌ vs ಪಂಜಾಬ್; ಲಕ್ನೋ-ಹೈದರಾಬಾದ್‌ ಪಿಚ್‌ ಹಾಗೂ ಹವಾಮಾನ ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಲ್‌ಎಸ್‌ಜಿ Vs ಜಿಟಿ, ಎಸ್‌ಆರ್‌ಎಚ್‌ Vs ಪಂಜಾಬ್; ಲಕ್ನೋ-ಹೈದರಾಬಾದ್‌ ಪಿಚ್‌ ಹಾಗೂ ಹವಾಮಾನ ವರದಿ

ಎಲ್‌ಎಸ್‌ಜಿ vs ಜಿಟಿ, ಎಸ್‌ಆರ್‌ಎಚ್‌ vs ಪಂಜಾಬ್; ಲಕ್ನೋ-ಹೈದರಾಬಾದ್‌ ಪಿಚ್‌ ಹಾಗೂ ಹವಾಮಾನ ವರದಿ

IPL 2025: ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ vs ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವಿನ ಐಪಿಎಲ್ ಪಂದ್ಯಗಳ ಪಿಚ್‌, ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗದ ವಿವರ ಇಲ್ಲಿದೆ.

ಎಲ್‌ಎಸ್‌ಜಿ vs ಜಿಟಿ, ಎಸ್‌ಆರ್‌ಎಚ್‌ vs ಪಂಜಾಬ್; ಲಕ್ನೋ-ಹೈದರಾಬಾದ್‌ ಪಿಚ್‌, ಹವಾಮಾನ ವರದಿ
ಎಲ್‌ಎಸ್‌ಜಿ vs ಜಿಟಿ, ಎಸ್‌ಆರ್‌ಎಚ್‌ vs ಪಂಜಾಬ್; ಲಕ್ನೋ-ಹೈದರಾಬಾದ್‌ ಪಿಚ್‌, ಹವಾಮಾನ ವರದಿ (Reuters/PTI)

ಐಪಿಎಲ್‌ ಸೀಸನ್‌ 18ರಲ್ಲಿ ಏಪ್ರಿಲ್‌ 12ರ ಶನಿವಾರ ಎರಡು ಪಂದ್ಯಗಳು ನಡೆಯುತ್ತಿವೆ. ಮಧ್ಯಾಹ್ನ 3:30ಕ್ಕೆ ಆರಂಭವಾಗುವ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಸಂಜೆ 7:30ಕ್ಕೆ ಆರಂಭವಾಗುವ ದಿನದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಎದುರಾಗುತ್ತಿವೆ. ವಾರಾಂತ್ಯವಾಗಿರುವುದರಿಂದ ಎರಡು ಪಂದ್ಯಗಳನ್ನು ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಎರಡೂ ಪಂದ್ಯಗಳ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.

ಲಕ್ನೋ ಪಿಚ್‌ ವರದಿ

ಲಕ್ನೋದ ಎಕಾನಾ ಕ್ರಿಕೆಟ್ ಕ್ರೀಡಾಂಗಣವು ಬೌಲರ್‌ಗಳಿಗೆ ನೆರವಾಗುವ ನಿರೀಕ್ಷೆ ಇದೆ. ಅದರಲ್ಲೂ ವಿಶೇಷವಾಗಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಲ್ಲರು. ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಲಕ್ನೋ ತಂಡ 200ರ ಗಡಿ ದಾಟುವಲ್ಲಿ ಯಶಸ್ವಿಯಾಗಿತ್ತು.‌ ಇಲ್ಲಿ ಟಾಸ್ ಗೆಲ್ಲುವ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡಿ ಸ್ಪರ್ಧಾತ್ಮಕ ರನ್‌ ಕಲೆಹಾಕಲು ಎದುರು ನೋಡುತ್ತಾರೆ. 180 ರನ್ ಇಲ್ಲಿ‌ ಸ್ಪರ್ಧಾತ್ಮಕ ಮೊತ್ತ.

ಲಕ್ನೋ ಹವಾಮಾನ ವರದಿ

ಮಧ್ಯಾಹ್ನ ಲಕ್ನೋದಲ್ಲಿ ಮೋಡ ಕವಿದ ವಾತಾವರಣವಿದ್ದು, ಶೇ. 24ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ದಿನ ತಾಪಮಾನವು 22 ಡಿಗ್ರಿ ಸೆಲ್ಸಿಯಸ್‌ನಿಂದ 34 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬಹುದು.

ಸನ್‌ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ ಪಿಚ್ ವರದಿ

ಪಿಬಿಕೆಎಸ್ ಮತ್ತು ಎಸ್‌ಆರ್‌ಹೆಚ್ ತಂಡಗಳ ನಡುವಿನ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟರ್‌ಗಳಿಗೆ ಹೆಚ್ಚು ರನ್‌ ಗಳಿಸಲು ನೆರವಾಗುತ್ತದೆ. ದೊಡ್ಡ ಹೊಡೆತಗಳನ್ನು ಆಡುವುದು ಇಲ್ಲಿ ಸುಲಭ. ಸಾಮಾನ್ಯವಾಗಿ ಹೈ ಸ್ಕೋರಿಂಗ್ ಪಂದ್ಯಗಳಿಗೆ ಮೈದಾನ ಹಲವು ಬಾರಿ ಸಾಕ್ಷಿಯಾಗಿದೆ. ಟಾಸ್ ಗೆಲ್ಲುವ ತಂಡ ಕೂಡಾ ಸಾಮಾನ್ಯವಾಗಿ ದೊಡ್ಡ ಸ್ಕೋರ್ ಕಲೆ ಹಾಕುವ ಸಲುವಾಗಿ ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತದೆ. ಪಂದ್ಯ ಮುಂದುವರೆದಂತೆ, ಪಿಚ್ ವೇಗದ ಬೌಲರ್‌ಗಳಿಗೆ ತುಸು ನೆರವಾಗುತ್ತದೆ.‌

ಹೈದರಾಬಾದ್ ಹವಾಮಾನ ವರದಿ

ಹವಾಮಾನ ವರದಿ ಪ್ರಕಾರ, ಪಂದ್ಯದ ದಿನ ಮಧ್ಯಾಹ್ನ ಅಥವಾ ಸಂಜೆ ಹೈದರಾಬಾದ್‌ನಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಕನಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ

ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಆಕಾಶ್ ದೀಪ್, ಆವೇಶ್ ಖಾನ್.

ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ ಕೀಪರ್), ವಾಷಿಂಗ್ಟನ್ ಸುಂದರ್, ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಕಾಮಿಂದು ಮೆಂಡಿಸ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ.

ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ

ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್‌ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯ್ನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಹಲ್.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner